ಆಧುನಿಕ ಬೇಸಾಯದ ಪ್ಯಾಕೇಜಿನ ಅಳವಡಿಕೆ ಹಾಗೂ ಕೃಷಿ ಪದ್ಧತಿ ಹೆಚ್ಚಿದಂತೆ, ದ್ವಿತೀಯ ಹಾಗೂ ಲಘು ಪೋಷಕಾಂಶಗಳ ಕೊರತೆಯು ಅಧಿಕವಾಗಿ, ಬೆಳೆಯ ಉತ್ಪಾದನೆ ಕುಂಠಿತವಾಗುವುದು ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಲಘು ಪೋಷಕಾಂಶಗಳ ಕೊರತೆ ಉಂಟಾಗುತ್ತಿದ್ದು ದ್ವಿತೀಯ ಹಾಗೂ ಲಘು ಪೋಷಕಾಂಶಗಳ ಕೊರತೆಯ ಸಮಸ್ಯೆಯ ಬಗ್ಗೆ ಸಾಕಷ್ಟು ಗಮನ ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಾರಾಟವಾಗುವ ಕೆಲವು ದ್ವಿತೀಯ ಹಾಗೂ ಲಘು ಪೋಷಕಾಂಶ ಗೊಬ್ಬರಗಳು ಈ ಕೆಳಕಂಡಂತಿರುತ್ತದೆ.
ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಗಂಧಕಗಳು ಈ ಮೂರು ಅಗತ್ಯ ಪೋಷಕಾಂಶಗಳನ್ನು ದ್ವಿತೀಯ ಪೋಷಕಾಂಶಗಳೆಂದು ಕರೆಯಲಾಗುತ್ತದೆ. ಏಕೆಂದರೆ ವಾಣಿಜ್ಯ ಗೊಬ್ಬರಗಳ ತಯಾರಿಕೆಯಲ್ಲಿ, ಈ ಪೋಷಕಾಂಶಗಳ ಉತ್ಪಾದನೆಯ ಪ್ರಕ್ರಿಯೆಯಲ್ಲಿ ದ್ವಿತೀಯ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಅಂದರೆ, ಈ ದ್ವಿತೀಯ ಪೋಷಕಾಂಶಗಳು ಪ್ರಮುಖ ಪೋಷಕಾಂಶಗಳೆಂದು ಪರಿಗಣಿಸುವುದು ಅವಶ್ಯಕ. ದ್ವಿತೀಯ ಪೋಷಕಾಂಶಗಳನ್ನು ಕೆಲವು ವಾಣಿಜ್ಯ ಗೊಬ್ಬರಗಳ ಮೂಲಕ ಮಣ್ಣಿಗೆ ಸೇರಿಸಲಾಗುತ್ತದೆ.
ರಸಗೊಬ್ಬರ / ಮಣ್ಣಿನ ಸುಧಾರಕ |
ಕ್ಯಾಲ್ಸಿಯಂ ಅಂಶ (ಶೇ.) |
ಕ್ಯಾಲ್ಸಿಯಂ ನೈಟ್ರೇಟ್ |
19.5 |
ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ |
8.1 |
ಸಿಂಗಲ್ ಸೂಪರ್ ಫಾಸ್ಫೇಟ್ |
19.5 |
ಟ್ರಿಪಲ್ ಸೂಪರ್ ಫಾಸ್ಫೇಟ್ |
14.3 |
ಬೋನ್‍ಮೀಲ್ |
23.0 |
ಸುಣ್ಣದ ಕಲ್ಲು |
32.3 |
ಕ್ಯಾಲ್ಸಿಯಂ ಸಲ್ಫೇಟ್ (ಜಿಪ್ಸಂ) |
29.೨ |
ಕ್ಯಾಲ್ಸಿಯಂಅನ್ನು ಪರೋಕ್ಷವಾಗಿ ರಸಗೊಬ್ಬರಗಳ ಮೂಲಕ ಹಾಗೂ ಸುಧಾರಕಗಳ ಮೂಲಕ ಮಣ್ಣಿಗೆ ಸೇರಿಸಲಾಗುತ್ತದೆ. ಸಾಮಾನ್ಯವಾಗಿ ಬಳಸುವ ಕ್ಯಾಲ್ಸಿಯಂ ರಸಗೊಬ್ಬರ ಶೇಕಡಾವಾರು ಅಂದಾಜನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ / ಮಣ್ಣಿನ ಸುಧಾರಕ |
ಮೆಗ್ನೀಶಿಯಂ ಅಂಶ (ಶೇ.) |
ಮೆಗ್ನೀಶಿಯಂ ಸಲ್ಫೇಟ್ |
9.6 |
ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ |
4.5 |
ಕ್ಯಾಲ್ಸಿಯಂ ನೈಟ್ರೇಟ್ |
1.5 |
ಸಿಂಗಲ್ ಸೂಪರ್ ಫಾಸ್ಫೇಟ್ |
0.3 |
ಪೊಟ್ಯಾಷಿಯಂ ಸಲ್ಫೇಟ್ |
0.6 |
ಡೊಲೊಮೈಟ್ ಸುಣ್ಣದ ಕಲ್ಲು |
0.6 |
ಕ್ಯಾಲ್ಸಿಯಂ ನಂತರ ಮೆಗ್ನೀಶಿಯಂನ್ನು ಪರೋಕ್ಷವಾಗಿ ಹೊಂದಿರುವ ವಸ್ತುಗಳನ್ನು ವಾಣಿಜ್ಯ ಗೊಬ್ಬರಗಳ ಮೂಲಕ ಅಥವಾ ಮಣ್ಣಿಗೆ ಸುಧಾರಕವಾಗಿ ಬಳಸಲಾಗುತ್ತದೆ. ಈ ಕೆಳಗಿನ ಕೆಲವು ವಸ್ತುಗಳು ಮೆಗ್ನೀಶಿಯಂನ್ನು ಹೊಂದಿರುತ್ತದೆ.
ಇದನ್ನು ಎಪ್ಸಂ ಉಪ್ಪೆಂದು ಕರೆಯುತ್ತಾರೆ. ನೀರಿನಲ್ಲಿ ಕರಗುವ ಕಹಿ ಪರೀಕ್ಷೆ ಸಂಯುಕ್ತ ವಸ್ತು. ಇದು ಬಿಳಿ ಅಥವಾ ಬಣ್ಣರಹಿತ ಸೂಜಿ ಆಕಾರದ ಹರಳುಗಳಲ್ಲಿ ಕಂಡುಬರಬಹುದು. ಇದನ್ನು ಸಾಮಾನ್ಯವಾಗಿ ಗೊಬ್ಬರದ ಮಿಶ್ರಣದ ಮೂಲಕ ಅಥವಾ ಎಲೆಗಳು ಸಿಂಪರಣೆಯ ಮೂಲಕ ಮಣ್ಣಿಗೆ ಮೆಗ್ನೀಶೀಯಂನ್ನು ಪೂರೈಕೆ ಮಾಡುತ್ತದೆ.
ಗಂಧಕವನ್ನು ಸಸ್ಯ ಬೆಳವಣಿಗೆಯ ನಾಲ್ಕನೆಯ ಪ್ರಮುಖ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ. ಸಾರಜನಕ, ರಂಜಕ, ಪೊಟ್ಯಾಷಿಯಂ ಮತ್ತು ಮೆಗ್ನೀಶಿಯಂ
ರಸಗೊಬ್ಬರ / ಮಣ್ಣಿನ ಸುಧಾರಕ |
ಕಬ್ಬಿಣ ಅಂಶ (ಶೇ.) |
ಮೋನಿಯಂ ಸಲ್ಫೇಟ್ |
24.0 |
ಅಮೋನಿಯಂ ಸಲ್ಫೇಟ್ ನೈಟ್ರೇಟ್ |
15.0 |
ಸೂಫರ್ ಫಾಸ್ಫೇಟ್ |
12.0 |
ಅಮೋನಿಯಂ ಫಾಸ್ಫೇಟ್ ಸಲ್ಫೇಟ್ |
15.0 |
ಪೊಟ್ಯಾಷಿಯಂ ಸಲ್ಫೇಟ್ |
18.0 |
ಮೆಗ್ನೀಶಿಯಂ ಸಲ್ಫೇಟ್ |
13.0 |
ಕ್ಯಾಲ್ಸಿಯಂ ಸಲ್ಫೇಟ್ |
13-18 |
ನಂತರ ಗಂಧಕದ ಪ್ರಮಾಣವು ಸಸ್ಯಗಳಿಗೆ ಹೆಚ್ಚಾಗಿ ಅಗತ್ಯವಿದೆ. ಆದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಗಂಧಕ ಬಳಕೆಯು ಬಹಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ. ಏಕೆಂದರೆ, ಗಂಧಕ ಕೊರತೆಯು ದೇಶದಲ್ಲೆಲ್ಲಾ ವ್ಯಾಪಕವಾಗಿ ಹರಡಿವೆ. 60 ರಾಸಾಯನಿಕ ಗೊಬ್ಬರಗಳು ಗಂಧಕವನ್ನು ಹೊಂದಿರುತ್ತದೆ. ಆದರೆ ರಾಸಾಯನಿಕ ಗೊಬ್ಬರ ಮತ್ತು ಮಣ್ಣಿನ ಸುಧಾರಕಗಳಲ್ಲಿ ಗಂಧಕ ಮೂಲಗಳನ್ನು ಬಳಸಲಾಗುತ್ತದೆ. ಈ ಕೆಳಗೆ ಬಳಸುವ ಸುಧಾರಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ನೀಡಲಾಗಿದೆ.
ಇತರೆ ಗಂಧಕವನ್ನು ಹೊಂದಿರುವ ರಾಸಾಯನಿಕ ಗೊಬ್ಬರದ ವಸ್ತುಗಳಾದ ಸತುವಿನ ಸಲ್ಫೇಟ್ (ಶೇ. 11-18 ರಷ್ಟು ಗಂಧಕ), ತಾಮ್ರದ ಸಲ್ಫೇಟ್ (ಶೇ. 13 ರಷ್ಟು ಗಂಧಕ), ಮ್ಯಾಂಗನಿಸ್ ಸಲ್ಫೇಟ್ (ಶೇ. 14 ರಿಂದ 17 ರಷ್ಟು ಗಂಧಕ) ಗಳನ್ನು ಗಂಧಕ ಕೊರತೆಯನ್ನು ಸರಿಕಪಡಿಸಲು ಬಳಸಲಾಗುವುದಿಲ್ಲ.
ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 6/3/2020
ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ...
ರೈತರು ಬೆಳೆಗಳಿಗೆ ಗೊಬ್ಬರ ಹಾಕುವಾಗ ತಿಳಿಯಬೇಕಾದ ಅಂಶಗಳು
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್...