ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ಮಾರ್ಗಸೂಚಿ
ತಾಂಡಾದ ಜನರು, ತಮ್ಮ ತಮ್ಮ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಈ ಕೇಳಗಿನಂತಿವೆ.
ಸರ್ಕಾರದ ಕಂದಾಯ ಇಲಾಖೆಯ ಸುತ್ತೋಲೆ ದಿನಾಂಕ: 15.02.1993ರ ಪ್ರಕಾರ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕೇಳಗಿನ ಅಳತೆಗೋಲುಗಳನ್ನು ನಿಗಧಿಪಡಿಸಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು.
ಈ ಸುತ್ತೋಲೆಯ ಪ್ರಕಾರ ಜಿಲ್ಲಾಧಿಕಾರಿಗಳು ಕಳುಹಿಸಿದ ಪ್ರಸ್ತಾವನೆಗಳನ್ನು ಆಧರಿಸಿ ಸುಮಾರು 371 ತಾಂಡಾಗಳು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ ವಾಸ್ತವಿಕವಾಗಿ ಜಾರಿಗೆ ಬಂದಿರುವುದಿಲ್ಲ. ಆದ್ದರಿಂದ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲ್ಪಟ್ಟ ತಾಂಡಾದ ಜನರು ಸಭೆ ಸೇರಿ ಈ ಬಗ್ಗೆ ಚರ್ಚಿಸಿ ಅರ್ಜಿಯನ್ನು ಬರೆದು ಪತ್ರದೊಂದಿಗೆ ಲಗತ್ತಿಸಿರುವ ನಮೂನೆಯನ್ನು ಗ್ರಾಮಲೆಕ್ಕಿಗರಿಂದ ಭರ್ತಿಮಾಡಿಸಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು.
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವಲ್ಲಿ ಕಂಡುಬರುತ್ತಿರುವ ಅಡಚಣೆಗಳಿಗೆ ಪರಿಹಾರ ಸೂಚಿಸಲು ನೇಮಕಗೊಂಡ ಶ್ರೀ ನರಸಿಂಹಯ್ಯನವರ ನೇತ್ರುತ್ವದ ತಜ್ಞರ ಸಮಿತಿಯ ವರದಿಯನ್ನು ದಿನಾಂಕ: 28.10.2014 ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ.
ಈ ವರದಿಯಲ್ಲಿ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕೆಳಕಂಡ ಮಾನದಂಡಗಳನ್ನು ಅನುಸರಿಸಿ ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ರಚಿಸಲು ಸರ್ಕಾರಿ ಆದೇಶ ಹೋರಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ.
ಮೇಲ್ಕಾಣಿಸಿದ ಅಂಶಗಳ ಬಗ್ಗೆ ತಾಂಡಾದಲ್ಲಿ ಸಭೆ ಸೇರಿ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ಕುರಿತು ಚರ್ಚಿಸಿ ತಾಂಡಾದಲ್ಲಿ 50 ಕುಟುಂಬಗಳು ವಾಸವಾಗಿದ್ದಲ್ಲಿ ಅಥವಾ ತಾಂಡಾ ಜನಸಂಖ್ಯೆ 250 ಇದ್ದಲ್ಲಿ ಮತ್ತು ತಾಂಡಾವು ಮೂಲ ಗ್ರಾಮದಿಂದ ಸುಮಾರು ಒಂದು ಕಿ.ಮಿ ಅಂತರದಲ್ಲಿದ್ದಲ್ಲಿ ಅಂತಹ ತಾಂಡಾವು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಅರ್ಹವಾಗಿರುತ್ತದೆ. ಅಂತಹ ತಾಂಡಾವು ನಿಮಾರ್ಣವಾಗಿರುವ ಜಾಗ/ಸ್ಥಳದ ಬಗ್ಗೆ ಕೇಳಗಿನ ಅಂಶವನ್ನು ಪರಿಶೀಲಿಸಿ. ಯಾವ ವಿದಧ ಜಾಗದಲ್ಲಿ ತಾಂಡಾ ನಿರ್ಮಾಣವಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಮತ್ತು ತಾಂಡಾದ ಜಾಗದ ಸರ್ವೆ ನಂ ಮತ್ತು ಪಹಣಿ(ಆರ್ಟಿಸಿ)ಯನ್ನು ಸಂಬಂಧಿಸಿದ ಕಛೇರಿಯಿಂದ ಪಡೆದುಕೊಳ್ಳಬೇಕು.
ತಾಂಡಾ ಅಭಿವೃದ್ಧಿ ನಿಗಮಮವು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಎಲ್ಲಾ ರೀತಿಯ ಸಹಾಯ ಒದಗಿಸುತ್ತದೆ. ಆದ್ದರಿಂದ ಈ ಪತ್ರದೊಂದಿಗೆ ಲಗತ್ತಿಸಿರುವ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಗತ್ಯವಾದ ನಮೂನೆಯನ್ನು ಗ್ರಾಮಲೆಕ್ಕಿಗರಿಂದ ಭರ್ತಿಮಾಡಿಸಿ ಒಂದು ಪ್ರತಿಯನ್ನು ವ್ಯವಸ್ಥಾಪಕ ನಿದೇರ್ಶಕರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ (ವಿಳಾಸ ಕೆಳಕಾಣಿಸಿದೆ) ಇವರಿಗೆ ಮತ್ತು ಒಂದು ಪ್ರತಿಯನ್ನು ಸಂಬಂಧಿಸಿದ ತಹಸೀಲ್ದಾರರವರಿಗೆ ಸಲ್ಲಿಸಬೇಕು.
ಮೇಲ್ಕಾಣಿಸಿದ ಅಂಶಗಳ ಕಡೆಗೆ ತಾಂಡಾದ ನಾಯಕ್, ಡಾವೂ, ಕಾರಬಾರಿ ಇವರು ಗಮನಹರಿಸಿ ಜರುರು ಕ್ರಮವನ್ನು ಕೈಗೊಂಡು ತಮ್ಮ ತಾಂಡಾವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಬೇಕು.
ಕೊನೆಯ ಮಾರ್ಪಾಟು : 11/29/2019
ಸಭೆ ನಡೆಸಲು ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್...
ಒಡಂಬಡಿಕೆ ಒಪ್ಪಂದದ ಪತ್ರ
ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಬಗ್ಗೆ ಇಲ್ಲಿ ತಿಳಿಯಬಹ...
ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿ...