ರಾಯಚೂರು ಜಿಲ್ಲೆಯ ನಾಗಲಾಪುರವು 140 ಕುಟುಂಬಗಳಿರುವ ಚಿಕ್ಕ ಗ್ರಾಮ ಅವರಲ್ಲಿ ಬಹುತೇಕ ಜನರು ಲಿಂಗಾಯಿತ, ಮಡಿವಾಳ ಪರಿಶಿಷ್ಟ ಸಮುದಾಯದ ಜಾತಿಗೆ ಸೇರಿದ ಸಣ್ಣ ರೈತರು. ಅವರ ಊರು ತುಂಗಭದ್ರ ನದಿಯೋಜನೆಯ ಕಾಲವೆಯ ತುದಿಗೆ ಪ್ರದೇಶದಲ್ಲಿದೆ. ಕೆಲವರಿಗೆ ತುಸು ಮಟ್ಟಿನ ನೀರಾವರಿ ಸೌಲಭ್ಯವಿದೆ. ಅದರೆ ಕಳೆದ ನಾಲಕ್ಕು ವರ್ಷದಿಂದ ಅವರಿಗೆ ಈ ಮೂಲದಿಂದ ನೀರು ಸಿಕ್ಕಿಲ್ಲ. ನಾಲಕ್ಕು ವರ್ಷದಿಂದ .ಅವರ ಭೂಮಿ ಪೂರ್ತಿ ಮಳೆಯಾಧಾರಿತವಾಗಿದೆ. ಜೋಳ, ಹತ್ತಿ, ಮತ್ತು ಸೂರ್ಯ ಕಾಂತಿ ಅಲ್ಲಿನ ಮುಖ್ಯ ಬೆಳೆಗಳು. ಅಲ್ಲಿನ ಕರಿಭೂಮಿಯು ಹತ್ತಿ ಬೆಳೆಯಲು ಹೇಳಿ ಮಾಡಿಸಿದ ಹಾಗಿದೆ. ಹತ್ತಿಯನ್ನು ಏಕ ಬೆಳೆಯಪದ್ದತಿಯಲ್ಲಿ ಕೃಷಿಮಾಡುವರು. ಅತ್ಯವಾದವನ್ನು ಹೊರಗಿನಿಂದ ಕೊಂಡು ಹಾಕುವುದರಿಂದ ಹತ್ತಿ ಬೆಳೆಯ ಉತ್ಪನ್ನವು ಲಾಭ ದಾಯಕವಾಗಿಲ್ಲ. ಹಾಗಿದ್ದರೂ ಕಳೆದ ಐದು ವರ್ಷದಿಂದ ಗ್ರಾಮದ ಜನರು ಈ ಮೂಲದಿಂದ ಯಾವುದೆನೀರನ್ನು ಪಡೆದಿಲ್ಲ.ಅದರಿಂದ ಅವರಭೂಮಿಯು ಮಳೆ ಆಧಾರಿತವಾಗಿದೆ. ಜೋಳ , ಹತ್ತಿ, ಮತ್ತು ಸೂರ್ಯ ಕಾಂತಿಗಳೆ ಅಲ್ಲಿನ ಪ್ರಮುಖ ಬೆಳೆಗಳು . ಹಳ್ಳಿಯಲ್ಲಿರುವ ಯರಿ ಭೂಮಿಯು ಹತ್ತಿ ಬೆಳೆಯಲು ಅತಿ ಉತ್ತಮವಾಗಿವೆ.ಹತ್ತಿಯನ್ನು ಏಕ ಬೆಳೆಪದ್ದತಿಯಲ್ಲಿ ಹಾಕುತ್ತಾರೆ. ಅದಕ್ಕೆ ಬೇಕಾದವೆಲ್ಲವನ್ನೂ ಹೊರಗಿನಿಂದ ಕೊಳ್ಳ ಬೇಕಿರುವುದರಿಂದ ಹತ್ತಿ ಕೃಷಿಯು ಲಾಭ ದಾಯಕವಲ್ಲ.
ಬಸವರಾಜಪ್ಪನು ಒಬ್ಬ ಸಣ್ಣ ರೈತ. ಅವನು ಲಿಂಗಾಯಿತ. ಅವನ ವಯಸ್ಸು 38 ವರ್ಷ . ಅವನು 12 ಜನರಿರುವ ಅವಿಭಕ್ತ ಕುಟುಂಬದ ಸದಸ್ಯ. ಮತ್ತು ೪ನೆ ತರಗತಿಯವರೆಗೆ ಓದಿದ್ದಾನೆ. ಅವರು ತಮ್ಮ ಹೊಲದಲ್ಲಿ ಕೆಲಸಮಾಡುವದಲ್ಲದೆ ಜೀವನಾಧಾರಕ್ಕಾಗಿ ಬೇರೆಯವರ ಹೊಲದಲ್ಲೂ ಕೂಲಿ ಕೆಲಸ ಮಾಡುತ್ತಾರೆ. ಕೆಲಸ ಕಡಿಮೆ ಇದ್ದಾಗ ಕುಟುಂಬದ ಗಂಡಸರು ಹತ್ತಿರದ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಬಸವರಾಜಪ್ಪನಿಗೆ 4 ಎಕರೆ ಒಣ ಭೂಮಿ ಇದೆ.ಅವನು ಅದರಲ್ಲಿ ಹತ್ತಿಯನ್ನು ಆ ಪ್ರಧೇಶದಲ್ಲಿನ ವಾಡಿಕೆಯಂತೆ ಏಕ ಬೆಳೆಯಾಗಿ ಹಾಕುತ್ತಾನೆ..ಅಲ್ಲಿ ಕೊಟ್ಟಿಗೆ ಗೊಬ್ಬರವನ್ನು ಮೂರುವರ್ಷಕ್ಕೆ ಒಂಮೆ ಹಾಕುವುದು ವಾಡಿಕೆ.ಅದರೆ ರಸಗೊಬ್ಬರಗಳಾದ ಯುರಿಯಾ, ಡಿಎಪಿ ಮತ್ತು ಕಾಂಪ್ಲೆಕ್ಸಗಳನ್ನು ಎಕರೆಗೆ ೫೦ ಕೆಜಿಯಂತೆ ಪ್ರತಿ ಹಂಗಾಮಿಗೆ ಹಾಕುವರು. ಬೀಜಗಳನ್ನು ಚಿಲ್ಲರೆ ಅಂಗಡಿಯಲ್ಲಿ ಕೊಂಡು ಬಿತ್ತನೆ ಮಾಡುತ್ತಿದ್ದರು. ಸಾಮಾನ್ಯವಾಗಿ ಕೀಟನಾಶಕಗಳನ್ನು5-6 ಸಲ ಸಿಂಪರಣೆ ಮಾಡುತ್ತಿದ್ದರು.ಅದಕ್ಕೆ ರಸಾಯನಿಕಗಳಾದ ಮಾನೊಕ್ರೊಟೊಫೊಸ್, ಎಂಡೊಸಲ್ಫಾನ್,ಕ್ವಿನಲೊಫಾಸ್ ಗಳನ್ನು ಕೀಟಗಳ ದಾಳಿತಡೆಯಲು ಮತ್ತು ಬಂದಾಗ ನಿಯಂತ್ರಿಸವ ಕ್ರಮವಾಗಿ ಉಪಯೋಗಿಸುತ್ತಿದ್ದರು. ಇಷ್ಟೆಲ್ಲ ಮಾಡಿದರೂ ಎಕರೆಗ 5 ಕ್ವಿಂಟಾಲ್ ಸರಾಸರಿ ಇಳುವರಿ ಬರುತ್ತಿತ್ತು
ಬಸವರಾಜಪ್ಪ ಮತ್ತು ಅವನ ಕುಟುಂಬದವರ ಹೊಲದಬಗ್ಗೆ
ಪರ್ಯಾಯ ಪದ್ದತಿಗೆ ಸಾಗುವುದು
ಬಸವರಾಜಪ್ಪನು ಗುಂಪಿನ ಕ್ರಿಯಾಶೀಲ ಸದಸ್ಯ. ಅವನು ಎ ಎಂ ಇ ಫೌಂಡೇಷನ್ ನವರು ಏರ್ಪಡಿಸಿದ ಕೃಷಿಕ್ಷೇತ್ರ ಶಾಲೆಯಲ್ಲಿ ಭಾಗವಹಿಸಿದ್ದ. ಅವನು ಒಂದು ಎಕರೆ ಭೂಮಿಯನ್ನು ವಿವಿಧ ಪರ್ಯಾಯ ಕೃಷಿ ಪದ್ದತಿಗಳ ಆಚರಣಗೆ ಮೀಸಲಿಟ್ಟ.
ಬಸವರಾಜಪ್ಪನು ಗುಂಪಿನ ಕ್ರಿಯಾಶೀಲ ಸದಸ್ಯ. ಅವನು ಎ ಎಂ ಇ ಫೌಂಡೇಷನ್ ನವರು ಏರ್ಪಡಿಸಿದ ಕೃಷಿಕ್ಷೇತ್ರ ಶಾಲೆಯಲ್ಲಿ ಭಾಗವಹಿಸಿದ್ದ. ಅವನು ಒಂದು ಎಕರೆ ಭೂಮಿಯನ್ನು ವಿವಿಧ ಪರ್ಯಾಯ ಕೃಷಿ ಪದ್ದತಿಗಳ ಆಚರಣಗೆ ಮೀಸಲಿಟ್ಟ. .ಎಫ್ ಎಫ್ ಎಸ್ ಗೆ ನಿಗದಿಮಾಡಿದ ಭೂಮಿಯನ್ನು ಬೇಸಿಗೆಯಲ್ಲಿಯೇ ಉಳುಮೆ ಮಾಡಿದ.ಇದರಿಂದ ಬೇಗ ಬಂದ ಮಳೆಯಿಂದ ಅನುಕೂಲವಾಯಿತು. ನಂತರ ಬಿತ್ತನೆಗೆ ಭೂಮಿಯನ್ನು ಮೂರುಸಲ ಉಳುಮೆ ಮಾಡಿದ. ಹೊರ ಬದುವನ್ನು ದುರಸ್ತಿಮಾಡಿದ . ಒಳ ಬದುವುಗಳನ್ನು ನಿರ್ಮಿಸಿ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಅನುವು ಮಾಡಿದ. ಬದುವಿನ ಮೇಲೆ ಜಾತ್ರೋಪ ಮತ್ತು ಗ್ಲೈರಿಸಿಡಿಯಾಗಳನ್ನು ಎರಡು ಉದ್ದೇಶಗಳಿಗಾಗಿ ನೆಟ್ಟ.ಒಂದನ್ನು ಬದುವುಗಳ ಸುರಕ್ಷತೆಗೆ ಮತ್ತು ಇನ್ನೊಂದನ್ನು ಜೈವಿಕ ಸಾಮಗ್ರಿಗಳ ಪೂರೈಕೆಗಾಗಿ ಬಳಸಿದ ಅದರಿಂದ ಜೈವಿಕ ಗೊಬ್ಬರತಯಾರಿಸಲು ಬಳಸಲು ಅನುಕೂಲವಾಯಿತು. ಹೊಲದಲ್ಲಿ ಕುರಿಗಳನ್ನು ತರುಬಿದ. ಅದರಿಂದ ಮಣ್ಣಿನ ಫಲವತ್ತತೆ ಹೆಚ್ಚಿತು.ಒಂದೆ ಬೆಳೆ ಪದ್ದತಿಯನ್ನು ನಿಲ್ಲಿಸಿ, ಇತರ ಬೆಳೆಗಳಾದ ಕೌ ಬೀನ್ಸ , ಬೆಂಡೆ, ಹತ್ತಿ ಮತ್ತು ಅವರೆಗಳನ್ನು ಅಂತರ್ ಬೆಳೆಯಾಗಿ ಹಾಕಿದ. ಕೌಪೀಯನ್ನು ಬದುವುಗಳ ಮೇಲೂ , ಹತ್ತಿ ಮತ್ತು ಬೆಂಡೆಗಳನ್ನು ಅಂತರ್ ಬೆಳೆಯಾಗಿ ಮುಖ್ಯ ಬೆಳೆಯ ನಡುವೆ ಅಲ್ಲಲ್ಲಿ ಹರಡಿದ. ಕೀಟ ನಿಯಂತ್ರಣವನ್ನು ಬಿಜೋಪಚಾರ ಮಾಡುವುದರಿಂದಲೇ ಪ್ರಾರಂಭಿಸಿದ. ಬೀಜಗಳನ್ನು ಟ್ರಿಕೊಡೆರ್ಮ ಮತ್ತು ಪಿಎಸ್ಬಿಗಳಿಂದ ಬಿತ್ತುವ ಮುಂಚೆ ಉಪಚಾರ ಮಾಡಿದ. ಕೀಟ ನಾಶಕ ಗುಣ ವುಳ್ಳ ಬೇವಿನ ಎಲೆ ರಸವನ್ನು ಮೂರು ಬಾರಿ . 15 – 20 ದಿನ ಗಳಿಗೊಮ್ಮೆ ಸಿಂಪಡಿಸಿದ. ರಸಾಯನಿಕಗಳನ್ನು ಕೇವಲ ಎರಡುಸಾರಿಗೆ ಸೀಮಿತಗೊಳಿಸಿದ. ಅವನ್ನು ಸೆಪ್ಟಂಬರ್ ತಿಂಗಳಲ್ಲಿ ಬೊಲ್ ವರ್ಮಗಳ ಕಾಟ ವಿಪರೀತವಾದಾಗ ಮಾತ್ರ ಬಳಸಿದ.
ಪರಿಸರ ಸ್ನೇಹಿ ಪರ್ಯಾಯ ಪದ್ದತಿಗಳಿಂದ ಬಸವರಾಜಪ್ಪನು 8 ಕ್ವಿಂಟಾಲ್ ಹತ್ತಿಯ ಇಳುವರಿ ಪಡೆದ. ಅದು ಕಳೆದ ಬಾರಿಯ ಸಾದಾರಣ ಪದ್ದತಿಯಲ್ಲಿನ ಬೆಳೆಗಿಂತ 6.25% ಹೆಚ್ಚಾಗಿತ್ತು. ಹಾಗಿದ್ದರೂ ಅವನಿಗೆ ಆದ ಅತಿ ದೊಡ್ಡ ಅನುಕೂಲ ಎಂದರೆ ಉತ್ಪಾದನಾ ವೆಚ್ಚದಲ್ಲಿ ಆದ ಇಳಿತ. ಕಡಿಮೆ ಪ್ರಮಾಣದ ರಸಾಯನಿಕ ಗೊಬ್ಬರದ ಬಳಕೆ ಅದು 60% ( ಬರಿ 50 ಕೆಜಿ ಕಾಂಪ್ಲೆಕ್ಸ ಗೊಬ್ಬರ ವನ್ನು 150 ಕೆಜಿ ಎಲ್ಲ ರೀತಿಯ ಗೊಬ್ಬರದ ಬದಲು ಬಳಸಿದ)ಮತ್ತು ಕೀಟನಾಶಕಗಳ ಬಳಕೆಯು 6 ಸಿಂಪರಣೆಗಳಿಂದ 2 ಸಿಂಪರಣೆಗಳಿಗೆ ಇಳಿಯಿತು.ರಸಗೊಬ್ಬರಗಳ ಬಳಕೆ ಕಡಿಮೆಯಾದ್ದರಿಂದ ಕೃಷಿ ಖರ್ಚು ಕೂಡಾ ಕಡಿಮೆ ಯಾಯಿತು..– ಗೊಬ್ಬರದ ಖರ್ಚು 39%; ಕೀಟನಾಶಕದ ಖರ್ಚು 77%; ಒಟ್ಟು ಖರ್ಚು 38%. ಕಡಿಮೆಯಾಯಿತು.
ಹತ್ತಿಯಲ್ಲದೆ ಬೇರೆಲ್ಲ ಬೆಳೆಗಳು ಕುಟುಂಬಕ್ಕೆ ಆಹಾರದ ಮೂಲವಾದವು. – ಒಂದು ಕ್ವಿಂಟಾಲು ( ಕೌಪೀ) ಜತೆಗೆ ಬೆಂಡೆಕಾಯಿ, ಮತ್ತು 30-35 ಕಿಲೋ ಅವರೆ ಕುಯಿಲಾದವು. ಅವೆಲ್ಲವನ್ನೂ ಬಳಸಲಾಯಿತು. ಇನ್ನೊಂದ ಮುಖ್ಯವಾದ ಲಾಭ, ಬಸವರಾಜಪ್ಪನ ಕೀಟ ನಿಯಂತ್ರಣ ಜ್ಞಾನದ ಮಟ್ಟವು ಹೆಚ್ಚಾಯಿತು.ಅದಕ್ಕೆ ಕಾರಣ ಎಫ್ ಎಫ್ ಎಸ್ ತರಬೇತಿ. ಅವನ ಈಗ ಅನೇಕ ಉಪಯುಕ್ತ ಕೀಟಗಳ ಗುರುತಿಸಿ ಲೇಡಿ ಬರ್ಡಬೀಟ್ಲ ಮತ್ತು ಕ್ರಿಸೊಪ ಎಂದು ಮುಂತಾಗಿ ಹೆಸರಿಸಬಲ್ಲ.
ಹತ್ತಿ ಯಿಂದ ವೆಚ್ಚ ಮತ್ತು ಆದಾಯ (ರೂ/ ಎಕರೆ
ಭೂಮಿ ತಯಾರಿ
ಕೊಟ್ಟಿಗೆ & ರಸಾಯನಿಕ ಗೊಬ್ಬರ
ಕ್ರ.ಸಂ |
ಚಟುವಟಿಕೆ |
ನಿಯಂತ್ರಿತ ತಾಕು |
ಪ್ರಾಯೋಗಿಕ ತಾಕು |
ವ್ಯತ್ಯಾಸ (%) |
1 |
ಉತ್ಪಾದನಾ ವೆಚ್ಚ |
|
|
|
|
ಭೂಮಿ ತಯಾರಿ |
600 |
600 |
|
|
ಕೊಟ್ಟಿಗೆ & ರಸಾಯನಿಕ ಗೊಬ್ಬರ |
1650 |
1000 |
- 39.4% |
|
ಬೀಜ & ಬಿಜೋಪಚಾರ |
700 |
715 |
|
- |
ಕೀಟ ಮತ್ತು ರೋಗ ನಿರ್ವಹಣೆ |
2380 |
550 |
- 76.9% |
|
ಕೂಲಿ |
1050 |
1050 |
|
|
ಒಟ್ಟು |
6380 |
3915 |
-38.6% |
2 |
ಇಳುವರಿ (ಕೆಜಿ) |
750 |
800 |
6.25% |
3 |
ಒಟ್ಟು ಆದಾಯ (ರೂ) |
16500 |
17600 |
6.66% |
4 |
ನಿವ್ವಳ ಆದಾಯ |
10120 |
13685 |
35.22% |
ಹತ್ತಿಯಿಂದ ಜೋಳಕ್ಕೆ ಕಲಿಕೆಯ ಲಾಭವನ್ನು ವಿಸ್ತರರಣೆ
ಹತ್ತಿ ಬೆಳೆಯ ಕೃಷಿಯಿಂದ ಆದ ಲಾಭವು ಗುಂಪಿನ ಸದಸ್ಯರನ್ನು ಆಹಾರ ಬೆಳೆಯಾದ ಜೋಳದಲ್ಲೂ ಪರ್ಯಾಯ ಪದ್ದತಿ ಬಳಸಲು ಉತ್ತೇಜಿಸಿತು. ಜೋಳವು ಮುಖ್ಯ ಜೀವನಾಧಾರ ಬೆಳೆ. ಇದು ಮುಖ್ಯವಾಗಿ ಮನೆ ಬಳಕೆಗೆ ಬೇಕಾಗುವುದು..ಜೋಳದ ಬೆಳೆಗೆ ಯಾವಗಲೂ ಮಣ್ಣಿನ ಫಲವತ್ತತೆ ಮತ್ತು ಕೀಟನಿಯಂತ್ರಣ ದ ಬಗ್ಗೆ ಗಮನ ಹರಿಸಿಲ್ಲ. ಎಎಮ್ ಎಫ್ ಇ ಮಾರ್ಗದರ್ಶನದಿಂದ , ಬಸವರಾಜಪ್ಪನು ಕೆಲವು ಪರ್ಯಾಯ ಪದ್ದತಿಗಳನ್ನು ಬಳಸಿ.ಭೂಮಿಯ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡಿದ. ಅದರಿಂದ ನೀರಿನ ಅಂಶ ದ ಉಳಿತಾಯವಾಯಿತು. ಸುಮಾರು 20 ಗಾಡಿ ಕೊಟ್ಟಿಗೆ ಗೊಬ್ಬರ ಹಾಕಿದ ಸೂರ್ಯ ಕಾಂತಿಯನ್ನು ಬದುವಿ ಗಡಿ ಬೆಳೆಯಾಗಿ ಹಾಕಿದ. ಇದರಿಂದ ದನಗಳು ನುಗ್ಗಿ ಜೋಳದ ಬೆಳೆ ಮೇಯುವುದು ತಪ್ಪಿತು.ಕೌಬೀನ್ಸ ಅಂತರ್ ಬೆಳೆಯಾಗಿ ಬಿತ್ತಿದ. ಜೋಳದ ಮತ್ತು ಕೌ ಬೀನ್ಸ ಬೀಜಗಳನ್ನು ಬಿತ್ತನೆಗೆ ಮುಂಚೆ ಪಿ ಎಸ್ ಬಿ ಯಿಂದ ಬೀಜೋಪಚಾರ ಮಾಡಿದ.ಜೋಳದ ಬಿತ್ತನೆ ಬೀಜಗಳನ್ನು ಸಾಧಾರಣವಾಗಿ ಬಳಸುವ 3 ಕಿಲೋ ಬದಲು . ಎರಡು ಕಿಲೊ ಉಪಯೋಗಿಸಿದ. ಹಿತಕರವಾದ ಅಂತರವಿರುವಂತೆ ನೋಡಿ ಕೊಂಡ. ಕಡಿಮೆ ಮಾಡಿದ ಬೀಜ ದರದಿಂದಾಗಿ ಸಸಿಗಳ ಸಂಖ್ಯೆಯು ಹೆಚ್ಚಾದುದು ಬಸವರಾಜಪ್ಪನ ಗಮನಕ್ಕೆ ಬಂದಿತು. ಇದರಿಂದ ಸಸಿಯ ಕಾಂಡ ಮತ್ತು ಎಲೆಗಳು ನಿಯಂತ್ರಿತ ತಾಕಿನ ಬೆಳೆಗಳಿಗಿಂತ ಎರಡುಪಟ್ಟು ಗಾತ್ರದಲ್ಲಿ ಹೆಚ್ಚಿದ್ದವು. ತೆನೆಯೂ ದೊಡ್ಡದಾಗಿದ್ದವು. ಪರ್ಯಾಯ ಪದ್ದತಿಯ ಯಿಂದ ಸಾಗುವಳಿ ವೆಚ್ಚ ಹೆಚ್ಚತು.ಮುಖ್ಯವಾಗಿ ಅವನು ಕೊಟ್ಟಿಗೆ ಗೊಬ್ಬರವನ್ನು ಕೊಂಡು ಹಾಕಿ ಮತ್ತು ಹೆಚ್ಚಸಲಮುಳುಮೆ ಮಾಡಿದ್ದ. ಹಾಗಿದ್ದರೂ ಬಸವರಾಜಪ್ಪನು ತಾನೆ ಸಾವಯವ ಗೊಬ್ಬರ ಉತ್ಪಾದನೆ ಮಾಡಿಕೊಂಡಾಗ ವೆಚ್ಚ ಕಡಿಮೆಯಾಯಿತು. ಬಸವರಾಜಪ್ಪನಿಗೆ ಹೆಚ್ಚಿನ ಆದಾಯ ಬಂದಿತು. ಉತ್ಪಾದನಾ ವೆಚ್ಚ ಹೆಚ್ಚಿದರೂ , ಬಸವರಾಜಪ್ಪ 9 ಕ್ವಿಂಟಲ್ ಜೋಳವನ್ನು ಬೆಳೆದ.. ಅದು ಹಿಂದಿನ ಬೆಳೆಯ ಎರಡು ಪಟ್ಟು ಆಗಿತ್ತು. ಮೇವಿನ ಇಳುವರಿಯೂ ಎರಡು ಪಟ್ಟು ಹೆಚ್ಚಿತು. ಎಕರೆಗೆ ೨ ಟನ್ ಇದ್ದದ್ದು ೪ ಟನ್ ಆಯಿತು, ಹೆಚ್ಚುವರಿಯಾಗಿ ಅವನಿಗೆ t 60ಕಿಲೊ ಕೌಪೀ ಮತ್ತು 60 ಕಿಲೊ ಸೂರ್ಯ ಕಾತಿ ಬೀಜ ದೊರೆತವು . ಅದರಿಂದ 9 ಕಿಲೊ ಎಣ್ಣೆ ಬಂದಿತು.
ಜೋಳದ ವೆಚ್ಚ ಮತ್ತು ಆದಾಯ ( ರೂ/ ಎಕರೆ)2005
ಕ್ರ. ಸಂ |
ಚಟುವಟಿಕೆ |
ನಿಯಂತ್ರಿತ ತಾಕು |
ಪ್ರಾಯೋಗಿಕ ತಾಕು |
ವ್ಯತ್ಯಾಸ (%) |
|
ಉಳುಮೆ |
400 |
2000 |
400% |
|
ಕೊಟ್ಟಿಗೆ ಗೊಬ್ಬರ |
- |
900 |
|
|
ಬೀಜ & ಬೀಜೋಪಚಾರ |
94 |
65 |
-30% |
|
ಕೂಲಿ |
880 |
880 |
|
1 |
ಉತ್ಪಾದನವೆಚ್ಚ |
1374 |
3845 |
179% |
2 |
ಇಳುವರಿ (ಕೆಜಿ) |
400 |
2900 |
125% |
3 |
ಒಟ್ಟು ಆದಾಯ |
2400 |
7410 |
208% |
4 |
ನಿವ್ವಳ ಆದಾಯ |
1026 |
3565 |
247% |
ಕೊನೆಯ ಮಾರ್ಪಾಟು : 12/31/2019
ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವ...
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ
ಒಣ ಭೂಮಿಯಲ್ಲಿ ಲಾಭದಾಯಕ ಹತ್ತಿ ಬೆಳೆಯುವ ಬಗ್ಗೆ ಇಲ್ಲಿ ತಿಳ...
೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್...