ಪ್ರಶ್ನೆಗಳು: | ಉತ್ತರಗಳು |
---|---|
೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು? ೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು? ೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು? ೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ? ೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ? ೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು? ೭. ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು? ೮. ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು? ೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ? ೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ? ೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ ವ್ಯಕ್ತಿ ಯಾರು? ೧೨. ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು? ೧೩. ಭಾರತದಲ್ಲಿ ರಚನೆಗೊಂಡ ೨೮ನೇ ರಾಜ್ಯ ಯಾವುದು? ೧೪. ಬೆನ್ನಹೀನ್ ಯಾವ ದೇಶದವರು? ೧೫. ಪ್ರಥಮ ಭಾರತೀಯ ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು? ೧೬. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು? ೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ ರಾಜ್ಯಕ್ಕೆ ಸೇರಿದವರು? ೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ? ೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ ಎಂದರೇನು? ೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಬ್ರಿಟನ್ನಿನ ಪ್ರಧಾನಿ ಯಾರು? ೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು? ೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು? ೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರೇನು? ೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ? ೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ ಪ್ರಸಿದ್ಧನಾದ ದೊರೆ ಯಾರು? ೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು? ೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು? ೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ ನದಿಯ ದಂಡೆಯ ಮೇಲಿದೆ? ೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿ ರೇಖೆಯಾಗಿದೆ? |
೧. ಪ್ರೊ.ಜಿ.ವೆಂಕಟಸುಬ್ಬಯ್ಯ ೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ೩. ಉತ್ತರಕನ್ನಡ ೪. ಮಡಿವಾಳ ಮಾಚಯ್ಯ ೫. ಬಿಹಾರ ೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್ ೭. ಡಾ||ಅನುಪಮಾ ೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ ೯. ಜಿನೀವಾ ೧೦. ಉತ್ತರ ಕನ್ನಡ ೧೧. ಟಿಪ್ಪು ಸುಲ್ತಾನ್ ೧೨. ರಷ್ಯಾ ೧೩. ಜಾರ್ಖಂಡ್ ೧೪. ಯು.ಎಸ್.ಎ ೧೫. ಇಳಾ ಮಜುಮದಾರ್ ೧೬. ತಿಟ್ಟೆ ಅಯ್ಯಂಗಾರ್ ೧೭. ಕೇರಳ ೧೮. ಇಂಗ್ಲೆಂಡ್ ೧೯. ಮುಕ್ತಿ ಹೊಂದುವುದು ೨೦. ವಿನ್ಸ್ಟನ್ ಚರ್ಚಿಲ್ ೨೧. ಉತ್ತರಕನ್ನಡ ೨೨. ೧೯೭೦ ೨೩. ಪಂಪಸಾಗರ ೨೪. ನವರತ್ನರಾಂ ೨೫. ೬ನೇ ವಿಕ್ರಮಾದಿತ್ಯ ೨೬. ಮಹಾರಾಷ್ಟ್ರ ೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್ ೨೮. ತುಂಗಭದ್ರಾ ೨೯. ರಷ್ಯಾ ಪೊಲೇಂಡ್ |
ಪ್ರಶ್ನೆಗಳು | ಉತ್ತರಗಳು |
---|---|
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು? ೨. ನ್ಯಾಕೋ (NACO)ನ ವಿಸ್ತೃತ ರೂಪವೇನು? ೩. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು? ೪. ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ? ೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೬. ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ? ೭. ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು? ೮. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು? ೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? ೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು? ೧೧. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ? ೧೨. ೨೦೦೭ರಲ್ಲಿ ವಿಶ್ವಗೋ ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು? ೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು? ೧೪. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ? ೧೫. ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ ಯಾವುದು? ೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು? ೧೭. ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೧೮. ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು? ೧೯. ರಾಜ್ಯಗಳ ಭಾಷಾವರು ಪುನರ್ವಿಂಗಡೆಯಾದ ವರ್ಷ ಯಾವುದು? ೨೦. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು? ೨೧. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು? ೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು? ೨೩. ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು? ೨೪. ಚಿನ್ನ ಇದು ಯಾರ ಕಾವ್ಯನಾಮ? ೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಗ್ಯಾ ಬಾಳ್ಯಾ ನಾಟಕದ ಕರ್ತೃ ಯಾರು? ೨೬. ಪೊಚ್ಂಪಾಡೆ ನೀರಾವರಿ ಮತ್ತು ವಿವಿದೊದ್ದೇಶ ಯೋಜನೆ ಯಾವ ನದಿಗೆ ಸಂಬಂಧಿಸಿದೆ? ೨೭. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು? ೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು? ೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು? |
೧. ನಾಕು ತಂತಿ ೨. ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗಾನೈಜೇಶನ್ ೩. ರಾಡಾರ್ ಗನ್ ೪. ಹೆಂಡದ ಮಾರಯ್ಯ ೫. ಡಾ|| ಎಸ್.ರಾಮೇಗೌಡ ೬. ಬಿಹಾರ ೭. ಕ್ಲಾಸ್ಪೀಡಿಯಂ ಟೆಟನೈ ೮. ಮೊಗಲ ಉದ್ಯಾನ್ ೯. ಕೃಷ್ಣಾ ೧೦. ವಿಟಮಿನ್ ಸಿ ೧೧. ಬೆಂಗಳೂರು ೧೨. ಚಂದ್ರಾಪುರ ಮಠ ೧೩. ರಾಮ ಗಾಣಿಗ ೧೪. ಅಮೇರಿಕಾ ೧೫. ಜಲಜನಕ ಸಲ್ಫೈಡ್ ೧೬. ದಕ್ಷಿಣ ಕನ್ನಡ ೧೭. ಹಾವೇರಿ ೧೮. ಬೆಳಗಾವಿ ೧೯. ೧೯೫೬ ೨೦. ಯುರೇನಸ್ ೨೧. ಇಂಟಲಿಜೆನ್ಸ್ ಬ್ಯೂರೋ ೨೨. ನೈಟ್ರೋಜನ್ ೨೩. ಗದಗ (ಕಣಗಿನಹಾಳ) ೨೪. ಚನ್ನಕ್ಕ ಎಲಿಗಾರ ೨೫. ಡಾ|| ಚಂದ್ರಶೇಖರ ಕಂಬಾರ ೨೬. ಗೋದಾವರಿ ೨೭. ಮದನ್ ಮೋಹನ್ ಮಾಳವೀಯ ೨೮. ಕುದುರೆ ಸವಾರಿ ೨೯. ಇಂಗಾಲದ ಡೈ ಆಕ್ಸೈಡ್ |
ಪ್ರಶ್ನೆಗಳು | ಉತ್ತರಗಳು |
---|---|
೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ? ೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ? ೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು? ೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ? ೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ? ೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು? ೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು? ೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು? ೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು? ೧೦. ರಸಿಕರಂಗ ಇದು ಯಾರ ಕಾವ್ಯ ನಾಮ? ೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ? ೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು? ೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು? ೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ? ೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು? ೧೬. ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು? ೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ? ೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? ೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು? ೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? ೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು? ೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ? ೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ? ೨೪. ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು? ೨೫. ೨೦೧೨ರ ಲಂಡನ್ ಒಲಂಪಿಕ್ಸ್ನಲ್ಲಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು? ೨೬. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು? ೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು? ೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ? ೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು? |
೧. ಕೋಲ್ಕತ್ತಾ ೨. ಕುಟುಂಬ ಯೋಜನೆ ೩. ಡಾ|| ರಾಜೇಂದ್ರಪ್ರಸಾದ್ ೪. ಮಹಾರಾಷ್ಟ್ರ ೫. ಅಸ್ಸಾಂ ೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ ೩೬೯ಕಿ.ಮೀ ಕೆಳಗೆ) ೭. ವಿಶ್ವಗುರು ಬಸವೇಶ್ವರ ೮. ರಷ್ಯಾದ ಸ್ಪುಟ್ನಿಕ್ ೯. ಬಾಳೆಹಣ್ಣು ೧೦. ರಂ.ಶ್ರೀ.ಮುಗಳಿ ೧೧. ಕ್ರಾಂತಿ ಕಲ್ಯಾಣ ೧೨. ಈಥಾನಾಲ್ ೧೩. ಸಿಕಂದರಬಾದ್ ೧೪. ಅಲ್ಗೆ ಸಸ್ಯಗಳ ಕುರಿತು ೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್ ಇನ್ಸಿಟಿಟ್ಯೂಟ್) ೧೬. ಶ್ರೀ.ಸಿ.ರಾಜಗೋಪಾಲಚಾರಿ ೧೭. ೧೨೦ ಬಾರಿ ೧೮. ಮಧ್ಯಪ್ರದೇಶ ೧೯. ನಾಗ್ಪುರ್ ೨೦. ಎಚ್.ವಿ.ನಂಜುಂಡಯ್ಯ ೨೧. ಭಾರತ ೨೨. ಆಸ್ಸಾಂ ೨೩. ತಮಿಳುನಾಡು ೨೪. ಕೆಫೀನ್ ೨೫. ಅಮೇರಿಕಾ ೨೬. ಕ್ರಿಕೆಟ್ ೨೭. ಏಳು ೨೮. ಗುಜರಾತ್ ೨೯. ಜಾರ್ಜ್ ಈಸ್ಟಮನ್ (ಅಮೇರಿಕಾ) |
ಪ್ರಶ್ನೆಗಳು | ಉತ್ತರಗಳು |
---|---|
೧. ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು? ೨. ಚದುರಂಗ ಇದು ಯಾರ ಕಾವ್ಯ ನಾಮ? ೩. ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೪. ಹೆಲಿಕ್ಟಾಪ್ಟರ್ನ ಸಂಶೋಧಕರು ಯಾರು? ೫. ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು? ೬. ’ಸೆಕೆಂಡ್’ ಗ್ರಂಥದ ಕರ್ತೃ ಯಾರು? ೭. ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು? ೮. ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂ ಹೆಸರಾದವರು ಯಾರು? ೯. ಗರಿಬಿ ಹಠಾವೋ ಎಂಬ ಘೋಷಣೆಯು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ? ೧೦. ಗ್ರಾಮೊಫೋನ್ ಕಂಡು ಹಿಡಿದವರು ಯಾರು? ೧೧. ಯಾವ ದೇಶವನ್ನು ನೈದಿಲೆಗಳ ನಾಡು ಎಂದು ಕರೆಯುತ್ತಾರೆ? ೧೨. ೧೯೯೪ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ? ೧೩. ಎಲ್ಲರಂತವನಲ್ಲ ನನ್ನ ಗಂಡ ಕಾವ್ಯದ ಕರ್ತೃ ಯಾರು? ೧೪. ಬಿ.ಡಿ.ಎ. ನ ವಿಸ್ತೃತ ರೂಪವೇನು? ೧೫. ಟಾವೋ ಧರ್ಮದ ಸಂಸ್ಥಾಪಕ ಯಾರು? ೧೬. ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು? ೧೭. ಹಾಕಿ ಎಂಬ ರಾಷ್ಟ್ರೀಯ ಆಟ ಪ್ರಾರಂಭವಾದ ವರ್ಷ ಯಾವುದು? ೧೮. ಕಾಗದವನ್ನು ಮೊಟ್ಟಮೊದಲ ಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು? ೧೯. ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ? ೨೦. ಬಾಯಲ್ಲಿ ಜೊಲ್ಲು ರಸ ಉತ್ಪತ್ತಿ ಮಾಡುವ ಗ್ರಂಥಿ ಯಾವುದು? ೨೧. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಿಲಾದ ಶಾಸನ ಯಾವುದು? ೨೨. ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದ ವರ್ಷ ಯಾವುದು? ೨೩. ೨೦೦೦ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದ ಬೆಂಗಳೂರಿನ ಸುಂದರಿ ಯಾರು? ೨೪. ೧೯೩೦ರಲ್ಲಿ ನಡೆದ ಮೊದಲ ವಿಶ್ವಕಪ್ ಫುಟ್ಬಾಲ್ನ ವಿಜೇತರು ಯಾರು? ೨೫. ೨೦೦೭ರಲ್ಲಿ ಮಾನವ ಜಿತ್ ಸಿಂಗ್ ಸಿಂಧು ಅವರ ಯಾವ ಕ್ರೀಡೆಗೆ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆಯಿತು? ೨೬. ೨೦೧೪ರ ಕಾಮನವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು? ೨೭. ಕೀಟಗಳ ಬಗೆಗಿನ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ? ೨೮. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕ ಸಂಘಟನೆ ಸ್ಥಾಪನೆಯಾ ವರ್ಷ ಯಾವುದು? ೨೯. ಭಾರತದಲ್ಲಿ ಯಾವ ವರ್ಷ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಿತು? |
೧. ಮೇಡಂ ಕ್ಯೂರಿ ೨. ಸುಬ್ರಹ್ಮಣ್ಯ ರಾಜೇ ಅರಸು ೩. ದ್ಯಾವಾ ಪೃಥ್ವಿ ೪. ಇ.ಒಹ್ನಿಚೆನ್ (ಪ್ರಾನ್ಸ್) ೫. ಹೈಡ್ರೋಕ್ಲೋರಿಕ್ ಆಮ್ಲ ೬. ಚರ್ಚಿಲ್ ೭. ವೋಲ್ವಾ ೮. ಕಿ.ವ.ಜಗನ್ನಾಥನ್ ೯. ೫ನೇಯ ೧೦. ಥಾಮಸ್ – ಆಲ್ವ – ಎಡಿಸನ್ ೧೧. ಕೆನಡಾ ೧೨. ವಿಚಾರ ಪ್ರಪಂಚ ೧೩. ಎಚ್.ಎಂ.ಚೆನ್ನಯ್ಯಾ ೧೪. ಬೆಂಗಳೂರು ಡೆವಲಪಮೆಂಟ್ ಅಥಾರಿಟಿ ೧೫. ಲಾವೋ ತ್ಸೊ ೧೬. ಪೆಲಿಸ್ ಡೊಮೆಸ್ಟಿಕ್ ೧೭. ೧೮೭೫ ೧೮. ಚೀನಾ ೧೯. ಸರಿಸೃಪಗಳು ೨೦. ಲಾಲಾಗ್ರಂಥಿ ೨೧. ಜೀತ ವಿಮುಕ್ತ ಶಾಸನ ೨೨. ೧೮೯೩ ೨೩. ಲಾರಾದತ್ತಾ ೨೪. ಉರುಗ್ವೆ ೨೫. ಶೂಟಿರ್ ೨೬. ಗ್ಲಾಸ್ಗೋ ೨೭. ಎಂಟಮೊಲಜಿ ೨೮. ೧೯೨೦ ೨೯. ೧೯೫೨ |
ಮೂಲ : ಲಯನ್ ಡಿ.ವಿ.ಜಿ.
ಕೊನೆಯ ಮಾರ್ಪಾಟು : 6/13/2020