অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅರಿವು

ನಿಗಮವು ಅನುಷ್ಠಾನಗೊಳಿಸುತ್ತೀರುವ ಅರಿವು ಕಾರ್ಯಕ್ರಮದಲ್ಲಿ ಸಹಯೋಗ ನೀಡಲು ಆಸಕ್ತಿ ವ್ಯಕ್ತಪಡಿಸಿ ಒಪ್ಪಿಕೊಂಡಿರುವ ನೋಂದಾಯಿತ ಸಂಘ/ಸಂಸ್ಥೆಗಳಿಗೆ ತಾಲ್ಲೂಕವಾರು ಕಾರ್ಯಕ್ರಮವನ್ನು ವಹಿಸಲಾಗಿದೆ. ಸಂಘ/ಸಂಸ್ಥೆಗಳು ಪ್ರತಿ ತಾಂಡಾದಲ್ಲಿ ದಿನಕ್ಕೊಂದು ಸಭೆಯಂತೆ ವಹಿಸಲಾದ ತಾಲ್ಲೂಕಿನ ತಾಂಡಾಗಳಲ್ಲಿ ಸಭೆಗಳನ್ನು ನಡೆಸಬೇಕು.ಸಂಸ್ಥೆಗಳಿಗೆ ವಹಿಸಲಾದ ತಾಲ್ಲೂಕಿನ ತಾಂಡಾಗಳ ಕಾರ್ಯಕ್ರಮವನ್ನು ಈ ಕೆಳಗಿನಂತೆ, ಎಲ್ಲಾ ಸಿದ್ದತೆಗಳೊಂದಿಗೆ ಸೂಚಿಸಲಾದ ವಿಧಾನವನ್ನು ಅನುಸರಿಸಿ ಅನುಷ್ಠಾನಗೊಳಿಸಬೇಕು.

ಪೂರ್ವಭಾವಿ ಸಿದ್ದತೆ:-

  1. ಅರಿವು ಕಾರ್ಯಕ್ರಮದ ರ್ಕಾದೇಶ ಪ್ರಕಾರ ಸಂಸ್ಥೆಯು ಸಂಬಂಧಿಸಿದ ವಲಯ ಅಭಿವೃದ್ಧಿ ಅಧಿಕಾರಿಗಳಿಗೆ ಭೇಟಿಯಾಗಿ ರೂ. 100.00 ಗಳ ಛಾಪಾ ಕಾಗದದಲ್ಲಿ ಒಡಂಬಡಿಕೆ ಪತ್ರ ಸಲ್ಲಿಸಬೇಕು. ವಹಿಸಿದ ತಾಲ್ಲೂಕಿನಲ್ಲಿ ಇರುವ ತಾಂಡಾಗಳ ಮಾಹಿತಿಯನ್ನು ಪಡೆದುಕೊಳ್ಳವುದು.
  2. ಸಂಸ್ಥೆಗೆ ವಹಿಸಿದ ತಾಲ್ಲೂಕಿನ ಪ್ರತಿ ತಾಂಡಾದಲ್ಲಿ ಮಾಹಿತಿ ಒದಗಿಸುವ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳುವುದು.
  3. ಐದು ತಾಂಡಾಗಳಂತೆ, ತಾಂಡಾಗಳ ಗುಚ್ಚವನ್ನು ರಚಿಸಿಕೊಂಡು ತಾಂಡಾವಾರು ಕ್ರೀಯಾಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವುದು.
  4. ಸಭೆ ನಡೆಸುವ ಪೂರ್ವದಲ್ಲಿ ಪ್ರಥಮವಾಗಿ ಸಂಸ್ಥೆಯು ಒಂದು ತಾಂಡಾ ಗುಚ್ಚದಲ್ಲಿರುವ ಪ್ರತಿ ತಾಂಡಾವನ್ನು ಭೇಟಿ ನೀಡಿ ತಾಂಡಾದ ನಾಯಕ್, ಡಾವೂ, ಕಾರಭಾರಿ, ತಾಂಡಾದಲ್ಲಿ ವಾಸವಾಗಿರುವ ಗ್ರಾಮ ಪಂಚಾಯಿತಿ, ತಾಲ್ಲೂಕಾ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸರು, ಹಿರಿಯರನ್ನು ಸಂಪರ್ಕಿಸಿ ಸಭೆ ನಡೆಸುವ ಬಗ್ಗೆ ಸಮಾಲೋಚಿಸಿ ತಾಂಡಾದಲ್ಲಿ ನಡೆಸುವ ಸಭೆ ದಿನಾಂಕ, ಸಮಯ, ಮತ್ತು ಸ್ಥಳವನ್ನು 07 ದಿನ ಮುಂಚಿತವಾಗಿಯೇ ನಿಗಧಿಪಡಿಸಿಕೊಳ್ಳಬೇಕು.
  5. ತಾಂಡಾದ ಯುವಕ, ಯುವತಿ ಮಂಡಳಿಗಳ ಪದಾಧಿಕಾರಿಗಳ, ಸ್ವ-ಸಹಾಯ ಸಂಘಗಳ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬೇಟಿ ಮಾಡಿ ಸಭೆಯಲ್ಲಿ ತಾಂಡಾದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಪ್ರಚಾರ ಕಾರ್ಯವನ್ನು ಮಾಡಲು ಕೋರುವುದು.
  6. ನಾಯಕ್, ಡಾವೂ, ಕಾರಬಾರಿ, ತಾಂಡಾದ ಚುನಾಯಿತ ಪ್ರತಿನಿಧಿ, ಯುವಕ, ಯುವತಿ ಮಂಡಳಿ, ಅಧ್ಯಕ್ಷರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ದೂರವಾಣಿ ಸಂಖ್ಯೆಯನ್ನು ಪಡೆದು ಅವರನ್ನು ಅಗಾಗ ದೂರವಾಣಿ ಮೂಲಕ ಸಂಪರ್ಕಿಸಿ ಸಭೆಯ ದಿನಾಂಕದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವಂತೆ, ಮಾಡಲು ತಿಳಿಸುವುದು.
  7. ತಾಂಡಾದ ಜನರು ಸಭೆಯಲ್ಲಿ ಪಾಲ್ಗೋಳ್ಳುವಿಕೆಗೆ ನೇರ ಪ್ರಚಾರ ಅಥವಾ ಕರಪತ್ರದ ಮೂಲಕ ಪ್ರಚಾರ ಮಾಡುವುದು.
  8. ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವ ಅರಿವು ಕಾರ್ಯಕ್ರಮದ ಮಾಹಿತಿಯನ್ನು ಶಾಸಕರ ಅವಗಾಹನೆಗೆ ತರುವುದು.
  9. ಸಂಸ್ಥೆಯು ಪ್ರತಿ ತಾಂಡಾ ಗುಚ್ಚದಲ್ಲಿರುವ ಐದು ತಾಂಡಾಗಳಲ್ಲಿ ನಡೆಸುವ ಸಭೆ ದಿನಾಂಕಗಳ ಕಾಲಸೂಚಿ (ವೇಳಾಪಟ್ಟಿ)ಯನ್ನು ಸಿದ್ದಪಡಿಸಿ ನಿಗಮದ ವಲಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು ಮತ್ತು ಸಭೆಯ ಪೂರ್ವದಲ್ಲಿಯೆ ಸಂಬಂಧಿಸಿದ ತಾಂಡಾಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗೆ ತಲುಪಿಸುವುದು.
  10. ಸಭೆ ನಡೆಸಲು ತಾಂಡಾದಲ್ಲಿ ಲಭ್ಯವಿರುವ ಸಂಪನ್ಮೂಲ :- ಟಾರ್ ಪಾಲ್, ಗೋಡಾರ, ಮೈಕ್ ಸೇಟ್, ವೈರ್ ಇತ್ಯಾಧಿಗಳ ಹಾಗೂ ಶಿಸ್ತು ಪಾಲನೆಗೆ ವಿದ್ಯಾವಂತ ಯುವಕರ ಸಹಕಾರ ಪಡೆಯುವುದು.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ(http://www.banjarathanda.kar.nic.in/index.html)

ಕೊನೆಯ ಮಾರ್ಪಾಟು : 6/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate