অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಸವಾನಂತರದ ಸೋಂಕು

ಪ್ರಸವಾನಂತರದ ಸೋಂಕು ನೇರವಾಗಿ ಹೆರಿಗೆಯ ಕಾರಣದಿಂದಲೆ ಬರಬಹುದು (ಗರ್ಭಾಶಯದಲ್ಲಿ ಇಲ್ಲವೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವುದು) ಅಥವ ಪರೋಕ್ಷವಾಗಿರಬಹುದು.( ಕಿಡ್ನಿ, ಬ್ಲಾಡರ್‌ ಸ್ಥನ ಅಥವ ಶ್ವಾಸ ಕೋಶಗಳಲ್ಲಿ).

ಪ್ರಸವಾನಂತರದ ಜ್ವರ

ಹೆರಿಗೆಯಾದ ತಕ್ಷಣವೆ ಮಹಿಳೆಯ ದೇಹದ ಉಷ್ಣತೆಯು ಹೆಚ್ಚಾಗುವುದು..ಉಷ್ಣತೆಯು 101° F (38.3° C) ಅಥವಾ ಹೆಚ್ಚಿದ್ದರೆ ಅದೂ ಹೆರಿಗೆಯನಂತರ 12 ತಾಸಿನವರೆಗ ಇದ್ದರೆ ಸೋಂಕು ತಗುಲಿದೆ ಎನ್ನಬಹುದು. ಪ್ರಸವಾನಂತರದ ಸೋಂಕನ್ನು ಸಾಮಾನ್ಯವಾಗಿ 24 ತಾಸುಗಳ ನಂತರವೇ ಪತ್ತೆ ಹಚ್ಚುವರು. ಮತ್ತು ಆ ಮಹಿಳೆಗೆ 6 ತಾಸುಗಳ ಅಂತರದಲ್ಲಿ ದೇಹದ ಉಷ್ಣತೆಯು 100.4° F (38° C) ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಪ್ರಸವ ಪೂರ್ವ ಸೋಂಕು ತಗುಲಿದೆ ಎನ್ನಬಹುದು. ಆದರೆ ವೈದ್ಯರು ಸೋಂಕಿಗೆ ಕಾರಣವಾಗುವ ಪರಿಸ್ಥಿತಿಯನ್ನು ಗುಣ ಮಾಡಲು ಪ್ರಯತ್ನಿಸುವರು. ಆದರೂ ಸೋಂಕು ಹೆಚ್ಚಾದರೆ ಅದು ಗಂಭೀರ ಸ್ವರೂಪ ತಾಳುವುದು.

ಗರ್ಭಾಶಯದ ಸೋಂಕು

  • ಬ್ಯಾಕ್ಟೀರಿಯಾಗಳು ಗರ್ಭಾಶಯ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಹೆರಿಗೆಯಾದ ತಕ್ಷಣ ಸೋಂಕು ಉಂಟು ಮಾಡಬಹುದು.
  • ಈ ಸೋಂಕುಗಳು ಕಿಬ್ಬೊಟ್ಟೆಯಲ್ಲಿ ನೋವು, ಜ್ವರ, ಮತ್ತು ದುರ್ವಾಸನೆಯ ಸ್ರಾವವನ್ನು ಉಂಟು ಮಾಡುವವು.
  • ರೋಗ ಪತ್ತೆಯನ್ನು ದೈಹಿಕ ಲಕ್ಷಣಗಳಿಂದ ಮತ್ತು ದೈಹಿಕ ಪರೀಕ್ಷೆಗಳಿಂದ ಅರಿಯಬಹುದು.
  • ಆಂಟಿ ಬಯೋಟಿಕ್‌ ಗಳು ಸೋಂಕನ್ನು ನಿವಾರಿಸುತ್ತವೆ..

ಪ್ರಸವಾನಂತರದ ಸೋಂಕು ಸಾಧಾರಣ ವಾಗಿ ಗರ್ಭಾಶಯದಲ್ಲಿ ಮೊದಲಾಗುವುದು. ಈರೀತಿಯ ಸೋಂಕು ಹೆಚ್ಚಾಗಿ ಭ್ರೂಣವನ್ನು ಆವರಿಸಿರುವ ಪೊರೆಯು ಸೋಂಕಿಗೆ ಒಳಗಾಗಿ ಹೆರಿಗೆಯ ಸಮಯದಲ್ಲಿ ಜ್ವರ ಬರಬಹುದು. ಇದು ಗರ್ಭಾಶಯದ ಒಳಗೋಡೆ ಯ ಮೇಲಿನ ಪೊರೆ, ಗರ್ಭಾಶಯದ ಸ್ನಾಯುಗಳು ಅಥವ ಗರ್ಭಾಶಯದ ಸುತ್ತಲಿನ ಪ್ರದೇಶಗಳಿಂದಲೂ ಆಗಬಹುದು.

ಕಾರಣಗಳು

ಆರೋಗ್ಯವಂತ ಯೋನಿಯಲ್ಲಿ ಸಾಮಾನ್ಯವಾಗಿ ಇರುವ ಬ್ಯಾಕ್ಟೀರಿಯಾಗಳೆ ಹೆರಿಗೆಯ ನಂತರ ಸೋಂಕಿಗೆ ಕಾರಣ ವಾಗಬಹುದು. ಮಃಹಿಳೆಯು ಸೋಂಕಿಗೆ ಒಳಗಾಗಲು ಕೆಳಕಾಣಿಸಿದ ಆಂಶಗಳು ಕಾರಣವಾಗಬಹುದು:

  • ಅನಿಮೀಯ
  • ಬ್ಯಾಕ್ಟೀರಿಯಲ್‌ ವೆಜೈನೊಸಿಸ್‌
  • ಪದೇ ಪದೇ ಯೋನಿಯ ಪರೀಕ್ಷೆ
  • ಭ್ರೂಣದ ಆಂತರಿಕ ಮೇಲ್ವಿಚಾರಣೆ ( ಪೊರೆ ಸೀಳಿಧ್ದಾಗ)
  • ಪೊರೆಯ ಸೀಳಿದ ನಂತರ ಹೆರಿಗೆಯು ತುಂಬ ತಡವಾಗುವುದು. (18 ತಾಸಿಗೂ ಹೆಚ್ಚು)
  • ಮುಂದುವರಿದ ಹೆರಿಗೆ ಬೇನೆ
  • ಸಿಸಿರಿಯನ್‌ ಪ್ರಸವ
  • ಮಾಸದ ತುಣುಕುಗಳು ಗರ್ಭಾಶಯದಲ್ಲಿ ಹೆರಿಗೆಯ ನಂತರವೂ ಉಳಿದುಕೊಳ್ಳುವುದು
  • ಹೆರಿಗೆಯ ನಂತರ ಅತಿ ತೀವ್ರವಾದ ರಕ್ತ ಸ್ರಾವ (ಪ್ರಸವಾನಂತರದ ರಕ್ತಸ್ರಾವ)
  • ಕಿರಿಯ ಪ್ರಾಯ
  • ಕೆಳಮಟ್ಟದ ಸಾಮಾಜಿಕ- ಆರ್ಥಿಕಗುಂಪು

ಗರ್ಭಾಶಯದ ಸೋಂಕು ತಗುಲವ ಸಾಧ್ಯತೆಯು ಹೆರಿಗೆಯ ವಿಧಾನವನ್ನು ಹೆಚ್ಚಾಗಿ ಅವಲಂಬಿಸಿದೆ.

  • ಯೋನಿಯ ಮೂಲಕ ಆಗುವ ಸಾಮಾನ್ಯ ಹೆರಿಗೆಗಳಲ್ಲಿ : 1 ರಿಂದ 3%
  • ಸಿಸರಿಯನ್‌ ಹೆರಿಗೆಯನ್ನು ಮುಂದಾಲೋಚನೆ ಮಾಡಿ ಹೆರಿಗೆ ನೋವು ಶುರುವಾಗುವ ಮೊದಲೆ ಮಾಡಿದಾಗ 5 ರಿಂದ15%
  • ಹೆರಿಗೆ ನೋವು ಪ್ರಾರಂಭವಾದ ಮೇಲೆ ಅಗತ್ಯವಾಗುವ ಆದರೆ ಪೂರ್ವ ಯೋಜಿತವಲ್ಲದ ಸಿಸಿರಿಯನ್‌ ನಲ್ಲಿ 15ರಿಂದ 20%

ಲಕ್ಷಣಗಳು

ಲಕ್ಷಣಗಳು ಸಾಧಾರಣವಾಗಿ ಕಿಬ್ಬೊಟ್ಟೆಯಲ್ಲಿ ಅಥವ ಕೆಳ ಹೊಟ್ಟೆಯಲ್ಲಿ ನೋವು, ಜ್ವರ ( ಹೆರಿಗೆ ಯಾದ 1 ರಿಂದ 3 ದಿನಗಳ ಒಳಗೆ), ಬಿಳಿಚಿಕೊಳ್ಳುವುದು, ಚಳಿ, ಅಸೌಖ್ಯದ ಅನುಭವ,ಮತ್ತು ಬಹಳ ಸಲ ತಲೆ ನೋವು ಮತ್ತು ಹಸಿವೆ ಇಲ್ಲದಾಗುವುದು. ಎದೆ ಬಡಿತದ ವೇಗ ಹೆಚ್ಚುವುದು,.ಗರ್ಭಾಶಯದಲ್ಲಿ ಬಾವು ಬರುವುದು, ಮೃದು ಮತ್ತು ಕೆಂಪಗಾಗುವುದು.. ಯೋನಿಯಿಂದ ಕೆಟ್ಟವಾಸನೆಯ ವಿಸರ್ಜನೆ ಹೊರಬರುವುದು.ಇವುಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಆದರೆ ಎದ್ದು ಕಾಣುವ ಲಕ್ಷಣ ವೆಂದರೆ ಕಡಿಮೆ ಪ್ರಮಾಣದ ಜ್ವರ ಮಾತ್ರ ಆಗಿರುವುದು. ಗರ್ಭಾಶಯದ ಸುತ್ತಲಿನ ಅಂಗಾಂಶಗಳು ಸೋಂಕಿಗೆ ಒಳಗಾದಾಗ, ಅವು ಬಾಯುವುದರಿಂದ ಸಾಕಷ್ಟು ಅಸೌಖ್ಯವಾಗುವುದು. ಆಗ ಮಹಿಳೆಯರಿಗೆ ತೀವ್ರವಾದ ನೋವು ಮತ್ತು ಏರಿದ ಜ್ವರ ಬರುವುದು .

ಕೆಲವು ಗಂಭೀರ ಸಮಸ್ಯೆಗಳು ಇದರಿಂದ ಬರಬಹುದು. ಆದರೆ ಯಾವಾಗಲೂ ಬರಲಿಕ್ಕಿಲ್ಲ. ಅವು ಕೆಳಗಿನಂತೆ ಇವೆ.:

  • ಜಠರವನ್ನು ಒಳ ಭಾಗದಲ್ಲಿ ಆವರಿಸಿರುವ ಪೊರೆಗಳ ಬಾವು.
  • ಪೆಲ್ವಿಕ್‌ ರಕ್ತ ನಾಳಗಳಲ್ಲಿ ರಕ್ತದ ಕರಣಿಗಳು ( ಪೆಲ್ವಿಕ್‌ ತ್ರೋಂಬೋಫಿಲೆಬಿಟಿಸ್‌)
  • ರಕ್ತದ ಕರಣಿಗಳು ಶ್ವಾಸಕೋಶಕ್ಕೆ ಸಾಗಿ ಅಲ್ಲಿ ಶುದ್ಧ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು ( ಪಲ್ಮನರಿ ಎಂಬೋಲಿಸಂ)
  • ಸೋಂಕು ತಗುಲಿಸಿದ ಬ್ಯಾಕ್ಟೀರಿಯಾಗಳು ಉತ್ಪಾದಿಸಿದ ವಿಷವಸ್ತುಗಳ ಮಟ್ಟವು ರಕ್ತದಲ್ಲಿ ಹೆಚ್ಚಿ ಅದರಿಂದ ಸೆಪ್ಸಿಸ್‌ ಅಥವ ಟಾಕ್ಸಿಕ್‌ ಆಘಾತವಾಗಬಹುದು.

ಸೆಪ್ಸಿಸ್‌ ಅಥವ ಟಾಕ್ಸಿಕ್‌ ಆಘಾತದಲ್ಲಿ ರಕ್ತದ ಒತ್ತಡವು ಗಣನೀಯವಾಗಿ ಇಳಿಯುವುದು.ಎದೆ ಬಡಿತವು ಅತಿ ವೇಗವಾಗುವುದು. ತೀವ್ರವಾದ ಮೂತ್ರ ಪಿಂಡಗಳ ವೈಫಲ್ಯ ಮತ್ತು ಅದು ಒಂದೊಂದು ಸಲ ಮರಣದಲ್ಲಿ ಕೊನೆಯಾಗಬಹುದು. ಇದು ಬಹು ವಿರಳವಾಗಿದೆ.ಯಾಕೆಂದರೆ ತಕ್ಷಣದ ಪತ್ತೆ ಮತ್ತು ಮುಂಚಿತವಾಗಿಯೆ ಪ್ರಸವಾನಂತರದ ಜ್ವರಕ್ಕೆ ಚಿಕಿತ್ಸೆ ನೀಡುವುದರಿಂದ ಅಪಾಯ ಪರಿಹಾರವಾಗುವುದು.

ಗುರುತಿಸುವಿಕೆ ಮತ್ತು ಚಿಕಿತ್ಸೆ

ಸೋಂಕನ್ನು ಪತ್ತೆಹಚ್ಚಲು ದೈಹಿಕ ಪರೀಕ್ಷೆಯ ಮೂಲಕ ಸಾಧ್ಯ. ಕೆಲವು ಸಲ ಮಹಿಳೆಗೆ ಬೇರೆ ಯಾವುದೆ ಲಕ್ಷಣಗಳು ಗೋಚರಿಸದೆ ಇದ್ದರೂ ಜ್ವರದಿಂದ ಮಾತ್ರ ಪತ್ತೆ ಹಚ್ಚಬಹುದು. ಸಾಮಾನ್ಯವಾಗಿ ವೈದ್ಯರು ಮೂತ್ರ ಪರೀಕ್ಷೆ ಮಾಡಿಸಿ ಅದರಲ್ಲಿ ಬ್ಯಾಕ್ಟೀರಿಯಾಗಳು ಇದ್ದರೆ ರೋಗ ಪತ್ತೆ ಮಾಡುವುರು.ಆಗಾಗ , ರಕ್ತಪರೀಕ್ಷೆಯನ್ನು ಮಾಡಿಸುವರು. ಗರ್ಭಾಶಯವು ಸೋಂಕಿಗೆ ಒಳಗಾಗಿದ್ದರೆ ರಕ್ತನಾಳಗಳ ಮೂಲಕ ಆಂಟಿ ಬಯೋಟಿಕ್ಸ ಅನ್ನು ನೀಡುವರು. ಅವರಿಗೆ 48 ಗಂಟೆಗಳ ವರೆಗೂ ಜ್ವರ ಬಾರದೆ ಇದ್ದಾಗ ಚಿಕಿತ್ಸೆ ನಿಲ್ಲಿಸುವರು.ಅದಾದ ನಂತರ ಮಹಿಳೆಯು ಬಾಯಿಯ ಮೂಲಕ ಆಂಟಿ ಬಯಾಟಿಕ್ಸ ತೆಗೆದು ಕೊಳ್ಳುವ ಅಗತ್ಯ ಇರುವುದಿಲ್ಲ.

ಬ್ಲಾಡರ್‌ ಮತ್ತು ಕಿಡ್ನಿ ಸೋಂಕು

ಕೆಲವು ಸಲ ಪ್ರಸವಾನಂತರದ ಬ್ಲಾಡರ್‌ ಸೋಂಕು ಉಂಟಾಗಿ ಅದರಿಂದ ಪ್ರಸವಾನಂತರದ ಸೋಂಕು ಬರಬಹುದು. ಈ ಸೋಂಕಿನ ಆತಂಕವು ಪ್ರಸವದ ಸಮಯದಲ್ಲಿ ಇಲ್ಲವೆ ನಂತರ ಬ್ಲಾಡರಿನಲ್ಲಿ ಸಂಗ್ರಹವಾದ ಮೂತ್ರವನ್ನು ಹೊರತೆಗೆಯಲು ಟ್ಯೂಬ್‌ ಅನ್ನು .ಹಾಕಿದ್ದರೆ ಹೆಚ್ಚಾಗಿರುವುದು. ಮೂತ್ರಪಿಂಡಗಳ ಸೋಂಕು ಹೆರಿಗೆಯನಂತರ ಬ್ಲಾಡರಿನಿಂದ ಹರಡುವ ಬ್ಯಾಕ್ಟೀರಿಯಾಗಳ ಮೂಲಕ ಬರಬಹುದು. ಕೆಲವು ಸಲ ಬ್ಲಾಡರ್‌ ಅಥವ ಮೂತ್ರಪಿಂಡಗಳ ಸೋಂಕು ಹೆರಿಗೆ ಮೊದಲೆ ಬ್ಲಾಡರನಲ್ಲಿದ್ದ ಬ್ಯಾಕ್ಟೀರಿಯಾಗಳು ಸುಪ್ತವಾಗಿದ್ದು ನಂತರ ಚುರುಕಾಗುತ್ತವೆ. ಬ್ಲಾಡರ್‌ ಅಥವ ಮೂತ್ರ ಪಿಂಡಗಳ ಸೋಂಕು ನೋವಿನಿಂದ ಕೂಡಿದ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುವುದು. ಬ್ಲಾಡರ್‌ನ ಕೆಲವು ಸೋಂಕು ಮತ್ತು ಮೂತ್ರ ಪಿಂಡಗಳ ಸೋಂಕು ಬೆನ್ನಿನ ಕೆಳ ಭಾಗದ ನೋವಿಗೆ, ಅಥವ ಪಕ್ಕೆ ನೋವಿಗೆ ,ಸಾಮಾನ್ಯ ಅಸೌಖ್ಯಕ್ಕೆ ಮತ್ತು ಮಲಬದ್ದತೆಗೆ ಕಾರಣವಾಗಬಹುದು.

ಗುರುತಿಸುವಿಕೆ ಮತ್ತು ಚಿಕಿತ್ಸೆ

ರೋಗ ಪತ್ತೆಯನ್ನು ಮೂತ್ರ ಪರೀಕ್ಷೆ ಮತ್ತು ಮೂತ್ರ,ವಿಶ್ಲೇಷಣೆಯಿಂದ ಮಾಡಲಾಗುವುದು. ಮೂತ್ರದ ಕಲ್ಚರ್‌ನಿಂದ ಬ್ಲಾಡರ್‌ ಮತ್ತು ಮೂತ್ರಪಿಂಡಗಳ ಸೋಂಕನ್ನು, ಬ್ಯಾಕ್ಟೀರಿಯಾಗಳನ್ನು ಗುರುತಿಸಿ ಪತ್ತೆ ಹಚ್ಚಬಹುದು. ಸಾಧಾರಣವಾಗಿ ಮಹಿಳೆಗೆ ಬ್ಲಾಡರ್‌ ಮತ್ತು ಮೂತ್ರಪಿಂಡಗಳ ಸೋಂಕು ಆದಾಗ ಅಂಟಿಬಯೋಟಿಕ್ಸನೀಡುವರು. ಅವನ್ನು ಮೂತ್ರಪಿಂಡಗಳ ಸೋಂಕಿಗೆ ರಕ್ತ ನಾಳಗಳ ಮೂಲಕ ದೇಹಕ್ಕೆ ಸೇರಿಸುವರು. ಬ್ಲಾಡರ್‌ ಸೋಂಕಿಗೆ ಬಾಯಿಯ ಮೂಲಕವೆ ಔಷಧಿ ನೀಡುವರು. ಬ್ಲಾಡರ್‌ ಮೂಲಕ ಸೋಂಕು ಹರಡಿದೆ ಎಂದು ಕಂಡುಬಂದರೆ ಔಷಧವನ್ನು ಕೆಲವೆ ದಿನ ನೀಡಿದರೂ ಸಾಕು. ಮೂತ್ರ ಪಿಂಡದ ಸೋಂಕು ಕಂಡು ಬಂದರೆ ಜ್ವರವು ಪೂರ್ತಿಯಾಗಿ ಕಡಿಮೆಯಾದ 48 ಗಂಟಗಳವರೆಗ ನೀಡುವರು.ನಂತರವೂ ಆಂಟಿಬಯೋಟಿಕ್ಸಗಳನ್ನು ಹೆಚ್ಚಿನ ಅವಧಿಯವರಗೆ ಕೊಡುವುದನ್ನು ಮುಂದುವರಿಸಬಹುದು. ಕಲ್ಚರ್‌ ಪರೀಕ್ಷೆ ಮಾಡಿದ ನಂತರಅದಕ್ಕೆ ಸೂಕ್ತವಾದ ಅಂಟಿಬಯೋಟಿಕ್ಸನ್ನು ನಿರ್ಧರಿಸಿ ನೀಡಬೇಕು. ಹೆಚ್ಚು ಪ್ರಮಾಣದ ದ್ರವದ ಸೇವನೆಯಿಂದ ಮೂತ್ರಪಿಂಡಗಳು ಚೆನ್ನಾಗಿ ಕೆಲಸ ಮಾಡಲು ಉತ್ತೇಜನ ಸಿಗುವುದು. ಮತ್ತು ಬ್ಯಾಕ್ಟೀರಿಯಾಗಳನ್ನು ಮೂತ್ರ ನಾಳಗಳ ಮೂಲಕ ಹೊರಹಾಲು ಅನುಕೂಲವಾಗುವುದು.ಮತ್ತೊಂದು ಮೂತ್ರದ ಸ್ಯಾಂಪಲ್‌ ಅನ್ನು ಹೆರಿಗೆ ಯಾದ 6 ರಿಂದ 8 ವಾರಗಳ ತರುವಾಯ ಯೂರಿನ್‌ ಕಲ್ಚರ್‌ ಮಾಡಿಸಬೇಕು. ಆಗ ಸೋಂಕು ಗುಣವಾಗಿರುವುದು ಗೊತ್ತಾಗುವುದು..

ಸ್ಥನ ಸೋಂಕು

ಸ್ಥನದ ಸೋಂಕು ಹೆರಿಗೆ ಯಾದ ಮೇಲೆ ತಗುಲಬಹುದು.ಸಾಧಾರಣವಾಗಿ ಹೆರಿಗೆಯಾದ ಮೊದಲ ಆರು ವಾರಗಳಲ್ಲಿ ಕಂಡು ಬರುವುದು. ಮತ್ತು ಇದು ಮಗುವಿಗೆ ಎದೆಹಾಲು ಕೊಡುವ ಮಹಿಳೆಯರಲ್ಲಿ ಸಾಮಾನ್ಯ ವಾಗಿರುವುದು. ಮೊಲೆಯ ತೊಟ್ಟಿನ ಸುತ್ತಲ ಚರ್ಮವು ಸೀಳಿದಂತೆ ಇದ್ದರೆ ಚರ್ಮದಲ್ಲಿನ ಬ್ಯಾಕ್ಟೀರಿಯಾಗಳು ಹಾಲಿನ ಗ್ರಂಥಿಗಳಲ್ಲಿ ಪ್ರವೇಶೀಸಬಹುದು.ಅದರಿಂದ ಸೋಂಕು ತಗುಲುವುದು. ಮಗುವ ಹಾಲು ಕುಡಿಯುವಾಗ ಸರಿಯಾದ ಭಂಗಿಯಲ್ಲಿರದಿದ್ದರೆ ಮೊಲೆಯ ತೊಟ್ಟು ಸೀಳಬಹುದು ಬಿರುಕು ಮತ್ತು ಕೆಂಪಗೆ ಆಗಬಹುದು ಅದರಿಂದ ಸೋಂಕು ಪ್ರಾರಂಭವಾಗುವುದು. ಸೋಂಕು ತಗುಲಿದ ಸ್ಥನವು ಸಾಮಾನ್ಯವಾಗಿ ಬಾತು ಕೊಂಡಂತೆ ಮತ್ತು ಕೆಂಪಾಗಿ ಕಾಣುವುದು ಅದು ಮೆತ್ತಗೆ ಹಾಗೂ ನಸು ಬಿಸಿಯಾಗಿರುವುದು. ಸ್ಥನದ ಒಂದು ಭಾಗವು ಮಾತ್ರ ಹೀಗಾಗಬಹುದು.ಮಹಿಳೆಗೆ ಜ್ವರ ಬರಬಹುದು. ಹೆರಿಗೆ ಯಾದ 10 ದಿನಗಳ ನಂತರ ಬರುವ ಜ್ವರವು ಸ್ಥನ ದ ಸೋಂಕಿನಿಂಧಲೆ ಆಗಿರುವುದು. ವಿರಳವಾಗಿ, ಸ್ಥನದ ಸೋಂಕು ಕೀವು ಉಂಟು ಮಾಡಬಹುದು. ಸ್ಥನದ ಆ ಭಾಗದಲ್ಲಿ ಬಾವು ಕಾಣಿಸಿಕೊಳ್ಳ ಬಹುದು.ಅದನ್ನು ಸ್ಥನದ ತೊಟ್ಟನ ಮೂಲಕ ಹಿಂಡಿ ಹೊರ ಹಾಕಬಹುದು. ಸ್ಥನದ ಸೋಂಕು ಹೆರಿಗೆಯ ನಂತರ ಆಗಿದ್ದರೆ ತಾಯಿಯು ಮಗುವಿಗೆ ಎದೆ ಹಾಲನ್ನು ಕುಡಿಸಬಹುದು.

ಚಿಕಿತ್ಸೆ

ಸ್ಥನದ ಸೋಂಕನ್ನು ಆಂಟಿ ಬಯೋಟಿಕ್‌ಗಳ ಮೂಲಕ ಚಿಕಿತ್ಸೆ ಮಾಡುವರು. ಮಹಿಳೆಗೆ ಹೆಚ್ಚಿನ ಪ್ರಮಾಣದ ದ್ರವ ಸೇವನೆಗೆ ಉತ್ತೇಜನ ನೀಡುವರು. ಸ್ಥನ ಸೋಂಕಿರುವ ಮಹಿಳೆಯರು ಮಗುವಿಗೆ ಹಾಲು ಕುಡಿಸುತ್ತಿದ್ದರೆ ಮಗುವಿಗೆ ಹಾಲು ಕೊಡುವುದನ್ನು ಮುಂದುವರಿಸಬಹುದು. ಕ್ರಮವಾಗಿ ಸ್ಥನವನ್ನು ಖಾಲಿ ಮಾಡುವುದು ಚಿಕಿತ್ಸೆಯ ಒಂದು ಭಾಗ. ಮತ್ತು ಅದರಿಂದ ಸ್ಥನದಲ್ಲಿ ಕೀವಾಗುವುದನ್ನು ತಪ್ಪಿಸಬಹುದು. ಸ್ಥನದಲ್ಲಿ ಕೀವಾದರೆ ಅದನ್ನು ಆಂಟಿ ಬಯೋಟಿಕ್‌ಗಳನ್ನು ನೀಡುವ ಮೂಲಕ ಚಿಕಿತ್ಸೆ ಮಾಡುವರು. ಮತ್ತು ಶಸ್ತ್ರ ಕ್ರಿಯೆ ಯಿಂದ ಕೀವನ್ನು ಖಾಲಿ ಮಾಡುವರು.ಅದಕ್ಕೆ ಸ್ಥಾನಿಕ ಅರಿವಳಿಕೆ ನೀಡಬಹುದು. ಆದರೂ ರಕ್ತ ನಾಳದ ಮೂಲಕ ಅರಿವಳಿಕೆ ಮದ್ದನ್ನು ಕೊಡಬಹುದು ಅಥವ ಸಾಮಾನ್ಯ ಅರಿವಳಿಕೆಯನ್ನು ನೀಡಬೇಕಾಗಬಹುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate