ಎ ಮತ್ತು ಬಿ ಹುದ್ದೆಗಳಲ್ಲಿ ಶೇಕಡ 3 ಪ್ರತಿಶತ ಮತ್ತು ಸಿ ಡಿ ಹುದ್ದೆಗಳಲ್ಲಿ 5 ಪ್ರತಿಶತ ಹುದ್ದೆಗಳನ್ನು ವಿಕಲಚೇತನರಿಗಾಗಿ ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಮೀಸಲಿರಿಸಲಾಗಿದೆ.
ವಿಕಲಚೇತನರು ನಿರ್ವಹಿಸಬಹುದಾದ ಹುದ್ದೆಗಳನ್ನು ಗುರುತಿಸಿ (ಸರ್ಕಾರದ ರಾಜ್ಯ ಪತ್ರದಲ್ಲಿ) ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ
ಈ ಯೋಜನೆಯ ಉದ್ದೇಶವು ಅಂಧರಿಗೆ ವೃತ್ತಿ ತರಬೇತಿಯನ್ನು ನೀಡುವುದಾಗಿ. ಈ ಕೇಂದ್ರವನ್ನು ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಂಸ್ಥೆಯು ರಾಜ್ಯ ಸರ್ಕಾರದ ಅನುದಾನವನ್ನು ಪಡೆದು ನಡೆಸುತ್ತಿದೆ, ಈ ಕೇಂದ್ರದಲ್ಲಿ 25ಜನ ಅಂಧ ವಿದ್ಯಾರ್ಥಿಗಳಿಗೆ ಸರಳ ಇಂಜಿನಿಯರಿಂಗ್, ಬೆತ್ತ ಹೆಣೆಯುವ, ಹಗ್ಗಹೆಣೆಯವ, ಚಾಪೆ ಹೆಣೆಯುವ ಹಾಗೂ ಪ್ಲಾಸ್ಟಿಕ್ ಮೌಲ್ಡಿಂಗ್ ತರಬೇತಿಯನ್ನು ನೀಡಲಾಗುವುದು.
ಬೆಂಗಳೂರಿನಲ್ಲಿ ಮಹಿಳಾ ಮತ್ತು ಪುರುಷ ವಿಕಲಚೇತ ನೌಕರರ ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಪ್ರತ್ಯೇಕವಾದ ಒಂದೊಂದು ವಸತಿನಿಲಯವನ್ನು ನಡೆಸಲಾಗುತ್ತಿದೆ.ಈ ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ರೂ.60,000 ಗಳಿಗಿಂತ ಕಡಿಮೆ ಇರಬೇಕು. ಪುರುಷರ ವಸತಿನಿಲಯದಲ್ಲಿ 50ನಿವಾಸಿಗಳು ಹಾಗೂ ಮಹಿಳೆಯರ ವಸತಿ ನಿಲಯದಲ್ಲಿ 50 ನಿವಾಸಿಗಳಿಗೆ ಅವಕಾಶ ಇರುತ್ತದೆ
ವಿಕಲಚೇತರನ್ನು ಮುಖ್ಯವಾಹಿನಿಗೆ ತರಬೇಕಾದಲ್ಲಿ ಅವರಿಗೆ ಉದ್ಯೋಗಾವಕಾಶವನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರಿಗೆ ಸ್ಥಳೀಯ ಬೇಡಿಕೆಗಳನುಗುಣವಾಗಿ ಅವಶ್ಯಕ ತರಬೇತಿಯನ್ನು ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ. ಸರ್ಕಾರದ ಆದೇಶ ಸಂ.ಮಮಇ:145:ಪಿಹೆಚ್ ಪಿ:2006(1) ಬೆಂಗಳೂರು ದಿ:29.07.2006ರಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿರುತ್ತದೆ. ತರಬೇತಿ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ನೀಡುವ ಏಜೆನ್ಸಿಯು ಕನಿಷ್ಠ ಸೇ.75ರಷ್ಟು ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. 2011-12ನೇ ಸಾಲಿನಲ್ಲಿ ಕೌಶಲ್ಯ ಅಭಿವೃಧಿ ನಿಗಮ ಸಹಾಯದೊಂದಿಗೆ 10 ಜಿಲ್ಲೆಯ 856 ವಿಕಲಚೇತನರಿಗೆ ವಿವಿಧ ವೃತ್ತಿ ತರಬೇತಿಯನ್ನು ನೀಡಲಾಗುತ್ತಿದೆ
ವಿಕಲಚೇತನರಿಗೆ ಉದ್ಯೋಗವಕಾಶ ಕಲ್ಪಿಸಲು, ಹಾಗೂ ವಿಕಲಚೇತನರನ್ನು ಸ್ವಾವಲಂಬಿಯನ್ನು ಮಾಡಲು ಸ್ಪೂರ್ತಿ ಸ್ವಸಹಾಯ ಯೋಜನೆಯನ್ನು 2006-07 ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ರಾಜ್ಯದ ಪ್ರತಿ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ 10ವಿಕಲಚೇತನರ ಸದಸ್ಯರಿರುವ 10 ಗುಂಪುಗಳ ಸ್ವಸಹಾಯ ಗುಂಪುಗಳನ್ನು ರಚಿಸಿ ಅನುಷ್ಠಾನಗೊಳಿಸಲಾಗಿದ್ದು ಸದರಿ ಯೋಜನೆಗೆ ಈ ಸಾಲಿನಲ್ಲಿ ರೂ.45ಲಕ್ಷಗಳ ಆಯವ್ಯಯವನ್ನು ಬಿಡುಗಡೆಗೊಳಿಸಲಾಗಿದೆ
ಸರ್ಕಾರದ ಆದೇಶ ಸಂ:ಮಮಇ/143/PHP/2011/ಬೆಂಗಳೂರು ದಿ:22-10-2011 ರನ್ವಯ ಸ್ಪೂರ್ತಿ ಸ್ವಸಹಾಯ ಯೋಜನೆಯನ್ನು 2006-07 ನೇ ಸಾಲಿನಲ್ಲಿಅನುಷ್ಠಾನಗೊಳಿಸಲಾಗಿದ್ದ 29 ತಾಲ್ಲೂಕುಗಳಲ್ಲಿನ ಸ್ವಸಹಾಯ ಗುಂಪುಗಳನ್ನು ಭಲವರ್ದನೆಗೊಳಿಸುವುದರ ಜೊತೆಗೆ ರಾಜ್ಯದ 30 ಜಿಲ್ಲೆಗಳಲ್ಲಿನ ಇನ್ನುಳಿದ 147ತಾಲ್ಲೂಕುಗಳಲ್ಲಿ ತಲಾ 1 ರಂತೆ ವಿಕಲಚೇತನರ ಸ್ವಸಹಾಯ ಗುಂಪುಗಳನ್ನು ರಚಿಸಿ, ಅನುಷ್ಠಾನಗೊಳಿಸಲು
CBR ನೆಟ್ ವರ್ಕ ಸೌತ್ ಏಷಿಯಾ ಸಂಸ್ಥೆ ಬೆಂಗಳೂರು ಇವರ ಮುಖಾಂತರ ಗುಂಪಿನ ಸದಸ್ಯರಿಗೆ ವೃತ್ತಿಗನುಗುಣವಾಗಿ ತರಬೇತಿಯನ್ನು ನೀಡಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಲು ಅನುಕೂಲ ಮಾಡಲಾಗಿದೆ. ಗುಂಪಿನ ಸದಸ್ಯರಿಗೆ ಮಸಾಲಪುಡಿ,ಡಿಟರ್ಜೆಂಟ್, ಕ್ಯಾಲೆಂಡರ್ , ಅಡಿಕೆ ಹಾಳೆ ತಟ್ಟೆ ತಯಾರಿಕೆ, ಕೋಳಿ, ಮೊಲಸಾಕಣಿಕೆ ಮತ್ತು ಹೈನುಗಾರಿಕೆ ಮುಂತಾದ ಆದಾಯೋತ್ಪನ ಚಟುವಟಿಕೆಗಳನ್ನು ನಿರ್ವಹಿಸುವ ಬಗ್ಗೆ ತರಬೇತಿಯನ್ನು ನೀಡಲಾಗುತಿದೆ
ಈ ಯೋಜನಗೆ 2011-12ನೇ ಸಾಲಿನಲ್ಲಿ ರೂ.100ಲಕ್ಷಗಳ ಆಯವ್ಯಯವನ್ನು ಒದಗಿಸಲಾಗಿದ್ದು ಆಯವ್ಯಯದಲ್ಲಿ ಸುತ್ತು ನಿಧಿ ಪ್ರತಿ ಗುಂಪಿಗೆ ರೂ25,000ದಂತೆ ರೂ36,75,000/- ಮತ್ತು ಮಾರುಕಟ್ಟೆ ಸೌಲಭ್ಯಕ್ಕೆ ಪ್ರತಿ ಗುಂಪಿಗೆ ರೂ 5,500/- ರಂತೆ ರೂ 7,35,000/-ಗಳನ್ನು ನಿಗದಿಗೊಳಿಸಲಾಗಿದೆ.ಈ ಯೋಜನೆಯಡಿ ಉಳಿತಯವಾಗುವ ಆಯವ್ಯಯವನ್ನು ಇತರೆ ಯೋಜನೆಗಳಿಗೆ ಬಳಸಿಕೊಳ್ಳಲು ಪುನರ್ವಿನಿಯೋಗ ಮಾಡಿಕೊಳ್ಳಲಾಗಿರುತ್ತದೆ.
ಕೊನೆಯ ಮಾರ್ಪಾಟು : 1/28/2020
ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ
೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪ...
ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗು...
ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗು...