ಭಾರತ ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಗಣನೀಯವಾಗಿದ್ದು, ಅನಾಧಿ ಕಾಲದಿಂದಲೂ ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಗ್ರಾಮೀಣ ಜನ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಉದ್ಯೋಗ ವ್ಯವಸಾಯ ಮತ್ತು ವ್ಯವಸಾಯ ಅವಲಂಬಿತ ಉಪಕಸುಬುಗಳಾಗಿದ್ದು, ಈ ಕಸುಬುಗಳ ನಿರ್ವಹಣೆಗೆ ಉಳುವ ಎತ್ತುಗಳು, ಗೊಬ್ಬರಕ್ಕಾಗಿಜಾನುವಾರುಗಳ ಮೇಲಿನ ಅವಲಂಬನೆ ನಿಚ್ಚಳವಾಗಿದೆ. ಪಶುಪಾಲನೆ ಇಂದು ಕೇವಲ ಒಂದು ಕಸುಬಾಗಿ ಉಳಿಯದೆ ಉದ್ಯಮವಾಗಿ ಬೆಳೆದು ನಿಂತಿದೆ. ಪಶುಪಾಲನೆ ಈ ಹಂತಕ್ಕೇರಲು ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಇಲಾಖೆಯು ಈ ಕೆಳಕಂಡ ವಿಭಾಗಗಳಲ್ಲಿ ಅಹರ್ನಿಶೆ ದುಡಿಯುತ್ತಿದೆ. ರೋಗಪೀಡಿತ ಪ್ರಾಣಿ ಮತ್ತು ಪಕ್ಷಿಗಳ ಆರೋಗ್ಯ ರಕ್ಷಣೆ ಪ್ರಾಣಿ ಮತ್ತು ಕೋಳಿ ರೋಗಗಳ ತಡೆಗಟ್ಟುವಿಕೆಗಾಗಿ ವಿವಿಧ ಲಸಿಕಾ ಕಾರ್ಯಕ್ರಮಗಳ ಆಯೋಜನೆ, ಇದರಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಬರಬಹುದಾದ ಕಾಯಿಲೆಗಳ ನಿಯಂತ್ರಣವೂ ಸಾಧ್ಯವಾಗಿದೆ. ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದನೆಯ ಹೆಚ್ಚಳವಿಸ್ತರಣಾ ಚಟುವಟಿಕೆಗಳ ಮೂಲಕ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನ.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಕೆಲ ಆಯ್ದ ಹೋಬಳಿ ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಪಶು ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ ಕೆಲ ಹಳ್ಳಿಗಳಲ್ಲಿ ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳು ಮತ್ತು ಕೃತಕ ಗರ್ಭಧಾರಣಾ ಕೇಂದ್ರಗಳಿವೆ. ಈ ಸಂಸ್ಥೆಗಳು ಪ್ರಾಣಿ ಪಕ್ಷಿಗಳ ಆರೋಗ್ಯ ರಕ್ಷಣೆ, ತಳಿ ಸಂವರ್ಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೋಳಿ ವಿಸ್ತರಣಾ ಕೇಂದ್ರಗಳಲ್ಲಿ ಒಂದು ದಿನದ ಗಿರಿರಾಜ ಮರಿಗಳನ್ನು 4-5 ವಾರದವರೆಗೆ ಸಾಕಿ ರಿಯಾಯಿತಿ ದರದಲ್ಲಿ ಜಿಲ್ಲೆಯ ಮಹಿಳೆಯರಿಗೆ ವಿತರಿಸಲಾಗುತ್ತದೆ. ಇಲಾಖೆಯು ಜಿಲ್ಲಾ ಕೇಂದ್ರದಲ್ಲಿರುವ ದೊಡ್ಡರೋಗನಿವಾರಣಾ ಯೋಜನೆಯು ಈಗಾಗಲೇ ನಿರ್ಮೂಲನೆಯಾಗಿರುವ ದೊಡ್ಡರೋಗ ಮರುಕಳಿಸದಂತೆ ಯೋಜನೆಗಳ ಅನುಷ್ಟಾನಗೊಳಿಸುತ್ತಾರೆ. ಕೋಳಿಶೀತಜ್ವರದ ಬಗ್ಗೆ ಇಲಾಖಾ ಅದಿಕಾರಿಗಳು, ಸಿಬ್ಬಂದಿ ಹಾಗೂ ಆಯ್ದ ರೈತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತರಬೇತಿ ಶಿಬಿರ ಆಯೋಜಿಸುವದು. ಕೋಳಿ ಫಾರಂ ಮತ್ತು ಗ್ರಾಮೀಣ ಭಾಗದ ನಾಟಿ ಕೋಳಿಗಳಿಂದ ರಕ್ಷಣೆ ಸಾಕು ಮಾದರಿ ಸಂಗ್ರಹಣೆ ಮತ್ತು ಪ್ರಯೋಗಾಲಯಕ್ಕೆ ಸಲ್ಲಿಸುವುದು ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ ಲಸಿಕೆ, ವೀರ್ಯನಳಿಕೆ, ಔಷಧಿ ಹಾಗೂ ದ್ರವಸಾರಜನಕ ಸರಬರಾಜು ಮಾಡುವದು.ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆಯು ಮಿಶ್ರತಳಿ ಹೆಣ್ಣು ಕರುಗಳ ಉತ್ತಮ ಪೋಷಣೆಗಾಗಿ ರಿಯಾಯಿತಿಯನ್ನೊಳಗೊಂಡ ಸಾಲ ಯೋಜನೆಯನ್ನು ಹಮ್ಮಿಕೊಳ್ಳುತ್ತದೆ. ರಾಜ್ಯವಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹೊಸದಾಗಿ ನೇಮಕಗೊಂಡ ಅರೆತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುತ್ತದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕುರಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಗುಣಮಟ್ಟದ ಕುರಿ ಸಾಕಾಣಿಕೆಗಾಗಿ ನಿಗಮಜನಶ್ರೀ ಯೋಜನೆಯಡಿಯಲ್ಲಿ ಕುರಿಗಳ ಜೀವ ವಿಮೆಗೆ ಸಬ್ಸಿಡಿ ನೀಡುತ್ತದೆ. ಕುರಿ ಸಾಕಾಣಿಕೆ ಕುರಿತು ತರಬೇತಿ ಶಿಬಿರ ಆಯೋಜಿಸುತ್ತದೆ. ಕುರಿಗಳಿಗೆ ಔಷಧಿ ಮತ್ತು ಜಂತುನಾಶಕಗಳ ವಿತರಣೆ ಮಾಡುತ್ತದೆ. ಬಿ.ಪಿ.ವೈ(ಬೀಡ್ ಪಾಲಕ್ ಭೀಮಾ ಯೋಜನೆ)ಯಡಿಯಲ್ಲಿ ಕುರಿಗಾರರಿಗೆ ವಿಮಾ ಸೌಲಭ್ಯ ಒದಗಿಸುತ್ತದೆ ಕುರಿಗಾರರ ಮಕ್ಕಳಿಗಾಗಿ ಕರ್ನಾಟಕ ಬೀಡ್ ಪಾಲಕ್ ಯೋಜನ/ಸರ್ವ ಶಿಕ್ಷಣ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಧಿ ವೇತನ ನೀಡಲಾಗುತ್ತದೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ ಕುರಿಗಾರರಿಗೆ ಕುರಿ ಘಟಕಗಳನ್ನು ಕೊಳ್ಳಲು ಸಹಾಯಧನ ನೀಡುತ್ತದೆ.
ಇಲಾಖೆಯು ಪ್ರತಿ 4 ವರ್ಷಗಳಿಗೊಮ್ಮೆ ಜಾನುವಾರು ಗಣತಿಯನ್ನು ಮತ್ತು ಪ್ರತಿ ವರ್ಷ ಬೇಸಿಗೆ, ಮಳೆ ಮತ್ತು ಚಳಿಗಾಲಗಳಲ್ಲಿ ಸಮಗ್ರ ಮಾದರಿ ಸಮೀಕ್ಷೆ ಯೋಜನೆ ಹಮ್ಮಿಕೊಳ್ಳುತ್ತಿದೆ.
ಕೃತಕ ಗರ್ಭಧಾರಣೆ ಕಾರ್ಯಕ್ರಮ: ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಕೃತಕ ಗರ್ಭಧಾರಣೆ ಕಾರ್ಯಕ್ರಮದ ಮೂಲಕ ಸ್ಥಳೀಯ ರಾಸುಗಳ ಉನ್ನತೀಕರಣದಿಂದ ಅಧಿಕ ಹಾಲು ಇಳುವರಿ ಮತ್ತು ಸ್ಥಳೀಯ ತಳಿಗಳ ಶುದ್ಧತೆ ಕಾಪಾಡಲು ಶ್ರಮಿಸುತ್ತಿವೆ. ಪ್ರತಿ ಕೃತಕ ಗರ್ಭಧಾರಣೆಗೆ ರೂ. 5/-ಗಳ ಶುಲ್ಕ ಪಡೆಯಲಾಗುತ್ತಿದೆ. ಗರ್ಭ ತಪಾಸಣಾ ಕಾರ್ಯಕ್ರಮ: ಕೃತಕ ಗರ್ಭಧಾರಣೆ ಮಾಡಿದ ರಾಸುಗಳನ್ನು 2 ½ ರಿಂದ 3 ತಿಂಗಳ ಬಳಿಕ ಗುರುತಿಸಿ ಗರ್ಭ ತಪಾಸಣೆಗೊಳಪಡಿಸಲಾಗುತ್ತದೆ. ಲಸಿಕಾ ಕಾರ್ಯಕ್ರಮ: ಕಾಲು ಬಾಯಿ ಜ್ವರ, ಚಪ್ಪೆರೋಗ, ಗಳಲೆರೋಗ, ಅಂಥ್ರಾಕ್ಸ್, ಪಿ.ಪಿ.ಅರ್. ಕುರಿ ಸಿಡುಬು, ರಾಣಿಕೇಟ್ ಇನ್ನು ಮುಂತಾದ ರೋಗಗಳ ವಿರುದ್ಧ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ಪ್ರಾಣಿಮತ್ತು ಪಕ್ಷಿಗಳಿಗೆ ರೋಗಗಳಂದ ರಕ್ಷಣೆ ನೀಡಲಾಗುತ್ತದೆ.
ಮಾರಕ ರೋಗವಾದ ದೊಡ್ಡರೋಗ ಈಗಾಗಲೇ ನಿರ್ಮೂಲನೆಯಾಗಿದ್ದರೂ, ಈ ರೋಗ ಮರುಕಳಿಸದಂತೆ ‘ಹಳ್ಳಿಗಳ ಪತ್ತೆ’ ಮತ್ತು ‘ಹೆದ್ದಾರಿ ಪತ್ತೆ’ ಕಾರ್ಯಕ್ರಮಗಳಲ್ಲಿ ಪ್ರತಿ ತಿಂಗಳೂ ಕೆಲವು ಹಳ್ಳಿ ಮತ್ತು ನಿಗಧಿತ ಹೆದ್ದಾರಿಗಳಲ್ಲಿ ಈ ರೋಗ ಲಕ್ಷಗಳುಳ್ಳ ಪ್ರಾಣಿಗಳ ಪತ್ರೆ ಹಚ್ಚಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರೋಗ ಲಕ್ಷಗಳುಳ್ಳ ರಾಸುಗಳ ರಕ್ತ ಮಾದರಿಗಳನ್ನು ರೋಗ ದೃಢೀಕರಣಕ್ಕಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೆಂಗಳೂರು ಇಲ್ಲಿಗೆ ಕಳುಹಿಸಲಾಗುತ್ತದೆ.
ರೈತರು ಉತ್ತಮ ತಳಿಯ ಮೇವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ಇಲಾಖಾ ವತಿಯಿಂದ ಲಭ್ಯತೆಯ ಮೇರೆಗೆ ಮೇವಿನ ಬೀಜಗಳ ಕಿರುಪೊಟ್ಟಣಗಳನ್ನು ಮೇವಿನ ಬೇರುಗಳನ್ನು ಮತ್ತು ಮೇವಿನ ಮರಗಳನ್ನು ಆಸಕ್ಕತ ರೈತರಿಗೆ ಒದಗಿಸಲಾಗುತ್ತದೆ.
ತಾಂತ್ರಿಕ ತಪಾಸಣೆ: ವಿಸ್ತರಣಾಧಿಕಾರಿಗಳು ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳಿಗೆ ಭೇಟಿಯಿತ್ತು ಅಲ್ಲಿನ ವಿವಿಧ ವಹಿ ಮತ್ತು ಕಡತಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಾರೆ.
ತುಮಕೂರು, ಶಿರಾ ಮತ್ತು ತುರುವೇಕೆರೆ ಪಶು ಆಸ್ಪತ್ರೆಗಳ ಕೋಳಿ ವಿಸ್ತರಣಾ ಕೇಂದ್ರಗಳಲ್ಲಿ ಒಂದು ದಿನದ ಗಿರಿರಾಜ ಕೋಳಿಮರಿಗಳನ್ನು ತಂದು 5-6 ವಾರಗಳವರೆಗೆ ಸಾಕಿ ಜಿಲ್ಲೆಯಲ್ಲಿನ ಆಯ್ದ ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಕೋಳಿಮರಿಗಳ ಲಭ್ಯತೆಯ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ.
ಇಲಾಖೆಯ ಸಾಂಖ್ಯಿಕ ಸಂಕ್ಷಿಪ್ತ ಪರಿಚಯ:
ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಬೆಂಗಳುರು (ಕರ್ನಾಟಕ ಲೈವ್ ಸ್ಟಾಕ್ ಡೆವೆಲಪ್ ಮೆಂಟ್ ಏಜೆನ್ಸಿ (ಕೆ.ಎಸ್.ಡಿ.ಎ) ಬೆಂಗಳೂರು ಈ ಸಂಸ್ಥೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹೈನು ರಾಸುಗಳ ಜೀವವಿಮೆಗೆ ಸಹಾಯಧನ ನೀಡುತ್ತಿದೆ (2010-11ನೇ ಸಾಲಿನಲ್ಲಿ 1500 ಲೀಟರ್ಗಳಿಗಿಂತ ಹೆಚ್ಚು ಹಾಲು ಕೊಡುವ ಹಸು ಅಥವಾ ಎಮ್ಮೆಗಳನ್ನು ಯುನೈಟೆಡ್ ಇಂಡಿಯಾ, ಇನ್ಷೂರೆನ್ಸ್ ಕಂಪನಿ, ತುಮಕೂರು ಈ ಸಂಸ್ಥೆಯಲ್ಲಿವಿಮೆಗೆ ಒಳಪಡಿಸಬಹುದು. ವಿಮಾ ಪಾಲಿಸಿಯ ದರ ಶೇ. 2.75, ಶೇ. 5.5 ಮತ್ತು ಶೇ. 7ರಂತೆ ಕ್ರ್ಮವಾಗಿ 1 ವರ್ಷ್ದ, 2ವರ್ಷ್ದ ಅಥವಾ 3ವರ್ಷ್ದ ಅವಧಿಗೆ ಇದ್ದು, ಪ್ರೀಮಿಯಂ ದರದ ಶೇ.50ರಷ್ಟು ಹಣವನ್ನು ಸಹಾಯಧನವಾಗಿ ಕೇಂದ್ರ ಸರ್ಕಾರ ಭರಿಸುತ್ತದೆ)
I. ಜಿಲ್ಲೆಯ ಪಶು ಸಂಸ್ಥೆಗಳ ವಿವರ: |
|
ಪಶು ಆಸ್ಪತ್ರೆ ಪಶು ಚಿಕಿತ್ಸಾಲಯಗಳು ಸಂಚಾರಿ ಪಶು ಚಿಕಿತ್ಸಾಲಯಗಳು ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳು ಮತ್ತು
ಒಟ್ಟು |
18 104 10 101
|
ದನಕರುಗಳು |
ಎಮ್ಮೆಗಳು |
ಕುರಿಗಳು |
ಮೇಕೆಗಳು |
ಹಂದಿಗಳು |
ಮೊಲಗಳು |
ನಾಯಿ |
ಇತರೆ |
ಒಟ್ಟು ಜಾನುವಾರುಗಳು |
ಕೋಳಿಗಳು |
|||
ಸ್ಥಳೀಯ |
ವಿದೇಶಿ ತಳಿ |
ಮಿಶ್ರತಳಿ |
ಒಟ್ಟು |
|||||||||
448036 |
- |
141190 |
589226 |
241907 |
1067719 |
517763 |
7718 |
121 |
90119 |
9470 |
2523727 |
711273 |
ಕೆ.ಡಿ.ಪಿ:
ಕ್ರ.ಸಂ. |
ವಿಷಯ |
ಸಾಧನೆ 2010-11(ಫೆಬ್ರವರಿ-11ರ ವರೆಗೆ) |
1 |
ಎ) ಕೃತಕ ಗರ್ಭಧಾರಣೆ |
274755 |
|
ಬಿ) ಕೃತಕ ಗರ್ಭಧಾರಣೆಯಿಂದ ಸಂದಾಯವಾದ ಮೊತ್ತ |
1373775 |
2 |
ಗರ್ಭ ತಪಾಸಣೆ |
204738 |
3 |
ಲಸಿಕಾ ಕಾರ್ಯಕ್ರಮ----ಕಾಲುಬಾಯಿಜ್ವರ |
1871883 |
|
ರಾಣಿಕೆಟ್ |
497223 |
|
ಪಿ.ಪಿ.ಆರ್ |
562729 |
4 |
ದೊಡ್ಡರೋಗ ಪತ್ತೆ ಹಚ್ಚುವಿಕೆ |
|
|
ಎ) ಹಳ್ಳಿಗಳಲ್ಲಿ ರೋಗ ಪತ್ತೆ |
4280 |
|
ಬಿ) ಹೆದ್ದಾರಿಗಳಲ್ಲಿ ರೋಗ ಪತ್ತೆ |
268x11 ತಿಂಗಳು |
|
ಸಿ) ದಿನದ ಪುಸ್ತಕ ಪರಿಶೀಲನೆ |
392 |
5 |
ಎ) ಮೇವ ಅಭಿವೃದ್ಧಿ (ಹೆಕ್ಟೇರುಗಳಲ್ಲಿ) |
4734 |
|
ಬಿ) ಮೇವಿನ ಬೀಜಗಳ ವಿತರಣೆ |
3100 |
6 |
ವಿಸ್ತರಣಾ ಕಾರ್ಯಕ್ರಮಗಳು |
|
|
ಎ) ಕಿಸಾನ್ ಸಂಪಕ ಸಭೆ |
220 |
|
ಬಿ)ಆರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳು |
126 |
|
ಸಿ) ಗ್ರಾಮ ಸಂದರ್ಶನ |
592 |
|
ಡಿ) ರಾಸು ಮತ್ತು ಕರುಗಳ ಪ್ರದರ್ಶನ |
10 |
|
ಇ) ತಾಂತ್ರಿಕ ತಪಾಸಣೆ |
105 |
7 |
ಹೊಸ ಕಾರ್ಯಕ್ರಮಗಳು |
|
|
ಎ) ರೈತರ ತರಬೇತಿ |
686 |
|
ಬಿ) ಅರೆತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ |
40 |
8 |
ಗಿರಿರಾಜ ಕೋಳಿಗಳ ವಿತರಣೆ |
5486 |
9 |
ವಿಶೇಷ ಘಟಕ ಯೋಜನೆ |
91 |
10 |
ಗಿರಿಜನ ಉಪಯೋಜನೆ |
87 |
11 |
ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ |
101 |
ಜಿಲ್ಲೆ ವಿವಿಧ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಖರೀದಿಸಿದ ರೂ. 42,51,276=00 ಮತ್ತು ಆಯುಕ್ತರ ಕಛೇರಿಯಿಂದ ಸರಬರಾಜಾದ ರೂ. 49,06,697=00 ಮೊತ್ತದ ಔಷಧಿಗಳು ವಿತರಣೆಯಾಗಿದೆ.
ಕ್ರ.ಸಂ |
ಕಾರ್ಯಕ್ರಮ |
ಸಾಧನೆ |
1 |
ಸಾಮೂಹಿಕ ಜಂತುನಾಶಕ ಔಷಧಿ ವಿತರಣಾ ಶಿಬಿರಗಳು |
74 |
2 |
ಔಷದೋಪಚಾರ ಮಾಡಿದ ಕುರಿಗಳ ಸಂಖ್ಯೆ |
68620 |
3 |
ಕೆ.ಬಿ.ಪಿ.ಬಿ.ವೈ.ಯಡಿಯಲ್ಲಿ ವಿಮೆಗೊಳಪಡಿಸಿದ ಕುರಿಗಾರರ ಸಂಖ್ಯೆ |
1119 |
4 |
ಕೆ.ಬಿ.ಪಿ.ವೈ/ಎಸ್.ಎಸ್.ವೈ.ಯಡಿಯಲ್ಲಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಸಂಖ್ಯೆ |
549 (ರೂ. 1200=00ರಂತೆ ಪ್ರತಿ ವಿದ್ಯಾರ್ಥೀಗೆ) |
5 |
ವಿಶೇಷ ಘಟಕ ಯೋಜನೆ |
67 ಘಟಕಗಳು (ರೂ. 10000 ಪ್ರತಿ ಘಟಕಕ್ಕೆ) |
6 |
ಗಿರಿಜನ ಉಪಯೋಜನೆ |
28 ಘಟಕಗಳು (ರೂ. 10000 ಪ್ರತಿ ಘಟಕಕ್ಕೆ) |
7 |
ತರಬೇತಿ ಶಿಬಿರಗಳು (ಮೌಲ್ಯಾಧಾರಿತ ಉಣ್ಣೆ ಕತ್ತರಿಸುವಿಕೆ) |
2 ಶಿಬಿರ (50 ಕುರಿಗಾರರಿಗೆ) |
8 |
ಜನಶ್ರೀ ಕುರಿ ವಿಮೆ ಯೋಜನೆ |
ರೂ. 65000=00 ಪ್ರತಿ ಶಿಬಿರಕ್ಕೆ ಪ್ರಗತಿಯಲ್ಲಿದೆ |
ಕ್ರ.ಸಂ. |
ಕಾರ್ಯಕ್ರಮ |
ಭೌತಿಕ ಗುರಿ |
ಆರ್ಥಿಕ ಗುರಿ (ರೂ. ಲಕ್ಷಗಳಲ್ಲಿ) |
1 |
ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಲು ಪ್ರೋತ್ಸಾಹಧನ |
622 |
18.71 |
2 |
ವಿಶೇಷ ಘಟಕ ಯೋಜನೆ (ರಾಜ್ಯ) ಹೈನುಗಾರಿಕೆ |
91 |
38.22 |
3 |
ಮೇವಿನ ಬೆಳೆಗಳ ಪ್ರಾತ್ಯಕ್ಷತೆಗಳು |
2 |
0.1 |
4 |
ಅಜೋಲ್ಲಾ ರೈತರ ಹಿತ್ತಲಲ್ಲಿ ಬೆಳೆಗಳ ಘಟಕ ಸ್ಥಾಪನೆ |
20 |
0.2 |
5 |
ವಿಶೇಷ ಘಟಕ ಯೋಜನೆ (ಜಿಲ್ಲೆ) ಮಿಶ್ರ ತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳ ಖರೀದಿ |
40 |
18.9 |
6 |
ಗಿರಿಜನ ಉಪಯೋಜನೆ (ರಾಜ್ಯ) ಹೈನುಗಾರಿಕೆ |
87 |
45.63 |
7 |
ಗಿರಿಜನ ಉಪಯೋಜನೆ (ಜಿಲ್ಲೆ) ಮಿಶ್ರತಳಿ ಹಸು, ಎಮ್ಮೆ ಮತ್ತು ಕುರಿ ಘಟಕಗಳು |
49 |
4.9 |
ವಿವರ |
ಭೌತಿಕ ಸಾಧನೆ |
ಆರ್ಥಿಕ ಸಾಧನೆ |
ಜಾನುವಾರು ವಿಮೆ ಯೋಜನೆ |
7297 |
52,62,174 |
ಇಲಾಖೆಯಲ್ಲಿ ಯಾರು ಯಾರು ?
ಉಪನಿರ್ದೇಶಕರು:
ಇಲಾಖೆಯ ಜಿಲ್ಲಾ ಮುಖ್ಯಸ್ಥರು
ಸಹಾಯಕ ನಿರ್ದೇಶಕರು:
ಇಲಾಖೆಯ ತಾಲ್ಲೂಕು ಮುಖ್ಯಸ್ಥರು/ಮೇಲ್ದರ್ಜೇಗೇರಿಸಿದ ಪಶು ಆಸ್ಪತ್ರೆಯ ಮುಖ್ಯಸ್ಥರು/ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ/ದೊಡ್ಡರೋಗ ನಿವಾರಣಾ ಯೋಜನೆ/ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರಗಳ ಮುಖ್ಯಸ್ಥರು
ಪಶು ವೈದ್ಯಾಧಿಕಾರಿ:
ಪಶು ಚಿಕಿತ್ಸಾಲಯದ ಮುಖ್ಯಸ್ಥರು/ವಿಸ್ತರಣಾಧಿಕಾರಿಗಳು/ಸಂಚಾರಿ ಪಶು ಚಿಕಿತ್ಸಾಘಟಕದ ಮುಖ್ಯಸ್ಥರು/ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಲ್ಲಿನ ಪಶುವೈದ್ಯರು.
ಪಶುವೈದ್ಯಕೀಯ ಮೇಲ್ವಿಚಾರಕರು:
ಪಶು ಆಸ್ಪತ್ರೆ/ಮೇಲ್ದರ್ಜೆಗೇರಿಸಿದ ಪಶು ಆಸ್ಪತ್ರೆಗಳಲ್ಲಿ ಸಹಾಯಕ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಣೆ
ಹಿರಿಯ ಪಶುವೈದ್ಯಕೀಯ ಪರೀಕ್ಷಕರು: ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶು ಸಹಾಯಕರು:
ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯದ ಕೆಲ ಯೋಜನೆಗಳಲ್ಲಿ/ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರಗಳಲ್ಲಿ ಕಾರ್ಯನಿರ್ವಹಣೆ
ವಾಹನ ಚಾಲಕರು:
ಉಪ ನಿರ್ದೇಶಕರ ಕಛೇರಿ, ಯೋಜನೆಗಳು ಮತ್ತು ಪಶು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆ
ಡಿ ದರ್ಜೆ ನೌಕರರು:
ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ
ಸಾರ್ವಜನಿಕ ಮಾಹಿತಿ ಅಧಿಕಾರಿ: ಡಾ. ಆರ್.ಆರ್.ರವೀಂದ್ರ, ಉಪ ನಿರ್ದೇಶಕರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ: ಡಾ. ಶಂಕರಪ್ಪ, ಸಹಾಯಕ ನಿರ್ದೇಶಕರು ,ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ, ತುಮಕೂರು.
ಜಿಲ್ಲಾ ಕಛೇರಿಯ ವಿಳಾಸ:
ಉಪ ನಿರ್ದೇಶಕರ ಕಛೇರಿ
ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ
ಕುಣಿಗಲ್ ರಸ್ತೆ, ತುಮಕೂರು
ಕ್ರ. |
ತಾಲ್ಲೂಕು |
ಅಧಿಕಾರಿ/ಸಿಬ್ಬಂದಿಗಳ ಹೆಸರು, |
ಮೊಬೈಲ್ ಸಂಖ್ಯೆಗಳು |
ಕಛೇರಿ ದೂರವಾಣಿ ಸಂಖ್ಯೆಗಳು |
1 |
2 |
3 |
4 |
5 |
‘ಎ’ ಗುಂಪಿನ ಅಧಿಕಾರಿಗಳ ಮಾಹಿತಿ: |
||||
1 |
ತುಮಕೂರು |
ಡಾ. ಜಿ.ಶಿವಪ್ರಕಾಶ್, |
9448658683 |
0816-2255580 |
|
|
ಡಾ. ಟಿ. ಶಂಕರಪ್ಪ, |
9448382125 |
|
|
|
ಡಾ.ಟಿ.ಆರ್.ಪ್ರಸನ್ನರೇಣುಕ, |
9844137678 |
|
|
|
ಡಾ.ಡಿ.ಎಸ್.ಹವಾಲದಾರ, |
9448114297 |
|
|
|
ಡಾ. ಎಂ.ಪಿ.ಶಶಿಕುಮಾರ್, |
9880996030 |
0816-2251214 |
2 |
ಮಧುಗಿರಿ |
ಡಾ.ಜಿ.ಸಂಜೀವರಾಯ, |
9980976980 |
08137-282310 |
3 |
ಕುಣಿಗಲ್ |
ಡಾ.ಎನ್.ರಾಜಶೇಖರ್, |
9448718520 |
08132-220331 |
|
|
ಡಾ.ಟಿ.ಎ.ದೇವರಾಜು, |
9448675833 |
08132-223346 |
4 |
ಗುಬ್ಬಿ |
ಡಾ. ಎನ್. ಲಿಂಗರಾಜಣ್ಣ |
9449979583 |
08131-222560 |
|
|
ಡಾ. ಶಶಿಕಾಂತ್ ಎಸ್.ಬಿ. |
9449683484 |
08131-231540 |
5 |
ಚಿ.ನಾ.ಹಳ್ಳಿ |
ಡಾ. ಎಂ.ಸಿ.ಶಿವಾನಂದ, |
9448748931 |
08133-267403 |
|
|
ಡಾ. ಎಂ. ಮಂಜುನಾಥ್, |
9449307407 |
- |
6 |
ಶಿರಾ |
ಡಾ. ಜಿ.ಎಂ.ನಾಗರಾಜ, |
9880582473 |
08135-275274 |
|
|
ಡಾ.ಲಕ್ಷ್ಮಿನಾರಾಯಣಪಟೇಲ್, |
9448924456 |
08135-272538 |
|
|
ಡಾ.ಕೃಷ್ಣಮೂರ್ತಿ, |
9448827263 |
- |
7 |
ತುರುವೇಕೆರೆ |
ಡಾ.ವಿ.ಎನ್.ಸತ್ಯನಾರಾಯಣರೆಡ್ಡಿ, |
9448979378 |
08139-287391 |
|
|
ಡಾ.ಆನಂದಗುಪ್ಪ,ಸಹಾಯಕ ನಿರ್ದೇಶಕರು, ಪ.ಆ.ಮಾಯಸಂದ್ರ |
9449885802 |
08139-277779 |
8 |
ತಿಪಟೂರು |
ಡಾ.ಕೆ. ರಾಮಣ್ಣ,ಸಹಾಯಕ ನಿರ್ದೇಶಕರು, ಪ.ಆ. ತಿಪಟೂರು |
9483438401 |
08134-250002 |
|
|
ಡಾ. ಮಿರ್ಜಾಬಷೀರ್, |
9448104973 |
08134-258004 |
9 |
ಕೊರಟಗೆರೆ |
ಡಾ.ಹೆಚ್.ಆರ್.ನಂಜುಂಡಪ್ಪ, |
9448688996 |
08138-232147 |
|
|
ಡಾ.ಎಲ್.ನಟರಾಜ್, |
9900735838 |
- |
10 |
ಪಾವಗಡ |
ಡಾ. ಜಿ.ಎಂ. ಹನುಮಪ್ಪ, |
9448533753 |
08136-244511 |
ಕೊನೆಯ ಮಾರ್ಪಾಟು : 2/15/2020
ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕ...