অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಜನೆಗಳು

ಯೋಜನೆಗಳು

ತಾಂಡಾದ ಜನರ ಅಭಿವೃದ್ಧಿಗಾಗಿ ನಿಗಮ ಮತ್ತು ಇಲಾಖೆಗಳ ಯೋಜನೆಗಳು ಈ ಕೆಳಗಿನಂತಿವೆ.

ನಿಗಮದ ಕಾರ್ಯ ಯೋಜನೆಗಳು

  1. ತಾಂಡಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು:-
    • ತಾಂಡಗಳಲ್ಲಿ ಸರ್ವಋತು ರಸ್ತೆಗಳು ಮತ್ತು ಚರಂಡಿಗಳು
    • ಹತ್ತಿರದ ತಾಂಡಗಳ ಮದ್ಯದ ಸಂಪರ್ಕ ರಸ್ತೆ
    • ಮುಖ್ಯ ರಸ್ತೆಯಿಂದ ತಾಂಡಾಗಳಿಗೆ ಸಂಪರ್ಕ ರಸ್ತೆ
    • ಶುದ್ದ ಕುಡಿಯುವ ನೀರು
    • ಬೀದಿ ದೀಪಗಳು ಮತ್ತು ವಿದ್ಯುತ್ ಸಂಪರ್ಕ
    • ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ

  2. ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು:-
    • ಆರೋಗ್ಯ ಕೇಂದ್ರಗಳು
    • ಆರೋಗ್ಯ ತಪಾಸಣಾ ಶಿಬಿರ
    • ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ, ಋತುಮಾನ ಶಾಲೆಗಳು
  3. ತಾಂಡಾ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳು:-
    • ನಿಗಮ ಮತ್ತು ಸರ್ಕಾರ ಅಭಿವೃದ್ದಿ ಯೋಜನೆಗಳ ಮಾಹಿತಿ ಒದಗಿಸುವುದು.
    • ಪ್ರಚಲಿತ ಕಾಯ್ದೆಗಳು-ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕು, ಕೆಲಸದ ಹಕ್ಕು,
    • ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕøತಿಕ ಆಚಾರ ವಿಚಾರ ಸದ್ ಸಂಪ್ರದಾಯಗಳಿಗೆ ಉತ್ತೇಜನ
  4. ಆರ್ಥಿಕ ಮೂಲಭೂತ ಸೌಕರ್ಯಗಳು:-
    • ಪ್ರತಿಭಾವಂತ ವಿದ್ಯಾವಂತ ನಿರುದ್ಯೋಗಿ ಆದ್ಯತೆ ಮೇರೆಗೆ ಬಿ.ಇ ಮತ್ತು ಇಂಜಿನಿಯರಿಂಗ್ ಡಿಪ್ಲೋಮೊ ಇವರಿಗೆ ಗುತ್ತಿಗೆದಾರರಾಗಿ ಲೈಸೆನ್ಸ್ ದೊರೆಯುವಂತೆ ಸಂಬಂಧಿಸಿದ ಇಲಾಖೆಗಳ ಕಾರ್ಯಕ್ರಮದೊಂದಿಗೆ ಸಮನ್ವಯ ಸಾಧಿಸುವುದು.
    • ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಮೇಷನ್, ಕಾರ್‍ಪೇಂಟರಿ/ಬಿಲ್ಡಿಂಗ್, ಎಲೆಕ್ಟ್ರಿಕಲ್, ಪೈಂಟಿಂಗ್, ಕಂಪ್ಯೂಟರ್, ಬಾರ್‍ಬೈಂಡಿಂಗ್, ಮೋಟಾರ್ ರೀಪೇರಿ, ಬೋರ್‍ವೆಲ್, ಗೃಹೋಪಯೋಗಿ ಯಂತ್ರಗಳ ರಿಪೇರಿ,  ತೋಟಗಾರಿಕೆ ತರಬೇತಿ ಮುಂತಾದ ವೃತ್ತಿ ಕೌಶಲ್ಯ ತರಬೇತಿ ಕೇಂದ್ರ.
    • ವಿದ್ಯಾವಂತ ಯುವತಿಯರಿಗೆ ಹೊಲಿಗೆ ತರಬೇತಿ, ಉಡುಪು ತಯಾರಿ, ಬ್ಯೂಟಿ ಪಾರ್ಲರ್, ಕಸೂತಿ, ಕಂಪ್ಯೂಟರ್, ಜರಿ, ಜರ್ದೋಸಿ ಕೌಶಲ್ಯ  ಒದಗಿಸುವ ತರಬೇತಿ ಕೇಂದ್ರಗಳು.
    • ಬಂಜಾರ ಉಡುಗೆ ತೊಡಿಗೆಗಳ ಆಧುನಿಕ ರೂಪ ನೀಡಲು ಬಂಜಾರ ಕಸೂತಿ ಕೌಶಲ್ಯಕ್ಕೆ ಹೊಸ ತಂತ್ರಜ್ಞಾನ ಒದಗಿಸಿ, ಗುಣವiಟ್ಟ ಹೆಚ್ಚಿಸುವುದು.
    • ಬಂಜಾರ ಉಡುಪು ತಯಾರಿಕೆಗೆ ಬೇಕಾದ ಕಚ್ಚಾವಸ್ತು, ಮಾರುಕಟ್ಟೆ ಮಾಹಿತಿ ನೀಡಿ, ಉಡುಪುಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಡುವುದು.
  5. ತಾಂಡಾಗಳ ವಸತಿ ಯೋಜನೆ.
    • ವಸತಿ ಕೊರತೆ ಇರುವ ತಾಂಡಾಗಳ, ಕುಟುಂಬಗಳ ಅಗತ್ಯತೆಯನ್ನಾಧರಿಸಿ ನಿವೇಶನ ಒದಗಿಸುವುದು.
    • ತಾಂಡಾಗಳ ಪಕ್ಕದಲ್ಲಿ ಜಮೀನು ದೊರೆತಲ್ಲ್ಲಿ ಖರೀದಿಸಿ ತಾಂಡಾ ಬಡಾವಣೆಯನ್ನು ನಿರ್ಮಿಸುವುದು.
    • ಹತ್ತಿರ ಇರುವ ಮೂರು ನಾಲ್ಕು ತಾಂಡಾಗಳ ಪರದಿಯಲ್ಲಿ ಸರ್ಕಾರಿ/ಖಾಸಗಿ ಜಮೀನು ಪಡೆದು  ಬಡಾವಣೆ ರಚಿಸಿ ಕರ್ನಾಟಕ ಗೃಹ ಮಂಡಳಿ/ವಸತಿ ಯೋಜನೆಗಳ ಮೂಲಕ ಮನೆ ಕಟ್ಟಿಸಿ ಕೊಡುವುದು.
  6. ತಾಂಡಾಗಳ ಸಕ್ರಮೀಕರಣ ಕಂದಾಯ ಗ್ರಾಮಗಳಾಗಿ ಪರಿವರ್ತನೆ:
    • ಗೋಮಾಳ, ಸರ್ಕಾರಿ ಜಮೀನು, ಅರಣ್ಯ ಮತ್ತು ಖಾಸಗಿ ಜಮೀನುಗಳಲ್ಲಿ ನಿರ್ಮಾಣಗೊಂಡ  ತಾಂಡಾ ನಿವಾಸಿಗಳ ಮನೆಗಳನ್ನು ತಜ್ಞರ ಸಮಿತಿಯ ಶಿಫಾರಸ್ಸು ಮತ್ತು ಸರ್ಕಾರದ ಆದೇಶದನ್ವಯ   ಸಕ್ರಮಣಗೊಳಿಸಲು ನೆರವು.
    • ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ನೆರವು.
    • ಅರಣ್ಯ ಕಾಯ್ದೆ 2006ರ ಅನ್ವಯ ತಾಂಡಾದ ನಿವಾಸಿಗಳು ಉಳಿಮೆ ಮಾಡುತ್ತಿರುವ ಅರಣ್ಯ ಜಮೀನಿನ ಹಕ್ಕು ಪತ್ರ ಕೊಡಿಸಲು ನೆರವು.
  7. ಬಂಜಾರ ಭಾಷಾಭಿವೃದ್ದಿ ಮತ್ತು ಸಾಂಸ್ಕøತಿಕ ಚಟುವಟಿಕೆಗಳು
    • ಬಂಜಾರ ಭಾಷಾ ಅಭಿವೃದ್ದಿಗೆ ಪ್ರೋತ್ಸಾಹ, ಪ್ರಚಲಿತದಲ್ಲಿರುವ ಬಂಜಾರ ಒಗಟು, ಗಾದೆ, ಜನಪದ ಹಾಡು, ಪೂಜಾ ವಿಂತಿ, ಕಸಳಾತ್ ಮುಂತಾದವುಗಳ ಸಂಗ್ರಹಣೆ ಮತ್ತು ಮುದ್ರಣ
    • ಬಂಜಾರ ಭಾಷಾ ಶಬ್ದಕೋಶ
    • ಬಂಜಾರ ಭಾಷೆಗೆ ಬಳಸುವ ಲಿಪಿ ಕುರಿತು ನಿರ್ಣಯ
    • ನಿಗಮದಿಂದ ಮಾಸ ಪತ್ರಿಕೆ ಹೊರಡಿಸುವುದು
    • ಬಂಜಾರ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ
    • ಬಂಜಾರ ಪರಾಂಪರಿಕ ಪದ್ದತಿಗಳ ಬಲವರ್ಧನೆ.
  8. ಸೂರಗೊಂಡನಕೊಪ್ಪ ಸೇವಾಲಾಲ್ ಜನ್ಮ ಸ್ಥಳದ ಸಮಗ್ರ ಅಭಿವೃದ್ದಿ ಯೋಜನೆ:-
    • ಸಂತ ಶ್ರೀ ಸೇವಾಲಾಲ್ ಮಹಾಮಠದ ಜೀರ್ಣೋದ್ಧಾರ, ಹಾಗೂ ಆಗಮಿಸುವ ಯಾತ್ರಿಗಳಿಗಾಗಿ ಮೂಲಭೂತ ಸೌಕರ್ಯ ಒದಗಿಸುವುದು,
    • ಮಹಾಮಠದ ವ್ಯಾಪ್ತಿಯಲ್ಲಿ ಸಭಾ ಭವನ, ಅತಿಥಿ ಗೃಹ, ತರಬೇತಿ ಕೇಂದ್ರ, ವಸತಿ ಶಾಲೆ, ವಸ್ತು ಸಂಗ್ರಾಹಲಯ, ಗ್ರಂಥಾಲಯ, ತಾಂಡಾ ಮಾದರಿ ಥೀಮ್,ಗೋಶಾಲೆ ಮತ್ತು ಗೋತಳಿ ಅಭಿವೃದ್ದಿ ಕೇಂದ್ರ.
  9. ಉದ್ಯೋಗಸ್ಥ/ತರಬೇತಿ ಪಡೆಯುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ :-
    • ಬೆಂಗಳೂರು ನಗರದಲ್ಲಿ ಉದ್ಯೋಗ ಪಡೆದ ಮತ್ತು ಉದ್ಯೋಗ ಪಡೆಯುಲು ಸಂದರ್ಶನಕ್ಕೆ ಬರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸಲು
    • ವಿದ್ಯಾವಂತ ಯುವತಿಯರಿಗೆ ವೃತ್ತಿಕೌಶಲ್ಯ ನೀಡಲು ತರಬೇತಿ ಕೇಂದ್ರ.
  10. ಕಳಂಕಿತ ಮತ್ತು ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವುದು:-
    • ಮಧ್ಯಪಾನದಂತ ದುಶ್ಚಟಗಳನ್ನು ಬಿಡಿಸಿ, ದುಶ್ಚಟಗಳ ಪರಿಣಾಮಕ್ಕೊಳಗಾದವರಿಗೆ ಪುನರ್ ವ್ಯವಸ್ಥೆ ಮಾಡುವುದು.
    • ಮೌಡ್ಯ ಮತ್ತು ಅಂಧ ಶ್ರದ್ದೆ ವಿರುದ್ಧ ಜಾಗೃತಿ.
    • ಕಳ್ಳಬಟ್ಟಿ ನಿಯಂತ್ರಣ ಮತ್ತು ಅದರ ಪರಿಣಾಮಕ್ಕೊಳಗಾದವರ ಪುನರ್ ವಸತಿ.
  11. ತಾಂಡಗಳಲ್ಲಿ ನಾಗರೀಕ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳು:-
    • ತಾಂಡಾಗಳ ನಿವಾಸಿಗಳಿಗೆ ಸಮೂಹ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆ ವ್ಯವಸ್ಥೆ
    • ತಾಂಡಾಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ
    • ರಸ್ತೆಗಳನ್ನು ಸಿ.ಸಿ.ರಸ್ತೆಗಳನ್ನಾಗಿ ಪರಿವರ್ತಿಸುವುದು.
  12. ಬಂಜಾರ ಭವನ ಮತ್ತು ಸೇವಾಲಾಲ್ ಸಮುದಾಯ ಭವನ ಕೇಂದ್ರಗಳ ನಿರ್ಮಾಣ:-
    • ಜಿಲ್ಲಾ ಮಟ್ಟಗಳಲ್ಲಿ ಬಂಜಾರ ಭವನಗಳ ನಿರ್ಮಾಣ.
    • ತಾಂಡಾಗಳಲ್ಲಿ ಸೇವಾಲಾಲ ಸಮುದಾಯ ಭವನಗಳ ನಿರ್ಮಾಣ
    • ಭವನಗಳ ನಿರ್ವಹಣೆ ವ್ಯವಸ್ಥೆಗೆ ನೆರವು

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

ಕೊನೆಯ ಮಾರ್ಪಾಟು : 6/16/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate