ವಿಳಾಸ | ಗಂಗಣ್ಣರವರ ಕೃಷಿಕೇಂದ್ರ |
---|---|
ಸ್ಥಳ | ಸಂಪೂರ ಹಳ್ಳಿ, ನೆಲಮಂಗಲ ತಾಲೂಕು |
ಕೃಷಿಕ | ಶ್ರೀ ಗಂಗಣ್ಣ |
ಬೆಳೆ | ರಾಗಿ, ತೊಗರೆ, ಮೆಣಸಿನಕಾಯಿ, ಕಾಳುಗಳು ಮತ್ತು ಇತರೆ |
ಕೃಷಿ ಭೂಮಿ | 10 ಎಕರೆಗಳು |
ವರದಿಗಾರ | ಶ್ರೀ ರಘು |
ದಿನಾಂಕ | Nov 01, 2013 |
ಗಂಗಣ್ಣರವರು ಕಳೆದ 6 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯನ್ನು ತೀವ್ರ ಆಸಕ್ತಿಯಿಂದ ಅನುಸರಿಸುತ್ತಿದ್ದಾರೆ. ಸಾವಯವ ಕೃಷಿಯ ಕ್ಷೇತ್ರದಲ್ಲಿ ಇನ್ನೂ ಬೆಳೆಯಬೇಕು, ಹೊಸದನ್ನೇನಾದರು ಮಾಡಬೇಕು ಹಾಗೂ ಏನನ್ನಾದರೂ ಸಾಧಿಸಬೇಕೆಂಬ ಇವರ ಅತಿಯಾದ ಹಂಬಲದಿಂದಾಗಿ ಇಂದು ಇವರ ಸಾಧನೆಗಳುನ್ನು ನೋಡಿ ಎಲ್ಲರೂ ಬಾಯಿ ಬಿಡುವಂತಾಗಿದೆ. ಇವರು ಒಣ ಭೂಮಿಯಲ್ಲಿ ಸ್ಥಳೀಯ ತಳಿಗಳನ್ನೇ ಬಳಸಿ ಬೇಸಾಯ ಮಾಡುವುದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಇವರು ಕಡಿಮೆ ಮಳೆಯಲ್ಲೂ ಹುಲುಸಾಗಿ ಬೆಳೆಯುವ “ಹೆಜ್ಜವೆ” ಎಂಬ ಭತ್ತದ ತಳಿಯನ್ನು ಆಯ್ಕೆ ಮಾಡಿದ್ದು, ಇದು ರಾಗಿಗಿಂತಲೂ ಹೆಚ್ಚು ಇಳುವರಿ ನೀಡುತ್ತದೆ. ಗಂಗಣ್ಣರವರ ಒಂದು ಎಕರೆಗೆ ಸುಮಾರು 20 ಕ್ವಿಂಟಲ್‍ನಷ್ಟು(2000 ಕೆ.ಜಿ) ಫಸಲನ್ನು ಪಡೆಯುತ್ತಾರೆಂದು ಹೆಮ್ಮೆಯಿಂದ ಬೀಗುತ್ತಾರೆ. ಮತ್ತೊಂದೆಡೆ, ರಾಗಿಯು 10-15 ಕ್ವಿಂಟಲ್ಲನಷ್ಟು(ಒಂದು ಎಕರೆಗೆ) ಇಳುವರಿ ನೀಡುತ್ತದೆ. ಇವರು ಹೇಳುವುದೇನೆಂದರೆ, ಈ ಅಕ್ಕಿಯು ಬೇಕಾದ ಪೌಷ್ಠಿಕಾಂಶ, ಔಷಧೀಯ ಗುಣಗಳನ್ನು ಹೊಂದಿದ್ದು, ಮುಖ್ಯವಾಗಿ ಇದನ್ನು ಬೆಳೆಯಲು ಕಡಿಮೆ ನೀರು ಸಾಕಾಗುತ್ತದೆ. ಭತ್ತವು ತುಂಬಾ ಹೆಚ್ಚು ನೀರನ್ನು ಸೇವಿಸುವ ಒಂದು ಬೆಳೆಯೆಂದು ತಿಳಿದಿದ್ದ ನಮಗೆ ಈ ಸಂಗತಿಯು ನಮ್ಮ ಕಣ್ಣುಗಳನ್ನು ತೆರೆಸಿತು.
ಇವರು ರಾಗಿ, ತೊಗರೆ, ಮೆಣಸಿನಕಾಯಿ, ಕಾಳುಗಳು ಮತ್ತು ಇತರೆ ತರಕಾರಿಗಳನ್ನೂ ಬೆಳೆಯುತ್ತಾರೆ. ಇವರು ಬಳಸುತ್ತಿರುವ ಮೆಣಸಿನ ತಳಿಯು ಕಡಿಮೆ ಮಳೆಯಲ್ಲೂ ಉತ್ತಮ ಇಳುವರಿ ನೀಡಿದೆ. ಇವರು ತಮ್ಮ ಹೊಲದಲ್ಲಿ ಮೊಣಕಾಲು ನೋವು ಗುಣಪಡಿಸುವ ಗಿಡಮೂಲಿಕೆಗಳಿಂದ ಹಿಡಿದು ಗರ್ಭಿಣಿ ಮಹಿಳೆಗೆ ಸಹಾಯವಾಗುವಂತಹ ವಿವಿಧ ಔಷಧಿ ಸಸ್ಯಗಳನ್ನೂ ಬೆಳೆದಿದ್ದಾರೆ. ಗಂಗಣ್ಣರವರು ಬೆಳೆ ಪುನರಾವರ್ತನೆ ಪದ್ಧತಿಯನ್ನು ರೂಢಿಸಿಕೊಂಡಿದ್ದು, ರೈತ ಯಾವಾಗಲೂ ಪ್ರಯೋಗಗಳನ್ನು ಮಾಡುತ್ತಿರಬೇಕಲ್ಲದೆ, ತಾನು ತನ್ನ ಹೊಲದ ವಿಜ್ಞಾನಿಯಂಬ ಭಾವನೆಯು ಇರಬೇಕೆಂದು ಹೇಳುತ್ತಾರೆ. ಇವರ ತಂದೆಯು, 91ರ ವಯಸ್ಸಿನಲ್ಲಿಯೂ ಕೂಡ ತುಂಬಾ ಚುರುಕಾಗಿದ್ದು, ಅನೇಕ ರೋಗಗಳಿಗೆ ವಿಭಿನ್ನ ನೈಸರ್ಗಿಕ ಔಷಧಿಗಳನ್ನು ತಯಾರಿಸುತ್ತಾರೆ.
ಇವರು ಒಂದು ಸಣ್ಣ ಗೋಶಾಲೆಯನ್ನು ಹೊಂದಿದ್ದು, ಇದರಿಂದ ಪಡೆದ ಸಗಣಿಯ ಬಳಸಿ ಗೊಬ್ಬರವಲ್ಲದೇ, ಎರೆಹುಳು ಗೊಬ್ಬರವನ್ನು ಕೂಡ ತಯಾರಿಸುತ್ತಾರೆ. ಗಂಜಾಲವು(ಗೋಮೂತ್ರ) ಇವರ ಅನೇಕ ಸಾವಯವ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಪದಾರ್ಥವಾಗಿದೆ, ಮುಖ್ಯವಾಗಿ ಕಳೆನಾಶಕ ಮತ್ತು ಗೊಬ್ಬರ ತಯಾರಿಕೆಗಳಲ್ಲಿ ಇದರ ಪ್ರಯೋಗ ಕಾಣಬಹುದು. “ನಾನು ದುಡ್ಡಿನ ವಿಷಯದಲ್ಲಿ ಅಸಡ್ಡೆ ತೋರಬಹುದು ಆದರೆ ಗಂಜಾಲದ ವಿಷಯದಲ್ಲಲ್ಲಾ” ಎಂದು ಉದ್ಗರಿಸುತ್ತಾರೆ ಗಂಗಣ್ಣನವರು. ಇವರು ತಮ್ಮ ಕೃಷಿಯ ಕೆಲಸದ ಜೊತೆಗೆ ಕುಮುದಾವತಿ ನದಿಯ ಪುನರ್‍ನಿರ್ಮಾಣದ ಕಾರ್ಯದಲ್ಲಿಯೂ ಸಹ ಸಕ್ರಿಯವಾಗಿ ಭಾಗಿಯಾಗಿದ್ದಾರೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 7/23/2019
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕೃಷಿ ಸಂಶೋಧನೆಯಲ್ಲಿ ರೈತ ಪಾತ್ರ ಬೇಕೆ
ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹ...
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ