অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನವ ರಕ್ತ

ಮಾನವ ರಕ್ತ

ನಿಮ್ಮ ದೇಹದ ತೂಕದ ಶೇ 7 ರಷ್ಟು ಭಾಗವು ರಕ್ತವಾಗಿರುತ್ತದೆ !

ಒಬ್ಬ ಸಾಮಾನ್ಯ ಮಹಿಳೆಯು ತನ್ನ ದೇಹದಲ್ಲಿ ಸುಮಾರು 4.5 ಲೀಟರ್ ರಕ್ತವನ್ನು ಹಾಗೂ ಸಾಮಾನ್ಯ ಪುರುಷನು 5.6 ಲೀಟರ್ ರಕ್ತವನ್ನು ಹೊಂದಿರುತ್ತಾನೆ. ಆಶ್ಚರ್ಯಕರ ವಿಷಯವೆಂದರೆ ಸಮುದ್ರ ಮಟ್ಟಕ್ಕಿಂತ ಎತ್ತರದ ಪ್ರದೇಶದಲ್ಲಿ (ಪರ್ವತ ಪ್ರದೇಶದಲ್ಲಿ) ವಾಸಿಸುವವರು ಹೋಲಿಕೆಯಲ್ಲಿ ಕೆಳ ಪ್ರದೇಶದಲ್ಲಿ ವಾಸಿಸುವವರಿಗಿಂತ 2 ಲೀಟರ್ ಹೆಚ್ಚು ರಕ್ತವನ್ನು ಹೊಂದಿರುತ್ತಾರೆ. ಏಕೆಂದರೆ ಎತ್ತರದ ಪ್ರದೇಶದಲ್ಲಿರುವ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿರುತ್ತದೆ. ಆದ್ದರಿಂದ ಅಲ್ಲಿ ಜೀವಿಸುವವರ ಶ್ವಾಸಕೋಶಕ್ಕೆ ಆಮ್ಲಜನಕವನ್ನು ಪೂರೈಸಲು ಹೆಚ್ಚುವರಿ ರಕ್ತದ ಆವಶ್ಯಕತೆ ಇರುತ್ತದೆ.

ಎರಡರಿಂದ ಮೂರು ಹನಿ ರಕ್ತದಲ್ಲಿ ಒಂದು ಬಿಲಿಯನ್ (ಒಂದು ಶತ ಕೋಟಿ) ಕೆಂಪು ರಕ್ತಕಣಗಳು ಇರುತ್ತವೆ !

ಪ್ರತಿಯೊಂದು ಕೆಂಪು ರಕ್ತ ಕಣವು ನಿಮ್ಮ ದೇಹದಲ್ಲಿ ಸುಮಾರು 120 ದಿನಗಳು ಜೀವಂತವಾಗಿರುತ್ತದೆ.

ನಿಮ್ಮ ದೇಹದಲ್ಲಿರುವ ಸುಮಾರು 2 ಮಿಲಿಯನ್ ರಕ್ತ ಕಣಗಳು ಪ್ರತಿ ಸೆಕೆಂಡ್‍ಗೆ ಸಾಯುತ್ತಿರುತ್ತವೆ ! ಆದರೆ ಗಾಭರಿಯಾಗಬೇಡಿ - ಸತ್ತ ಕಣಗಳ ಬದಲಿಗೆ ಹೊಸ ಕಣಗಳು ಯಾವಾಗಲೂ ಹುಟ್ಟುತ್ತಿರುತ್ತವೆ ! ಅಲ್ಲದೆ, ನೀವು ರಕ್ತದಾನ ಮಾಡಿದಾಗ,ನಿಮಗೆ ಕಡಿಮೆಯಾದ ಕೆಂಪು ರಕ್ತಕಣಗಳು 3 ರಿಂದ 4 ವಾರಗಳಲ್ಲಿ ಮರುಪೂರಣಗೊಳ್ಳುತ್ತವೆ.

ಮನುಷ್ಯರಲ್ಲಿ ಸಾಮಾನ್ಯವಾಗಿ 4 ಪ್ರಕಾರದ ರಕ್ತದ ಗುಂಪುಗಳಿವೆ (ಎ, ಬಿ, ಎಬಿ ಮತ್ತು ಒ).

ನಾಯಿಗಳಲ್ಲಿಯೂ ಕೂಡಾ ನಾಲ್ಕು ಪ್ರಕಾರದ ರಕ್ತದ ಗುಂಪಿದೆ. ಬೆಕ್ಕುಗಳಲ್ಲಿ ಕನಿಷ್ಠ  ಮೂರು ಪ್ರಕಾರದ ಗುಂಪುಗಳಿವೆ ಆದರೆ ಅತಿಹೆಚ್ಚು ರಕ್ತದ ಗುಂಪು ಹೊಂದಿರುವ ಪ್ರಾಣಿ ಯಾವುದು ಗೊತ್ತೆ?  ಅದು ಹಸು. ಹಸುಗಳು 800ಕ್ಕಿಂತ ಹೆಚ್ಚು ಪ್ರಕಾರದ ರಕ್ತದ ಗುಂಪುಗಳನ್ನು ಹೊಂದಿವೆ !

ಒಂದು ವೇಳೆ ವಯಸ್ಕ ಮನುಷ್ಯನ ದೇಹದಲ್ಲಿರುವ ಎಲ್ಲ ಅಪಧಮನಿಗಳು, ಲೋಮನಾಳಗಳು ಮತ್ತು ರಕ್ತನಾಳಗಳನ್ನು ಒಂದಕ್ಕೊಂದು ಉದ್ದಕ್ಕೆ ಜೋಡಿಸಿದರೆ ಅದರ ಉದ್ದವು ಸುಮಾರು 1,00,000 ಕಿಲೊ ಮೀಟರ್‍ಗಳಷ್ಟು ಆಗುತ್ತದೆ.

ಭೂಮಿಯ ಸುತ್ತಳತೆಯು 40,000 ಕಿ.ಮಿ. ಇರುವುದರಿಂದ, ಮನುಷ್ಯನ ರಕ್ತನಾಳಗಳಿಂದ ಭೂಮಿಯನ್ನು ಸುಮಾರು 2.5 ಬಾರಿ ಸುತ್ತಬಹುದಾಗಿದೆ!

ಒಂದು ರಕ್ತ ಕಣವು ನಿಮ್ಮ ಇಡೀ ದೇಹವನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಎಷ್ಟು ವೇಗ ನೋಡಿ !

ದೇಹದ ಗಾತ್ರವು ಹೃದಯದ ಬಡಿತಕ್ಕೆ ವಿಲೋಮವಾದ (ಸರಿ ವಿರುದ್ಧ) ಸಂಬಂಧವನ್ನು ಹೊಂದಿದೆ. ಪ್ರಾಣಿಗಳ ದೇಹದ ಗಾತ್ರ ದೊಡ್ಡದಾದಂತೆ ಹೃದಯದ ಬಡಿತದ ವೇಗ ಕಡಿಮೆಯಾಗುತ್ತದೆ.

ಒಬ್ಬ ವಯಸ್ಕ ಮನುಷ್ಯನ ಹೃದಯದ ಬಡಿತದ ಸಾಮಾನ್ಯ ದರವು ಪ್ರತಿ ನಿಮಿಷಕ್ಕೆ 70-75ರಷ್ಟಿರುತ್ತದೆ. ಭೂಮಿಯ ಅತಿದೊಡ್ಡ ಪ್ರಾಣಿಯಾದ ನೀಲಿ ತಿಮಿಂಗಲದ (ಇದರ ಹೃದಯದ ಗಾತ್ರವು ಸಣ್ಣದೊಂದು ಕಾರಿನ ಗಾತ್ರದಲ್ಲಿರುತ್ತದೆ) ಹೃದಯದ ಬಡಿತವು ನಿಮಿಷಕ್ಕೆ ಐದು ಬಾರಿ ಇರುತ್ತದೆ. ಸಣ್ಣ ಸಸ್ತಿನಿಯಾಗಿರುವ  ಮೂಗಿಲಿಯ (ಶ್ರೂ) ಹೃದಯವು ನಿಮಿಷಕ್ಕೆ 1,000 ಬಾರಿ ಬಡಿಯುತ್ತದೆ !

ನಿಮ್ಮ ವೈದ್ಯರು ಕೇಳುವ ನಿಮ್ಮ ಹೃದಯದ ಬಡಿತವು (ವೈದ್ಯರು ಸ್ಟೆಥೊಸ್ಕೋಪ್‍ನಿಂದ ಕೇಳುವ ಶಬ್ದ) ಹೃದಯದ ಕವಾಟಗಳು (ಹೃದಯದ ವಿವಿಧ ಭಾಗಗಳ ನಡುವೆ ಇದು ಇರುತ್ತದೆ) ರಕ್ತವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ತೆರೆಯುವ ಮತ್ತು ಮುಚ್ಚುವ ಶಬ್ದ ವಾಗಿರುತ್ತದೆ.

ನಮಗೆಲ್ಲ ತಿಳಿದಿರುವಂತೆ ರಕ್ತವು ಆಮ್ಲಜನಕವನ್ನು ಶ್ವಾಸಕೋಶದಿಂದ ರಕ್ತನಾಳಗಳಿಗೆ ಹಾಗೂ ರಕ್ತನಾಳಗಳಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ತೆಗೆದುಕೊಂಡು ಬರುತ್ತದೆ. ಅಲ್ಲದೆ ಇದು ಪೋಷಕಾಂಶಗಳನ್ನು ಮತ್ತು ಹಾರ್ಮೋನ್‍ಗಳನ್ನು ದೇಹದ ವಿವಿಧ ಭಾಗಗಳಿಗೆ ಹಾಗೂ ದೇಹದ ವಿವಿಧ  ಭಾಗಗಳಿಂದ ತ್ಯಾಜ್ಯ ವಸ್ತುಗಳನ್ನು ದೇಹದ ಈ ಭಾಗಗಳಿಂದ ಮೂತ್ರಪಿಂಡ ಮತ್ತು ಪಿತ್ತಜನಕಾಂಗಕ್ಕೆ ವಿಸರ್ಜಿಸಲು ತೆಗೆದುಕೊಂಡು ಹೋಗುತ್ತದೆ.

 

ಈ ಎಲ್ಲವುಗಳನ್ನು ಹೊರತು ಪಡಿಸಿ, ರಕ್ತವು ಉಷ್ಣತೆಯನ್ನು ದೇಹದ ಎಲ್ಲ ಭಾಗಕ್ಕೆ ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಿಮ್ಮ ದೇಹದ ತುತ್ತ ತುದಿಯ ಅಂಗಗಳು (ಬೆರಳುಗಳು ಮತ್ತು ಕಾಲ್ಬೆರಳುಗಳು) ಕೂಡಾ ಬಿಸಿಯಾಗಿರುತ್ತವೆ. ಇದಕ್ಕೆ ಕಾರಣ ದೇಹದ ಮಧ್ಯಭಾಗದಲ್ಲಿ (ಉದಾಹರಣೆಗೆ ಸ್ನಾಯುಗಳು) ಉಷ್ಣತೆ ಉಂಟಾಗವುದು ಕಾರಣವಾಗಿದೆ. ಇದರ ಜೊತೆಗೆ ದೇಹದ ಅಂಗಗಳಾದ ಪಿತ್ತಜನಕಾಂಗ, ಹೃದಯ, ಸ್ನಾಯುಗಳು ಮತ್ತು ಮೆದುಳುಗಳು ಹೆಚ್ಚು ಬಿಸಿಯಾಗುವುದಿಲ್ಲ ಕಾರಣ ಉಷ್ಣತೆಯನ್ನು ರಕ್ತವು ಇವುಗಳಿಂದ ದೇಹದ ಇತರಭಾಗಗಳಿಗೆ ಕೊಂಡೊಯ್ಯಲ್ಪಡುತ್ತದೆ. ಆದ್ದರಿಂದ ರಕ್ತವು ಉಷ್ಣತೆಯನ್ನು ಹೆಚ್ಚಿಸುವ ಮತು ತಣ್ಣಗಾಗಿಸುವ ಎರಡೂ ಕ್ರಿಯೆಯನ್ನು ಮಾಡುತ್ತದೆ.

ಭೂಮಿಯ ಮೇಲೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ ವ್ಯಕ್ತಿಯ ದೇಹದಲ್ಲಿರುವ ರಕ್ತವು ಸಾಮಾನ್ಯವಾಗಿ ಕಾಲುಗಳಿಗೆ ಸಂಚರಿಸುತ್ತದೆ.

ಕಾಲುಗಳಲ್ಲಿರುವ ಧಮನಿ ಗಳಿಗೆ ಕವಾಟಗಳಂತಹ ರಚನೆಗಳಿದ್ದು ರಕ್ತವು ತಿರುಗಿ ಹೃದಯಕ್ಕೆ ಸಂಚರಿಸಲು ಇದು ಸಹಾಯ ಮಾಡುತ್ತದೆ. ಆದರೆ ಗುರುತ್ವಾಕರ್ಷಣ ಇಲ್ಲದ ಸ್ಥಳಗಳಲ್ಲಿ ಅಂದರೆ ಅಂತರಿಕ್ಷದಲ್ಲಿ ಅಥವಾ ಚಂದ್ರನಲ್ಲಿ, ರಕ್ತವು ಎದೆಯ ಭಾಗದಲ್ಲಿ ಹಾಗೂ ತಲೆಯ ಭಾಗದಲ್ಲಿ ಸಂಗ್ರಹವಾಗುತ್ತದೆ. ಇದರಿಂದ  ಅಂತರಿಕ್ಷಯಾನಿಗಳು ಸುರಿಯುವ ಮೂಗು, ತಲೆನೋವು ಹಾಗೂ ಊದಿಕೊಂಡಿರುವ ಮುಖದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಒಂದು ವೇಳೆ ಅಂತರಿಕ್ಷಯಾನಿಗಳು ಹೆಚ್ಚು ಕಾಲ ಅಂತರಿಕ್ಷದಲ್ಲಿ ಇದ್ದರೆ ಅವರ ಹೃದಯವು ದೇಹದ ಸುತ್ತಮುತ್ತಲಿನ ಅಂಗಗಳಿಗೆ ರಕ್ತಪೂರೈಸುವ ಸಲುವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ.

ಮೂಲ : ಟೀಚರ್ಸ್ ಆಫ್ ಇಂಡಿಯಾ

ಕೊನೆಯ ಮಾರ್ಪಾಟು : 7/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate