ರೇಷ್ಮೆ ಕಸುಬು ಕೃಷಿ ಆಧಾರಿತ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ರೇಷ್ಮೆ ಬೇಸಾಯ ಅವಲಂಬನೆಯಿಂದ ವಿವಧ ಹಂತಗಳಲ್ಲಿ ಮತ್ತು ವಿವಧ ವರ್ಗದ ಜನರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಕಡಿಮೆ ಪ್ರದೇಶದಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸಬಹುದಾದ ಗ್ರಾಮೀಣ ಉಪಕಸುಬು.
ರೇಷ್ಮೆ ಕಸುಬು ಪ್ರಮುಖವಾಗಿ 3 ಚಟುವಟಿಕೆಗಳನ್ನ ಒಳಗೊಂಡಿದೆ.
ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷಧ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸ ಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.
ತುಮಕೂರು ಜಿಲ್ಲೆ ರೇಷ್ಮೆ ಕೃಷಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಮಿಶ್ರತಳಿ ರೇಷ್ಮೆ ಉತ್ಪಾದನೆಗೆ ಮತ್ತು ಶ್ರೇಷ್ಠ ದರ್ಜೆ ಬೈವೋಲ್ಟೈನ್ ರೇಷ್ಮೆ ಉತ್ಪಾದನೆಗೆ ಬೇಕಾದ ಮೂಲ ಮೈಸೂರು ತಳಿ ರೇಷ್ಮೆ ಮತ್ತು ಶುದ್ದ ಬೈವೋಲ್ಟೈನ್ ಬಿತ್ತನೆ ಗೂಡುಗಳನ್ನು ಉತ್ಪಾದಿಸಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯು ಜಿಲ್ಲಾ ಮತ್ತು ರಾಜ್ಯ ವಲಯಗಳಡಿ ಕಾರ್ಯನಿರ್ವಹಿಸುತ್ತಿದೆ.
ಎ) ಜಿಲ್ಲಾ ವಲಯ ರೇಷ್ಮೆ ಇಲಾಖೆ ಸಂಘಟನೆ : ಜಿಲ್ಲಾ ಪಂಚಾಯತಿ, ರೇಷ್ಮೆ ಉಪನಿರ್ದೇಶಕರು, ತುಮಕೂರು
ರೇಷ್ಮೆ ಕೃಷಿ ಚಟುವಟಿಕೆಗಳಾದ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಹುಳು ಸಾಕಾಣೆ, ಮತ್ತು ನೂಲು ಬಿಚ್ಚಾಣಿಕೆ ಬಗ್ಗೆ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು. ಸಂಶೋಧನಾ ಸಂಸ್ಥೆಗಳಿಂದ ಹೊರತಂದ ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಪ್ರಚಾರಗೊಳಿಸಿ ರೇಷ್ಮೆ ಕೃಷಿಕರಿಗೆ ಒದಗಿಸುವುದು. ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳುವಿನ ಮೂಲ ಬಿತ್ತನೆ ನಿರ್ವಹಣೆ ಮತ್ತು ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸುವುದು. ಸರ್ಕಾರದಿಂದ ರೇಷ್ಮೆ ಕೃಷಿ ವಿಸ್ತರಣೆ ನೀಡುವ ಸಹಾಯಧನ ಪಡೆಯಲು ಸಹಾಯ. ರೇಷ್ಮೆ ಚಟುವಟಿಕೆಗಳಿಗೆ ಬೇಕಾದ ಸಾಲ ಸೌಲಭ್ಯ ಪಡೆಯಲು ಸಹಾಯ. ರೇಷ್ಮೆ ಕೃಷಿ ಅಭಿವೃದ್ಧಿಗೆ ಆತ್ಮ ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳನ್ನ ಪೂರಕವಾಗಿ ಬಳಕೆ.ಒಟ್ಟಾರೆ
ಕ್ರ.ಸಂ. |
ಕಾರ್ಯಕ್ರಮ |
ಸಹಾಯಧನ / ಪ್ರೋತ್ಸಾಹಧನ |
ಅರ್ಹತೆಗಳು ಮತ್ತು ಲಗತ್ತಿಸಬೇಕಾದ ದಾಖಲೆಗಳೂ |
ಫಲಾನುಭವಿಗಳ ಅಯ್ಕೆ ವಿಧಾನ |
ಸಂಪರ್ಕಿಸ ಬೇಕಾದ ಅಧಿಕಾರಿ |
|
1 |
1 |
2 |
3 |
4 |
5 |
|
01 |
1) ಹಿಪ್ಪುನೇರಳೆ ನಾಟಿಗೆ ಪ್ರೋತ್ಸಾಹ |
1) ಹಿಪ್ಪುನೇರಳೆ ನಾಟಿಪ್ರೋತ್ಸಾಹ: |
ಫಲಾನುಭವಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿರಬೇಕು ಮತ್ತು ಸ್ವಂತ ಹಿಪ್ಪುನೇರಳೆ ಹೊಂದಿರಬೇಕು. ಸವಲತ್ತು/ಸಹಾಯಧನ ಪಡೆಯಲು ಫಲಾನುಭವಿ ನಿಗಧಿತ ಅರ್ಜಿ ಸಲ್ಲಿಸಬೇಕು ಮತ್ತು ಈ ಚಟುವಟಿಕೆಗಳನ್ನು ಅಳವಡಿಸಿಕೊಂಡಿರಬೇಕು. ಹಿಪ್ಪುನೇರಳೆ ತೋಟದ ಪಹಣಿ, ಇ.ಸಿ. ವಂಶವೃಕ್ಷ, ಮುಚ್ಚಳಿಕೆ ಪತ್ರ ಅಳವಡಿಸಿಕೊಂಡಿರುವ ಚಟುವಟಿಕೆಯ ಛಾಯಾಚಿತ್ರ ಹುಳು ಸಾಕುವ ಮನೆ ಅಂದಾಜು ಮತ್ತು ನಕ್ಷೆ ಸಂದರ್ಭಾನುಸಾರ ಅಗತ್ಯವಿರುವ ಇನ್ನಿತರೆ ಪೂರಕ್ ದಾಖಲೆಗಳು ಮತ್ತು ಬಿಲ್ ಗಳು ಹನಿನೀರಾವರಿ ಮತ್ತು ಉಪಕರಣಗಳನ್ನು ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳಿಂದ ಮಾತ್ರ ಅಳವಡಿಸಿಕೊಂಡಿರಬೇಕು/ಖರೀದಿಸಿರಬೇಕು. ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರಸ್ತಾವನೆಗೆ ಮಹಜರು ಲಗತ್ತಿಸಿರಬೇಕು. ಹುಳು ಸಾಕಾಣಿಕೆ ಮನೆಯನ್ನು ಇಲಾಖೆ ನಿಗಧಿಪಡಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ನಿರ್ಮಿಸಿರಬೇಕು. ಫಲಾನುಭವಿ ವಾರ್ಷಿಕ ಕನಿಷ್ಟ 2 ದ್ವಿತಳಿ ಬೆಳೆಗಳನ್ನು ಬೆಳೆಯಬೇಕು. ಮೈಸೂರು ತಳಿ ಬಿತ್ತನೆ ಬೆಳೆಗಾರರು ಮತ್ತು ದ್ವಿತಳಿ ಬಿತ್ತನೆ ಬೆಳೆಗಾರರು ನಿಗಧಿಪಡಿಸಿದ ತಳಿಗಳನ್ನು ಸಾಕಣೆ ಮಾಡಬೇಕು. |
ರೇಷ್ಮೆ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ಅಥವಾ ಇಚ್ಚಿಸುವ ಫಲಾನುಭವಿಗಳನ್ನು ಗ್ರಾಮ ಸಭೆಗಳಲ್ಲಿ ಅಥವಾ ಜನಪ್ರತಿನಿಧಿಗಳ ಮೂಲಕ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ.ಜಾತಿ/ಪ.ಪಂ ಮಹಿಳೆ, ಸಣ್ಣ, ಮತ್ತು ಅತಿಸಣ್ಣ ರೈತರಿಗೆ ಲಭ್ಯವಿರುವ ವಂತಿಗೆ ಅನುಗುಣವಾಗಿ ಆಧ್ಯತೆ. |
1) ರೇಷ್ಮೆವಲಯಾಧಿಕಾರಿ. |
|
2) ಹನಿನೀರಾವರಿ ಅಳವಡಿಸಕೆ ಸಹಾಯಧನ |
||||||
3) ರೇಷ್ಮೆ ಹುಳು ಸಾಕಾಣೆ ಮನೆಗೆ ಸಹಾಯಧನ |
||||||
4) ರೇಷ್ಮೆ ಉಪಕರಣ ಸಹಾಯಧನ |
||||||
02 |
1) ಹಿಪ್ಪುನೇರಳೆ ನಾಟಿಗೆ ಪ್ರೋತ್ಸಾಹ |
|||||
2) 2ನೇ ಹೆಕ್ಟೇರ್ ಹನಿನೀರಾವರಿ ಅಳವಡಿಕೆ ಸಹಾಯಧನ |
||||||
3) 2ನೇ ಹುಳು ಸಾಕಾಣಿಕೆ ಮನೆ ಸಹಾಯಧನ |
||||||
4) ಚಂದ್ರಿಕೆ ಮನೆ ನಿರ್ಮಾಣ ಸಹಾಯಧನ |
||||||
03 |
1) ಹಿಪ್ಪುನೇರಳೆ ನಾಟಿಗೆ ಪ್ರೋತ್ಸಾಹ |
|||||
2)ಹನಿನೀರಾವರಿ ಅಳವಡಿಸಕೆ ಸಹಾಯಧನ |
||||||
3) ರೇಷ್ಮೆ ಹುಳು ಸಾಕಾಣೆ ಮನೆಗೆ ಸಹಾಯಧನ |
||||||
4) ರೇಷ್ಮೆ ಉಪಕರಣ ಸಹಾಯಧನ |
||||||
04 |
1) ಹಿಪ್ಪುನೇರಳೆ ನಾಟಿಗೆ ಪ್ರೋತ್ಸಾಹ |
|||||
2)ಹನಿನೀರಾವರಿ ಅಳವಡಿಸಕೆ ಸಹಾಯಧನ |
||||||
3) ರೇಷ್ಮೆ ಹುಳು ಸಾಕಾಣೆ ಮನೆಗೆ ಸಹಾಯಧನ |
||||||
|
4) ರೇಷ್ಮೆ ಉಪಕರಣ ಸಹಾಯಧನ |
05 |
6) ರೇಷ್ಮೆ ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆ ಸಹಾಯಧನ |
6)ಕಾಟೇಜ್ ಬೇಸಿನ್ ಸಹಾಯಧನ - ಪ.ಜಾ. ಪ.ಪಂ./ಮಹಿಳಾ ಶೇ. 60 ಇತರೆ ಶೇ. 50 ರೂ. 90000-00 6 ಬೇಸಿನ್ ಘಟಕಕ್ಕೆ ರೂ. 75000-00 |
ಮೇಲಿನಂತೆ |
ಮೇಲಿನಂತೆ |
ರೇಷ್ಮೆ ವಿಸ್ತರಣಾಧಿಕಾರಿಗಳೂ ರೀಲಿಂಗ್ ತಾಲ್ಲೋಕು ಸಹಾಯಕ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರು. |
|
|
2) ರೇಷ್ಮೆ ನೂಲು ಉತ್ಪಾದನೆ ಪ್ರೋತ್ಸಾಹ |
7) ಮಹಿಳೆಯರಿಗೆ ರೂ. 60-00/ಕೆಜಿ. ಇತರೆ ರೂ. 50-00/ಕೆಜಿ. |
-“- |
-“- |
-“- |
|
06 |
1) ಮಹಿಳಾ ಪ್ರಾತ್ಯಕ್ಷತಾ ತೋಟ ನಿರ್ವಹಣೆ |
ಪ್ರತಿ ಫಲಾನುಭವಿಗೆ ರೂ. 5000-00 |
ಎಲ್ಲಾ ನೂತನ ತಾಂತ್ರಿಕತೆಗಳನ್ನು ಹಿಪ್ಪುನೇರಳೆ ಬೇಸಾಯದಲ್ಲಿ ಮತ್ತು ಹುಳು ಸಾಕಾಣೆಯಲ್ಲಿ ಅಳವಡಿಸಿಕೊಂಡಿರಬೇಕು ಕನಿಷ್ಠ 1 ಎಕರೆ ಹಿಪ್ಪುನೇರಳೆತೋಟವಿರಬೇಕು. |
-“- |
-“- |
|
|
2) ಮಹಿಳಾ/ಪುರುಷರ ತರಬೇತಿ ಮತ್ತು ಅಧ್ಯಯನ ಪ್ರವಾಸ |
ಸಂಧರ್ಭಾನುಸಾರ ತರಬೇತಿ ಪಡೆದ ನಂತರ ಫಲಾನುಭವಿಗೆ ತಲಾ ರೂ. 800/- ಶಿಷ್ಯವೇತನ ನೀಡಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದ |
ಹೊಸದಾಗಿ ರೇಷ್ಮೆ ಕೃಷಿ ಕೈಗೊಳ್ಳುವ ಅಥವಾ ಹಾಲಿ ರೇಷ್ಮೆ ಬೆಳೆಗಾರರಿಗೆ ಸ್ಥಳೀಯವಾಗಿ (5-10ದಿನ) ಅಥವಾ ರೇಷ್ಮೆ ತರಬೇತಿ ಶಾಲೆಗಳಲ್ಲಿ ತರಬೇತಿ ನೀಡಲಾವುದು. |
-“- |
-“- |
|
07 |
1) ವಿಶೇಷ ಘಟಕ ಯೋಜನೆ |
ಪ್ರತಿ ಫಲಾನುಭವಿಗೆ ರೂ.5000/- ಮೌಲ್ಯದ ಹುಳು ಸಾಕಾಣೆ ಉಪಕರಣ ಉಚಿತವಾಗಿ ನೀಡುವುದು. |
ಮೇಲಿನಂತೆ ಸಂದರ್ಭಾನುಸಾರ |
ಮೇಲಿನಂತೆ ಪ.ಜಾ/ಪ.ಪಂ ರೇಷ್ಮೆ ಬೆಳೆಗಾರರಿಗೆ ಮಾತ್ರ ಸವಲತ್ತುಗಳನ್ನು ನೀಡಲಾಗುವುದು. |
-“- |
|
|
|
2) ಗಿರಿಜನ ಉಪಯೋಜನೆ |
-“- |
-“- |
-“- |
-“- |
|
|
3) ಬೈವೋಲ್ಟೈನ್ ಬೆಳೆಗಾರರಿಗೆ ಮನೆ ನಿರ್ಮಾಣ. |
ಹುಳು ಸಾಕುವ ಮನೆ ಅಳತೆ 15*25 |
-“- |
-“- |
-“- |
08 |
ಆತ್ಮ ಯೋಜನೆ |
1) ತರಬೇತಿ |
-“- |
-“- |
-“- |
-“- |
|
|
2) ಅಧ್ಯಯನ ಪ್ರವಾಸ |
-“- |
ಕ್ರ.ಸಂ. 6 ರ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಂತೆ |
-“- |
-“- |
|
|
3) ಪ್ರಾತ್ಯಕ್ಷತೆ |
-“- |
-“- |
-“- |
-“- |
ಕ್ರ.ಸಂ. |
ಕಾರ್ಯಕ್ರಮಗಳು |
|
ಮಿಶ್ರತಳಿ |
ಬಿತ್ತನೆ ಪ್ರದೇಶ ಕುಣಿಗಲ್ |
ಒಟ್ಟು |
01 |
ರೇಷ್ಮೆ ಕೃಷಿ ಇರುವ ಗ್ರಾಮಗಳು |
|
779 |
324 |
1103 |
02 |
ಹಿಪ್ಪುನೇರಳೆ ವಿಸ್ತೀರ್ಣ |
|
1908 |
887 |
2795 |
03 |
ರೇಷ್ಮೆ ಬೆಳೆಗಾರರ ಸಂಖ್ಯೆ |
ಪ.ಜಾತಿ |
239 |
238 |
477 |
|
|
ಪ.ಪಂ. |
275 |
51 |
326 |
|
|
ಇತರೆ |
3221 |
4473 |
7694 |
|
|
ಒಟ್ಟು |
3753 |
4762 |
8515 |
04 |
ಚಾಕಿ ಮಾಡುವ ರೇಷ್ಮೆ ಮೊಟ್ಟೆಗಳು (ಲಕ್ಷ) |
ಮೈಸೂರು ತಳಿ |
- |
17.11 |
17.11 |
|
|
ಮಿಶ್ರ ತಳಿ |
22.42 |
- |
22.42 |
|
|
ಬೈವೊಲ್ಟೈನ್ ತಳಿ |
3.79 |
- |
3.79 |
|
|
ಒಟ್ಟು |
26.21 |
17.11 |
43.32 |
05 |
ಉತ್ಪಾದಿಸಿದ ಗೂಡು (ಮೆ.ಟನ್ ಗಳಲ್ಲಿ) |
ಮೈಸೂರು ತಳಿ |
- |
517.00 |
517.00 |
|
|
ಮಿಶ್ರ ತಳಿ |
1307.70 |
- |
1307.70 |
|
|
ಬೈವೊಲ್ಟೈನ್ ತಳಿ |
203.60 |
- |
203.60 |
|
|
ಒಟ್ಟು |
1511.30 |
517.00 |
2028.00 |
06 |
ಸರಾಸರಿ ಇಳುವರಿ |
ಮೈಸೂರು ತಳಿ |
- |
32.60 |
32.60 |
|
|
ಮಿಶ್ರ ತಳಿ |
59.30 |
- |
59.30 |
|
|
ಬೈವೊಲ್ಟೈನ್ ತಳಿ |
55.20 |
|
55.20 |
|
|
ಒಟ್ಟು |
58.90 |
|
58.90 |
ಜಿಲ್ಲೆಯಲ್ಲಿ ತುಮಕೂರು ಜಿಲ್ಲೆ ವಿಶಿಷ್ಠ ಸ್ಥಾನ ಪಡೆದಿದೆ. ರೇಷ್ಮೆ ಉತ್ಪಾದನೆಗೆ ಬೇಕಾದ ಮೂಲ ಮೈಸೂರು ಬಿತ್ತನೆ ಗೂಡು ಮತ್ತು ಬೈವೋಲ್ಟೈನ್ ಬಿತ್ತನೆ ಗೂಡುಗಳನ್ನ ಉತ್ಪಾದಿಸಿ ರಾಜ್ಯದ ಮೊಟ್ಟೆ ತಯಾರಿಕೆಗೆ ವಿತರಿಸಲಾಗುತ್ತಿದೆ. ಇಲಾಖೆ ಹೊರತಂದಿರುವ ನೂತನ ತಾಂತ್ರಿಕತೆಗಳ ಫಲವಾಗಿ ಮತ್ತು ಸರ್ಕಾರ ಕಾಲಕಾಲಕ್ಕೆ ನೀಡುತ್ತಿರುವ ಸಹಾಯಧನ ಸವಲತ್ತುಗಳಿಂದ ರೇಷ್ಮೆ ಗೂಡಿನ ಸರಾಸರಿ ಇಳುವರಿಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ರೇಷ್ಮೆ ಗೂಡಿನ ಇಳುವರಿ 100 ಮೊಟ್ಟೆಗಳು 58.9 ಕೆ.ಜಿ. ಗಳಿರುತ್ತದೆ.
ಕೊನೆಯ ಮಾರ್ಪಾಟು : 10/26/2019
ರೋಗಾಣುವಿನಿಂದ ಜೀವಿಗಳಲ್ಲಿ ಉಂಟಾಗುವ ಅಸ್ವಾಭಾವಿಕ ಏರುಪೇರಿ...
ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಉದ್ಯೋಗ ವ್ಯವಸಾಯ ಮತ್ತು ...