ಸಾಮಾನ್ಯವಾಗಿ ಗರ್ಭಧಾರಣೆಯಾದ 9 ತಿಂಗಳ ನಂತರ ಹೆರಿಗೆಯಾಗುತ್ತದೆ. ಹೆರಿಗೆ ನಿಗದಿತ ದಿನಕ್ಕೆ ಮೊದಲೇ ಆದರೆ ಮಗುವಿಗೆ ವಿಶೇಷ ಆರೈಕೆ ಅಗತ್ಯ. ಸಾಧ್ಯವಾದ ಮಟ್ಟಿಗೆ ಗರ್ಭಿಣಿ ಹೆರಿಗೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬೇಕು ಅಥವಾ ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಿದ್ದರೂ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ, ಹೆರಿಗೆ ಸಮಯದಲ್ಲಿ ಹೆರಿಗೆ ತೊಂದರೆಗಳು ಅಕಸ್ಮಾತ್/ಊಹಿಸದೇ ಉಂಟಾಗಬಹುದು, ಅವು ತಾಯಿ ಅಥವಾ ಮಗು ಅಥವಾ ಇಬ್ಬರ ಜೀವಕ್ಕೆ ಅಪಾಯ ತರಬಹುದು. ಹೆರಿಗೆ ಸಮಯದಲ್ಲಿ ಸಮಸ್ಯೆ ಪ್ರಾರಂಭವಾದರೆ, ಬಹು ಕಡಿಚೆ ಅವಧಿಯಲ್ಲಿ ಮಗು ಅಥವಾ ತಾಯಿ ಮಗು ಸಾವನ್ನಪ್ಪಬಹುದು. ಆದುದರಿಂದ ಗರ್ಭಿಣಿ ಎಲ್ಲಾ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ಅಥವಾ ಆರೋಗ್ಯ ಕೇಂದ್ರದಲ್ಲಿ ಇರದಿದ್ದರೆ ತಾಯಿ ಅಥವಾ ಮಗುವಿನ ಪ್ರಾಣ ರಕ್ಷಿಸುವುದಕ್ಕೆ ಸಾಧ್ಯವಾಗದೆ ಇರಬಹುದು.
ಎಫ್.ಆರ್.ಯು. ಗೆ ಹೋಗಲು ವಾಹನ ಸಿಗುವುದದನ್ನು ಖಚಿತಪಡಿಸಿಕೊಳ್ಳಬೇಕು. ಈ ಉದ್ದೇಶಕ್ಕೆ ವಾಹನಕ್ಕೆ ದೊರೆಯುವ ಹಣ. ತುರ್ತು ಸಂದರ್ಭದಲ್ಲಿ ಇವುಗಳನ್ನು ಹೇಗೆ ಪಡೆಯಬಹುದು ಎಂದು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಪ್ರದೇಶದಲ್ಲಿ ಜನನಿ ಸುರಕ್ಷೇ ಯೋಜನಾ ಕಾರ್ಯಕ್ರಮದಡಿ ಹಣ ಮತತು ಇತರೆ ಸೌಲಭ್ಯಗಳು ದೊರೆಯುವ ಬಗ್ಗೆ ತಿಳಿದುಕೊಳ್ಳಬೇಕು. ಯಾರು ಹಣ ಹೊಂದಿದ್ದಾರೆ ಅಥವಾ ಅದನ್ನು ಪಡೆಯಲು ನಿಯಮಗಳು ಏನು ಮತ್ತು ಅಗತ್ಯವಿದ್ದಲ್ಲಿ ವರದಿಮಾಡಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 2/26/2020
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು