ಕೆಲವು ಸಲ ಸರ್ವಿಕಲ್ನ ಯೋನಿ ಭಾಗದ ಸಂಕೋಚನವು (ಯೋನಿಯ ಸಂಕುಚನ ಮತ್ತು ಭಿತ್ತಿ ತೆಳುವಾಗುವುದು) ವಿಸ್ತರಿಸಲು ಎಷ್ಟೋಸಲ ಅದಕ್ಕೆ ಹೆರಿಗೆ ನೋವು ಕಾರಣವಾಗುವುದಿಲ್ಲ. ಆದರೆ ಸರ್ವೆಕ್ಸ್ನ ರಚನಾ ದೌರ್ಬಲ್ಯದಿಂದ ಉಂಟಾಗುತ್ತದೆ. ಇದನ್ನು ಸರ್ವೆಕಲ್ ಅಸಮರ್ಥತೆ ಎನ್ನುವರು. ಈ ದೌರ್ಬಲ್ಯವು ಅನೇಕ ಕಾರಣಗಳಿಂದ ಉಂಟಾಗಬಹುದು. ಹೆಚ್ಚಾಗಿ ಸರ್ವೆಕ್ಸ್ ಗೆ ಆದ ಹಳೆಯ ಗಾಯ ಅಥವಾ ವಂಶಪಾರಂಪರ್ಯವಾಗಿ ಬಂದ ಸರ್ವೆಕ್ಸ್ನ ಆಕೃತಿ ಆಗಿರಬಹುದು.
ಎರಡನೇ ತ್ರೈಮಾಸಿಕದಲ್ಲಿ ಆಗುವ ಒಟ್ಟಾರೆ ಗರ್ಭಪಾತಗಳಲ್ಲಿ ಶೇ. ೧೫-೨೦ ವರೆಗಿನ ಗರ್ಭನಾಶಕ್ಕೆ ಸರ್ವಿಕಲ್ ಅಸಮರ್ಥತೆಯು ಕಾರಣ.
ಸರ್ವೆಕ್ಸ್ಗೆ ಹಾನಿಯಾದಾಗ ಅದು ಗರ್ಭದ ತೂಕವನ್ನು ಭರಿಸಲಾರದು. ಅದು ಸಂಕೋಚನದ ಅಗತ್ಯವಿಲ್ಲದೆ ತನ್ನಷ್ಟಕ್ಕೆ ತಾನೇ ಅಗಲವಾಗುವುದು. ಕೆಲವು ಸಲ ಪೂರ್ಣವಾಗಿ ತೆರೆದುಕೊಳ್ಳುವುದು ಹೀಗೆ ಅಗಲವಾಗುವುದರಿಂದ ಆಮ್ನಿಯಾಟಿಕ್ ಪೊರೆಯು ಬಾಯ್ತೆರೆದ ಭಾಗದಿಂದ ಹೊರಹೊಮ್ಮುವುದು ಮತ್ತು ಕ್ರಮೇಣ ಹರಿಯುವುದು ಎಷ್ಟೋ ಸಲ ಗರ್ಭಾಶಯದ ಹೊರಗೆ ಮಗುವು ಬದುಕಲಾರದ ಪರಿಸ್ಥಿತಿ ಇರುವುದು. ಇದರಿಂದ ಗರ್ಭಾಶಯಕ್ಕೆ ಕಿರಿಕಿರಿಯಾಗಿ ಅವಧಿಪೂರ್ವ ಹೆರಿಗೆ ನೋವು ಪ್ರಾರಂಭವಾಗುವುದು. ಬಹಳ ಸಂದರ್ಭದಲ್ಲಿ ಹೆರಿಗೆ ನೋವನ್ನು ಗುರುತಿಸುವಾಗ ಆ ಪ್ರಕ್ರಿಯೆಯು ತಡೆಹಿಡಿಯ ಬಹುದಾದ ಹಂತದಿಂದ ಬಹಳ ಮುಂದುವರಿದಿರುತ್ತದೆ.
ಸರ್ವೆಕಲ್ ಅಸಮರ್ಥತೆಗೆ ಕಾರಣ ಮತ್ತು ಅಪಾಯದ ಅಂಶಗಳು
ಅಸಮರ್ಥ ಸರ್ವೆಕ್ಸ್ನಿಂದ ಉಂಟಾಗುವ ಅಪಾಯದ ಅಂಶಗಳು ಇಲ್ಲಿವೆ. ಈ ಹಿಂದಿನ ಗರ್ಭದಲ್ಲಿ ಶಸ್ತ್ರಕ್ರಿಯೆಯಲ್ಲಿ ಸರ್ವೆಕಲ್ ಗಾಯದಿಂದ ಡಿಇಎಸ್ ತೆರೆದುಕೊಂಡಿದ್ದರಿಂದ ಮತ್ತು ಸರ್ವೆಕ್ಸ್ನ ಅಸಹಜ ಆಕೃತಿಯಿಂದ ಅಪಾಯವೊದಗಬಹುದು. ಈ ಮೊದಲೇ ಡಿಸಿ ಮಾಡಿಸಿರುವುದೂ ಕೂಡ ಸರ್ವೆಕಸ್ ಧಕ್ಕೆಯುಂಟು ಮಾಡಿರಬಹುದು.
ಸರ್ವೆಕಲ್ ಅಸಮರ್ಥತೆಗೆ ಬೇರೆ ಕಾರಣಗಳೂ ಇರಬಹುದು. ಸರ್ವೆಕ್ಸ್ನಲ್ಲಿನ ಬೆಳವಣಿಗೆ ಮತ್ತು ರಕ್ತ ಸ್ರಾವ ನಿಲ್ಲಿಸಲು ಮಾಡಿದ ಪ್ರಕ್ರಿಯೆ ಮತ್ತು ಶಂಕುವಿನಾಕೃತಿಯ ಅಂಗಾಂಶವನ್ನು ಬಯಾಪ್ಸಿಗಾಗಿ ತೆಗೆದಿರುವುದು ಕಾರಣವಾಗಿರಬಹುದು. ಬಸಿರಿನ ಮೊದಲು ಅಥವಾ ಮೊದಲ ತ್ರೈಮಾಸಿಕದಲ್ಲಿ ಸರ್ವೆಕ್ಸ್ ಅಸಮರ್ಥವಾಗಿದೆ ಎನ್ನುವುದನ್ನು ನಿರ್ಧರಿಸಲು ಯಾವುದೇ ವಿಧಾನವಿಲ್ಲ.
ಅಸಮರ್ಥ ಸರ್ವೆಕ್ಸ್ ಹೊಂದಿದ ಮಹಿಳೆಗೆ ಗರ್ಭದ ೧೬- ೨೮ನೇ ವಾರದ ಒಳಗೆ ಗೊತ್ತಾಗದಂತೆ ಸರ್ವೆಕಲ್ ಅರಳುತ್ತದೆ. (ಅತಿ ಕಡಿಮೆ ಗರ್ಭಾಶಯದ ಸಂಕುಚನದಿಂದ) ಇದರಿಂದ ಗಣನೀಯವಾಗಿ ಸರ್ವೆಕಲ್ ಅರಳಿಕೆ (ಎರಡು ಸೆಂಮೀಗಿಂತ ಹೆಚ್ಚು) ಗೊತ್ತಾಗದಂತೆ ಯಾವುದೇ ಕುರುಹಿಲ್ಲದೆ ಉಂಟಾಗಬಹುದು. ಸರ್ವೆಕಸ್ ೪ ಸೆಂಮೀ ಗಿಂತ ಹೆಚ್ಚಾದಾಗ ಗರ್ಭಾಶಯದ ಸಂಕುಚನವು ಭ್ರೂಣ ಪೊರೆಯು ಹರಿಯಬಹುದು.
ವೈದ್ಯಕೀಯ ಹಿನ್ನೆಲೆಯಿಂದ, ದೈಹಿಕ ಪರೀಕ್ಷೆಯಿಂದ ಮತ್ತು ಅಲ್ಟ್ರಾಸೌಂಡ್ ನಿಂದ ಇದನ್ನು ಪತ್ತೆ ಹಚ್ಚ ಬಹುದು. ಗರ್ಭ ಪರೀಕ್ಷೆಯನ್ನೂ ಮಾಡಬಹುದು.
ಒಂದು ಬಾರಿ ಅಸಮರ್ಥತೆಯ ಸಮಸ್ಯೆಯು ಪತ್ತೆಯಾದಾಗ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಮಾಡಬಹುದು. ಅದನ್ನು ಗರ್ಭದ್ವಾರವನ್ನು ಹೊಲಿಯುವ ಮೂಲಕ. ಒಂದು ಅಥವಾ ಎರಡು ಹೊಲಿಗೆಗಳನ್ನು ಗರ್ಭಕೊರಳಿಗೆ ಹಾಕಿ ಅದನ್ನು ಗಟ್ಟಿಯಾಗಿ ಮುಚ್ಚಬಹುದು. ಇದನ್ನು ಸಾಧಾರಣವಾಗಿ ಗರ್ಭದ ೧೨ನೇ ವಾರದ ನಂತರ ಮಾಡುವರು. ಆ ಸಮಯದಲ್ಲಿ ಬೇರೆ ಕಾರಣಗಳಿಂದಾಗಿ ಗರ್ಭಪಾತವಾಗುವ ಸಂಭವ ಕಡಿಮೆ. ಆದರೆ ಪೊರೆಯು ಹರಿದಿದ್ದರೆ ಅಥವಾ ಸೋಂಕು ತಗುಲಿದ್ದರೆ ಇದನ್ನು ಮಾಡಲಾಗುವುದಿಲ್ಲ. ಶಸ್ತ್ರ ಕ್ರಿಯೆಯ ನಂತರ ಗರ್ಭಿಣಿಯನ್ನು ತೀವ್ರ ನಿಗಾ ವಹಿಸಬೇಕು. ಸೋಂಕು ಮತ್ತು ಆಕುಂಚನ ಬರದಂತೆ ನಿಗಾವಹಿಸಬೇಕು. ಹಲವು ಸಲ ಪ್ರಕ್ರಿಯೆಯಿಂದಾಗಿ ನೋವು ಬರಬಹುದು. ಆಸ್ಪತ್ರೆಯಿಂದ ಬಿಡುಗಡೆಯಾದಮೇಲೂ ರೋಗಿಯು ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಸರ್ವೆಕ್ಸ್ನ ಮೇಲೆ ಯಾವುದೇ ರಿತಿಯ ಒತ್ತಡ ಬೀಳಬಾರದು. ಇದರಿಂದ ಅವಧಿ ತುಂಬುವರೆಗೂ ಗರ್ಭವನ್ನು ಉಳಿಸಿಕೊಳ್ಳಬಹುದು. ಈ ಹೊಲಿಗೆಗಳನ್ನು ಸಾಧಾರಣವಾಗಿ ಮಗು ಜನಿಸುವ ಮುನ್ನ ತೆಗೆಯುವರು ಇದರಿಂದ ಗರ್ಭಿಣಿಯು ಸಹಜವಾಗಿ ಮಗುವನ್ನು ಹೆರಬಹುದು. ಇನ್ನು ಕೆಲವವು ಸಂದರ್ಭದಲ್ಲಿ ಹೊಲಿಗೆಳಲನ್ನು ಹಾಗೇ ಬಿಟ್ಟು ಸಿಸರಿನ್ ಸೆಕ್ಷನ್ ಮೂಲಕ ಹೆರಿಗೆ ಮಾಡಿಸುವರು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 4/25/2020
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...