ಮಗುವಿಗೆ ಆಹಾರ ತಿನ್ನಿಸುವುದರ ಬಗ್ಗೆ ಸಲಹೆ ನೀಡಿ : ಕಾಯಿಲೆಯ ನಂತರ ಆಹಾರ ಕೊಡುವುದನ್ನು ಮುಂದುವರಿಸಬೇಕು ಮತ್ತು ಪದೇ ಪದೇ ಆಹಾರ ಕೊಡುವುದನ್ನು ಹೆಚ್ದಚು ಮಾಡಬೇಕು.
ಉಣ್ಣಲು ತೊಂದರೆಯಾದರೆ ಮೂಗನ್ನು ಶುಚಿಗೊಳಿಸಬೇಕು.(ಲೋಳೆ ಪದಾರ್ಥ ಮೃದುವಾಗುವುದಕ್ಕೆ ಸಹಾಯ ಮಾಡಲು ಉಪ್ಪು ನೀರು ಮತ್ತು ಒದ್ದೆಯಾದ ಜಾಲರಿ ಬಟ್ಟೆಯನ್ನು ಉಪಯೋಗಿಸಬೇಕು).
ದ್ರವಗಳನ್ನು ಹೆಚ್ಚು ಮಾಡಿ : ಹೆಚ್ಚುವರಿಯಾಗಿ ದ್ರವ ಆಹಾರವನ್ನು ಮಗುವಿಗೆ ಕುಡಿಸಬೇಕು.
ಮನೆಯ ಮದ್ದುಗಳಾದ ಜೇನುತುಪ್ಪದ ಜೊತೆ ನಿಂಬೆರಸ ಮತ್ತು ಶುಂಠಿ, ತುಳಸಿ, ಬಿಸಿನೀರು ಇತ್ಯಾದಿಗಳಿಂದ ಗಂಟಲು ನೋವು ಮತ್ತು ಕೆಮ್ಮನ್ನು ಗುಣಪಡಿಸಬಹುದು.
ಪ್ಯಾರಾಸಿಟಮಾಲ್ ನೀಡಿ ಜ್ವರ ನಿಯಂತ್ರಿಸಬೇಕು.
ಮಗುವನ್ನು ಬೆಚ್ಚಗಿಡಬೇಕು.
ಮಗುವಿನಲ್ಲಿ ಈ ಕೆಳಕಂಡ ಚಿನ್ಹೆಗಳು ಇದ್ದರೆ ಪೋಷಕರು ಮಗುವನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಅವರ ಜೊತೆಯಲ್ಲಿ ನೀವು ಹೋಗಬೇಕು.
ವೇಗದ ಉಸಿರಾಟ
ಉಸಿರಾಡಲು ತೊಂದರೆ
ಕುಡಿಯುವುದಕ್ಕೆ ಸಾಧ್ಯವಾಗದೆ ಇರುವುದು
ಸುಸ್ತು
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/24/2019
ಮಕ್ಕಳ ಸಾವಿಗೆ ಮತ್ತು ನೋವಿಗೆ ತೀವ್ರ ಶ್ವಾಸಕೋಶದ ಸೋಂಕು (ಎ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...