ವಿಳಾಸ | ಚನ್ನಪ್ಪರವರ ಕೃಷಿಕೇಂದ್ರ |
---|---|
ಸ್ಥಳ | ಮತ್ತಿಹಳ್ಳಿ, ತಿಪಟೂರು ತಾಲೂಕು |
ಕೃಷಿಕ | ಶ್ರೀ ಈಶ್ವರಪ್ಪ |
ಬೆಳೆ | ತೆಂಗು ಮತ್ತು ಅಡಿಕೆ |
ಕೃಷಿ ಭೂಮಿ | 2.39 ಎಕರೆಗಳು |
ವರದಿಗಾರ | ಶ್ರೀಮತಿ ಪವಿತ್ರಾ |
ದಿನಾಂಕ | Dec 21, 2013 |
ಎಂ.ಬಿ.ಚನ್ನಪ್ಪರವರು ತಮ್ಮ ಜೀವನವಡೀ ರೈತರಾಗಿಯೇ ಜೀವನ ನಡೆಸಿದ್ದು, ಕಳೆದ 6 ವರ್ಷಗಳಿಂದ ಸಾವಯವ ಕೃಷಿ ರೂಢಿಸಿಕೊಂಡಿದ್ದಾರೆ. ಇದಕ್ಕೆ ಮೂಲ ಕಾರಣ, ಧೃಢ ನಿರ್ಣಯ ಕೈಗೊಂಡ ಇವರ ಮಗ, ಎಂ.ಸಿ.ಈಶ್ವರಪ್ಪರವರು. ಇವರ ಮೂಲ ಬೆಳೆಗಳು ತೆಂಗು ಮತ್ತು ಅಡಿಕೆ. ಇವರ ಮಗ ಹೇಳುವುದೇನೆಂದರೆ, “ಸಾವಯವ ಕೃಷಿಗೆ ಮಾರ್ಪಾಡಾಗುವಂತೆ ನಮ್ಮ ತಂದೆಯ ಮನವೊಲಿಸಲು ತುಂಬಾ ಪ್ರಯತ್ನ ಮಾಡಿದ್ದೆವು.” ಸದ್ಯಕ್ಕೆ ಇವರು 2.39 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ತಮ್ಮ ತಂದೆಯವರನ್ನು ತಿಪಟೂರಿನ ಎ.ಪಿ.ಎಮ್.ಸಿ ಇಲಾಖೆಯು ಅತ್ಯುತ್ತಮ ಸಾವಯವ ಕೃಷಿಕರೆಂದು ಗುರುತಿಸಲ್ಪಟ್ಟಿದ್ದಾರೆಂಬ ಸಂಗತಿಯನ್ನು ಇವರು ಹೆಮ್ಮೆಯಿಂದ ಹೇಳಿಕೊಂಡರು.
ಎಂ.ಸಿ.ಈಶ್ವರಪ್ಪರವರು ತೆಂಗಿನ ಹಾಗೂ ಅಡಿಕೆಯ ಸಸಿಗಳನ್ನು ಹೇಗೆ ಬೆಳೆಯಬೇಕು ಮತ್ತು ನಿರ್ವಹಿಸಬೇಕೆಂಬುದರ ಬಗ್ಗೆ ದೇಶೀಯ ಕೌಶಲ್ಯವನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದಾರೆ. ಒಂದು ವರ್ಷದಲ್ಲಿ, ಇವರು 500 ತೆಂಗಿನ ಹಾಗೂ 1000 ಅಡಿಕೆಯ ಸಸಿಗಳನ್ನು ಬೆಳೆಯುತ್ತಾರೆ. ಅಡಿಕೆ ತಟ್ಟೆ ಮತ್ತು ಬಟ್ಟಲಗಳನ್ನು ತಯಾರಿಸಲು ಒಂದು ಯಂತ್ರವನ್ನು ಖರೀದಿಸಬೇಕೆಂಬ ಇವರ ಮಹೋನ್ನತ ಯೋಜನೆಗೆಂದೆ ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಇವರು ತಮ್ಮನ್ನು ತಾವು ಇನ್ನೂ ಒಬ್ಬ ಸಾವಯವ ಕೃಷಿಯ ವಿದ್ಯಾರ್ಥಿಯೆಂದು ಪರಿಗಣಿಸುತ್ತಾರೆ ಹಾಗೂ ಬೇರೆ ಸಾವಯವ ರೈತರನ್ನು ಶ್ರಮವನ್ನು ಮೆಚ್ಚುತ್ತಾರೆ. ತಾವು ಇನ್ನೂ ಬೆಳೆಯುಲು ಇಚ್ಛಿಸುತ್ತಾರೆಂಬ ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡರು. “ಕ್ರೊಟಾನ್(ಅಡಿoಣoಟಿ) ಸಸ್ಯಗಳು ಅಂರ್ತಜಲ ಮಟ್ಟವನ್ನು ಮಾಪಕ ಮಾಡುವುದರಲ್ಲಿ ರೈತನಿಗೆ ಸಹಾಯಕಾರಿಯಾಗಿವೆ.” ಎಂಬ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡರು.
ಇವರು ತಮ್ಮ ಸಾವಯವ ರೈತರ ಸಮುದಾಯದ ಸದಸ್ಯರಾಗಿದ್ದು, ಅದರ ಮಾಸಿಕ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇಲ್ಲಿ, ಎಲ್ಲಾ ರೈತರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಬೇರೆ ರೈತರ ಕಲಿಕೆಗೆ ಇದೊಂದು ಉತ್ತಮ ವೇದಿಕೆಯಾಗಿದೆ.
ಮೂಲ : ಸಾವಯವ ಕೃಷಿ ಪರಿವರ್
ಕೊನೆಯ ಮಾರ್ಪಾಟು : 10/26/2019
ಶಂಕರ್ ನಾರಾಯಣ್ ಭಟ್ ರವರ ತೋಟ, ಮಜ್ಜಿಗೆ ಹೊಳೆ ಬಗ್ಗೆಗಿನ ಮ...