ವಿಳಾಸ | ಮರಿವಣ್ಣಯ್ಯರವರ ತೋಟ |
---|---|
ಸ್ಥಳ | ನೆಲಮಂಗಲ |
ಕೃಷಿಕ | ಶ್ರೀ ಮರಿವಣ್ಣಯ್ಯ |
ಬೆಳೆ | ರಾಗಿ, ತೊಗರಿ ಮತ್ತು ಇತರೆ ತರಕಾರಿಗಳು |
ಕೃಷಿ ಭೂಮಿ | 1.5 ಎಕರೆ |
ವರದಿಗಾರ | ಶ್ರೀ ರಘು |
ದಿನಾಂಕ | 1-Nov-2013 |
ಮರಿವನ್ನಯ್ಯನವರು ಕಳೆದ ೧೦ ವರ್ಷಗಳಿಂದ ಸಾವಯವ ಕೃಷಿ ಅಭ್ಯಾಸ ಮಾಡುತಿದ್ದಾರೆ. ಅವರು ೧.೫ ಎಕರೆ ಭೂಮಿಯಲ್ಲಿ ರಾಗಿ , ಮರಗೆಣಸಿನ ( Mara Genasu ) , ಕಡಲೇಕಾಯಿ , ತೊಗರಿ , ಕಾಸ್ಟರ್, ಮೂಲಂಗಿ ಮತ್ತು ಹಸಿರು ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾರೆ. ವಿವಿಧ ದರದಲ್ಲಿ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುವ ಮೂಲಕ ಒಂದೇ ಜಾಗದಲ್ಲಿ ವಿವಿಧ ಗಿಡಮೂಲಿಕೆಗಳು , ಮೂಲಂಗಿ ಮತ್ತು ಕಡಲೇಕಾಯಿ ಬೆಳೆಯುತ್ತಾರೆ ಮತ್ತು ಭೂಮಿಯ ಫಲವತ್ತನ್ನು ಕಪಾಡಿಕೊಲ್ಲುತ್ತಾರೆ. ವಿವಿಧ ದರದಲ್ಲಿ ಇಳುವರಿ ನೀಡುವ ಬೆಳೆಗಳನ್ನು ಬೆಳೆಯುವುದು ಮತ್ತು ಒಣ ಭೂಮಿಯಲ್ಲಿ ತರಕಾರಿ ಬೆಳೆಯುವುದು ಇವರ ಪರಿಣತಿಯಾಗಿದ್ದು ಇದನ್ನು ಆಸಕ್ತ ರೈತರಿಗೆ ಹಂಚಿಕೊಳ್ಳಲು ಸಿದ್ಧರಿದ್ದಾರೆ.
ಪಶುಸಂಗೋಪನೆಯು ಸಾವಯವ ಕೃಷಿಯ ಅತ್ಯವಶ್ಯಕ ಭಾಗವಾಗಿದೆ.ಮರಿವನ್ನಯ್ಯನವರು ೪ ಹಸುಗಳು ಮತ್ತು ೨ ಆಡುಗಳನ್ನು ಸಾಕುತಿದ್ದಾರೆ. ಅವರು ಪ್ರತಿ ವರ್ಷ 3 ಟನ್ ಎಲೆ / ಜೈವಿಕ ಮಿಶ್ರಗೊಬ್ಬರ,2 ಟನ್ ಎರೆಗೊಬ್ಬ, 3 ಟನ್ ಗಳಷ್ಟು ದನದ ಕೊಟ್ಟಡಿಯ ಗೊಬ್ಬರ ಮತ್ತು ೩೦೦ ಟನ್ ಗೋಮೂತ್ರ ದಿಂದ ತಯಾರಾದ ಯೂರಿಯಾ ಸಿದ್ದಪಡೆಸುತ್ತಾರೆ. ಹೀಗೆ ಅವರು ಯಾವುದೇ ಹೆಚ್ಚುವರಿ ಗೊಬ್ಬರ ಖರೀದಿ ಮಾಡದೆ ತಮ್ಮ ಉತ್ಪಾದನೆಯ ವೆಚ್ಚ ಕಡಿಮೆ ಮಾಡಿಕೊಳ್ಳುತ್ತಾರೆ. ಗಿಡ ರೋಗಗಳಾದ “ಮುದುಳು ರೋಗ”, “ಬೂದಿ ರೋಗ” ಮತ್ತು “ಎಲೆ ಕಲೆ” ಮರಿವನ್ನಯ್ಯನವರನ್ನು ಕಾಡುತ್ತವೆ . ಅವರು ಜೀವಮೃಥ(ಗೋಮೂತ್ರ, ಸೆಗಣಿ , ಬೆಲ್ಲ, ಕಡಲೆ ಹಿಟ್ಟು ಮತ್ತು ನೀರಿನಿಂದ ದಿನಕ್ಕೆ ಎರಡು ಬಾರಿ ಒಂದು ವಾರದ ವರೆಗು ಕಲಕಿ ಮಾಡಿದ ಮಿಶ್ರಣ) ಎಂಬ ಸಸ್ಯನಾಶಕಗಳು ಸಿದ್ಧ ಪಡೆಸುತ್ತಾರೆ. ಸೂಕ್ಷ್ಮ ಬ್ಯಾಕ್ಟೀರಿಯಾ ಚಟುವಟಿಕೆ ಗಳಿಂದ ಸಸ್ಯನಾಶಕಗಳು ತಯಾರಾಗುತ್ತವೆ. ಹೀಗೆ ಸಿದ್ಧಮಾಡಿದ ಜೀವಾಮೃಥವನ್ನು ಹನಿ ನೀರಾವರಿ ಮೂಲಕ ಸಸ್ಯಗಳಿಗೆ ತಲುಪಿಸುತ್ತಾರೆ. ಇವರು ತಮ್ಮ ಶಕ್ತಿಯ/ ಇಂಧನದ ಅವಶ್ಯಕತೆಗಳಿಗೆ ಗೋ ಅನಿಲ ಸ್ಥಾವರವನ್ನು ಬಳಸುತ್ತಾರೆ. ಇವರು ಸೌರ / ಗಾಳಿ ವಿದ್ಯುತ್ ಪರಿಹಾರಗಳನ್ನು ಬಳಸಲು ಬಯಸುತ್ತಾರೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 9/7/2019
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ