ಮಳೆ ಹೆಚ್ಚಿದಾಗ ಮಲೆನಾಡಿನ ಗದ್ದೆ, ಬಿಲಗಳಲ್ಲೆಲ್ಲ ನೀರು ತುಂಬಿತೆಂದರೆ ಏಡಿ (ಕ್ರ್ಯಾಬ್)ಗಳಿಗೆ ಹಬ್ಬ. ಬಿಸಿ ನೀರು ಅರಸಿ ಹಾಗೂ ಆಹಾರ ಹುಡುಕಿ ಇವು ಈ ನೀರಿನಲ್ಲಿ ಸೇರುತ್ತವೆ. ಆದರೆ ಇದರ ಮಾಂಸದ ರುಚಿ ಬಲ್ಲವರು ಇದನ್ನು ಅಲ್ಲಿಯೇ ಶಿಕಾರಿ ಮಾಡಿ ವೈವಿಧ್ಯಮಯ ಅಡುಗೆ ಮಾಡಿ ಬಾಯಿ ಚಪ್ಪರಿಸುತ್ತಾರೆ. ಅದರ ಮೇಲಿನ ಕವಚ ಬಲು ಗಟ್ಟಿಯಾಗಿದ್ದರೂ ಅದನ್ನು ತೆಗೆದು ತಿನ್ನುವುದರಲ್ಲಿ ಒಂದು ರೀತಿಯ ಮಜಾ ಸಿಗುತ್ತದೆ. ಇನ್ನು, ತಾರಾ ಹೋಟೆಲ್‌ಗಳ ಅಡುಗೆ ಕೋಣೆಗೆ ಏಡಿ ಕಾಲಿಟ್ಟರೆ ಮುಗಿದೇ ಹೋಯ್ತು. ಇದರ ಮಾಂಸಕ್ಕೆ ಭಾರಿ ಡಿಮಾಂಡ್. ಇಂತಹ ಬಹುಬೇಡಿಕೆಯ ಏಡಿಗಳ ಕೆಲವು ಆಹಾರ ವೈವಿಧ್ಯ ಇಲ್ಲಿದೆ...
.
ಬೇಕಾಗುವ ಸಾಮಾಗ್ರಿಗಳು: 5 ಚೂರು ಮಾಡಿದ ಏಡಿ, ಅರ್ಧ ಬಟ್ಟಲು ತೆಂಗಿನ ತುರಿ, ಒಂದು ಲೋಟ ವಿನಿಗರ್, ಆರು ಒಣಮೆಣಸಿನಕಾಯಿ, ಒಂದು ಚಮಚ ಜೀರಿಗೆ, 2 ಬೆಳ್ಳುಳ್ಳಿ ಎಸಳು, 2 ಈರುಳ್ಳಿ, 8 ಲವಂಗ, ಬಟ್ಟಲು ತುಪ್ಪ, ಒಂದು ಚಮಚ ಗರಂ ಮಸಾಲಾ, ಮುಕ್ಕಾಲು ಕಟ್ಟು ಕೊತ್ತಂಬರಿ ಸೊಪ್ಪು, 4 ಎಸಳು ಕರಿಬೇವು, ರುಚಿಗೆ ಉಪ್ಪು.
ಮಾಡುವ ವಿಧಾನ: ಅರ್ಧ ಲೋಟ ವಿನಿಗರ್‌ನಲ್ಲಿ ಏಡಿಯ ಚೂರುಗಳನ್ನು ಹಾಕಿ ಮುಕ್ಕಾಲು ಗಂಟೆ ನೆನೆಯಲು ಬಿಡಿ. ಈರುಳ್ಳಿ, ಮೆಣಸಿನಕಾಯಿ ಜೀರಿಗೆ, ಬೆಳ್ಳುಳ್ಳಿ, ಲವಂಗ, ಕೊತ್ತಂಬರಿ ಸೊಪ್ಪುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ದಪ್ಪತಳದ ಅಗಲವಾದ ಪಾತ್ರೆಗೆ ತುಪ್ಪ ಹಾಕಿ ಅದರೊಳಗೆ ವಿನಿಗರ್‌ನಲ್ಲಿರುವ ಏಡಿ ತುಂಡುಗಳನ್ನು ಹಿಂಡಿ ತೆಗೆದು ಹುರಿದುಕೊಳ್ಳಿ.
ಅದು ಕೆಂಪಗಾಗುತ್ತಾ ಬಂದಾಗ ಉಪ್ಪು ಮತ್ತು ರುಬ್ಬಿದ ಮಸಾಲೆಯನ್ನು ಹಾಕಿ ಕೆದಕಿ. ಕರಿಬೇವು, ತೆಂಗಿನ ತುರಿ ಹಾಕಿ ಸಣ್ಣ ಉರಿಯಲ್ಲಿ 12 ನಿಮಿಷ ಬೇಯಿಸಿ ಕೆಳಗಿಳಿಸಿದರೆ ರುಚಿಯಾದ ಚಿಲ್ಲಿ ಕ್ರ್ಯಾಬ್ ಸಿದ್ಧ.
ಮೂಲ: ಎನ್.ಡಿ.ಸವಿತಾ
ಕೊನೆಯ ಮಾರ್ಪಾಟು : 1/28/2020
ಮಳೆನೀರನ್ನು ಬಹು ಹಂತದ ಮೆಟ್ಟಿಲು ಹೊಂಡಗಳಿಂದ ಕೊಯ್ಲು ಮಾಡಲ...
ಲಿಂಗಣ್ಣ ಗೌಡರವರ ತೋಟ, ಹಾವೇರಿ
ಮಳೆಯೇ ಹೊಲ ಮೇಯ್ದಾಗ ಆಗುವ ಆನಾನೂಕುಲಗಳ ಬಗ್ಗೆ
ಅರಣ್ಯ ಭರವಸೆಯ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.