ಜವಾಬ್ದಾರಿಗಳು ಮತ್ತು ಕಾರ್ಯಗಳು
- ನಿಮ್ಮ ಗ್ರಾಮದಲ್ಲಿರುವ ಎಲ್ಲಾ ಗರ್ಭಿಣಿಯರನ್ನು ಗುರುತಿಸಬೇಕು.
- 12-16 ವಾರಗಳಲ್ಲಿ ದಾಖಲಾತಿಸಲು ಮತತು ಮುಂದಿನ ಮೂರು ಹೆರಿಗೆ ನಂತರದ ಪರೀಕ್ಷೆ ಮಾಡಿಸಿಕೊಳ್ಳಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಬೇಕು.
- ನಿಮ್ಮ ಗ್ರಾಮದ ಅಂಗನವಾಡಿ ಕೇಂದ್ರದಿಂದ ಕಿರಿಯ ಮಹಿಳಾ ಆರೋಗದಯ ಸಹಾಯಕಿ ದೊರೆಯುವ ಸಮಯ ದಿನಾಂಕವನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಎಲ್ಲಾ ಗರ್ಭಿಣಿಯರಿಗೆ ತಿಳಿಸಬೇಕು.
- ಸಮತೋಲನ ಆಹಾರದ ಬಗ್ಗೆ ಗರ್ಭಿಣಿಗೆ ಸಲಹೆ ನೀಡಬೇಕು. ಹಾಗೂ ಉತ್ತಮ ಪೋಷಣೆ ಇಲ್ಲದ ಗರ್ಭಿಣಿಯರು ಅಂಗನವಾಡಿ ಕೇಂದ್ರದಿಂದ ಪೂರಕ ಆಹಾರ ಸ್ವೀಕರಿಸುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳುವುದು.
- ಸೇವೆಯಿಂದ ವಂಚಿತರಾಗಿರುವ ಗರ್ಭಿಣಿಯರಿಗೆ ಆರೈಕೆ ಒದಗಿಸುವುದು ದಾರಿಗೆ ತರುವುದು. ಅದರಲ್ಲು ವಿಶೇಷವಾಗಿ ದೂರದ ಹಳ್ಳಿಗಳಲ್ಲಿರುವ ಕಡುಬಡವರು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಇತರೆ ವಲಸೆ ಬಂದಿರುವ ಸಮೂಹದಲ್ಲಿ ಮತ್ತು ಅವರು ಆರೋಗ್ಯ ಸೇವೆ ಪಡೆದುಕೊಳ್ಳಲು ಸಹಾಯ ಮಾಡಬೇಕು.
- ಅರ್ಹ ಗರ್ಭಿಣಿ ಜನನಿ ಸುರಕ್ಷಾ ಯೋಜನೆ ಕಾರ್ಯಕ್ರಮದಡಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದು.
ನೀವು ಸಹ ತಿಳಿದುಕೊಂಡಿರಬೇಕು.
- ರಕ್ತದ ಬ್ಯಾಂಕ್, ಆಪರೇಷನ್ ಥಿಯೇಟರ್, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು ಇರುವ ಆಸ್ಪತ್ರೆ/ಹತ್ತಿರದ ಎಫ್.ಆರ್.ಯು ಇರುವ ಸ್ಥಳವನ್ನು ತಿಳಿದುಕೊಂಡಿರಬೇಕು.
- ತುರ್ತು ಸಮಯದಲ್ಲಿ ಆರೈಕೆ ಪಡೆಯುವುದಕ್ಕೆ ತಲುಪಲು ಸಾರಿಗೆ ವ್ಯವಸ್ಥೆಯ ಅನುಕೂಲವನ್ನು ತಿಳಿದುಕೊಂಡಿರಬೇಕು.
- ಖಾಸಗಿ ಆಸ್ಪತ್ರೆಯಾಗಿದ್ದಲ್ಲಿ. ಆ ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗ, ರಕ್ತ ನೀಡುವುದಕ್ಕೆ ಮತ್ತು ಆಸ್ಪತ್ರೆಯ ವಾಸ್ತವ್ಯತೆಗೆ ತಗಲಬಹುದಾದ ವೆಚ್ಚÀದ ಬಗ್ಗೆ ತಿಳಿದುಕೊಂಡಿರಬೇಕು.
ಒಂದುವೇಳೆ ಇದು ಎರಡನೇ ಗರ್ಭಾವಸ್ಥೆಯಾಗಿದ್ದರೆ ದಂಪತಿಗಳಿಗೆ ಹೆಣ್ಣು ಮಗುವಿದ್ದರೆ ಕುಟುಂಬ ಮತ್ತೊಂದು ಹೆಣ್ಣು ಮಗುವನ್ನು ತಿರಸ್ಕರಿಸಬಹುದು. ಆದುದರಿಂದ ಆಶಾ ಈ ಬಗ್ಗೆ ಜಾಗೃತಳಾಗಿರಬೇಕು. ತದನುಸಾರವಾಗಿ ಸಮಾಲೋಚಿಸಬೇಕು.
ಆಶಾಳಾಗಿರುವ ನೀವು ಮಹಿಳೆಯರ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ, ಹೆರಿಗೆ ನಂತರ ಮತ್ತು ಬಾಣಂತನದ ಅವಧಿಯಲ್ಲಿ ಬರುವ ಅಪಾಯಗಳ ಬಗ್ಗೆ ಗರ್ಭಿಣಿಗೆ ಹಾಗೂ ಅವರ ಕುಟುಂಬದವರಿಗೆ ಸಲಹೆ ನೀಡಬೇಕು. ಗರ್ಭಿಣಿ ಈ ಕೆಳಗಿನ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ಅಂತಹ ಗರ್ಭಿಣಿಯನ್ನು ನೇರವಾಗಿ ಹತ್ತಿರದ ಎಫ್.ಆರ್.ಯುಗೆ ಕರೆದುಕೊಂಡು ಹೋಗಬೇಕು.
- ಗರ್ಭಾವಸ್ಥೆಯ ಅವಧಿಯಲ್ಲಿ ಯೋನಿಸ್ರಾವವಿದ್ದರೆ.
- ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆ ನಂಗರ ಯೋನಿಸ್ರಾವ ತುಂಬ ಇದ್ದಾರೆ. ಗರ್ಭಿಣಿ ಬಹಳ ನಿಶಕ್ತಳಾಗಿದ್ದರೆ ಮತ್ತು ಪ್ರಜ್ಞೆ ತಪ್ಪಿದ್ದರೆ.
- ತಲೆನೋವು ಜಾಸ್ತಿಯಾಗಿದ್ದರೆ/ದೃಷ್ಠಿ ಮಸುಕಾಗಿದ್ದರೆ.
- ಪ್ರಜ್ಞೆ ತಪ್ಪಿದರೆ/ಜಾಗೃತಿ ಹೋದರೆ.
- ಹೆರಿಗೆ ನೋವು 12 ಗಂಟೆಗಳ ನಂತರವು ಮುಂದುವರಿದರೆ.
- 8 ತಿಂಗಳ ಮೊದಲೆ ಹೆರಿಗೆ ನೋವು ಕಾಣಿಸಿಕೊಂಡರೆ ಅಥವಾ 32-36 ವಾರಗಳ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಂಡರೆ.
- ನೀರಿನ ಚೀಲ ಅಕಾಲಿಕವಾಗಿ ಬಿರುಕು ಬಿಡುವುದು ಅಥವಾ ಗರ್ಭಾಶಯ, ಪೊರೆಯಿಂದ ನೀರು ಸೋರುವುದು.
- ಹೆರಿಗೆಯಾದ 30 ನಿಮಿಷಗಳೊಳಗೆ ಹೊಕ್ಕಳ ಬಳ್ಳಿ ಹೊರಗೆ ಬರದೆ ಹೋದರೆ.
- ಹೊಟ್ಟೆಯೊಳಗೆ ಮಗು ಒದೆಯುವುದನ್ನು ನಿಲ್ಲಿಸಿದರೆ.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/24/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.