অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಏನ್.ಬಿ.ಎಂ.ಎಂ.ಪಿ

ಈ ಕಾರ್ಯಕ್ರಮವನ್ನು 1981-82ರಲ್ಲಿ ರಾಷ್ಟ್ರೀಯ ಜೈವಿಕ ಅನಿಲ ಅಭಿವೃದ್ಧಿ ಯೋಜನೆಯ ರೂಪದಲ್ಲಿ ಆರಂಭಿಸಲಾಯಿತು

ಉದ್ದೇಶಗಳು

ಕೌಟುಂಬಿಕ ಮಾದರಿಯ ಜೈವಿಕ ಅನಿಲ ಸ್ಥಾವರಗಳ ಮೂಲಕ ಗ್ರಾಮೀಣ ಮನೆಗಳಿಗೆ ಅಡುಗೆಯ ಇಂಧನ ಮತ್ತು ಜೈವಿಕ ಗೊಬ್ಬರವನ್ನು ಪೂರೈಸುವುದು. ಗ್ರಾಮೀಣ ಮಹಿಳೆಯರ ಪರಿಶ್ರಮವನ್ನು ಕಡಿಮೆ ಮಾಡುವುದು, ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಸಾಮಾಜಿಕವಾಗಿ ಬದಲಾವಣೆಗಳನ್ನು ತರುವುದು. ಜೈವಿಕ ಅನಿಲ ಸ್ಥಾವರಗಳನ್ನು ಶೌಚಾಲಯಗಳಿಗೆ ಸಂಪರ್ಕಿಸುವ ಮೂಲಕ ಗ್ರಾಮದ ನೈರ್ಮಲ್ಯವನ್ನು ಹೆಚ್ಚಿಸುವುದು.

ಘಟಕಗಳು

ಸ್ಥಳೀಯವಾಗಿ ವೃದ್ಧಿಪಡಿಸಿದಂಥ ಜೈವಿಕ ಅನಿಲ ಸ್ಥಾವರಗಳನ್ನು ಪ್ರವರ್ತಿಸುವುದು ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ರಾಜ್ಯದಲ್ಲಿ ನಿಗದಿತ ನೋಡಲ್ ಏಜೆನ್ಸಿಗಳು ಇವೆ. ಅವಲ್ಲದೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಮುಂಬಯಿ, ರಾಷ್ಟ್ರೀಯ ಹೈನು ಉದ್ದಿಮೆ ಅಭಿವೃದ್ಧಿ ಮಂಡಲಿ, ಆನಂದ್ (ಗುಜರಾತ್), ಹಾಗೂ ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದ ಸರಕಾರೇತರ ಸಂಸ್ಥೆಗಳು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ತೊಡಗಿವೆ. ಈ ಯೋಜನೆಯು ಬಳಕೆದಾರರಿಗೆ ಆರ್ಥಿಕ ಪ್ರೇರಕಗಳನ್ನೂ, ಕೇಂದ್ರ ಸರಕಾರದ ಸಹಾಯಧನವನ್ನು, ಉದ್ದಿಮೆದಾರರಿಗೆ ತಿರುಪುಕೀಲಿ ಯೋಜನೆಯ ಶುಲ್ಕವನ್ನೂ, ರಾಜ್ಯ ನೋಡಲ್ ಏಜೆನ್ಸಿ(ಸಂಸ್ಥೆ)ಗೆ ಸೇವಾ ಶುಲ್ಕವನ್ನೂ, ತರಬೇತಿ ಮತ್ತು ಪ್ರಚಾರಕ್ಕೆ ಬೆಂಬಲವನ್ನೂ ಕೊಡುತ್ತದೆ. ಹಲವು ವಿಧದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಲ್ಲಿ ಆಸ್ಪದವಿದೆ. ಒಂಭತ್ತು ಪ್ರಮುಖ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ ಅನಿಲ ಅಭಿವೃದ್ಧಿ ಹಾಗೂ ತರಬೇತಿ ಕೇಂದ್ರಗಳು, ರಾಜ್ಯ ನೋಡಲ್ ಇಲಾಖೆ ಹಾಗೂ ಏಜೆನ್ಸಿಗಳಿಗೆ ತಾಂತ್ರಿಕ ಹಾಗೂ ತರಬೇತಿಯ ಬೆಂಬಲ ನೀಡುತ್ತಿವೆ. ವ್ಯಾಪಾರದ ಮತ್ತು ಸಹಕಾರೀ ಬ್ಯಾಂಕುಗಳು ಕೃಷಿಪ್ರಧಾನ ಸ್ಥಳಗಳಲ್ಲಿ ಜೈವಿಕ ಅನಿಲ ಸ್ಥಾವರಗಳನ್ನು ರಚಿಸಲು ಸಾಲವನ್ನೂ ನೀಡುತ್ತವೆ. ನಬಾರ್ಡ್  ಸಹ ಬ್ಯಾಂಕುಗಳಿಗೆ ಸ್ವಯಂಚಾಲಿತ ಪುನರಾವರ್ತಿತ ಅರ್ಥಿಕ ಸಹಕಾರವನ್ನು ನೀಡುತ್ತಿದೆ.

ಅನುಮೋದಿತ ಕೌಟುಂಬಿಕ ಜೈವಿಕ ಅನಿಲ- ಗೊಬ್ಬರ ಸ್ಥಾವರಗಳು

  1. ಪೂರ್ವ ರಚಿತ ಮಾದರಿಯ ಜೈವಿಕ ಅನಿಲ ಸ್ಥಾವರಗಳು ಪೂರ್ವ ಕಲ್ಪಿತ ರಿ ಇನ್ಫೊರ್ಸ್ಡ್ ಸಿಮೆಂಟ್ ಕಾಂಕ್ರೀಟ್ (ಅರ ಸಿ ಸಿ ) ಫಿಕ್ಸ್ಡ್ ಡೋಮ್ (ನಿಶ್ಚಲ ಗುಮ್ಮಟ) ಮಾದರಿ. ಪೂರ್ವ ಕಲ್ಪಿತ ರಿ ಇನ್ಫೊರ್ಸ್ಡ್ ಸಿಮೆಂಟ್ ಕಾಂಕ್ರೀಟ್ (ಅರ ಸಿ ಸಿ) ಡೈಜೆಸ್ಟರ್ (ವಿಘಟಕ) ಕೆ ವಿ ಐ ಸಿ ಮಾದರಿಯ ಕೌಟುಂಬಿಕ ಜೈವಿಕ ಅನಿಲ ಸ್ಥಾವರ. ಪೂರ್ವ ಕಲ್ಪಿತ ಹೈ ಡೆನ್ಸಿಟಿ ಪೋಲಿತೀನ್ ಮಟೀರಿಯಲ್ (ಹೆಚ್ .ಡಿ .ಪಿ .ಇ ) ಆಧರಿತ ಸಂಪೂರ್ಣ ದೀನಬಂಧು ಮಾದರಿಯ ಜೈವಿಕ ಆನಿಲ ಸ್ಥಾವರ. ಬಯೋಟೆಕ್  ಕಂಪೆನಿ ವಿರಚಿತ ಫೈಬರ್ ಗ್ಲಾಸ್ ರಿ ಇನ್ಫೊರ್ಸ್ಡ್ ಪ್ಲಾಸ್ಟಿಕ್ (ಹೆಚ್ .ಡಿ .ಪಿ .ಇ) ಜೈವಿಕ ಅನಿಲ ಸ್ಥಾವರ. ಪೂರ್ವ ಕಲ್ಪಿತ ಹೆಚ್ .ಡಿ .ಪಿ .ಇ ಆಧರಿತ, ಕೆ ವಿ ಐ ಸಿ ರೀತಿಯ ತೇಲುವ ಗುಮ್ಮಟದ ಜೈವಿಕ ಅನಿಲ ಸ್ಥಾವರ
  2. ತೇಲುವ ಗುಮ್ಮಟ ಇರುವ ಜೈವಿಕ ಅನಿಲ ಸ್ಥಾವರ:ಕೆ ವಿ ಐ ಸಿ  ತೇಲುವ ಲೋಹದ ಗುಮ್ಮಟದ ಜೈವಿಕ ಅನಿಲ ಸ್ಥಾವರ ಕೆ ವಿ ಐ ಸಿ ಮಾದರಿಯ, ಫೆರೋ ಸಿಮೆಂಟ್ ಡೈಜೆಸ್ಟರ್(ವಿಘಟಕ) ಹಾಗೂ ಎಫ್ ಆರ್ ಪಿ  ಅನಿಲ ಸಂಗ್ರಾಹಕವಿರುವ ಜೈವಿಕ ಅನಿಲ ಸ್ಥಾವರ ಪ್ರಗತಿ ಮಾದರಿಯ ಜೈವಿಕ ಅನಿಲ ಸ್ಥಾವರ
  3. ಕೈಚೀಲದ ರೀತಿಯ ಜೈವಿಕ ಅನಿಲ ಸ್ಥಾವರ (ಫ್ಲೆಕ್ಸಿ ಮಾದರಿ)
  4. ಸ್ಥಿರ ಗುಮ್ಮಟದ ಜೈವಿಕ ಅನಿಲ ಸ್ಥಾವರ : ಇಟ್ಟಿಗೆಯ ರಚನೆಯುಳ್ಳ, ದೀನಬಂಧು ಮಾದರಿಯ ಜೈವಿಕ ಅನಿಲ ಸ್ಥಾವರ. ದೀನಬಂಧು ಫೆರೋಸಿಮೆಂಟ್ ಮಾದರಿಯ, ಸ್ಥಳೀಯ ತಂತ್ರಜ್ಞಾನಯುಕ್ತ ಜೈವಿಕ ಅನಿಲ ಸ್ಥಾವರ. ದೀನಬಂಧು ಮಾದರಿಯ ಕುಟುಂಬದ ಗಾತ್ರದ ಜೈವಿಕ ಅನಿಲ ಸ್ಥಾವರಕ್ಕೆ ಪೂರ್ವ ಕಲ್ಪಿತ ಹೆಚ್ .ಡಿ .ಪಿ .ಇ   ವಸ್ತು ಆಧರಿತ ಪೂರ್ವಕಲ್ಪಿತ ಗುಮ್ಮಟ

 

ರಾಷ್ಟ್ರೀಯ ಜೈವಿಕ ಅನಿಲ ಹಾಗೂ ಗೊಬ್ಬರ ನಿರ್ವಹಣಾ ಕಾರ್ಯಕ್ರಮ(ಏನ್.ಬಿ.ಎಂ.ಎಂ.ಪಿ)ದಡಿಯಲ್ಲಿ ನೀಡುತ್ತಿರುವ ಆರ್ಥಿಕ ಪ್ರೇರಕಗಳು (ಏನ್.ಬಿ.ಎಂ.ಎಂ.ಪಿ)

ವಿಭಾಗ

1 ಘನ ಮೀ. ಇರುವ (ಫಿಕ್ಸ್ಡ್ ಡೋಮ್/ ಸ್ಥಿರ ಗುಮ್ಮಟ ಮಾದರಿ) ಒಂದು ಸ್ಥಾವರಕ್ಕೆ ಕೇಂದ್ರದಿಂದ ಸಹಾಯ ಧನ

 

ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ (ಅಸ್ಸಾಂ ರಾಜ್ಯದ ಬಯಲು ಪ್ರದೇಶಗಳನ್ನು ಹೊರತು ಪಡಿಸಿ).

 

ರೂ. 14,700/- (2-4 ಘ,ಮೀ. ಸ್ಥಾವರಗಳಿಗೂ ಅನ್ವಯವಾಗುತ್ತದೆ.)

ಅಸ್ಸಾಂ ರಾಜ್ಯದ ಬಯಲು ಪ್ರದೇಶಗಳು

ರೂ.9,000/- (2-4 ಘ,ಮೀ. ಸ್ಥಾವರಗಳಿಗೆ ರೂ.10,000)

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ(ತೆರಾಯಿ ಪ್ರದೇಶವನ್ನು ಹೊರತುಪಡಿಸಿ), ತಮಿಳುನಾಡಿನ ನೀಲಗಿರಿ, ದಾರ್ಜೀಲಿಂಗಿನ ಸದರ್ ಕುರ್ಸೂಂಗ್ ಮತ್ತು ಕೈಲಿಂಕ್ಪೊಂಗ್ ಉಪವಿಭಾಗಗಳು, ಸುಂದರಬನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ರೂ..4,000/- (2-4 ಘ,ಮೀ. ಸ್ಥಾವರಗಳಿಗೆ ರೂ.10,000)

ಇತರ ಪ್ರದೇಶಗಳು

ರೂ.4,000/- (2-4 ಘ,ಮೀ. ಸ್ಥಾವರಗಳಿಗೆ ರೂ. 8000/- )

ಶೌಚಾಲಯಗಳ ಸಂಪರ್ಕವಿರುವ ಜೈವಿಕ ಅನಿಲ ಸ್ಥಾವರಗಳು: ಸ್ಥಾವರಗಳು ಹಾಗೂ ಶೌಚಾಲಯಗಳಿಗೆ ಸಂಪರ್ಕವೇರ್ಪಡಿಸಿದರೆ ಕೇಂದ್ರದಿಂದ ರೂ. 1000/- ದ ಹೆಚ್ಚುವರಿ ರಿಯಾಯಿತಿಯಿದೆ. ಐದು ವರ್ಷದ ಉಚಿತ ನಿರ್ವಹಣೆಯ ಭರವಸೆಯೊಂದಿಗೆ ತಿರುಪುಕೀಲಿ ಕೆಲಸದ ಶುಲ್ಕದ ರೂಪದಲ್ಲಿ ಎಲ್ಲಾ ರಾಜ್ಯದಲ್ಲೂ ಪ್ರತಿ ಸ್ಥಾವರಕ್ಕೆ ರೂ. 1,500. ಕೆಲಸ ನಿರ್ವಹಿಸದ / ಹಳೆಯ ಸ್ಥಾವರಗಳ ದುರಸ್ತಿಗೆ ಆರ್ಥಿಕ ಸಹಕಾರ: ಹಳೆಯ, ಕುಟುಂಬ ಗಾತ್ರದ, ಸ್ಥಾವರಗಳ ದುರಸ್ತಿಗೆ, ವಿವಿಧ ವರ್ಗಗಳ ಬಳಕೆದಾರರಿಗೆ ಹಾಗೂ ಪ್ರದೇಶಗಳಿಗೆ ಅನ್ವಯವಾಗುವಂತೆ ಕೇಂದ್ರದ ಸಹಾಯಧನದ ಶೇ. 50 ರಷ್ಟು. ಆದರೆ ಅವು ಐದು ವರ್ಷ ಹಳೆಯದಾಗಿರಬೇಕು ಮತ್ತು ರಚನೆಯ ದುರಸ್ತಿಯ ಅಗತ್ಯವಿರುವವುಗಳಾಗಿರಬೇಕು.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate