ವಿಳಾಸ | ಲಿಂಗಣ್ಣ ಗೌಡರವರ ತೋಟ |
---|---|
ಸ್ಥಳ | ದೊಡ್ಡ ಗುಬ್ಬಿ ,ಹಾವೇರಿ ಜಿಲ್ಲೆ |
ಕೃಷಿಕ | ಶ್ರೀ ಲಿಂಗಣ್ಣ ಗೌಡ ಮತ್ತು ಶ್ರೀಮತಿ ಜಯಮ್ಮ |
ಬೆಳೆ | ರಾಗಿ ಮತ್ತು ನವಣೆ |
ಕೃಷಿ ಭೂಮಿ | 1.25 ಎಕರೆಗಳು |
ವರದಿಗಾರ | ಶ್ರೀ ವಿಶ್ವಾಸ್ |
ದಿನಾಂಕ | March 22, 2014 |
ಎಲ್ಲರೂ ಈ ಹಳ್ಳಿಯಲ್ಲಿ ರಾಸಾಯನಿಕ ಕೃಷಿಯನ್ನು ಮಾಡುತ್ತಿದ್ದರೆ ದೃತಿಗೆಡದೆ ಈ ದಂಪತಿಯು ದೊಡ್ಡಗುಬ್ಬಿಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ವಿಶೇಷತೆ ರಾಗಿ ಬೆಳೆಯುವುದು.ಈ ಹಳ್ಳಿಯಲ್ಲಿ ಜನರ ಆಡುಮಾತಿಗೂ ಸಹ ಕಿವಿಗೊಡದೆ ಇವರೊಬ್ಬರೇ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಇವರಿಗೆ 1.25 ಎಕರೆ ಕೃಷಿ ಭೂಮಿ ಮನೆಯ ಹತ್ತಿರವೇ ಇದ್ದು ವರ್ಷಕ್ಕೆ ಒಂದು ಸಲ ಕಟಾವು ಮಾಡುತ್ತಾರೆ. ಇವರು ನೀರಿಗಾಗಿ ಮಳೆಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಹಾಗೂ ಮಳೆಯು ಈ ಪ್ರದೇಶದಲ್ಲಿ ಚೆನ್ನಾಗಿದೆ. ಇವರು ನವಣೆ,ರಾಗಿ , ಸಜ್ಜೆ, ಅವರೆ ಮತ್ತು ತೊಗರಿಯನ್ನು ಬೆಳೆಯುತ್ತಾರೆ. ಇದರಲ್ಲಿ ನವಣೆ ಮತ್ತು ರಾಗಿ ಪ್ರಮುಖ ಬೆಳೆಗಳು. ಇವರಿಗೆ ಜಾನುವಾರವು ಯಾವುದೇ ಇಲ್ಲ ಆದರೆ ಇವರು ಮಿಶ್ರಗೊಬ್ಬರವನ್ನು ಬಳಸುತ್ತಿದ್ದಾರೆ . ಇವರು 3 ತೊಟ್ಟಿಗಳಲ್ಲಿ ತರಕಾರಿ ಮತ್ತು ಗಿಡದ ತ್ಯಾಜ್ಯವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಇದ್ದಕ್ಕೇ ಎರೆಹುಳುವನ್ನು ಬಿಟ್ಟು ಗೊಬ್ಬರವಾಗಿ ಪರಿವರ್ತಿಸುತ್ತಾರೆ. ಸುಮಾರು 1 ರಿಂದ 2 ತಿಂಗಳ ಪ್ರಕ್ರಿಯೆ ನಂತರ ಸುಮಾರು 800 ಕೆ. ಜಿ ಯಷ್ಟು ಗೊಬ್ಬರವನ್ನು ಒಂದು ವರ್ಷದಲ್ಲಿ ಪಡೆಯುತ್ತಾರೆ. ಇವರಿಗೆ ಇತ್ತೀಚಿಗೆ ಫ್ಲೋರ್, ಡಿ -ಸ್ಟೋನರ್ ಮತ್ತು ಪೋಲಿಶಿಂಗ್ ಯಂತ್ರಗಳನ್ನು INSIMP ಯೋಜನೆಯ ಮೂಲಕ ಮಂಜೂರು ಮಾಡಲಾಗಿದ್ದು ಇದನ್ನು ಹಳಿಯಲ್ಲಿ ಅಳವಡಿಸಲಾಗಿದೆ. ಸ್ವತಹ ಈ ದಂಪತಿಯೇ ಸುಮಾರು 1 ಲಕ್ಷ ಹಣವನ್ನು ವ್ಯಯಿಸಿ ಈ ಯಂತ್ರಗಳನ್ನು ಹಳ್ಳಿಯಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಅಷ್ಟಾಗಿ ಉಪಯೋಗಿಸಲು ಸಾಧ್ಯವಾಗುತಿಲ್ಲ ಮತ್ತು ತಯಾರಕರಿಂದಲೂ ಸಹ ಒಳ್ಳೆಯ ಪ್ರಕ್ರಿಯೆ ಸಿಗುತ್ತಿಲ್ಲ. ಜಯಮ್ಮರವರ ಬಗ್ಗೆ ಒಂದು ವಿಶೇಷವಾದ ಮಾಹಿತಿ : ಇವರು ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಮತ್ತು ಕಾರ್ಯಗಾರ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಇದು ಸ್ವ ಉದ್ಯೋಗ , ರೇಷ್ಮೆ ಹುಳು ಸಾಕಣೆ , ಕೃಷಿಯನ್ನು ಮಾಡುವಾಗ ಬೆಳೆಗಳಿಗೆ ತಗುಲ ಬಹುದಂತಹ ಖಾಯಿಲೆಗಳ ಮಾಹಿತಿ, ಮನೆಯ ಉತ್ಪನ್ನಗಳನ್ನು ತಯಾರಿಸಿ ಮತ್ತು ಮಾರಾಟ ಮಾಡುವ ವಿಧಾನ ಮತ್ತು ಇತರೆ ಗ್ರಾಮೀಣ ಚಟುವಟಿಕೆಗೆ ಸಂಭಂದಪಟ್ಟಿರುತ್ತದೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 6/20/2020
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...