ಭಾರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗಳು ಇವತ್ತಿನ ಈ ಉಚ್ಛ್ರಾಯ ಸ್ಥಿತಿಗೆ ಬರಲು ಗ್ರಂಥಾಲಯ ಪಿತಾಮಹರಾದ ಡಾ:ಎಸ್.ಆರ್.ರಂಗನಾಥನ್ರವರು ಹಮ್ಮಿಕೊಂಡ ಕಠಿಣ ಪರಿಶ್ರಮವೇ ಕಾರಣ.
ಭಾರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗಳು ಇವತ್ತಿನ ಈ ಉಚ್ಛ್ರಾಯ ಸ್ಥಿತಿಗೆ ಬರಲು ಗ್ರಂಥಾಲಯ ಪಿತಾಮಹರಾದ ಡಾ:ಎಸ್.ಆರ್.ರಂಗನಾಥನ್ರವರು ಹಮ್ಮಿಕೊಂಡ ಕಠಿಣ ಪರಿಶ್ರಮವೇ ಕಾರಣ.
ಯಾವುದೇ ಒಂದು ಕ್ಷೇತ್ರವು ಸಮಾಜದಲ್ಲಿ ಗಟ್ಟಿಯಾಗಿ ನಿಂತು, ತನ್ನ ನಿರಂತರ ಸೇವೆಯನ್ನು ಸಾರ್ವಜನಿಕರಿಗೆ ಕೊಡಬಹುದಾದಲ್ಲಿ, ಅಲ್ಲಿ ಒಬ್ಬ ವಯಕ್ತಿಯ ಪರಿಶ್ರಮ, ತ್ಯಾಗ, ಬಲಿದಾನ ಮತ್ತು ನಿಸ್ವಾರ್ಥ ಸೇವೆಗಳು ಮುಖ್ಯವಾಗಿರುತ್ತದೆ. ಅದೇ ರೀತಿ ಈ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳಿಗೆ ಒಂದು ನಿದರ್ಿಷ್ಠವಾದ ರೂಪವನ್ನು ಕೊಟ್ಟು ಸಾಸ್ವತಲೋಕಕ್ಕೆ ದಿವ್ಯ ಕೊಡುಗೆಯನ್ನು ನೀಡಿ ನಕ್ಷತ್ರಪುಂಜಗಳಲ್ಲಿ ಒಂದು ಮಿನಿಗುರಾರೆಯಂತೆ ಗೋಚರಿಸುತ್ತಿದ್ದಾರೆ.
ಇವರು ಮೂಲಭೂತವಾಗಿ (ಪ್ರಾರಂಭವಾಗಿ) ತಮ್ಮನ್ನು ಗುರುತಿಸಿಕೊಂಡಿದ್ದು ಒಬ್ಬ ಗಣಿತ ಪ್ರಾಧ್ಯಾಪಕರಾಗಿ, ನಂತರದ ಅವಧಿಯಲ್ಲಿ ಶೈಕ್ಷಣಿಕ ವಿದ್ಯಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಈ ಗ್ರಂಥಪಾಲಕ ವೃತ್ತಿಯೇ ಮುಂದಿನ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಯೋಚಿಸುವಂತೆ ಮಾಡಿತು. ಅಷ್ಟೇ ಅಲ್ಲ, ತಮ್ಮ ಜೀವಿತದ ಪೂರ್ಣಅವಧಿಯನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗೆ ಮುಡಿಪಾಗಿಟ್ಟ ವ್ಯಕ್ತಿ ಇವರಾಗಿರುತ್ತಾರೆ.
ನಾಲ್ಕುಕೋಣೆಗಳ ಮಧ್ಯೆ ಇದ್ದು, ಕಪಾಟುಗಳಲ್ಲಿ ಕೆಲವೊಂದು ಪುಸ್ತಕಗಳನ್ನು ಇಟ್ಟು, ಗ್ರಂಥಾಲಯ ಎಂದು ಹೇಳುವ ಬದಲು, ವೈಜ್ಞಾನಿಕ ತಳಹದಿಯಲ್ಲಿ ಗ್ರಂಥಗಳಿಗೆ ಒಂದು ನಿದರ್ಿಷ್ಠರೂಪನವನ್ನು ನೀಡಿ ಸಮಾಜದ ಎಲ್ಲಾ ವರ್ಗಗಳ ಮತ್ತು ಎಲ್ಲಾ ವಯೋಮಿತಿಯವರನ್ನು ಗಮನದಲ್ಲಿರಿಸಿ ಗ್ರಂಥಗಳ ಸಂಗ್ರಹಣೆಗೆ ಒಟ್ಟುಕೊಡಬೇಕು, ಜೊತೆಗೆ ಎಲ್ಲಾ ಪ್ರಕಾರದ ಗ್ರಂಥಾಲಯಗಳ ಮತ್ತು ಸಹಕಾರ ಮನೋಭಾವನಾ ಸೇವೆಯನ್ನು ಎರ್ಪಡಿಸಬೇಕೆಂದು ಇವರ ಕೂಗು ಆಗಿತ್ತು.
ಸಾರ್ವಜನಿಕ ಗ್ರಂಥಾಲಯಗಳು ತಮ್ಮದೇ ಆದ ಸಂಪನ್ಮೂಲವನ್ನು ಕ್ರೋಢಿಕರಿಸಿಕೊಂಡು ಇವರ ಅಕಾಂಕ್ಷೆಯಾಗಿತ್ತು. ಇದು ಸಾಕಾರಗೊಳ್ಳಬೇಕಾದರೆ ಸಾರ್ವಜನಿಕ ಗ್ರಂಥಾಲಯಗಳು ತಮ್ಮದೇ ಗ್ರಂಥಾಲಯ ಕಾಯ್ದೆಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿರುತ್ತದೆಂಬುದು ಇವರ ಪ್ರತಿಪಾಧನೆ ಹಾಗೂ ಆಯಾಯ ರಾಜ್ಯ ಸಕರ್ಾರಗಳ ಅಂಗ ಸಂಸ್ಥೆಯಂತೆ ಇವುಗಳು ಕೆಲಸ ನಿರ್ವಹಿಸಬೇಕೆಂಬುದರ ಕಡೆಗೆ ಇವರು ಇಂಬು ನೀಡಿದ್ದರು.
1930ರಲ್ಲಿ ಗ್ರಂಥಾಲಯ ಕಾಯ್ದೆಯ ರೂಪುರೇಷೆಗಳ ಬಗ್ಗೆ ಆಳೂರ ಅಧ್ಯಯನವನ್ನು ಮಾಡಿ ಗ್ರಂಥಾಲಯ ಕಾಯ್ದೆ ಬಗ್ಗೆ ಕರಡನ್ನು ರಚಿಸಿ ವಾರಣಾಸಿಯಲ್ಲಿ ಪ್ರಥಮಬಾರಿಗೆ ನಡೆದ ಏಯಾ (ಈಡಿಣ ಂಚಿ ಅಠಟಿಜಿಜಡಿಜಟಿಛಿಜ) ಸಮ್ಮೇಳನದಲ್ಲಿ ಅರ್ಪಣೆಮಾಡಿದರು. ಮತ್ತು ಅಂದೇ ಗ್ರಂಥಾಲಯ ಕಾಯ್ದೆಯು ಬೆಳೆಯಲು ಅಂಕುರಗೊಂಡಿತು. ಇದರ ಪ್ರತಿಫಲವೆನ್ನುವಂತೆ ಮೊಟ್ಟಮೊದಲ ಬಾರಿಗೆ ಭಾರತದ ನಾಲು ರಾಜ್ಯಗಳಲ್ಲಿ ಡಾ:ಎಸ್.ಆರ್.ರಂಗನಾಥನ್ರವರ ಜೀವಿತಾವಧಿಯಲ್ಲಿ ಗ್ರಂಥಾಲಯ ಕಾಯ್ದೆಯು ಲಿಖಿತ ರೂಪದಲ್ಲಿ ಜನ್ಮತಾಳಿತು. ಮುಂದಿನ ದಿನಗಳಲ್ಲಿ ಇನ್ನೂ ಕೆಲವೊಂದು ರಾಜ್ಯಗಳು ಮೊದಲಿನ ನಾಲ್ಕು ರಾಜ್ಯಗಳ ಮಾದರಿಯಲ್ಲಿಯೇ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ಅಸ್ತಿತ್ವಕ್ಕೆ ತಂದವು.
ಸಾರ್ವಜನಿಕ ಗ್ರಂಥಾಲಯಗಳು ಉತ್ತಮ ಪುಸ್ತಕಗಳ ಸಂಗ್ರಹಣೆಯನ್ನು ಹೊಂದಿ ಸಾರ್ವಜನಿಕರ ಓದುಗರನ್ನು ಹೆಚ್ಚುಹೆಚ್ಚು ಆರ್ಕಸುವಲ್ಲಿ ಯಶಸ್ವಿಯಾಗಬೇಕೆಂದು ಇವರ ಹೆಬ್ಬಯಕೆಯಾಗಿತ್ತು.
ಮೂಲ : ವಿಜಯಕರ್ನಾಟಕ
ಕೊನೆಯ ಮಾರ್ಪಾಟು : 2/15/2020
ಎಲ್ಲಿ ಮತ್ತು ಹೇಗೆ ದೂರನ್ನು ದಾಖಲಿಸುವುದರ ಬಗ್ಗೆ ಉತರವನ್ನ...
ರಾಜ್ಯಗಳ ಅನುಗುಣವಾಗಿ ಶುಲ್ಕ ವಿನ್ಯಾಸ & ಅರ್ಜಿಯ ಪ್ರಕ್ರಿಯ...
ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಹಾಕುವಾಗ, ಪ್ರಶ್ನೆಯನ್ನು ...
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕುರಿತಾದ ಮಾಹಿತಿ...