ಸಂಸ್ಥೆಗಳಲ್ಲಿ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬಗ್ಗೆ ಗರ್ಭಿಣಿ ಮಹಿಳೆಗೆ ಮತ್ತು ಅವರ ಕುಟುಂಬಗಳಿಗೆ ಸಲಹೆ ನೀಡಬೇಕು ಮತ್ತು ಅವರ ಜೊತೆ ಸಮಾಲೋಚನೆ ಮಾಡಬೇಕು.
ನಿಮ್ಮ ಗ್ರಾಮಕ್ಕೆ ಹತ್ತಿರದಲ್ಲಿ ದಿನದ 24 ಗಂಟೆ ಹೆರಿಗೆ ಸೇವೆ ದೊರೆಯುವ ಆಸ್ಪತ್ರೆ, ಆರೋಗ್ಯ ಕೇಂದ್ರಗಳು, ಸಂಸ್ಥೆಗಳನ್ನು ಪತ್ತೆ ಮಾಡಿಕೊಳ್ಳಬೇಕು. ಅಲ್ಲಿ ಹೆರಿಗೆ ನಡೆಯುವ ಮತ್ತು ಹೆರಿಗೆಗೆ ತಗಲುವ ಹಣ ಮತ್ತು ಹೇಗೆ ಆ ಆಸ್ಪತ್ರೆಯನ್ನು ತಲುಪಬಹುದು ಎಂಬ ಬಗ್ಗೆ ತಿಳಿದುಕೊಂಡಿರಬೇಕು.
ಸಂಸ್ಥೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಗರ್ಭಿಣಿ ಜೊತೆಯಲ್ಲಿ ಹೋಗಬೇಕು.
ಹತ್ತಿರದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರ ಇಲ್ಲದಿದ್ದರೆ ಅಥವಾ ಕುಟುಂಬದವರು ಮನೆಯಲ್ಲಿ ಹೆರಿಗೆ ಮಾಡಿಸುವುದಕ್ಕೆ ಇಷ್ಟಪಟ್ಟರೆ. ಮನೆಯಲ್ಲಿ ಹೆರಿಗೆಯನ್ನು ಮಾಡುವ ಬಗ್ಗೆ ತರಬೇತಿ ಹೊಂದಿರುವ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ, ಸ್ಟಾಪ್ ನರ್ಸ್ ಅಥವಾ ವೈದ್ಯರಿಂದ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿತೆ ಸಲಹೆ ನೀಡಬೇಕು.
ಹೆರಿಗೆ ತರಬೇತಿ ಹೊಂದಿರುವ ಸೇವಕರು ದೊರೆಯದಿದ್ದರೆ ತರಬೇತಿ ಪಡೆದಿರುವ ದಾದಿಯರ ಕಡೆಯಿಂದ ಹೆರಿಗೆ ಮಾಡಿಸಿಕೊಳ್ಳಬಹುದು.
ಹೆರಿಗೆ ವೇಳೆಯಲ್ಲಿ ಪಂಚ ಶುಚಿತ್ವಗಳನ್ನು ತಪ್ಪದೆ ಪಾಲಿಸಬೇಕು. ಶುಚಿಯಾದ ಕೈಗಳು, ಶುಚಿಯಾದ ಸ್ಥಳ, ಸ್ವಚ್ಛವಾದ ಹೊಸ ಬ್ಲೇಡ್, ಸ್ವಚ್ಛವಾದ ದಾರ ಮತ್ತು ಹೊಕ್ಕಳ ಬಳ್ಳಿಯನ್ನು ಶುಚಿಯಾಗಿ ಕತ್ತರಿಸಬೇಕು (ಕತ್ತರಿಸಿದ ಹೊಕ್ಕಳ ಬಳ್ಳಿ ಮೇಲೆ ಏನನ್ಣು ಹಚ್ಚಬಾರದು).
ಹೆರಿಗೆ ಮಾಡಿಸುವ ಸ್ಥಳದಲ್ಲಿ ತೇವವಿರಬಾರದು ಮತ್ತು ಸ್ವಲ್ಪ ಬೆಚ್ಚಗಿರಬೇಕು.
ಹೆರಿಗೆ ನಂತರ ತಾಯಿ ಮಗುವಿಗೆ ಹಾಲು ಉಣಿಸುವುದಕ್ಕೆ ಪ್ರಾರಂಭಿಸಲು ಸಹಾಯ ಮಾಡಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 4/24/2020
ನವಜಾತ ಶಿಶುವೀನ ಆರೈಕೆ ಕುರಿತು ಇಲ್ಲಿ ವಿವರಿಸಿಲಾಗಿದೆ.
ಹೆರಿಗೆ ಯಾವ ರೀತಿಯಾಗಿದ್ದರೂ/ಮಗುವಿನ ತೂಕ ಹೇಗಿದ್ದರೂ ಪ್ರತ...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...