ವಿಳಾಸ | ಶಂಕರ್ ನಾರಾಯಣ್ ಭಟ್ ರವರ ತೋಟ |
---|---|
ಸ್ಥಳ | ಮಜ್ಜಿಗೆ ಹೊಳೆ |
ಕೃಷಿಕ | ಶ್ರೀ ಶಂಕರ್ ನಾರಾಯಣ್ ಭಟ್ |
ಬೆಳೆ | ಅಡಿಕೆ, ತಾಳೆ ಮರಗಳು |
ಕೃಷಿ ಭೂಮಿ | 8.5 ಎಕರೆ |
ವರದಿಗಾರ | ಶ್ರೀ ರಘು |
ದಿನಾಂಕ | 9-Nov-2013 |
ಶಂಕರ್ ನಾರಾಯಣ್ ಭಟ್ಟ್ ಕಳೆದ 38 ವರ್ಷಗಳಿಂದ ರೈತರಾಗಿದ್ದು ಅದರಲ್ಲಿ ಸುಮಾರು 15ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಇತ್ತೀಚಿನ ದಶಕದಲ್ಲಿ ಅವರು ತಮ್ಮ ಪ್ರಾಥಮಿಕ ಗಮನವನ್ನು ಸ್ಥಳೀಯ ತಳಿಯಾದ ” ಮಲ್ನಾಡು ಗಿಡ್ಡ ” ಎಂಬ ಹಸುವಿನ ರಕ್ಷಣೆ ಮತ್ತು ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಅವರ ಈ ಶ್ರಮಕ್ಕಾಗೆ ರಾಷ್ಟೀಯ ಪ್ರಶಸ್ತಿಯು ದೊರೆತಿದೆ. ಸುಮಾರು 8.5 ಎಕರೆಯಾಷ್ಟು ವಿಸ್ತಾರವಾದ ಭೂಮಿಯಲ್ಲಿ ನೀವು 50 ಕ್ಕೂ ಹೆಚ್ಚು ಹಸುಗಳ ಮೇಯುತ್ತಾ ಹರಡಿರುವುದನ್ನು ಕಾಣಬಹುದು.
ಶಂಕರ್ ನಾರಾಯಣ್ ಭಟ್ ಮತ್ತು ಅವರ ಪತ್ನಿ ಹಸುಗಳ ಪಾಲನೆ ಮಾಡುತ್ತಾರೆ. ಅವರಿಗೆ ಹಸುವಿನ ಸಾಕಾಣಿಕೆ ಬಗ್ಗೆ ಇರುವ ಉತ್ಸಾಹ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ. ಮುಂಬರುವ ವರ್ಷಗಳಲ್ಲಿ ಸಾವಯವ ಬೇಸಾಯದ ತರಂಗ ಬೇರೂರುತ್ತದೆ ಎಂಬ ದೃಡವಾದ ನಂಬಿಕೆ ಅವರಲ್ಲಿದೆ, ಸ್ಥಳೀಯ ಹಸುವಿನ ತಳಿಯ ರಕ್ಷಣೆ ಮತ್ತು ದನಗಳ ಪಾಲನೆಯ ಸಂಪೂರ್ಣ ಅವಶ್ಯಕತೆಯೂ ಇದೆ. ಆಸಕ್ತಿ ಇರುವ ಯಾವುದೇ ಯುವ ರೈತನಿಗೂ ಇದರ ಬಗ್ಗೆ ಹೇಳಿಕೊಡಲು ಅವರು ಸಿದ್ಧರಿದ್ದಾರೆ. ಅವರು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ “ಗೋ ಅರ್ಕ” (ಬಟ್ಟಿ ಗೋಮೂತ್ರ) ತಯಾರಿಸುತ್ತಾರೆ. ಅದಲ್ಲದೆ, ತಾವೊಬ್ಬರೆ “ಗೋ ಫಿನೋಲ್ ” ಸಹ ಸಿದ್ಧ ಮಾಡುತ್ತಾರೆ. ಸ್ಥಳೀಯ ಹಸವಿನ ತಳಿಯ ಸಂರಕ್ಷಣೆಯ ಮಹತ್ವದ ಬಗ್ಗೆ ಬೀದಿ ನಾಟಕಗಳ ಮೂಲಕ ಜಾಗೃತಿಯನ್ನು ಹರಡಲು ಸದಾ ಆಸಕ್ಥರಾಗಿರುತ್ತಾರೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 8/30/2019
ಚನ್ನಪ್ಪರವರ ತೋಟ, ತಿಪಟೂರು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯ...