ಬೇಕಾಗುವ ಸಾಮಾಗ್ರಿಗಳು: ಅರ್ಧ ಕೆ.ಜಿ. ಏಡಿ, ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 1 / 2 ಕಪ್ ಬಿಸಿನೀರು, 2 ದೊಡ್ಡ ಈರುಳ್ಳಿ, 2 ದೊಡ್ಡ ಟೊಮೆಟೊ, 10 ಒಣಮೆಣಸು, 2 ಚಮಚ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಶುಂಠಿ ಪೇಸ್ಟ್, ಒಂದೂವರೆ ಕಪ್ ತೆಂಗಿನ ತುರಿ, 2 ಚಮಚ ಧನಿಯಾ ಪುಡಿ, 2 ಚಮಚ ಜೀರಿಗೆ ಪುಡಿ, 1 / 2 ಚಮಚ ಅರಿಶಿನ ಪುಡಿ, 1/2 ಚಮಚ ಮೆಣಸಿನಪುಡಿ, 2 ಹಸಿಮೆಣಸು, 2 ಚಮಚ ಎಣ್ಣೆ, 3 ಕಪ್ ಬಿಸಿನೀರು, ರುಚಿಗೆ ಉಪ್ಪು.
ಮಾಡುವ ವಿಧಾನ: ಏಡಿ ಕಾಲನ್ನು ಪ್ರತ್ಯೇಕಿಸಿ ಪಕ್ಕಕ್ಕಿಡಿ. ಅದರ ದೇಹದ ಭಾಗವನ್ನು ಚಿಕ್ಕಚಿಕ್ಕ ಪೀಸ್ ಮಾಡಿಕೊಳ್ಳಿ. ಕಾಲಿನ ತುದಿಯಲ್ಲಿರುವ ಉಗುರುಗಳನ್ನು ಪ್ರತ್ಯೇಕಿಸಿ ಕಾಲನ್ನು ಕತ್ತರಿಸಿಕೊಳ್ಳಿ. ಹುಣಸೆಹಣ್ಣನ್ನು ಅರ್ಧ ಕಪ್ ಬಿಸಿನೀರಿನಲ್ಲಿ 10 ನಿಮಿಷ ಅದ್ದಿಡಿ, ಬೆರಳಿನಿಂದ ಹುಣಸೆಹಣ್ಣನ್ನು ಚೆನ್ನಾಗಿ ಕಲಕಿ. ಎಲ್ಲಾ ತಿರುಳು ಹೊರತೆಗೆಯಲು ಒಂದು ಜರಡಿ ಮೂಲಕ ಸೋಸಿ. ಇದಕ್ಕೆ ಈರುಳ್ಳಿ, ಟೊಮೆಟೊ, ತೆಂಗಿನಕಾಯಿ, ಶುಂಠಿ , ಬೆಳ್ಳುಳ್ಳಿ , ಒಣಮೆಣಸು ಎಲ್ಲವನ್ನೂ ಸೇರಿಸಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
ಅಗಲವಾದ ಪ್ಯಾನ್ ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಹಸಿ ಮೆಣಸಿನಕಾಯಿ ಹಾಗೂ ಮೇಲೆ ತಯಾರಿಸಿಟ್ಟ ಪೇಸ್ಟ್ ಸೇರಿಸಿ ಐದು ನಿಮಿಷ ಕಲುಕಿರಿ. ಅದು ತಳ ಹಿಡಿಯದಂತೆ ಕಲಕುತ್ತಿರಿ. ಅದಕ್ಕೆ ಮೂರು ಕಪ್ ನೀರು ಸೇರಿಸಿ (ನಿಮಗೆ ಎಷ್ಟು ಗ್ರೇವಿ ಬೇಕೋ ಅಷ್ಟು ನೀರು ಸೇರಿಸಿ). ಇದನ್ನು ಚೆನ್ನಾಗಿ ಕುದಿಸಿ. ಸಣ್ಣ ಉರಿಯಲ್ಲಿ 10 ನಿಮಿಷ ಕಾಯಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . ಈ ಗ್ರೇವಿಗೆ ಏಡಿಯ ತುಂಡುಗಳನ್ನು ಸೇರಿಸಿ ಪ್ಯಾನ್ ಮುಚ್ಚದೇ 10ನಿಮಿಷ ಬೇಯಿಸಿದರೆ ಅನ್ನ, ಚಪಾತಿ, ಪೂರಿ, ರೋಟಿ ಇತ್ಯಾದಿಗಳ ಜೊತೆ ಸವಿಯಲು ಕ್ರ್ಯಾಬ್ ಕರಿ ಸಿದ್ಧ.
ಮೂಲ: ಎನ್.ಡಿ.ಸವಿತಾ
ಕೊನೆಯ ಮಾರ್ಪಾಟು : 10/16/2019
ಸಾಮಾನ್ಯವಾಗಿ ಶ್ವಾಸಸಂಬಂಧಿ ರೋಗ ಎಂದರೆ ಅಸ್ತಮಾ ಒಂದೇ ಎಂದು...
ಉಗುರು ತುದಿಯಲ್ಲಿ ಆರೋಗ್ಯ ಕುರಿತಾದ ಮಾಹಿತಿ
ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (in...
ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣನ್ನಿವರು ಕೊಳೆಯಬಿಡುವುದಿಲ...