ವಿಳಾಸ | ಶ್ರೆನಿಕರಾಜ ಯಲವಟ್ಟಿರವರ ತೋಟ |
---|---|
ಸ್ಥಳ | ಚಿನಿಕಟ್ಟಿ,ಹಾವೇರಿ ಜಿಲ್ಲೆ |
ಕೃಷಿಕ | ಶ್ರೀ ಶ್ರೆನಿಕರಾಜ ಯಲವಟ್ಟಿ |
ಬೆಳೆ | ಬತ್ತ |
ಕೃಷಿ ಭೂಮಿ | 6 ಎಕರೆಗಳು |
ವರದಿಗಾರ | ಶ್ರೀ ವಿಶ್ವಾಸ್ |
ದಿನಾಂಕ | March 22, 2014 |
ಇವರಿಗೆ 20 ಹಸುಗಳು ಮತ್ತು ಎಮ್ಮೆಗಳಿದ್ದು ,ಇದರ ಮೂಲಕ ಕೃಷಿಗೆ ಬೇಕಾದ ಮಿಶ್ರಗೊಬ್ಬರ ಮತ್ತು ದ್ರವ ರೂಪದ ಗೊಬ್ಬರವನ್ನು ಒದಗಿಸುತ್ತಾರೆ . ಇವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಕೃಷಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.ಶ್ರೀನಿಕರಾಜ್ ರವರ ಕುಟುಂಬವು ತಲತಲಾಂತರಗಳಿಂದ ಕೃಷಿಯಲ್ಲಿ ತಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಅವರದು ಕೂಡು ಕುಟುಂಬವಾಗಿದ್ದು 20 ಜನ ಕೂಡಿದ್ದಾರೆ . ಅವರು ಸುಮಾರು ಆರು ಎಕರೆ ಜಮೀನಿನಲ್ಲಿ ಬತ್ತವನ್ನು ಸಾವಯವ ರೀತಿಯಲ್ಲಿ ಬೆಳೆಯುತಿದ್ದಾರೆ. ಹಾಗೆಯೇ ಚಳಿಗಾಲದಲ್ಲಿ ಇದೆ ನೆಲದಲ್ಲಿ ಹೆಸರು ಕಾಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಸ್ವಲ್ಪ ಜಮೀನಿನಲ್ಲಿ ರಾಸಾಯನಿಕ ಕೃಷಿಯನ್ನು ಮಾಡುತ್ತಿದ್ದಾರೆ.
ಇವರು ಇತ್ತೀಚೆಗೆ ಹಸಿರು ಮನೆಯನ್ನು ನಿರ್ಮಿಸಿ ಅಲ್ಲಿ ಕಾಳು ಮೆಣಸಿನ ನರ್ಸರಿಯನ್ನು ಬೆಳೆಸುತ್ತಿದ್ದಾರೆ ಅಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ಸಹ ಅವಕಾಶವಿದೆ . ಜರ್ಬೇರವನ್ನು ಬೆಳೆಸಲು ಯೋಚಿಸುತ್ತಿದ್ದಾರೆ. ಮಳೆಯೂ ಇವರಿಗೆ ನೀರಿನ ಮುಖ್ಯ ಮೂಲವಾಗಿದೆ ಪರ್ಯಾಯವಾಗಿ ಬೋರ್ ವೆಲ್ ವ್ಯವಸ್ಥೆಯನ್ನು ಮಾಡಲಾಗಿದೆ.ಇವರು ಉಬ್ಬರದ ನೀರಾವರಿ,ಸಿಂಪರಣ ನೀರಾವರಿ ,ಹನಿ ನೀರಾವರಿ ಮೂಲಕ ಬೆಳೆಗಳಿಗೆ ನೀರನ್ನು ಒದಗಿಸುತ್ತಾರೆ . ಚಿನ್ನಿಕಟ್ಟಿ ತೀರ ಒಳಭಾಗದಲ್ಲಿದ್ದು ಸೌಲಭ್ಯಗಳು ಸಹ ಕಡಿಮೆ ಇದೆ . ರಾಣಿಬೇನ್ನುರ್ ನಿಂದ ಎರಡು ಬಸ್ ಗಳಲ್ಲಿ ಪ್ರಯಾಣಿಸಿ ಈ ಊರು ತಲುಪಬೇಕಿದೆ. ಈ ಪರಿವಾರವು ಆ ಹಳ್ಳಿಯ ಮಕ್ಕಳಿಗೆ ಶಾಲೆಯನ್ನು ಕಟ್ಟಿಸಲು ಮತ್ತು ಜನರ ದೇಣಿಗೆಯ ಮೂಲಕ ಹಳ್ಳಿಯ ಮಕ್ಕಳಿಗೆ ಒಳ್ಳೆ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 8/29/2019
ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ.ಯ ಪರಿಶಿಷ್ಟ- Iರ, ಪಾರಾ –...
ಬಿಲಿಗೆರೆಪಾಳ್ಯ , ಕೆ. ಬಿ. ಕ್ರಾಸ್ ಹತ್ತಿರ ಇದರ ಬಗ್ಗೆಗಿನ...
ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ