অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂದಿರಾಗಾಂಧಿ ಮಾತೃತ್ವ ಸಹ ಯೋಗ

ಇಂದಿರಾಗಾಂಧಿ ಮಾತೃತ್ವ ಸಹ ಯೋಗ

ಇಂದಿರಾಗಾಂಧಿ  ಮಾತೃತ್ವ ಸಹ ಯೋಗ   ಯೋಜನೆ

2010-11ನೇ ಸಾಲಿನಿಂದ ಇಂದಿರಾಗಾಂದಿ ಮಾತೃತ್ವ ಸಹಯೋಗ ಯೋಜನೆ ಯನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ  2 ಜಿಲ್ಲೆಗಳಾದ   ಕೋಲಾರ ಹಾಗೂ ಧಾರವಾಡದಲ್ಲಿ  ಜಾರಿಗೊಳಿಸಲಾಗುತ್ತಿದೆ.ಇದರಡಿ ಗಬಿಣಿಯರಿಗೆ ಹಾಗೂ ಹಾಲುಣಿಸುವ ಮಹಿಳೆಯರಿಗೆ ,ಪೌಷ್ಠಿಕತೆ ಕುರಿತು ಶಿಕ್ಷಣ, ಆರೋಗ್ಯ ಸಲಹೆ ಙಅಈ ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಮಗ್ರ ಶಿಶು ಅಬಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳನ್ನು ಪ್ರಮುಖ ವೇದಿಕೆಯನ್ನಾಗಿ ಉಪಯೋಗಿಸಿಕೊಳ್ಳಲಾಗುತ್ತದೆ.

ಈ ಯೋಜನೆಯು 100% ಕೇಂದ್ರ ಸರ್ಕಾರದ  ಧನ ಸಹಾಯ ಯೋಜನಯಾಗಿದೆ. 0-6  ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು (ಙಅಈ)ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು     ಹಾಗೂ ಗಬಿಣಿಯ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು  ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುವುದು. ದ್ವಿತೀಯ  ತ್ರೈಮಾಸದಲ್ಲಿ ಮೊದಲನೇ ಕಂತು ರೂ.1500/-,   ಹೆರಿಗೆಯ ನಂತರ 3 ತಿಂಗಳಲ್ಲಿ ದ್ವಿತೀಯ ಕಂತು ರೂ.1500/- ಹಾಗೂ ಹೆರಿಗೆಯ ನಂತರ 6 ತಿಂಗಳಲ್ಲಿ ತೃತೀಯ ಕಂತು  ರೂ.1000/- ಗಳ ಪ್ರೋತ್ಸಾಹ ಧನವನ್ನು  ನೀಡಲಾಗುವುದು.  ಒಟ್ಟು  ರೂ 4000 ಗಳನ್ನು ನೀಡಲಾಗುವುದು.  ಮೇಲ್ಕಂಡ ಫಲಾನುಭವಿಗಳು ಓಖಊಒ ಅಡಿ ಜನನಿ ಸುರಕ್ಷಾ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಪ್ರತಿ ಗರ್ಭಿಣಿಯರ ಮತ್ತು ಬಾಣಂತಿಯರಿಗೆ ಎಲ್ಲಾ ನಗದು ಹಣವನ್ನು ಪಾವತಿಸಿದ ನಂತರ  ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.200/-ಹಾಗೂ ಸಹಾಯಕಿಯರಿಗೆ ರೂ.100/-ಪ್ರೋತ್ಸಾಹಧನವನ್ನು ನೀಡಲಾಗುವುದು. 2012-13 ನೇ ಸಾಲಿನಲ್ಲಿ ರೂ.1835.07 ಲಕ್ಷಗಳ ಆಯ್ಯವಯ್ಯವನ್ನು ಒದಗಿಸಿದ್ದು, ರೂ.1676.18 ಲಕ್ಷಗಳನ್ನು 82408ಫಲಾನುಭವಿಗಳಿಗೆ ಒದಗಿಸಲಾಗಿದೆ.

ದಿನಾಂಕ

10-5-02 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ತನ್ನ 27 ನೇ ವಿಶೇಷ  ಅದಿವೇಶನದಲ್ಲಿ ಆಳವಡಿಸಿದ ಘೋಷಣೆ

1.

ಮಕ್ಕಳಿಗೆ ಮೊದಲ ಆದ್ಯತೆ

2.

ಬಡತನ ನಿರ್ಮೂಲನ ಮಾಡಿ,ಮಕ್ಕಳನ್ನು ಆಸ್ತಿಯನ್ನಾಗಿ ತೊಡಗಿಸಿ

3.

ಯಾವುದೇ ಮಗುವನ್ನು ಹಿಂದೆ ಸರಿಯಲು ಬಿಡಬೇಡಿ

4.

ಪ್ರತಿ ಮಗುವಿನ ಆರೈಕೆ ಮಾಡಿ

5.

ಪ್ರತಿ ಮಗುವಿಗೆ ಶಿಕ್ಷಣ ಕೊಡಿ

6.

ಮಕ್ಕಳನ್ನು ಅಪಾಯ ಮತ್ತು  ಶೋಷಣೆಯಿಂದ  ರಕ್ಷಿಸಿ

7.

ಯುದ್ಧದಿಂದ ಮಕ್ಕಳನ್ನು ರಕ್ಷಿಸಿ

8.

ಎಚ್ಐವಿ/ ಏಯ್ಡ್ಸ್ ವಿರುದ್ಧ ಹೋರಾಡಿ

9.

ಮಕ್ಕಳು ಹೇಳುವುದನ್ನು ಕೇಳಿ ಮತ್ತು ಅವರ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಿ

10.

ಭೂ ಮಂಡಲವನ್ನು ಮಕ್ಕಳಿಗಾಗಿ ರಕ್ಷಿಸಿ ಇಡಿ

ಕೊನೆಯ ಮಾರ್ಪಾಟು : 9/30/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate