ವಿಳಾಸ | ಶ್ರೀ ಚಂದ್ರಪ್ರಕಾಶ್ ರವರ ಫಾರಂ |
---|---|
ಸ್ಥಳ | ಬಿಳಿಗೆರೆಪಾಳ್ಯ, ಕೆ.ಬಿ. ಕ್ರಾಸ್ ಹತ್ತಿರ |
ಕೃಷಿಕ | ಶ್ರೀ ಚಂದ್ರಪ್ರಕಾಶ್ ಮತ್ತು ಶ್ರೀಮತಿ ಯಶೋದ |
ಬೆಳೆ | ತೆಂಗು, ಅಡಕೆ, ಭತ್ತ |
ಕೃಷಿ ಭೂಮಿ | ೬ ಎಕರೆ |
ವರದಿಗಾರ | ಶ್ರೀ ವಿಶ್ವಾಸ್ |
ದಿನಾಂಕ | 26-Oct-2013 |
೬ ಎಕರೆ ಜೈವಿಕ ಕೃಷಿ ಭೂಮಿಯು ೪ ಮತ್ತು ೨ ಎಕರೆಗಳ ಬೇರೆ ಬೇರೆ ಪ್ರದೇಶವಾಗಿದೆ. ಇಲ್ಲಿ ಕೃಷಿಯನ್ನು ಭೂಮಾಲೀಕರೆ ಸಣ್ಣ ಪುಟ್ಟ ಕೆಲಸ ಹೊರತು ಪಡಿಸಿ ಸಂಪೂರ್ಣವಾಗಿ ತಾವೇ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿ ೪ ಎಕರೆಗಳ ತೆಂಗು ಮತ್ತು ತಲಾ ಒಂದೊಂದು ಎಕರೆಗಳ ಅಡಕೆ ತೂಟ ಮತ್ತು ಬತ್ತದ ಗದ್ದೆ ಇದೆ. ಈ ಕೃಷಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿವೆ. ಈ ಕೃಷಿಕರು ೩ ಎಮ್ಮೆಗಳನ್ನು ಮತ್ತು ೨ ಎಮ್ಮೆ ಕರುಗಳನ್ನು ಸಾಕುತ್ತಿದ್ದು, ಗೋಬರ್ ಅನಿಲವನ್ನು ಅಡುಗೆ ಮಾಡಲು ಬಳಸುತ್ತಾರೆ.
ಈ ಕೃಷಿ ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ಮಾಡುತ್ತಿದ್ದು, ಜೂನ್ ನಿಂದ ನವಂಬರ್ ತಿಂಗಳಿನ ತನಕ ಕುಡಿಯಲು ಮತ್ತು ಅಡುಗೆ ಮಾಡಲು ಸಂಗ್ರಹಿಸಿದ ಮಳೆನೀರನ್ನೇ ಶೋಧಿಸಿ ಸಂಸ್ಕರಿಸಿ ಉಪಯೋಗಿಸುತ್ತಿದ್ದಾರೆ. ಬೇಸಗೆ ಕಾಲದಲ್ಲಿ ೩೦ ವರ್ಷಗಳ ಹಿಂದೆ ತೋಡಿಸಿದ ಕೊಳವೆ ಬಾವಿಯ ನೀರನ್ನು ಉಪಯೋಗಿಸುತ್ತಾರೆ. ಅಂತರ್ಜಲ ನೀರಿನ ಮಟ್ಟವೂ ಕೂಡ ಇಲ್ಲಿ ಉತ್ತಮವಾಗಿದೆ. ಒಣ ಕೊಬ್ಬರಿಗೆ ಹೆಸವಾಸಿಯಾದ ಈ ಪ್ರದೇಶದಲ್ಲಿ ಈ ಕೃಷಿ ಕುಟುಂಬವು ಕೂಡ ತೆಂಗಿನ ಕಾಯಿಗಳನ್ನು ವರ್ಷಪೂರ್ತಿ ಸಂಗ್ರಹಿಸಿ ಅವುಗಳು ಗಿಟುಕಾದಾಗ ತಿಪಟೂರೀನ ಮಾರುಕಟ್ಟೆಯಲ್ಲಿ ಮಾರುತ್ತಾರೆ. ತೆಂಗಿನ ಮರಗಳಿಗೆ ಜೈವಿಕ ಗೊಬ್ಬರವನ್ನೇ ಹಾಕುತ್ತಿದ್ದಾರೆ. ಪಶುಗಳಿಗೆ ಬೇಕಾದ ಹುಲ್ಲನ್ನು ತೆಂಗಿನ ತೋಟದಲ್ಲೇ ಬೆಳಸುತ್ತಿದ್ದಾರೆ. ಬೇಸಗೆ ಕಾಲದಲ್ಲಿ ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ೧ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬತ್ತವು ಕಟಾವು ಹಂತಕ್ಕೆ ಬಂದಿದ್ದು ಇನ್ನೊಂದು ತಿಂಗಳಿನಲ್ಲಿ ಕಟಾವು ಮಾಡುತ್ತಾರೆ. ಸಗಣಿಯ ಗೊಬ್ಬರವನ್ನು ಇಲ್ಲಿ ಉಪಯೋಗಿಸಲಾಗುತ್ತಿದೆ. ಈ ಬತ್ತದ ಗದ್ದೆಯ ಸುತ್ತ ಇತರ ಕೃಷಿ ಭೂಮಿಯು ಇದ್ದು ಇಲಿಗಳ ಕಾಟ ಕಡಿಮೆ ಇದೆ.
ಶ್ರೀ ಚಂದ್ರಪ್ರಕಾಶ್ ರವರು ೨೦೦೭ ರಿಂದ ಜೈವಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಇತರರ ಅಸಹಕಾರಗಳ ನಡುವೆಯೂ ಅವರ ಪತ್ನಿಯ ಸಹಕಾರ ಮತ್ತು ಸ್ವ ನಂಬಿಕೆಯ ಪ್ರಯತ್ನದಿಂದ ಸಂಪೂರ್ಣವಾಗಿ ಜೈವಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಶ್ರೀಮತಿ ಯಶೋಧ ರವರು ತಮ್ಮ ೨ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ತಮ್ಮ ಪತಿಗೆ ಕೃಷಿ ಕೆಲಸಕ್ಕೆ ನೆರವಾಗುತ್ತಿದ್ದಾರೆ.
ಈ ಕುಟುಂಬವು ಕೃಷಿ ಉಪ ಉತ್ಪನ್ನಗಳಾಗಿ ಚವನ್ ಪ್ರಾಶ, ಸಾಬೂನು, ಶಾಂಪೂ ಉತ್ಪಾದಿಸುತ್ತಿದ್ದಾರೆ.
ಹತ್ತಿರದಲ್ಲೇ ಒಣ ತೆಂಗಿನ ಕಾಯಿಯಿಂದ ಎಣ್ಣೆಯನ್ನು ಮಾಡುವ ಕೇಂದ್ರವಿದೆ. “ರೈತರಿಂದ ರೈತರಿಗಾಗಿ” ಎಂಬಂತೆ ಹತ್ತಿರದ ರೈತರು ತಮ್ಮಲ್ಲಿನ ಒಣ ಕೊಬ್ಬರಿಯನ್ನು ತಂದು ಇಲ್ಲಿ ಎಣ್ಣೆ ಮಾಡಿಸಿ ಒಯ್ಯುತ್ತಾರೆ.
ತೆಂಗಿನ ಎಣ್ಣೆಯನ್ನು ಮಾಡುವ ವಿಧಾನ
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 8/30/2019
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ