ಮಕ್ಕಳ ಸಾವಿಗೆ ಮತ್ತು ನೋವಿಗೆ ತೀವ್ರ ಶ್ವಾಸಕೋಶದ ಸೋಂಕು (ಎ.ಆರ್.ಐ.) ಮುಖ್ಯವಾದ ಕಾರಣವಗಿರುತ್ತದೆ. 5 ವರ್ಷದೊಳಗಿನ ಬಹಳಷ್ಟು ಮಕ್ಕಳು ತೀವ್ರ ಶ್ವಾಸಕೋಶದ ಸೋಂಕಿಗೆ ತುತ್ತಾಗುತ್ತಾರೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಕೆಲಬು ಮಕ್ಕಳಿಗೆ ನಿಮೋನಿಯಾ ರೋಗ ಬರಬಹುದು. ಅದರಿಮದ ಸಾವು ಸಂಭವಿಸಬಹುದು. ಮಗು ಈ ಕೆಳಗಿನ ಕೆಲವು ಲಕ್ಷಣಗಳು ಅಥವಾ ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತವೆ.
- ಕೆಮ್ಮು
- ಮೂಗಿನಲ್ಲಿ ಸೋರುವುದು
- ಜ್ವರ
- ಉಸಿರಾಟದಲ್ಲಿ ತೊಂದರೆ
- ಉಸಿರಾಟದ ದರ
- ಬೇಗ ಪತ್ತೆ ಹಚ್ಚಿದರೆ ಮತ್ತು ಚಿಕಿತ್ಸೆ ನೀಡಿದರೆ/ಸಕಾಲದಲ್ಲಿ ಮೇಲಿನ ಆಸ್ಪತ್ರೆಗೆ ಕಳುಹಿಸಿದ್ದಲ್ಲಿ, ತೀವ್ ನೋಬು ಮತ್ತು ಮರಣವನ್ನು ತಡೆಗಟ್ಟಲು ಸಾಧ್ಯ.
- ಕೆಮ್ಮು ಮತ್ತು ಶೀಲವಾಗಿದ್ದಾಗ ಆರೈಕೆ
- ಮಗುವನ್ನು ಬೆಚ್ಚಗಿಡಬೇಕು.
- ಹೆಚ್ಚು ಹೆಚ್ಚು ದ್ರವ ಪದಾರ್ಥ ಕೊಡಬೇಕು ಮತ್ತು ಎದೆಹಾಲು ಉಣ್ಣಿಸುವುದರನ್ನು ಮುಂದುವರಿಸಬೇಕು.
- ಮನೆಯ ಔಷಧಗಳನ್ನು ಕೊಡಿ-ಜೇನುತುಪ್ಪ, ನಿಂಬೆಹಣ್ಣಿನ ರಸ, ಶುಂಠಿ, ಖಡ ಇತ್ಯಾದಿ.
- ಮಗು ಗುಣಮುಖವಾದ ಮೇಲೆ ಹೆಚ್ಚು ಆಹಾರ ಕೊಡಬೇಕು.
- ಮಗು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಬಿಡಬೇಕು.
- ಮಕ್ಕಳಿಗೆ ಕಾಯಿಲೆಗಳನ್ನು ತಡೆಗಟ್ಟಲು ಸಕಾಲದಲ್ಲಿ ರಕ್ಷಣಾ ಚಿಕಿತ್ಸೆ ನೀಡುವುದು ಸಹ ಸಹಾಯ ಮಾಡುತ್ತದೆ.
- ಸಕಾಲದಲ್ಲಿ 'ಎ' ಅನ್ನಾಂಗ ಪಾಕ ಕೊಡುವುದು.
- ಉತ್ತಮ ಪೌಷ್ಠಿಕತೆ ಮತ್ತು ಶೀತ, ದೂಳು ಮತ್ತು ಹೊಗೆಯಿಂದ ಮಗುವನ್ನು ದೂರವಿಡುವುದರಿಂದ ನಿಮೋನಿಯಾ ತಡೆಗಟ್ಟಲು ಸಹಾಯಕವಾಗುತ್ತದೆ.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/24/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.