ಗ್ರಾಮೀಣ ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರೆಸುವುದನ್ನು ಉತ್ತೇಜಿಸಲು, ಪ್ರಾಥಮಿಕ ಮತ್ತು ಪ್ರೌಢ ತರಗತಿಗಳಲ್ಲಿ ಶಾಲೆ ಬಿಡುವುದನ್ನು ತಪ್ಪಿಸಲು; ಹಾಗೂ ಅವರ ಶಿಕ್ಷಣ ಮಟ್ಟವನ್ನು ಉತ್ತಮಪಡಿಸಲು ಅವರಿಗೆ ಶಿಷ್ಯ ವೇತನ ನೀಡಲಾಗುವುದು. 5ನೇ ತರಗತಿಯಿಂದ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ 25 ರೂಪಾಯಿಗಳಂತೆ ಮತ್ತು 8ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ 50 ರೂಪಾಯಿಗಳಂತೆ ವರ್ಷದಲ್ಲಿ ಹತ್ತು ತಿಂಗಳು ಶಿಷ್ಯ ವೇತನವನ್ನು ನೀಡಲಾಗುತ್ತದೆ ಶಿಷ್ಯ ವೇತನವನ್ನು, ಹಿಂದಿನ ವರ್ಷದ ತರಗತಿಯಲ್ಲಿ ಕನಿಷ್ಠ ಶೇಕಡ 80 ರಷ್ಟು ಹಾಜರಾತಿ ಪಡೆದು ಮತ್ತು ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದವರಿಗೆ ನೀಡುವಂತೆ ಯೋಜಿಸಲಾಗಿದೆ.ಸದರಿ ಯೋಜನೆಯಡಿ ಸೌಲಭ್ಯ ಪಡೆಯುವ ಅಭ್ಯರ್ತಿ ಯ ಕುಟುಂಬದ ವಾರ್ಶಿಕ ವರಮಾನ 10,000 ರೂಪಾಯಿಗಳಿಗೆ ಮೀರಿರಬಾರದು ಮತ್ತು ಬಾಲಕಿಯು 20,000 ಕ್ಕಿಂತ ಜನಸಂಖ್ಯೆ ಕಡಿಮೆ ಇರುವ ಗ್ರಾಮದ ನಿವಾಸಿಯಾಗಿರಬೇಕು ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
2013-14ನೇ ಸಾಲಿನಲ್ಲಿ ಈ ಯೋಜನೆಯಡಿ ರೂ.79.00 ಲಕ್ಷಗಳ ಅನುದಾನ ಒದಗಿಸಲಾಗಿದ್ದು, ಮಾರ್ಚ್ 2014ರ ಅಂತ್ಯಕ್ಕೆ ರೂ.64.69 ಲಕ್ಷಗಳ ವೆಚ್ಚ ಭರಿಸಲಾಗಿದೆ.
2013-14ನೇ ಸಾಲಿನಲ್ಲಿ ಈ ಯೋಜನೆಯಡಿ ಅನುದಾನ ಒದಗಿಸಿರುವುದಿಲ್ಲ.
ಕೊನೆಯ ಮಾರ್ಪಾಟು : 1/28/2020
ಇದು ಸಣ್ಣ ರೈತನೊಬ್ಬನ ಸುದ್ದಿ ಅವನು ವಿಭಿನ್ನ ಮಾದರಿ ಸಂಪನ್...
ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವ...
೧೯೯೨ರಲ್ಲಿ ಸಾರಾಯಿ ವಿರುದ್ಧ ಚಳುವಳಿಯಿಂದಾಗಿ, ಭಾರತದ ಆಂಧ್...
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ