ಹೆರಿಗೆಯಾದ ಎರಡು ವಾರದೊಳಗೆ ಕನಿಷ್ಠಪಕ್ಷ ಒಂದು ಬಾರಿ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡುವುದು.
ಸಣ್ಣಪುಟ್ಟ ಸಮಸ್ಯೆಗಳಾದ ಬಿರುಕುಬಿಟ್ಟ ತೊಟ್ಟುಗಳು, ಗಾಯವಾಗಿರುವ ಮೊಲೆ, ಕಾಲುಗಳಲ್ಲಿ ನೋಬು, ರಕ್ತಸ್ರಾವ ಮತ್ತು ವಾಸನೆಯುಕ್ತ ಸ್ರಾವವಿದ್ದರೆ ತಾಯಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯನ್ನು ಸಂಪರ್ಕಿಸಲು ತಿಳಿಸಬೇಕು.
ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಪ್ರಸವ ನಂತರದ ಕ್ಲಿನಿಕ್ಸ್ ನಡೆಸುವಾಗ ಸಹಾಯ ಮಾಡಬೇಕು. ತಾಯಿ ಮತ್ತು ಮಕ್ಕಳಲ್ಲಿರುವ ಅಪಾಯದ ಚಿನ್ಹೆಗಳನ್ನು ಗುರುತಿಸಬೇಕು.
ಜನನದ ಕಡ್ಡಾಯ ನೋಂದಣಿಯ ಬಗ್ಗೆ ಸಲಹೆ ನೀಡಬೇಕು.
ನವಜಾತ ಶಿಶುವಿಗೆ ತಾಯಿ ಹಾಲನ್ನು ಮಾತ್ರ ಕುಡಿಸಬೇಕು ಎಂದು ಸಲಹೆ ನೀಡಬೇಕು.
ಇದರಿಂದ ಉತ್ತಮವಾಗಿ ಗರ್ಭಾಶಯ ಸಹಜ ಸ್ಥಿತಿಗೆ ಮರಳುತ್ತದೆ.
ಲ್ಯಾಕ್‍ಟೇಷನಲ್ ಅಮಿನೇರಿಯ ಉತ್ಪತ್ತಿಯಾಗುತ್ತದೆ ಮತ್ತು ಸಹಜ ಗರ್ಭನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.
ತಾತ್ಕಾಲಿಕ/ಶಾಶ್ವತ ಗರ್ಭನಿರೋಧಕಗಳ ಅಗತ್ಯದ ಬಗ್ಗೆ ಅವರಿಗೆ ತಿಳಿಸಬೇಕು. ಅಗತ್ಯವಾದಲ್ಲಿ ತಾಯಿಗೆ ಮತ್ತು ಕುಟುಂಬಕ್ಕೆ ದೊರಕಿಸುವುದಕ್ಕೆ ಸಹಾಯ ಮಾಡಬೇಕು.
ಈ ಕೆಳಗಿನ ಸಮಸ್ಯೆಗಳು ಇದ್ದರೆ ತಾಯಿಗೆ ತಿಳಿಸಲು ಹೇಳಬೇಕು.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/1/2020
ಹೆರಿಗೆ ಯಾವ ರೀತಿಯಾಗಿದ್ದರೂ/ಮಗುವಿನ ತೂಕ ಹೇಗಿದ್ದರೂ ಪ್ರತ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...