ಹೆರಿಗೆ ಯಾವ ರೀತಿಯಾಗಿದ್ದರೂ/ಮಗುವಿನ ತೂಕ ಹೇಗಿದ್ದರೂ ಪ್ರತಿ ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲ 28 ದಿನಗಳವರೆಗೆ ಕೆಲವು ಅಗತ್ಯ ಆರೈಕೆಗಳ ಅವಶ್ಯಕವಾಗಿರುತ್ತದೆ. ಇದು ಬಹಳ ಮುಖ್ಯ ಏಕೆಂದರೆ ಒಂದು ವರ್ಷದಲ್ಲಿ ಸಾಯುತ್ತಿರುವ ಪ್ರತಿ 10 ಮಕ್ಕಳಲ್ಲಿ 5 ಮಕ್ಕಳು ಮೊದಲ 28 ದಿನ ತುಂಬುವುದರೊಳಗೆ ಸಾಯುತ್ತಿದ್ದಾರೆ.
ಚರ್ಮದಿಂದ ಚರ್ಮಕ್ಕೆ ಸಂಪರ್ಕ
ತಾಯಿಗೆ ಏಕಾಂತತೆ ಒದಗಿಸಿ. ತಾಯಿ ಕುಳಿತುಕೊಳ್ಳಲು ಅಥವಾ ಒರಗಿಕೊಳ್ಳಲು ತಿಳಿಸಬೇಕು. ಟೋಪಿ, ಕರವಸ್ತ್ರ ಮತ್ತು ಕಾಲುಚೀಲಗಳನ್ನು ಹೊರತುಪಡಿಸಿ ಸೌಮ್ಯವಾಗಿ ಮಗುವಿನ ಬಟ್ಟೆಗಳನ್ನು ತೆಗೆಯಿರಿ. ತಾಯಿಯ ಎದೆ ಮೇಲೆ ಮಗುವನ್ನು ಕೆಳಮುಖವಾಗಿ ನೇರವಾಗಿ ಮೊಲೆಗಳ ಮಧ್ಯೆ ಇಡಬೇಕು. ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಮಗುವಿನ ತಲೆ ಮೇಲೆ ಮಾಡಿ ಬೆನ್ನು ಹೊರಗಿರುವಂತೆ ಒಂದು ಕಡೆಗೆ ತಿರುಗಿಸಿ ಉತ್ತಮ ಗಾಳಿ ದೊರೆಯುವಂತೆ ಮಾಡಬೇಕು. ಮಗುವನ್ನು ತಾಯಿಯ ಬ್ಲೌಸ್, ಪಲ್ಲು ಅಥವಾ ಗೌನಿನಿಂದ ಮುಚ್ಚಬೇಕು. ತಾಯಿ ಮಗುವನ್ನು ಒಟ್ಟಿಗೆ ಹೆಚ್ಚುವರಿ ಶಾಲು ಅಥವಾ ಬ್ಲಾಂಕೆಟ್‍ನಿಂದ ಹೊದಿಸಬೇಕು.
ಚರ್ಮದಿಂದ ಚರ್ಮದ ಸಂಪರ್ಕ ಸಾಧ್ಯವಾಗದಿದ್ದ ಪಕ್ಷದಲ್ಲಿ ಒಂದು ಅಥವಾ ಎರಡು ಪದರಗಳ ಬಟ್ಟೆಯನ್ನು (ಬೇಸಿಗೆಯಲ್ಲಿ) ಮೂರರಿಂದ -ನಾಲ್ಕು ಪದರಗಳ ಬಟ್ಟೆನ್ನು (ಚಳಿಗಾಲದಲ್ಲಿ) ಮತ್ತು ತಲೆ ಮತ್ತು ಕಾಲುಗಳನ್ನು ಕ್ರಮವಾಗಿ ಟೋಪಿ ಮತ್ತು ಕಾಲುಚೀಲಗಳಿಂದ ಮುಚ್ಚಬೇಕು. ದಪ್ಪಬಾಗಿ, ಮೃದುವಾಗಿರುವ ಹಾಸಿಗೆಯ ಮೇಲೆ ಮಗು ಮತ್ತು ತಾಯಿ ಮಲಗಲು ಬಿಡಬೇಕು. ಚಳಿಗಾಲದಲ್ಲಿ ಹೆಚ್ಚುವರಿಯಾಗಿ ಬ್ಲಾಂಕೆಟ್ ಅಥವಾ ಶಾಲನ್ನು ಅವರಿಗೆ ಹೊದಿಸಬೇಕು.
ಮಗು ಹುಟ್ಟಿದ ತಕ್ಷಣ ಸ್ನಾನ ಮಾಡಿಸಬಾರದು.
ಈ ಕೆಳಗಿನ ಲಕ್ಷಣಗಳನ್ನು ಯಾವುದಾದರೂ ಇದ್ದರೆ ತಕ್ಷಣವೇ ಮಗುವನ್ನು ಮೇಲ್ಚಟ್ಟದ ಆಸ್ಪತ್ರೆ (ಎಫ್.ಆರ್.ಯು) ಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಕುಟುಂಬದವರಿಗೆ ಸಲಹೆ ನೀಡಬೇಕು.
ನವಜಾತ ಶಿಶುವನ್ನು ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸ್ಸು ಮಾಡಿರುವ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಆರೈಕೆ
ಮಗು ಹುಟ್ಟಿದಾಗ ತೂಕವನ್ನು ದಾಖಲಿಸಿದ್ದರೆ, ತೂಕದ ಸ್ಕೇಲ್‍ನಲ್ಲಿ ಹಸಿರು ಅಥವಾ ಹಳದಿ ವ್ಯಾಪ್ತಿಯಲ್ಲಿದ್ದರೆ, ಮಗುವನ್ನು ತಾಯಿಯ ಹತ್ತಿರ ಇಡಬೇಕು.
ಹೊಕ್ಕಳ ಬಳ್ಳಿಯ ಆರೈಕೆಯ ಬಗ್ಗೆ ತಾಯಿಗೆ/ಕುಟುಂಬಕ್ಕೆ ಸಲಹೆ ನೀಡಬೇಕು. ಹೊಕ್ಕಳ ಬಳ್ಳಿಯ ಮೇಲೆ ಔಷಧಿ ಹಚ್ಚಬೇಕಾಗಿಲ್ಲ, ಗಾಯಕಟ್ಟು ಡ್ರೆಸ್ಸಿಂಗ್ ಬೇಕಾಗಿಲ್ಲ ಎಂದು ಸಹ ಸಲಹೆ ನೀಡಬೇಕು.
ಹೆರಿಗೆಯಾದ ನಂತರ ಬೇಗನೆ ಎದೆಹಾಲು ಕುಡಿಸುವುದನ್ನು ಪ್ರಾರಂಭಿಸಬೇಕೆಂದು ಸಲಹೆ ಮಾಡಬೇಕು.
ಕೊಲಸ್ಟ್ರಾಮ್ ಮಕ್ಕಳಲ್ಲಿ ಸೋಂಕನ್ನು ತಡೆಗಟ್ಟುವುದರಿಮದಕೊಲಸ್ಟ್ರಾಮ್ (ಗಿಣ್ಣು ಹಾಲು) ಕೊಡಬೇಕು.
6 ತಿಮಗಳ ತನಕ ತಾಯಿ ಎದೆಹಾಲು ಮಾತ್ರ ಕುಡಿಸಬೇಕು.
ತಾಯಿ ಎದೆಹಾಲು ಉಣಿಸುವ ಅವಧಿಯಲ್ಲಿ ಮಗುವು ಸರಿಯಾದ ಸ್ಥಾನದಲ್ಲಿರಬೇಕು. ಮಗು ಬೇಕೆಂದು ಕೇಳಿದಾಗಲೆಲ್ಲ ಪ್ರತಿ ಸಾರಿಯು ಎರಡು ಎದೆಗಳಿಂದ ಹಾಲನ್ನು ಕುಡಿಸಬೇಕು. ಹಗಲು ಮತ್ತು ರಾತ್ರಿ ವೇಳೆಯಲ್ಲಿಯೂ ಮಗುವಿಗೆ ಹಾಲು ಉಣಿಸಬೇಕು.
ಮಗುವನ್ನು ಹಿಡಿದುಕೊಂಡಿರುವಾಗ ತಾಯಿ ತಲೆ ಅಥವಾ ಹೆಗಲಿಗೆ ಮಾತ್ರವಲ್ಲದೆ ಮಗುವಿನ ಕೆಳಗೆ ಒತ್ತುಕೊಡಬೇಕು. ಮಗುವಿನ ಕೆನ್ನೆ ಎದೆಯನ್ನು ಮುಟ್ಟಬೇಕು. ಬಾಯಿ ಅಗಲವಾಗಿ ತೆರೆಯಬೇಕು ಮತ್ತು ಮಗುವಿನ ಕೆಳಗಿನ ತುಟಿ ಹೊರಕ್ಕೆ ತಿರುಗಿರಬೇಕು.
ಮಗುವಿಗೆ ಮೊಲೆಹಾಲು ಕುಡಿಸುವುದಕ್ಕೆ ಮೊದಲು ಆಹಾರ ಕೊಡಬಾರದು.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 4/25/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು
ನವಜಾತ ಶಿಶುವೀನ ಆರೈಕೆ ಕುರಿತು ಇಲ್ಲಿ ವಿವರಿಸಿಲಾಗಿದೆ.
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು