অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಾಕಿ ಸಾಕಣೆ

ಚಾಕಿ ಸಾಕಣೆ ಎಂದರೇನು ?

ಚಾಕಿ ಸಾಕಣೆ ಎಂದರೇನು?

ಚಾಕಿ ಎಂದರೆ ರೇಷ್ಮೆ ಹುಳು ಸಾಕಣೆಯ ಮೊದಲೆರಡು ಹಂತಗಳು. ಚಾಕಿ ಹುಳುಗಳನ್ನು ಕ್ರಮವಾಗಿ ಸಾಕದಿದ್ದರೆ,ಮುಂದಿನ ಹಂತದ ಬೆಳೆ ನಷ್ಟವಾಗುವುದು. ಆದ್ದರಿಂದ ಚಾಕಿಯು ಅತ್ಯಂತ ಸೂಕ್ಷ್ಮವಾದ ಅವಧಿಯಾಗಿದೆ. ಆಗ ನಿಗದಿ ಪಡಿಸಿದ ಉಷ್ಣತೆ ಮತ್ತು ತೇವಾಂಶ , ಸ್ವಚ್ಛ ಪರಿಸ್ಥಿತಿ, ಗುಣ ಮಟ್ಟದ ಮೃದು ಎಲೆಗಳು, ಉತ್ಪಾದನೆ ಸೌಲಭ್ಯಗಳು ಎಲ್ಲಕ್ಕೂ ಮಿಗಿಲಾಗಿ ತಾಂತ್ರಿಕ ಕೌಶಲ್ಯ ಅಗತ್ಯ.

ವಾಣಿಜ್ಯ ಚಾಕಿ ಸಾಕಣೆ ಕೇಂದ್ರಗಳು

ವಾಣಿಜ್ಯ ಚಾಕಿ ಸಾಕಣೆ ಮಾದರಿಯನ್ನು ಸಿ ಎಸ್ ಆರ್ ಟಿಐ , ಮೈಸೂರು,ವಾರ್ಷಿಕ 1, 60, 000dflsಬ್ರಷ್ ಮಾಡುವ ಸಾಮರ್ಥ್ಯವಿರುವ, ಪ್ರತೀ ತಂಡದಲ್ಲಿ 5000 dfls ಗಳ0ತೆ ವರ್ಷದಲ್ಲಿ 32 ತಂಡಗಳಲ್ಲಿ ಉತ್ಪಾದನೆ ಸಾಮರ್ಥ್ಯವಿರುವ ವ್ಯವಸ್ಥೆಮಾಡಿತು. ಈ ಮಾದರಿಯನ್ನು ಯಶಸ್ವಿಯಾಗಿ 2 ವರ್ಷ ಪರೀಕ್ಷಿಸಿದ ನಂತರ , ಇದು ದೇಶದ ರೇಷ್ಮೆ ಬೆಳೆಯುವ ಪ್ರಮುಖ ಕೇಂದ್ರಗಳಲ್ಲಿ ಜನಪ್ರಿಯವಾಯಿತು

ವಾಣಿಜ್ಯ ಚಾಕಿ ಸಾಕಣೆ ಕೇಂದ್ರಗಳಲ್ಲಿ ಇರಲೇ ಬೇಕಾದವು ಅನುಕೂಲತೆಗಳು.

  • ವಾಣಿಜ್ಯ ಚಾಕಿ ಸಾಕಣೆ ಕೇಂದ್ರಗಳು ತಮ್ಮದೆ ಆದ ಚಾಕಿ ನಿರಾವರಿ ಹಿಪ್ಪೆನೆರಳೆ ತೋಟವನ್ನು ಹೊಂದಿರಬೇಕು. ಚಾಕಿ ಸಾಕಣೆ ಮನೆ ಮತ್ತು ಅಗತ್ಯ ಉಪಕರಣಗಳು ಇರಬೇಕು.ಎಲ್ಲಕ್ಕೂ ಮಿಗಿಲಾಗಿ ತರಬೇತಿ ಪಡೆದ , ಕುಶಲತೆಯುಳ್ಳ , ವೈಜ್ಞಾನಿಕ ಸಾಕಣೆಯ ಅನುಭವವಿರುವ ಉತ್ತಮ ಕೆಲಸಗಾರರು ಅವಶ್ಯ.
  • ರೇಷ್ಮೆ ಮೊಟ್ಟೆಗಳನ್ನು ಗ್ರಾನೇಜುಗಳಿಂದ ಪಡೆಯ ಬೇಕು. ಹಿಪ್ಪೆನೇರಳೆ 120 ರಿಂದ 150 ಎಕರೆ ತೋಟವನ್ನು ಹೊಂದಿದ 80 ರಿಂದ 100ರೇಷ್ಮೆ ಬೆಳೆಗಾರರು ಚಾಕಿ ಕೇಂದ್ರದ ಸುತ್ತ ಮುತ್ತಳೂ ಇರಬೇಕು.

ವಾಣಿಜ್ಯ ಚಾಕಿ ಕೇಂದ್ರದ ಪ್ರಯೋಜನೆಗಳು

  • ಎಳೆಯ ಸದೃಢವಾದ ಅರೋಗ್ಯವಂತ ಹುಳುಗಳನ್ನು ಬೆಳೆಸುವುದು, ಸ್ಥಿರವಾದ ಕಕೂನು ಬೆಳೆ ಮತ್ತು ಹೆಚ್ಚಿನ ಕಕೂನು ಉತ್ಪನ್ನದ ಖಾತ್ರಿ ನೀಡುವುದು. .
  • ಅರೋಗ್ಯವಂತ ಒಂದೆ ರೀತಿಯ ರೇಷ್ಮೆ ಹುಳುಗಳು, ಲಾರ್ವ ಮತ್ತು ಕುಕೂನುಗಳ ಉತ್ಪಾದನೆ ಯಾಗುವುದು.
  • ಸೊಂಕು ತಗುಲುವ, ರೋಗ ಹರಡುವ ಅವಕಾಶಗಳು ಕಡಿಮೆ ಯಾಗತ್ತವೆ.
  • ಕ್ರಮವಾದ ಮೊಟ್ಟೆಯ ಕೋಶಾವಸ್ಥೆಯು ಉತ್ತಮ ಮರಿಯಾಗುವಿಕೆಗೆ ಕಾರಣವಾಗುವುದು.
  • ಸಾಕಣೆ ಸಮಯದಲ್ಲಿ, ಲಾರ್ವ ಅಗದಿರುವ ಶೇಕಡ ಪ್ರಮಾಣ ಕಡಿಮೆಯಾಗುವುದು ಹಾಗೂ ಬೆಳೆಯ ಉತ್ಪನ್ನ ಹೆಚ್ಚುವುದು.

ಚಾಕೀ ಸಾಕಣೆ, ಅದರಲ್ಲಿನ ಕ್ರಮಗಳು, ವಾಣಿಜ್ಯಸಿ ಆರ್ ಸಿ ಗಳ ನೊಂದಣೆಇತ್ಯಾದಿಗಳ ಇನ್ನು ಹೆಚ್ಚು ಮಾಹಿತಿಗಾಗಿ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರನ್ನುಸಂಪರ್ಕಿಸಿ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate