ಗರ್ಭಾವಧಿಯು ಹೆಣ್ಣಿನ ಬಾಳಿನ ಅತ್ಯಂತ ಸವಾಲಿನ ದಿನಗಳಾಗಿರುತ್ತವೆ. ಒಂದು ವೇಳೆ ನೀವು ಸಿ ಸೆಕ್ಷನ್ ಅಥವಾ ಸಿಸೇರಿಯನ್ ಮಾಡಿಸಿಕೊಂಡಲ್ಲಿ, ನಿಮ್ಮ ಹೊಟ್ಟೆಯು ಸ್ಥೂಲ ದೇಹಿಗಳ ತರಹ ಊದಿಕೊಂಡಿರುತ್ತದೆ. ಆಗ ಇದನ್ನು ಹೇಗೆ ಕರಗಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡಬಹುದು. ಸಿಸೇರಿಯನ್ ಮಾಡಿಸಿಕೊಂಡರೆ ಸ್ವಾಭಾವಿಕವಾಗಿ ಗರ್ಭಧಾರಣೆಯ ಜೊತೆಗೆ ಬಂದಿರುವ ಅಧಿಕ ತೂಕವನ್ನು ಕರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಕೆಲವೊಂದು ಪರಿಹಾರಗಳನ್ನು ನಾವು ಬಳಸುವುದರಿಂದ ಇದನ್ನು ಸುಲಭ ಮಾಡಿಕೊಳ್ಳಬಹುದು. ಬನ್ನಿ ಆ ಪರಿಹಾರಗಳ ಕಡೆಗೆ ಒಮ್ಮೆ ಗಮನ ಹರಿಸೋಣ.

ಸಿಸೇರಿಯನ್ ಆದ ಕೆಲ ದಿನಗಳಲ್ಲೆ ನಿಮ್ಮ ಹೊಟ್ಟೆಯನ್ನು ಕರಗಿಸಲು ಪ್ರಯತ್ನ ಮಾಡಬೇಡಿ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ನೀವು ಗುಣಮುಖರಾಗಲು ಸಹ ಇದರಿಂದ ತೊಂದರೆಯಾಗುತ್ತದೆ. ನೀವು ಇದೀಗ ತಾನೇ ಒಂದು ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೀರಿ ಎಂಬುದನ್ನು ಮರೆಯಬೇಡಿ. ಸರೀನಾ?
ಸಿಸೇರಿಯನ್ ಆದ ಕೆಲ ದಿನಗಳ ಕಾಲ ನೀವು ವ್ಯಾಯಾಮವನ್ನು ಸಹ ಮಾಡಲು ಆಗುವುದಿಲ್ಲ. ಇದರರ್ಥ ನೀವು ಶಾಶ್ವತವಾಗಿ ಸ್ಥೂಲಕಾಯವನ್ನು ಹೊಂದಿರಬೇಕು ಎಂದರ್ಥವಲ್ಲ. ಆದರೆ ಸ್ವಲ್ಪ ಧನಾತ್ಮಕ ಮನೋಭಾವವನ್ನು ಹೊಂದಿ. ಧನಾತ್ಮಕ ಮನೋಭಾವವು ನಿಮ್ಮ ದೇಹದ ಆಕಾರದ ಮೇಲೆ ಸಹ ಪ್ರಭಾವ ಬೀರುತ್ತದೆ. ಇಂದಲ್ಲ ನಾಳೆ ನೀವು ಬಯಸಿದ ರೂಪವನ್ನು ನೀವು ಪಡೆಯುವಿರಿ.
ಈ ಅವಧಿಯಲ್ಲಿ ನೀವು ಸಾಮಾನ್ಯವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಶಸ್ತ್ರ ಚಿಕಿತ್ಸೆ ಆದ 6 ತಿಂಗಳ ಒಳಗೆ ನೀವು ನಿಮ್ಮ ದೇಹದ ಸ್ವರೂಪ ಬದಲಾಯಿಸಿಕೊಳ್ಳಲು ಪ್ರಯತ್ನಿಸಬಹುದು. ಈ ಅವಧಿಯ ನಂತರ ನಿಮ್ಮ ಗರ್ಭಧಾರಣೆಯ ಹಾರ್ಮೋನುಗಳು ಸ್ರವಿಸಿ, ದೇಹದಲ್ಲಿರುವ ಕೊಬ್ಬು ಗಟ್ಟಿಯಾಗುತ್ತದೆ. ಈ ಅವಧಿ ಮೀರಿದರೆ, ನಿಮ್ಮ ಕಾರ್ಯ ಮತ್ತಷ್ಟು ಕಷ್ಟವಾಗಬಹುದು.
ಸಿಸೇರಿಯನ್ ಆದ ನಂತರ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದರಿಂದ ನಿಮ್ಮ ದೈಹಿಕ ವ್ಯವಸ್ಥೆಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 11/10/2019
ಕೆಲವು ಸಲ ಸರ್ವಿಕಲ್ನ ಯೋನಿ ಭಾಗದ ಸಂಕೋಚನವು (ಯೋನಿಯ ಸಂಕು...
ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಹೈಡ್ರಾಮ್ನಿಯಾಸ್ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು...