ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ಮಹಿಳೆಯರ ಮುಂದಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್ ಗಿಂತ ನಾರ್ಮಲ್ ಡೆಲಿವರಿ (ಸಾಮಾನ್ಯ ಹೆರಿಗೆ) ತುಂಬಾ ಒಳ್ಳೆಯದು. ಹೆರಿಗೆಯಲ್ಲಿ ತುಂಬಾ ತೊಂದರೆಯಾದರೆ ಮಾತ್ರ ಸಿಸೇರಿಯನ್ ಮಾಡಿಸಿಕೊಳ್ಳಬೇಕು. ಇತ್ತೀಚಿಗೆ ಹೆಚ್ಚಿನವರು ಹೆರಿಗೆ ನೋವು ತಡೆದುಕೊಳ್ಳಲು ಸಾಧ್ಯವಿಲ್ಲವೆಂದು ಸಿಸೇರಿಯನ್ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡದಿರುವುದು ಒಳ್ಳೆಯದು.
ಅಲ್ಲದೆ ಸಿಸೇರಿಯನ್ ಆದವರು ನಾರ್ಮಲ್ ಡೆಲಿವರಿಯಾದವರಿಗಿಂತ ಹೆಚ್ಚಿನ ರೆಸ್ಟ್ ತೆಗೆದುಕೊಳ್ಳಬೇಕು. ಸಿಸೇರಿಯನ್ ಆದವರು ಸರಿಯಾದ ರೆಸ್ಟ್ ತೆಗೆದುಕೊಳ್ಳತ್ತಿದ್ದರೆ ಈ ಕೆಳಗಿನ ಸಮಸ್ಯೆಗಳು ಕಂಡು ಬರುತ್ತದೆ:
ಸಿಸೇರಿಯನ್ ಆದ ಮೇಲೆ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರವಹಿಸಬೇಕು ಹಾಗೂ ದೈಹಿಕ ಶ್ರಮವಿರುವ ಯಾವುದೇ ಕೆಲಸ ಮಾಡಬಾರದು. ಸರಿಯಾದ ಆರೈಕೆ ಮಾಡದಿದ್ದರೆ ಸ್ಟಿಚ್ ಬಿಟ್ಟು ಹೋಗಿ ತೊಂದರೆ ಆಗುತ್ತದೆ.
ಸಿಸೇರಿಯನ್ ಆದರೆ ಕಮ್ಮಿಯೆಂದರೂ 3 ತಿಂಗಳು ರೆಸ್ಟ್ ತೆಗೆದುಕೊಳ್ಳಬೇಕು. ನಿಮ್ಮ ದೇಹವನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡದಿದ್ದರೆ ಹರ್ನಿಯಾ ಸಮಸ್ಯೆ ಕಂಡು ಬರುವುದು.
ಮೊದಲು ಸಿಸೇರಿಯನ್ ಹೆರಿಗೆಯಾಗಿ, ಎರಡನೇಯದು ಸಿಸೇರಿಯನ್ ಆದರೆ ಮತ್ತೆ ಮಕ್ಕಳ ಪ್ಲಾನ್ ಮಾಡಬಾರದು. ಎರಡು ಬಾರಿ ಸಿಸೇರಿಯನ್ ಆಗಿದ್ದರೆ ಮತ್ತೆ ಗರ್ಭಿಣಿ ಆದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.
ಸಿಸೇರಿಯನ್ ಆದ ನಂತರ ಸಿ ಸೆಕ್ಷನ್ ಬೆಲ್ಟ್ ದೊರೆಯುತ್ತದೆ. ಅದನ್ನು ಧರಿಸುವುದು ಒಳ್ಳೆಯದು. ಮೂಳೆಯನ್ನು ಬಲವಾಗಿಸುವ ಆಹಾರ ತಿನ್ನಬೇಕು. ಇಲ್ಲದಿದ್ದರೆ ಸೊಂಟ ನೋವು ಉಂಟಾಗುವುದು.
ಮೂಲ : ಬೋಲ್ಡ್ ಸ್ಕೈ
ಕೊನೆಯ ಮಾರ್ಪಾಟು : 5/22/2020
ಆಶಾಳ ಕರ್ತವ್ಯ ಮತ್ತು ಜವಾಬ್ದಾರಿಗಳು
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಗರ್ಭಿಣಿ ಮಹಿಳೆ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕ ಆಹ...