ಪ್ರಸವಾನಂತರದ ಖಿನ್ನತೆ ಎಂದರೆ ಹೆರಿಗೆಯಾದ ಕೆಲವು ವಾರಗಳ ನಂತರ ಬರುವ ಅತಿಯಾದ ವಿಷಾದದ ಅನುಭವ ಮತ್ತು ಸಂಬಂಧಿಸಿದ ಮಾನಸಿಕ ತೊಂದರೆಗಳು. ಹೆರಿಗೆ ಯಾದ ಮೂರು ದಿನಗಳವರೆಗೆ ವಿಷಾಧ ಮತ್ತು ಖಿನ್ನತೆ –ಸರ್ವೆ ಸಾಮಾನ್ಯ. ಮಹಿಳೆಯರು ಈ ಭಾವನೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಈ ಭಾವನೆಗಳು ಸಾಧಾರಣವಾಗಿ ಎರಡು ವಾರದಲ್ಲೆ ಇಲ್ಲದಾಗುತ್ತವೆ. ಪ್ರಸವಾನಂತರದ ಖಿನ್ನತೆಯು ಹೆಚ್ಚು ಗಂಭೀರವಾದ ಮಾನಸಿಕ ಭಾವನೆಗಳ ಬದಲಾವಣೆ. ಅದು ಅನೇಕ ವಾರಗಳವರೆಗೆ ಕೆಲವು ಸಲ ತಿಂಗಳುಗಳ ತನಕ ಇರುವುದರಿಂದ ದೈನಂದಿನ ಕೆಲಸಗಳಿಗೆ ಅದರಿಂದ ತೊಡಕಾಗುವುದು. ಸುಮಾರು 10 ರಿಂದ 15% ಮಹಿಳೆಯರಲ್ಲಿ ಈ ಪರಿಣಾಮವು ಕಂಡುಬರುವುದು. ವಿರಳವಾಗಿ , ಇನ್ನೂ ತಿವ್ರವಾದ ಅವ್ಯವಸ್ಥೆ ಯಾದ ಪ್ರಸವಾನಂತರದ ಸೈಕೋಸಿಸ್ ಆಗಬಹುದು..
ಪ್ರಸವಾನಂತರದ ದುಃಖ ಅಥವಾ ಖಿನ್ನತೆಯ ಕಾರಣಗಳು ಅಸ್ಪಷ್ಟವಾಗಿವೆ. ಆದರೂ ಕೆಳಗೆ ಕಾಣಿಸಿದ ಅಂಶಗಳು ಕಾರಣವಾಗಿರಬಹುದು:
ಮಹಿಳೆಗೆ ಗರ್ಭಧಾರಣೆಯ ಮುನ್ನವೆ ಖಿನ್ನತೆಗೆ ಒಳಗಾಗಿದ್ದರೆ ವೈದ್ಯರಿಗೆ ಅಥವಾ ದಾದಿಗೆ ಈ ಮಾಹಿತಿ ನೀಡಬೇಕು. ಈ ಖಿನ್ನತೆಯು ನಂತರ ಪ್ರಸವಾನಂತರದ ಖೀನ್ನತೆಯಾಗಿ ಮಾರ್ಪಾಡಾಗಬಹುದು. ಗರ್ಭೀಣಿಯಾಗಿರುವಾಗ ಖಿನ್ನತೆಗೆ ಒಳಗಾಗುವುದು ಸಾಮಾನ್ಯ .ಅದು ಪ್ರಸವಾನಂತರದ ಖಿನ್ನತೆಗೆ ಕಾರಣವಾಗಬಹುದಾದ ಆತಂಕವೂ ಇದೆ. .
ಆಗಾಗ ಅಳುವುದು, ಮನೋಭಾವನೆಯಲ್ಲಿನ ತೀವ್ರಬದಲಾವಣೆ, ಅತಿ ದುಃಖಿಯಾಗಿರುವುದು ಇದರ ಲಕ್ಷಣಗಳು. ಅತಿ ಆಯಾಸ, ಏಕಾಗ್ರತೆಯ ಕೊರತೆ, ನಿದ್ರಾ ಸಮಸ್ಯೆ, ಲೈಂಗಿಕ ಹಾಗೂ ಇತರ ಚಟುವಟಿಕೆಗಳಲ್ಲಿ ನಿರಾಸಕ್ತಿ ಆತಂಕ, ಹಸಿವಿನ ಪ್ರಮಾಣ ಬದಲಾವಣೆ, ನಿಸ್ಸಾಹಯಕತೆ ಅಥವಾ ಕೊರತೆಯ ಅನುಭವ ಮೊದಲಾದವುಗಳು ಸಹಾ ಖಿನ್ನತೆಗೆ ಕಾರಣವಾಗಿರಬಹುದು. ಮಹಿಳೆಯರಿಗೆ ಕೆಲಸಮಾಡುವುದು ಸಾಧ್ಯವಾಗದು. ತಮ್ಮ ಮಗುವಿನಲ್ಲೆ ಆಸಕ್ತಿ ಇರುವುದಿಲ್ಲ. ಪ್ರಸವಾನಂತರದ ಸೈಕೋಸಿಸ್‌ನಲ್ಲಿ ಖಿನ್ನತೆಯ ಜತೆ , ಆತ್ಮ ಹತ್ಯೆ ಯೋಚನೆ, ಭಯಂಕರ ಯೋಚನೆಗಳು, ಭ್ರಮೆ ಮತ್ತು ಅಡ್ಡಾದಿಡ್ಡಿ ವರ್ತನೆಯೂ ಕಂಡುಬರಬಹುದು.ಕೆಲವು ಸಲ ಪ್ರಸವಾನಂತರದ ಸೈಕೋಸಿಸ್‌ನಲ್ಲಿ ಮಗುವಿಗೆ ಅಪಾಯ ಮಾಡುವ ಪ್ರವೃತ್ತಿಯೂ ಇರಬಹುದು ವೈವಾಹಿಕ ಒತ್ತಡವು ಹೆಚ್ಚಾಗಬಹುದು.. ಚಿಕಿತ್ಸೆ ಇಲ್ಲದಿದ್ದರೆ ಪ್ರಸವಾನಂತರದ ಖಿನ್ನತೆಯು ತಿಂಗಳು ಗಟ್ಟಲೆ, ವರ್ಷಗಟ್ಟಲೆ ಮುಂದುವರಿಯಬಹುದು. ತಾಯಿಗೆ ಮಗುವಿನ ಮೇಲೆ ಮಮಕಾರವೆ ಇಲ್ಲದಾಗಬಹುದು. ಅದರ ಪರಿಣಾಮವಾಗಿ ಮಗುವು ಭಾವನಾತ್ಮಕ ,ಮತ್ತು ಅರಿವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು . ಸುಮಾರು ಮೂವರಲ್ಲಿ ಒಬ್ಬ ಮಹಿಳೆಯು ಒಂದು ಸಲ ಪ್ರಸವಾನಂತರದ ಖಿನ್ನತೆಗೆ ಒಳಗಾಗಿದ್ದರೆ ಪುನಃ ಅದು ಅವರಲ್ಲಿ ಮರು ಕಳಿಸಬಹುದು.
ಮುಂಚಿತವಾಗಿಯೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಮಹಿಳೆ ಮತ್ತು ಅವಳ ಮಗುವಿಗೆ ಅತಿ ಮುಖ್ಯವಾಗಿದೆ. ಮಹಿಳೆಯು ಹೆರಿಗೆಯ ಎರಡು ವಾರದ ನಂತವೂಆದಕ್ಕೊಳಗಾಗಿದ್ದರೆ ಮತ್ತು ದೈನಂದಿನ ಕೆಲಸ ಕಾರ್ಯ ಮಾಡಲಾಗದಿದ್ದರೆ ಇಲ್ಲವೆ ತಮಗೆ ಅಥವ ಮಗುವಿಗೆ ಹಾನಿ ಮಾಡುವ ಯೋಚನೆ ಮನದಲ್ಲಿ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕುಟುಂಬದ ಸದಸ್ಯರು ಮತ್ತು ಗೆಳೆಯರು, ಈ ಲಕ್ಷಣಗಳನ್ನು ಗುರುತಿಸಿದರೆ ಅವರು ಆ ಮಹಿಳೆಯೊಂದಿಗೆ ಮಾತನಾಡಿ ವೈದ್ಯರಲ್ಲಿಗೆ ಹೋಗಲು ಉತ್ತೇಜಿಸಬೇಕು.ವೈದ್ಯರು ಖಿನ್ನತೆಯ ಕಾರಣವನ್ನು ಗುರುತಿಸಬೇಕು.. ಅವರು ರಕ್ತದ ಪರೀಕ್ಷೆಯನ್ನೂ ಮಾಡಿಸಬಹುದು. ಥೈರಾಯಿಡ್ ಅವ್ಯವಸ್ಥೆಯು ಸಹಾ ಇದಕ್ಕೆ ಕಾರಣವಾಗಿಬಹುದು.
ಮಹಿಳೆಯು ಪ್ರಸವಾನಂತರ ವಿಷಾದದ ಭಾವನೆಯನ್ನು ಗೆಲ್ಲುವುದು ಸಾಧ್ಯ:
ಮಹಿಳೆಗೆ ವಿಷಾದವಾದರೆ, ಕುಟುಂಬ ಸದಸ್ಯರ ಮತ್ತು ಗೆಳಯರ ಬೆಂಬಲವಿದ್ದರೆ ಸಾಕು . ಎಲ್ಲ ಸರಿ ಹೋಗುವುದು.ಆದರೆ ಖಿನ್ನತೆಯನ್ನು ಗುರುತಿಸಿದರೆ, ವೃತ್ತಿಪರರ ಸಲಹೆ ಅಗತ್ಯ.. ಸಾಧಾರಣವಾಗಿ ಆಪ್ತ ಸಲಹೆ ಮತ್ತು ಖಿನ್ನತೆ ನಿರೋಧಕ ಔಷಧಿಗಳನ್ನು ಒಟ್ಟಿಗೆ ನೀಡಿ ಗುಣ ಮಾಡುವರು. ಮಹಿಳೆಗೆ ಪ್ರಸವಾನಂತರದ ಸೈಕೋಸಿಸ್ ಆಗಿದ್ದರೆ ಆಸ್ಪತ್ರೆಗೆ ಸೇರಬೇಕಾಗಬಹುದು.ಅದೂ ಎಳೆಯ ಮಗುವನ್ನೂ ನೋಡಿಕೊಳ್ಳಬಹುದಾದ ಸೌಲಭ್ಯ ವಿರುವ ಆಸ್ಪತ್ರೆಯಾಗಬೇಕು.ಅವರಿಗೆ ಆಂಟಿ ಸೈಕೊಟಿಕ್ ಜತೆಗೆ ಆಂಟಿಡಿಪ್ರೆಸೆಂಟ್ ಔಷಧಿ ಕೂಡಾ ಬೇಕಾಗಬಹುದು. ಮಗುವಿಗೆ ಎದೆ ಹಾಲು ಕೊಡುತ್ತಿರುವ ಮಹಿಳೆಯರು ಈ ಔಷಧಿಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ಮಗುವಿಗೆ ಎದೆ ಹಾಲು ಕೊಡುವುದನ್ನು ಮುಂದುವರಿಸಲು ಅನೇಕ ಆಯ್ಕೆಗಳು ಇವೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/6/2020
ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ನೂರಾರು ವರ್ಷಗಳಿಂದ ಬಾಳೆಹಣ್ಣು ಎಲ್ಲಾ ಕಾಲದಲ್ಲಿ ಸಿಗುವ ಹಣ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...