অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭರವಸೆ ಅರಣ್ಯ

ಭರವಸೆ ಅರಣ್ಯ

ಭರವಸೆ ಅರಣ್ಯ

ಪಶ್ಚಿಮ ಬಂಗಾಳ ರಾಜ್ಯದ ಬಿರಭುಮ್ ಜಲ್ಲೆಯ ರಾಜನಗರ ವಲಯದ ನಾರಾಯಣಪುರ ಗ್ರಾಮದಲ್ಲಿ ಬೇಸಿಗೆಯಲ್ಲಿ ನಾಯಿಗಳೂ ಸಹಾ ಹಗಲನಲ್ಲಿ ದೂರ ಹೋಗಲು ಹೆದರುವಷ್ಟು ಬಿಸಿಲು, ನೆರಳಿಗೆ ಒಂದೇ ಒಂದು ಮರವೂ ಇಲ್ಲ.

ನಾರಾಯಣ ಪುರ ಶಿಶು ಸಮಿತಿಯನ್ನು ಜನವರಿ 2008.ರಲ್ಲಿ ರಚಿಸಲಾಯಿತು ಅದು ಪಾಳು ಬಿದ್ದಿದ್ದ 40 ಎಕರೆ ಭೂಮಿಯನ್ನು ಪಡೆದು ಕೊಂಡಿತು.. ಅದು ಕಲ್ಲುಗಳಿಂದ ಕೂಡಿದ ಭೂಮಿ. ಆದ್ದರಿಂದ ಕೃಷಿಯೋಗ್ಯವಲ್ಲ ಎಂದು ಕೈ ಬಿಡಲಾಗಿತ್ತು ಅದನ್ನು ದನಮೇಯಿಸಲು ಬಳಸಲಾಗುತ್ತಿತ್ತು.

|ಎನ್ ಎಸ್ ಎಸ್ 12 ಭೂ ಹೀನ ಮತ್ತು 4 ಅತಿಸಣ್ಣ ರೈತರ ಗುಂಪನ್ನು ರಚಿಸಿತು.ಅದರಲ್ಲಿನ ಕೃಷಿಕರು ಬಹುತೇಕ ಗುಡ್ಡಗಾಡಿನ ಜನ.. ಆ ಹಾಳು ಭೂಮಿಯನ್ನು ಸಾಗು ಮಾಡಿ ಹಳ್ಳಿಗೆ ಒಂದು ಆಸ್ತಿಯನ್ನಾಗಿ ಮಾಡಲು ಅದರಲ್ಲಿ ಹಣ್ಣಿನ, ಮೇವಿನ ,ಉರುವಲು ಕಟ್ಟಿಗೆಯ ಮರಗಳನ್ನು ಬೆಳೆಸಲಾಯಿತು. ಮತ್ತು ಕಡಿಮೆ ಅವಧಿಯ ಬೆಳೆಗಳನ್ನು ಅಂತರ್ ಬೇಸಾಯವಾಗಿ ಹಾಕಲಾಯಿತು. ಆ ಭೂಮಿಯ ಮಾಲಕನೊಂದಿಗೆ ಒಂದು ಒಪ್ಪಂದಕ್ಕೆ ಬರಲಾಯಿತು. ಅದರ ಪ್ರಕಾರ ಗಿಡಗಳು ಫಲ ದಾಯಕವಾದಾಗ ಉತ್ಪನ್ನದ — 50% ಅನ್ನು ಮಾಲಕನಿಗೆ ಮತ್ತು ಉಳಿದದ್ದನ್ನು ಗುಂಪಿನ ಸದಸ್ಯರಿಗೆ ಹಂಚಲು ತೀರ್ಮಾನ ತೆಗೆದುಕೊಳ್ಳ ಲಾಯಿತು. ಹಾಗೂ ಅಂತರ್ ಬೆಳೆಯ ಲಾಭವನ್ನು ಗುಂಪಿನಲ್ಲಿಯೇ ಸಮನಾಗಿ ಹಂಚಿಕೊಳ್ಳುವುದೆಂದು ನಿರ್ಧಾರವಾಯಿತು. ಗುಂಪು 2008 ರಲ್ಲಿ ನರ್ಸರಿಯಲ್ಲಿ ಸಸಿ ಬೆಳೆಯುವುದರೊಂದಿಗೆ ಕೆಲಸ ಪ್ರಾರಂಭಿಸಿತು ಅದರಲ್ಲಿ . 36 ಪ್ರಬೇಧದ ಮರಗಳನ್ನು ಆರಿಸಲಾಯಿತು ಬಾಗವಹಿಸುವ ಸಾಧನವಾದ ಸಾಮಾಜಿಕ ವಿಶ್ಲೇಣಾ ಪದ್ದತಿಯನ್ನು (SAS) ಅನ್ವಯಿಸಿ l 26000 ಸಸಿಗಳಲ್ಲಿ , 19150 ಸಸಿಗಳನ್ನು ಆಯ್ದು ನೆಡಲಾಯಿತು., 4000 ಸಸಿಗಳನ್ನು ಮಾರಲಾಯಿತು . ಉಳಿದವನ್ನು ಸ್ಥಳಿಯ ಜನರೊಳಗೆ ಹಂಚಲಾಯಿತು..

ಮುಂದಿನ ಮಳೆಗಾಲದ ಹೊತ್ತಿಗೆ ,ಮಣ್ಣಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿ ಮಣ್ಣಿನ ಆರೋಗ್ಯ ಸುಧಾರಿಸಿತು. ಹುರುಳಿ ಮತ್ತು ಕಳೆಗಳು ತಮ್ಮಂದ ತಾವೆ ಬೆಳೆಯ ಲಾರಂಭಿಸಿದವು. ಭೂಮಿಯ ಸುತ್ತಲೂ ಕಾಲುವೆ ತೋಡಲಾಯಿತು 4 ಬದುಗಳನ್ನು, 50 ಅರ್ಧ ಚಂದ್ರಾಕಾರದ ಬಾಂದುಗಳನ್ನು ಮತ್ತು 5 ಕಲ್ಲಿನ ಬಾಂದುಗಳನ್ನು ನಿರ್ಮಿಸಲಾಯಿತು. ಆ ಕೆಲಸವು 1342 ಮಾನವ ದಿನಗಳನ್ನು ಉತ್ಪನ್ನ ಮಾಡಿತು.. ಕೆಲಸವನ್ನು ಅಂತರ್ ಬೆಳೆಗಳಾದ ಮೆಕ್ಕೆ ಜೋಳ ಸೋರೆ ಕಾಯಿಗಳನ್ನು ಜತೆಗೆ ಬಹುವಾರ್ಷಕ ಬೆಳೆಗಳಾದ ಚಪ್ಪರದ ಅವರೆ, ಸಾಬೈಹುಲ್ಲು ಮತ್ತು ಕಿಡ್ನಿ ಬೀನು ಇತ್ಯಾದಿಗಳನ್ನು ಬೆಳಸಲಾಯಿತು. ಹೊಂಡದ ಮಣ್ಣು , ಕಾಂಪೋಸ್ಟು ಮತ್ತು ಬೇವಿನ ಹಿಂಡಿಗಳನ್ನು ಗೊಬ್ಬರವಾಗಿ ಹಾಕಲಾಯಿತು. ಸಜೀವ ತಡೆ ಬೇಲಿಯಾಗಿ ತಾಳೆ ,ಕಜ್ಜೂರ, ಚಪ್ಪರದ ಅವರೆ ಮತ್ತು ರೊಸೆಲ್ಲ ಗಳನ್ನು ಬೆಳಸಲಾಯಿತು. ಸದಸ್ಯರೆಲ್ಲರೂ ಸರದಿಯ ಮೇಲೆ ಸಾಮಾಜಿಕ ರಕ್ಷಣೆ ನೀಡಿದರು. ಮುಂಗಾರಿನ ಕೊನೆಯಲ್ಲಿ 150ಕೆಜಿ ತರಕಾರಿಯನ್ನು ಕುಯಿಲು ಮಾಡಲಾಯಿತು., 15 ಕೆಜಿ ಮೆಕ್ಕೆ ಜೋಳ, 200 ಕೆಜಿ ರೊಸೆಲ್ಲ ಮತ್ತು 250 ಕೆಜಿ ಮೇವು ದೊರೆಯಿತು.. ಅವುಗಳೆಲ್ಲವನ್ನೂ ಸದಸ್ಯರ ಕುಟುಂಬಗಳು ಬಳಸಿಕೊಂಡವು.ಹುಲ್ಲು ಮತ್ತು ಕಳೆಗಳಿಂದ ಕರಕುಶಲವಸ್ತುಗಳ ತಯಾರಿಕೆಗೆ ಮತ್ತು ಔಷಧಿಗೆ ಉಪಯೋಗವಾಗಿ ತುಸು ಹಣ ಬಂದಿತು

ಬಂಡವಾಳವು ಸುಮಾರು.2.5 ಲಕ್ಷ ರೂಪಾಯಿಗಳು. ಅದರಲ್ಲ 30% ಕೂಲಿ ಪ್ರಾಂಭದ ಬಂಡವಾಳವು ಸುಮಾರು.2.5 ಲಕ್ಷ ರೂಪಾಯಿಗಳು.ಅದರಲ್ಲ 30% ಕೂಲಿ ರೂಪದ ವಂತಿಗೆಯಾಗಿ ತ್ತು. . 16 ಕುಟುಂಬಗಳು ಕೂಲಿ ಕೆಲಸ ಮಾಡಿದ್ದವು. ಸರಾಸರಿ 155 ದಿನಕೆಲಸ ದೊರೆತಿತ್ತು.. ಅವರ ಮೂಲ ಅಗತ್ಯಗಳಾದ ತರಕಾರಿ ಎಲ್ಲ ಕುಟುಂಬಗಳಿಗೆ ಸಿಕ್ಕಿತು. ಸಾಕಷ್ಟು ಹಲ್ಲು ಮೇವು ದೊರೆಯಿತು. ಕಣ್ಮರೆಯಾಗುತ್ತಿದ್ದ ಕೆಲ ಸಸ್ಯಗಳು ಮರಗಳು ಮರು ಜನ್ಮ ಪಡೆದವು ಜೈವಿಕ ವೈವಿದ್ಯಯನ್ನು ಕಾಣುವಂತಾಯಿತು.ಪೊರಕೆ ಮಾಡುವದು ,ರೊಸೆಲ್ಲ ಜಾಂ ತಯಾರಿಗಳಿಂದ ಆದಾಯ ತರುವ ಚಟುವಟಿಕೆಗಳ ಸಾಧ್ಯತೆ ಹೆಚ್ಚಾಯಿತು.ಅಕ್ಕ ಪಕ್ಕದ 3-4 ಹಳ್ಳಿಯ ಜನರೂ ಆಸಕ್ತಿತೋರಿಸಿ ತಮ್ಮ ಗ್ರಾಮದಲ್ಲೂ ಇದೇ ರೀತಿಯ ಚಟುವಟಿಕೆ ಪ್ರಾರಂಭ ಮಾಡಿದರು. ಅವರ ಚಟುವಟಿಕೆಗಳನ್ನು ಕ್ರಿಶ್ಚಿಯನ್ ಏಡ್ ಬೆಂಬಲಿಸಿತು.

ಮೂಲ : DRCSC news, Issue No. 3

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate