ಹೆರಿಗೆಯಾದ ದಿನದಿಂದ 6 ವಾರಗಳವರೆಗಿನ ಅವಧಿಯನ್ನು ಹೆರಿಗೆ ನಂತರದ ಅವಧಿ ಎಂದು ಹೇಳಲಾಗುತ್ತದೆ. ನವಜಾತ ಶಿಶು ಮತ್ತು ತಾಯಿಗೆ ಈ ಅವಧಿ ಬಹಳ ಮುಖ್ಯವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಬದಲಾವಣೆಯಾಗಿರುವ ಅಂಗಗಳಲ್ಲಿ ಎದೆ ಹೊರತುಪಡಿಸಿ ಉಳಿದ ಎಲ್ಲಾ ಅಂಗಗಳು ಸಹಜ ಸ್ಥಿತಿಗೆ ಈ ಅವಧಿಯಲ್ಲಿ ಬರುತ್ತವೆ. ಈ ಅವಧಿಯಲ್ಲಿ ತಾಯಿ ಮಗು ಕೆಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವುಗಳನ್ನು ನೀವು ಅರಿತಿರಬೇಕು. ಆದುದರಿಂದ ನೀವು ಚಿಕಿತ್ಸೆಗೆ ಮಾರ್ಗದರ್ಶನ ನೀಡಬಹುದು ಮತ್ತು ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಬಹುದು.
ಹೆರಿಗೆ ನಂತರ ಅವಧಿಯಲ್ಲಿ ಆರೈಕೆ
ಹೆರಿಗೆ ನಂತರದ ಅವಧಿಯಲ್ಲಿ ತಾಯಿಗೆ ಪೌಷ್ಠಿಕಾಂಶ ಮತ್ತು ಸಮತೋಲನ ಆಹಾರದ ಅಗತ್ಯವಿರುತ್ತದೆ. ಆ ಆಹಾರದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ಸ್ ಮತ್ತು ಪ್ರೋಟೀನ್ ಹೆಚ್ಚಾಗಿರಬೇಕು. ತಾಯಿ ಹಸಿರು ಎಲೆ ತರಕಾರಿಗಳು, ಬೇಳೆಗಳು, ಬೆಲ್ಲ ಇತ್ಯಾದಿಗಳನ್ನು ಹೆಚ್ಚು ಸೇವಿಸಬೇಕು. ಅವರು ಈ ಅವಧಿಯಲ್ಲಿ ಹೆಚ್ಚು ಹಾಲನ್ನು ಕುಡಿಯಬೇಕು.
ಆಂಗನವಾಡಿ ಕಾರ್ಯಕರ್ತೆಯರು ಅಪೌಷ್ಠಿಕಾಂಶದಿಂದ ನರಳುತ್ತಿರುವ ತಾಯಿಗೆ ಪೂರಕ ಆಹಾರ ಒದಗಿಸುತ್ತಾರೆ. ಅದನ್ನು ಬಂದು ಸ್ವೀಕರಿಸುವ ಬಗ್ಗೆ ದೃಢಪಡಿಸಿಕೊಳ್ಳಬೇಕು.
ಬಾಣಂತನದ ಅವಧಿಯಲ್ಲಿ ದಂಪತಿಗಳಿಗೆ ಉಪಯೋಗಿಸಬಹುದಾದ ಗರ್ಭನಿರೋಧಕ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು ಬಹಳ ಮುಖ್ಯವಾಗಿರುತ್ತದೆ. ಹೆರಿಗೆಯಾದ 6 ವಾರಗಳ ನಂತರ ಮಹಿಳೆ ಸಂಭೋಗದಲ್ಲಿ ಪಾಲ್ಗೊಳ್ಳಬಹುದು. ಏಕೆಂದರೆ 6 ವಾರಗಳ ನಂತರ ಹೆರಿಗೆಯಾಗುವಾಗ ಉಂಟಾದ ಗಾಯ ವಾಸಿಯಾಗಿರುತ್ತವೆ.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 1/28/2020
ನವಜಾತ ಶಿಶುವೀನ ಆರೈಕೆ ಕುರಿತು ಇಲ್ಲಿ ವಿವರಿಸಿಲಾಗಿದೆ.
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು