ಗೋದಿ : ನೀರಾವರಿ ಗೊದಿಗೆ ಬಿತ್ತಿದ ೨೦ ರಿಂದ ೨೫ ದಿನದಲ್ಲಿ ತಪ್ಪದೇ ನೀರು ಹಾಯಿಸಬೇಕು. ಇದರಿಂದ ಹೆಚ್ಚು ಮುಕುಟ ಬೇರು ಬಿಡಲು ಅನುಕೂಲವಾಗುವುದು. ಶಿಫಾರಿತ ಸಾರಜನಕ ಹಾಗೂ ಪೊಟ್ಯಾಶ್ ಗೊಬ್ಬರಗಳನ್ನು ೧೫ ದಿನಗಳ ಅಂತರದಲ್ಲಿ ೨ ಕಂತುಗಳಲ್ಲಿ ಮೇಲು ಗೊಬ್ಬರವಾಗಿ ಒದಗಿಸಬೇಕು. ತುಕ್ಕು ರೋಗದ ನಿರ್ವಹಣೆಗೆ ೧ ಮಿ.ಲೀ. ಪ್ರೊಪಿಕೊನಜೋಲ್ ಶಿಲೀಂದ್ರ ನಾಶಕವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನೀರಾವರಿಗೆ ನೀರು ತುಟಾಗ್ರತೆ ಇದ್ದಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸಬೇಕು.
ಕಡಲೆ : ಗೋವಿನ ಜೋಳ ಕಟಾವು ಆದ ಕ್ಷೇತ್ರದಲ್ಲಿ ಬೇಗನೆ ಬಿತ್ತನೆ ಮುಗಿಸಬೇಕು (ಡಿಸಂಬರ್ ಮೊದಲನೇ ವಾರ) ಒಂದು ತಿಂಗಳ ಕಡಲೆ ಬೆಳೆಯಲ್ಲಿ ಅಂತರ ಬೇಸಾಯ ಮಾಡಿ ಮಣ್ಣಿನ ತೇವಾಂಶ ಕಾಪಾಡಬೇಕು. ಅತಿ ಹೆಚ್ಚು ಬೆಳವಣಿಗೆ ಇದ್ದಲ್ಲಿ ಕುಡಿ ಚಿವುಟಬೇಕು. ಈ ಹಂತದಲ್ಲಿ ಶೇ.೨ ರ ಯೂರಿಯಾ ಸಿಂಪರಣೆ ಮಾಡಬೇಕು. ಹೂವಾಡುವಾಗ ಹಾಗೂ ಕಾಯಿ ಕಟ್ಟುವಾಗ ತೆಳವಾಗಿ ನೀರು ಹಾಯಿಸಬೇಕು. ನೀರಿನ ತುಟಾಗ್ರತೆ ಇದ್ದಲ್ಲಿ ಹೂ ವಾಡುವ ಮೊದಲು ಹಾಗೂ ಕಾಯಿ ಕಟ್ಟುವಾಗ ೨೦ ದಿನಗಳ ಅಂತರದಲ್ಲಿ ಸ್ಪಿಂಕ್ಲರ್ ಮೂಲಕ ನೀರು ಒದಗಿಸಬಹುದು. ಕಾಯಿ ಕೊರಕದ ಹುಳಗಳ ಹತೋಟಿಗೆ ಕೀಟ ಭಕ್ಷಕ ಪಕ್ಷಿಗಳ ಆಕರ್ಷಣೆಗೆ ಬೆಳೆಯಲ್ಲಿ ಮಂಡಕ್ಕಿ ಎರಚುವುದು ಹಾಗೂ ಪಕ್ಷಿಗಳಿಗೆ ಕೂಡಲು ಕವಲು ಕಟ್ಟಿಗೆ ನೆಡುವುದು ಅವಶ್ಯ. ಕೀಟ ಬಾಧೆ ಹೆಚ್ಚಾದಾಗ ಸೂಕ್ತ ಸಿಂಪರಣೆ ಅಗತ್ಯ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಹಿಂಗಾರು ಬೆಳೆಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ಕ್ರಮಗಳು ಅವಶ್ಯ.
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 1/28/2020
ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ
ಬೆಳೆ ದೃಢೀಕರಣ ಪ್ರಮಾಣ ಪತ್ರದ ಕುರಿತಾದ ಮಾಹಿತಿ ಇಲ್ಲಿ...
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ ಇದರ ಬಗ್ಗೆ
ಭತ್ತದ ಬೆಳೆಗೆ ಬೆಂಕಿರೋಗ, ಕಂದು ಜಿಗಿ ಹುಳುವಿನ ಬಾಧೆ ಕಂಡು...