ಸುರಕ್ಷಿತ ತಾಯ್ತನ ಎಂದರೆ ಎಲ್ಲ ಮಹಿಳೆಯರಿಗೂ ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಮಾಹಿತಿ ಮತ್ತು ಸೇವೆಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು. ಅದರಲ್ಲಿ
ಹೆರಿಗೆ ಸಮಯದಲ್ಲಿ ತಾಯಿಯ ಸಾವಿಗೀಡಾಗುವ ಕಾರಣಗಳನ್ನು ಮೂರು ವಿಭಾಗಗಳಾಗಿ ವಿಭಜಿಸಬಹುದು. ಅವೆಂದರೆ ಸಾಮಾಜಿಕ, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಲಭ್ಯತೆ.
ಗರ್ಭಧಾರಣೆಯ ಸಂದರ್ಭದ ಶುಶ್ರೂಷೆ
ಗರ್ಭಧಾರಣೆ ಸಂದರ್ಭದ ಶುಶ್ರೂಷೆಯು ಆರೋಗ್ಯ ಶಿಕ್ಷಣ ಮತ್ತು ಸುರಕ್ಷಿತ ಹೆರಿಗೆಗಾಗಿ ಮಹಿಳೆಗೆ ನೀಡುವ ನಿಯಮಿತ ವೈದ್ಯಕೀಯ ತಪಾಸಣೆ, ಮಾನಸಿಕ ಅಸ್ವಸ್ಥತೆ ಮತ್ತು ತಾಯಿಯ ಸಾವನ್ನು ಕಡಿಮೆ ಮಾಡುವುದು ಮತ್ತು ಸೋಂಕುಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಯನ್ನು ಒಳಗೊಂಡಿದೆ. ಹೆಚ್ಚು ಅಪಾಯವನ್ನು ಹೊಂದಿರುವ ಗರ್ಭಧಾರಣೆ ಮತ್ತು ಹೆಚ್ಚು ಅಪಾಯದ ಹೆರಿಗೆಯ ಸಾಧ್ಯತೆಗಳನ್ನು ಪತ್ತೆ ಹಚ್ಚುವ ಸಲುವಾಗಿಯೂ ಎಎನ್ಸಿಗಳು ಸಹಾಯಕವಾಗುತ್ತವೆ. ಎಎನ್ಸಿಯ ಪ್ರಮುಖ ಅಂಶಗಳನ್ನು ಕೆಳಗೆ ಚರ್ಚಿಸಲಾಗಿದೆ. ಶೀಘ್ರ ನೋಂದಣಿ:ಗರ್ಭಧಾರಣೆಯ ಸಂಶಯ ಬಂದಾಕ್ಷಣವೇ ಮಹಿಳೆಯನ್ನು ಎಎನ್ಸಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಸಂತಾನೋತ್ಪತ್ತಿಯ ವಯಸ್ಸಿನಲ್ಲಿರುವ ಪ್ರತಿ ಮಹಿಳೆಯು ಕೂಡ ತಾನು ಗರ್ಭಿಣಿ ಎಂದು ಅನ್ನಿಸಿದ ತಕ್ಷಣ ತನ್ನ ಆರೋಗ್ಯ ಸೇವೆ ನೀಡವವರನ್ನು ಭೇಟಿ ಮಾಡಲು ಪ್ರೋತ್ಸಾಹಿಸಬೇಕು. ಈ ಮೊದಲ ಭೇಟಿಯು ಮೊದಲ ಮೂರು ತಿಂಗಳಲ್ಲೆ ನಡೆದರೆ ಉತ್ತಮ, ಗರ್ಭಧರಿಸಿದ ೧೨ ವಾರಗಳಿಗೆ ಮೊದಲು ಅಥವಾ ೧೨ನೇವಾರ ವೈದ್ಯರಲ್ಲಿಗೆ ಭೇಟಿ ನೀಡಬೇಕು. ಆದರೆ ಮಹಿಳೆಯು ನೋಂದಾಯಿಸಿಕೊಳ್ಳಲು ಆನಂತರ ಬಂದಾಗಲೂ ಕೂಡ ನೋಂದಾಯಿಸಿ ಕೊಂಡು ಅವಳ ಗರ್ಭಧಾರಣೆಯ ಅವಧಿಗೆ ಅನುಗಣುವಾಗಿ ಶುಶ್ರೂಷೆಯನ್ನು ಒದಗಿಸಬೇಕು. ಕೆಲವು ಮಹಿಳೆಯರು ತಾವಾಗಿಯೇ ಎಎನ್ಸಿ ಕ್ಲಿನಿಕ್ಗಳಿಗೆ ಬರಬಹುದು. ಆದರೆ ಅನೇಕರು ಬಾರದೆ ಇರಬಹುದು. ಆರೋಗ್ಯ ಸೇವೆಗಳನ್ನು ಒದರಿಸುವವರು, ಅಂಗನವಾಡಿ ಕಾರ್ಯಕರ್ತರು, ಸೂಲಗಿತ್ತಿಯರು (ಸಾಂಪ್ರದಾಯಿಕ ಹೆರಿಗೆ ಮಾಡಿಸುವವರು) ದಾಯಿಗಳು, ಮಹಿಳಾ ಮಂಡಳಿಯ ಸದಸ್ಯರು ಸ್ವಸಹಾಯ ಗುಂಪುಗಳ, ಪಂಚಾಯತ್ ಮತ್ತು ಗ್ರಾಮ ಆರೋಗ್ಯ ಸಮಿತಿಗಳು ಮುಂತಾದ ಸಮುದಾಯ ಆಧಾರಿತ ಕಾರ್ಯಕಾರಿಗಳ ನೆರವಿನಿಂದ ಗರ್ಭಿಣಿಯರನ್ನು ಗುರುತಿಸಿ ಪಟ್ಟಿಯನ್ನು ಆಗಾಗ ನವೀಕರಿಸುತ್ತಿರಬೇಕು. ಶೀಘ್ರ ನೋಂದಣಿಯ ಪ್ರಾಮುಖ್ಯ/
ಗರ್ಭಿಣಿ ಮಹಿಳೆ ಎಳೆ ಗರ್ಭಿಣಿ- ಇಂಜೆಕ್ಷನ್ ಟಿಟಿ೧ ಅಥವಾ ಬೂಸ್ಟರ್
ಸ್ತ್ರೀಯು ಗರ್ಭವನ್ನು ಮುಂದುವರಿಸಲು ಇಷ್ಟಪಡದೇ ಇದ್ದರೆ ಶೀಘ್ರ ಮತ್ತು ಸುರಕ್ಷಿತ ಗರ್ಭಪಾತದ ಸೇವೆಗಳ ಲಭ್ಯತೆಯನ್ನು ತಿಳಿಸಿ ನೆರವು ನೀಡಿ.
ತೂಕ: ಪ್ರತಿ ಭೇಟಿಯಲ್ಲೂ ಗರ್ಭಿಣಿ ಸ್ತ್ರೀಯ ತೂಕವನ್ನು ಪರೀಕ್ಷಿಸಬೇಕು. ಗರ್ಭಧಾರಣೆಯ ಅವಧಿಯಲ್ಲಿ ಒಬ್ಬ ಸ್ತ್ರೀಯು ಸಾಮಾನ್ಯವಾಗಿ ೯ ರಿಂದ ೧೧ ಕೆಜಿ ತೂಕವನ್ನು ಪಡೆಯಬೇಕು. ಮೊದಲ ಮೂರು ತಿಂಗಳ ನಂತರ ಗರ್ಭಿಣಿಯು ಪ್ರತಿ ತಿಂಗಳೂ ಸುಮಾರು ೨ ಕೆ.ಜಿ. ಅಥವಾ ವಾರಕ್ಕೆ ೦.೫ ಕೆಜಿ ತೂಕ ಹೆಚ್ಚಾಗಬೇಕು. ಸೂಕ್ತ ಪೌಷ್ಟಿಕ ಆಹಾರ ದೊರೆಯದೇ ಇದ್ದರೆ, ಅಗತ್ಯಕ್ಕಿಂತ ಕಡಿಮೆ ಕ್ಯಾಲೊರಿಗಳಿದ್ದರೆ ಗರ್ಭಿಣಿಯ ತೂಕವು ಕೇವಲ ೫-೬ ಕೆಜಿಗಳಷ್ಟು ಮಾತ್ರ ಹೆಚ್ಚಾಗಬಹುದು. ಮಹಿಳೆಯು ತಿಂಗಳಿಗೆ ೨ ಕೆಜಿಗಿಂತ ಕಡಿಮೆ ತೂಕವನ್ನು ಪಡೆದರೆ ಆಕೆ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಯಬಹುದು. ಆಗ ಆಕೆಗೆ ಪೂರಕ ಆಹಾರವನ್ನು ಒದಗಿಸಬೇಕಾಗಬಹುದು. ಕಡಿಮೆ ತೂಕ ಪಡೆಯುವುದು ಕಡಿಮೆ ತೂಕದ ಮಗುವು ಹುಟ್ಟುವ ಸಾಧ್ಯತೆಯನ್ನು ತೋರುತ್ತದೆ. ತೂಕ ಹೆಚ್ಚಾದಾಗ (ತಿಂಗಳಿಗೆ ಮೂರು ಕೆಜಿಗಿಂತಲೂ ಹೆಚ್ಚು) ಪ್ರಿಎಕ್ಲಾಂಪ್ಸಿಯಾ/ಅವಳಿ ಮಕ್ಕಳ ಸಾಧ್ಯತೆಯನ್ನು ತೋರುತ್ತದೆ. ಆಗ ಆಕೆಯನ್ನು ವೈದ್ಯಾಧಿಕಾರಿಯ ಬಳಿಗೆ ಕಳುಹಿಸಬೇಕು. ಎತ್ತರ: ತಾಯಿಯ ಎತ್ತರ ಮತ್ತು ಹೆರಿಗೆಯ ಫಲಿತಾಂಶದ ನಡುವೆ ಸಂಬಂಧವಿದೆ. ತೀರಾ ಕುಳ್ಳಗಿನ ಗರ್ಭಿಣಿಯಲ್ಲಿ ಪೆಲ್ವಿಸ್ ತುಂಬಾ ಚಿಕ್ಕದಿರುವುದಿರಂದ ಹೆರಿಗೆಯಲ್ಲಿ ಅಪಾಯಗಳು ಹೆಚ್ಚು. ೧೪೫ ಸೆಂಮೀಗಿಂತಲೂ ಕಡಿಮೆ ಎತ್ತರ ಇರುವ ಕುಬ್ಜ ಮಹಿಳೆಯರು ಅಸಹಜ ಹೆರಿಗೆಯ ಸಾಧ್ಯತೆ ಹೆಚ್ಚಿರುವುದರಿಂದ ಅಂತಹವರನ್ನು ಆಸ್ಪತ್ರೆ ಹೆರಿಗೆಗೆ ಶಿಫಾರಸು ಮಾಡಬೇಕು.ರಕ್ತದೊತ್ತಡ:ಹೆಚ್ಚಿನ ರಕ್ತದೊತ್ತಡದಿಂದ ಉಂಟಾಗುವ ತೊಂದರೆಗಳನ್ನು ತಡೆಯಲು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು ಕಡ್ಡಾಯವಾಗಿ ಅಳೆಯಲೇ ಬೇಕು. ರಕ್ತದೊತ್ತಡವು (೧೪೦/೯೦) ಹೆಚ್ಚಿದ್ದಾಗ ಮತ್ತು ಮೂತ್ರದಲ್ಲಿ ಆಲ್ಬಮಿನ್ ಇದ್ದಾಗ, ಆ ಮಹಿಳೆಯನ್ನು ಪ್ರಿ ಎಕ್ಲಾಂಪ್ಸಿಯಾ ಇರುವವಳೆಂದು ಗುರುತಿಸಬಹುದು. ಆಕೆಯ ಡಯಾಸ್ಟೊಲಿಕ್ ಬಿಪಿಯು ೧೧೦ ಎಂಎಂ ಎಚ್ಜಿ ಗಿಂತಲೂ ಹೆಚ್ಚಿದ್ದಾಗ ಇದು ಖಚಿತವಾಗಿ ಎಕ್ಲಾಂಪ್ಸಿಯಾ ಇರುವ ಅಪಾಯದ ಮುನ್ಸೂಚನೆ. ಅಂತಹ ಮಹಿಳೆಯರನ್ನು ತಕ್ಷಣ ಅವರ ಬಳಿಗೆ ಕರೆದೊಯ್ಯಲು ಶಿಫಾರಸು ಮಾಡುವುದು ಒಳಿತು. ಹೆಚ್ಚಿನ ರಕ್ತದೊತ್ತಡ ಮತ್ತು ಪ್ರಿ ಎಕ್ಲಾಂಪ್ಸಿಯಾ ಇರುವ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡುವುದು ಒಳಿತು. ಬಿಳುಚುವಿಕೆ: ಮಹಿಳೆಯ ಕಣ್ಣ್ರೆಪ್ಪೆಗಳ ಒಳಭಾಗ, ಅಂಗೈ ಮತ್ತು ಉಗುರುಗಳು, ಬಾಯಿಯ ಕುಹರ ಮತ್ತು ನಾಲಿಗೆ ಬಿಳಿಚಿ ಕೊಂಡಿದ್ದರೆ, ಅದು ರಕ್ತ ಹೀನತೆಯ ಸಂಕೇತ. ಉಸಿರಾಟದದರ: ಮಹಿಳೆಯು ಉಸಿರು ಕಟ್ಟುತ್ತಿದೆ ಎಂದು ದೂರಿದಾಗ, ಆಕೆಯ ಉಸಿರಾಟದ ದರವನ್ನು ನೋಡುವುದು ಮುಖ್ಯವಾಗುತ್ತದೆ. ಆಕೆಯ ಉಸಿರಾಟದ ದರವು ೩೦ ಉಸಿರು/ಪ್ರತಿನಿಮಿಷಕ್ಕೆ ಇದ್ದಾಗ ಮತ್ತು ಮೇಲೆ ಹೇಳಿರುವ ಪೋಲಾರ್ ಲಕ್ಷಣಗಳಿದ್ದಾಗ ಮಹಿಳೆಯು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದು ತಕ್ಷಣ ವೈದ್ಯರ ತಪಾಸಣೆಗೆ ಶಿಫಾರಸು ಮಾಡಿ. ಸಾಮಾನ್ಯ ಬಾವು:ಮುಖವೂ ಸೇರಿದಂತೆ ಸಾಮಾನ್ಯ ಊತದ ಇರುವಿಕೆಯು ಪ್ರಿಎಕ್ಲಾಂಪ್ಸಿಯಾದ ಇರುವಿಕೆಯ ಬಗ್ಗೆ ಸಂಶಯವನ್ನು ಹುಟ್ಟು ಹಾಕುತ್ತದೆ. ಹೊಟ್ಟೆಯ ತಪಾಸಣೆ: ಗರ್ಭಧಾರಣೆಯ ಮತ್ತು ಭ್ರೂಣದ ಬೆಳಣಿಗೆಯನ್ನು ಪರೀಕ್ಷಿಸುವ ಸಲುವಾಗಿ ಹೊಟ್ಟೆಯ ತಪಾಸಣೆ ಮಾಡಬೇಕು. ಭ್ರೂಣದ ಸ್ಥಿತಿ ಯ ಬಗ್ಗೆಯೂ ತಿಳಿಯ ಬೇಕು. ಮಗುವಿನ ತಲೆ ಮುಂದೆ ಇದೆಯೋ ಇಲ್ಲಾ ಕಾಲು ಮುಂದೆ ಬರುತ್ತಿದೆಯೋ ಎಂಬುದನ್ನೂ ನೋಡಬೇಕು. ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಪೂರೈಕೆ ಗರ್ಭಧಾರಣೆಯ ಅವಧಿಯಲ್ಲಿ ಕಬ್ಬಿಣಾಂಶದ ಅಗತ್ಯ ಹೆಚ್ಚಾಗುವುದನ್ನು ಮನಗಾಣಿಸಿ. ಗರ್ಭಿಣೀಯರಲ್ಲಿ ರಕ್ತಹೀನತೆಯಿಂದಾಗುವ ಅಪಾಯಗಳ ಬಗ್ಗೆ ಒತ್ತು ಕೊಡಿ. ಗರ್ಭಧಾರಣೆಯಾದ ೧೪- ೧೬ ವಾರಗಳಲ್ಲಿ ಆರಂಭ ಮಾಡಿ ಕನಿಷ್ಠ ನೂರು ದಿನಗಳ ವರೆಗೆ ಎಲ್ಲ ಗರ್ಭಿಣಿ ಮಹಿಳೆಯರಿಗೆ ದಿನಕ್ಕೊಂದು ಐಎಫ್ಎ ಮಾತ್ರೆ (೧೦೦ ಎಂಜಿ ಎಲಿಮೆಂಟಲ್ ಕಬ್ಬಿಣಾಂಶ ಮತ್ತು ೦.೫ ಎಂಜಿ ಫೋಲಿಕ್ ಆಸಿಡ್) ಕೊಡಬೇಕು. ಇದು ರಕ್ತಹೀನತೆಗೆ ಕೊಡುವ ಡೋಸ್. ಸ್ತ್ರೀಯು ರಕ್ತ ಹೀನತೆಯಿಂದ ಬಳಲುತ್ತಿದ್ದರೆ (ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು ೧೦/ಗ್ರಾಂ/ ಡೆಸಿಲೀಟರ್) ಅವಳಿಗೆ ಐಎಫ್ಎ ಮಾತ್ರೆಗಳನ್ನು ಪ್ರತಿದಿನ ನೀಡಿ. ಮಹಿಳೆಯು ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಅಥವಾ ಬಿಳಿಚಿಕೊಂಡರೆ ಮೂರು ತಿಂಗಳ ಕಾಲ ಪ್ರತಿದಿನ ಐಎಫ್ಎ ಯ ಎರಡು ಮಾತ್ರೆಗಳನ್ನು ಕೊಡಬೇಕು. ಅಂದರೆ ಅನಿಮೀಯಾ ಇರುವ ಗರ್ಭಿಣಿಯು ಕನಿಷ್ಠ ೨೦೦ ಐಎಫ್ಎ ಮಾತ್ರೆಗಳನ್ನು ಸೇವಿಸಬೇಕು. ಇದು ತೀವ್ರ ರಕ್ತಹೀನತೆಯನ್ನು ನಿವಾರಿಸುವ ಔಷಧ. ತೀವ್ರ ರಕ್ತ ಹೀನತೆ ಇದ್ದು (ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವು <೭ಗ್ರಾಂ/ ಡೆಸಿಲೀಟರ್)ಗಿಂತ ಕಡಿಮೆಯಿದ್ದರೆ ಉಸಿರಾಟದ ತೊಂದರೆ, ಹೆಚ್ಚಿದ ಎದೆ ಬಡಿತ ಇದ್ದರೆ ಅವರಿಗೆ ಔಷಧೋಪಚಾರವನ್ನು ಆರಂಭಿಸಿ ವೈದ್ಯರಲ್ಲಿಗೆ ಕಳುಹಿಸಬೇಕು. ಟಿಟಿ ಚುಚ್ಚುಮದ್ದು ನೀಡಿಕೆ: ಗರ್ಭಿಣಿ ಮಹಿಳೆಗೆ ಟಿಟಿ ಚುಚ್ಚುಮದ್ದನ್ನು ಎರಡು ಡೋಸ್ನಲ್ಲಿ ನೀಡಬೇಕು. ಇದರಿಂದ ನವಜಾತ ಶಿಶುವಿಗೆ ಟೆಟನಸ್ ಬರುವುದನ್ನು ತಡೆಗಟ್ಟಬಹುದು. ಶಿಶುವಿಗೆ ಮೊದಲ ಮೂರು ತಿಂಗಳ ನಂತರ ಟೆಟನಸ್ನ ಮೊದಲ ಡೋಸ್ ನೀಡಬೇಕು. ನಂತರ ಒಂದು ತಿಂಗಳು ಕಳೆದ ಮೇಲೆ ಎರಡನೇ ಡೋಸ್ ನೀಡಬೇಕು.
ಗರ್ಭಿಣಿ ಮಹಿಳೆಗೆ ನೀಡುವ ಆಹಾರವು ಭ್ರೂಣ ಬೆಳೆಯಲು, ತಾಯಿಯ ಸ್ವಾಸ್ಥ್ಯ ಕಾಪಾಡಲು ಮುಂದೆ ನಂತರದ ಹೆರಿಗೆ ನೋವನ್ನು ಸಹಿಸಲು ಮತ್ತು ಹಾಲೂಡಿಸುವಾಗ, ಅಗತ್ಯವಾದ ಶಕ್ತಿಯನ್ನು ನೀಡಲು ಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಪ್ರೊಟೀನ್ ಯುಕ್ತ ಆಹಾರ ಅತ್ಯಗತ್ಯ. ಗರ್ಭಿಣಿ ಮಹಿಳೆಯು ಹೆಚ್ಚಿನ ಪ್ರಮಾಣದ ಹಾಲು, ಮೊಟ್ಟೆ, ಮಾಂಸ. ಕೋಳಿ ಮಾಂಸಗಳನ್ನು ಸೇವಿಸಬೇಕು. ಸಸ್ಯಹಾರಿಯಾಗಿದ್ದರೆ ವಿವಿಧ ಬೇಳೆ ಕಾಳುಗಳು, ಒಣ ಹಣ್ಣುಗಳನ್ನು ತಿನ್ನಬೇಕು.ಭ್ರೂಣದಲ್ಲಿ ರಕ್ತ ರಚನೆಗೆ ಕಬ್ಬಿಣಾಂಶವು ಅತಿ ಅಗತ್ಯ. ಇದು ರಕ್ತ ಹೀನತೆಯನ್ನು ನಿವಾರಿಸುವುದು. ಗರ್ಭಿಣಿಯು ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸಬೇಕು. ಗರ್ಭಿಣಿ ಹೆಣ್ಣು ಮಕ್ಕಳಿಗೆ ರಾಗಿ ಮತ್ತು ಸಜ್ಜೆ ಉಪಯೋಗಿಸಬೇಕು. ಎಳ್ಳು ಮತ್ತು ಕಡು ಹಸಿರು ಬಣ್ಣದ ಸೊಪ್ಪು ತರಕಾರಿಗಳನ್ನು ಬಳಸಬೇಕು. ಮಾಂಸಹಾರಿಗಳು ಲಿವರ್ ಮತ್ತು ಕಿಡ್ನಿ ಸೇವಿಸಬೇಕು. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವಿದೆ.ಮಗುವಿನ ಹಲ್ಲು ಮತ್ತು ಮೂಳೆಗಳ ರಚನೆಗೆ ಕ್ಯಾಲ್ಶಿಯಂ ಅತ್ಯಗತ್ಯ. ಹಾಲು ಕ್ಯಾಲ್ಶಿಯಂನ ಅತಿಶ್ರೇಷ್ಠ ಆಗರ. ರಾಗಿ ಮತ್ತು ಸಜ್ಜೆಗಳಲ್ಲೂ ಕ್ಯಾಲ್ಶಿಯಂ ಇದೆ. ಗರ್ಭಿಣಿಯು ಚಿಕ್ಕ ಚಿಕ್ಕ ಒಣ ಮೀನುಗಳನ್ನು ತಿನ್ನುವುದನ್ನು ಪ್ರೋತ್ಸಾಹಿಸಬೇಕು. ಗರ್ಭಿಣಿಗೆ ವಿಟಮಿನ್ಗಳು ಅತಿ ಮುಖ್ಯ. ಅವಳು ಸಾಕಷ್ಟು ತರಕಾರಿಗಳನ್ನು ಸೇವಿಸಬೇಕು. ಮತ್ತು ನಿಂಬೆ ಜಾತಿಯ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.
ಮಾರ್ಪಡಿಸಿದ ಪಥ್ಯಗರ್ಭಧಾರಣೆಯಿಂದ ಹೆಚ್ಚಾದ ರಕ್ತದ ಒತ್ತಡ ಅಥವಾ ಪ್ರಿಕ್ಲಾಪ್ಸಿಯಾ ಇದ್ದರೆ ಉಪ್ಪಿಲ್ಲದ ಪಥ್ಯ ಮಾಡಬೇಕು ಇದರಿಂದ ಬಾವು ಕಡಿಮೆಯಾಗುತ್ತದೆ. ಮಹಿಳೆಯು ಸಾಮಾನ್ಯ ಆಹಾರವನ್ನು ಸೇವಿಸಿದರೂ, ಉಪ್ಪಿರುವ ಆಹಾರವನ್ನು ತಿನ್ನದಿರುವುದು ಒಳ್ಳೆಯದು. ಅಡಿಗೆಯಲ್ಲಿ ಉಪ್ಪು ಹಾಕುವುದೇ ಬೇಡ. ಪ್ರಿಕ್ಲಾಮ್ಸಿಯಾ ಇದ್ದರೆ ಅಧಿಕ ಪ್ರೊಟೀನ್ ಯುಕ್ತ ಆಹಾರ ಸೇವನೆ ಅಗತ್ಯ ವಿಶೇಷವಾಗಿ ಮೂತ್ರದಲ್ಲಿ ಆಲ್ಬಮಿನ್ ಇದ್ದರೆ ಹೆಚ್ಚು ಹೆಚ್ಚು ಪ್ರೊಟೀನ್ ಯುಕ್ತ ಆಹಾರವನ್ನು ಉಪಯೋಗಿಸಬೇಕು.
ಕೆಲಸದ ಹೊರೆ, ವಿಶ್ರಾಂತಿ ಮತ್ತು ನಿದ್ರೆ
ಗರ್ಭಿಣಿಯಾಗಿದ್ದಾಗ ಅತಿ ಶ್ರಮದ ದೈಹಿಕ ಕೆಲಸದಿಂದ ಗರ್ಭಪಾತ, ಪ್ರಸವ ಪೂರ್ವ ಹೆರಿಗೆ ನೋವು ಕಡಿಮೆ ತೂಕದ ಮಗುವಿನ ಜನನ ಉಂಟಾಗಬಹುದು. ಅದರಲ್ಲೂ ಮಹಿಳೆಯು ಸಾಕಷ್ಟು ಆಹಾರ ಸೇವಿಸದೇ ಇದ್ದರೆ ಇನ್ನೂ ತೊಂದರೆಯಾಗಬಹುದು. ಆದ್ದರಿಂದ ಗರ್ಭಿಣಿಯು ಶ್ರಮದಾಯಕ ಕೆಲಸ ಮಾಡಬಾರದು. ಕೆಲಸ ಮಾಡಲೇ ಬೇಕಿದ್ದರೆ ಮಧ್ಯೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಅವಳು ಸಾಕಷ್ಟು ವಿಶ್ರಾಂತಿ ಪಡೆಯಲೇ ಬೇಕು.ಹಗಲಿನಲ್ಲಿ ಒಂದು ಗಂಟೆಯಾದರೂ ಮಲಗಲೇ ಬೇಕು. ರಾತ್ರಿಯಲ್ಲಿ ೮-೧೦ ತಾಸು ನಿದ್ರೆ ಮಾಡಬೇಕು.
ಗರ್ಭಧಾರಣೆಯ ಸಂದರ್ಭಧಲ್ಲಿ ಉಂಟಾಗುವ ಅಸೌಕರ್ಯ ಮತ್ತು ಸಮಸ್ಯೆಯ ಮುನ್ಸೂಚನೆಯ ಕುರುಹುಗಳು
ಸಾಮಾಜಿಕ ಕಾರಣಗಳು |
ವೈದ್ಯಕೀಯ ಕಾರಣಗಳು (ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು) |
ವೈದ್ಯಕೀಯ ಸೇವೆಗಳ ಲಭ್ಯತೆ |
|
ತಡೆಹಿಡಿದ ಹೆರಿಗೆ
|
|
ಗರ್ಭಿಣಿಯಾಗಿದ್ದಾಗ ಅನಾರೋಗ್ಯಕ್ಕೆ ಈಡಾಗುವುದು ಬಹಳ ಮುಜುಗರ ಮತ್ತು ಅಸಂತೋಷದಾಯಕ ಇದಕ್ಕೆ ಕಾರಣ ಗರ್ಭಧಾರಣೆಯೇ. ಆ ಸಮಯದಲ್ಲಿ ಕೆಲವು ಔಷಧಗಳನ್ನು ತೆಗೆದುಕೊಳ್ಳಬಾರದು. ಅಲ್ಲದೆ ಮಲೇರಿಯಾದಂತಹ ರೋಗವು ತೀವ್ರ ಸಮಸ್ಯೆಯನ್ನು ತಂದೊಡ್ಡಬಹುದು. ಆದ್ದರಿಂದ ಆ ಅವಧಿಯಲ್ಲಿ ಮಹಿಳೆಯು ರೋಗಬಾರದಂತೆ ಸೋಂಕು ತಗುಲದಂತೆ ಎಚ್ಚರಿಕೆವಹಿಸಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ಮಲಿನವಾದ ನೀರನ್ನು ಕುಡಿಯಬಾರದು.
ದಿನವೂ ಸ್ನಾನಮಾಡುವುದರಿಂದ ಅರೋಗ್ಯ ಹೆಚ್ಚುತ್ತದೆ. ಸೋಂಕೂ ಹಾಗೂ ಅನಾರೋಗ್ಯವನ್ನು ತಡೆಯಬಹುದು. ಅದರಲ್ಲೂ ವಿಶೇಷವಾಗಿ ಜನನಾಂಗ ಮತ್ತು ಮೊಲೆಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಅವುಗಳನ್ನು ಸ್ವಚ್ಛ ನೀರಿನಿಂದ ಆಗಾಗ ತೊಳೆಯುತ್ತಿರಬೇಕು. ಆದರೆ ಆಗ ಯಾವುದೇ ಬಗೆಗೆ ರಸಾಯನಿಕ ಬಳಕೆ ಸಲ್ಲ; ಅವುಗಳು ಹಾನಿಕಾರಕವಾಗಬಹುದು. ಹಗುರವಾದ ಹತ್ತಿಯ ಬಟ್ಟೆಗಳನ್ನು ತೊಡುವುದು ಅಗತ್ಯ. ಮೊಲೆಗಳು ದೊಡ್ಡದಾಗಿ ಮತ್ತು ಮೃದುವಾಗುವುದರಿಂದ ಸರಿಯಾದ ಅಳತೆಯ ಬ್ರೇಸಿಯರ್ಗಳನ್ನು ತೊಡುವುದು ಅಗತ್ಯ.
ಗರ್ಭವು ಸಾಮಾನ್ಯವಾಗಿದ್ದರೆ ಗರ್ಭಧಾರಣೆಯ ಕೊನೆಯವರೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಬಹುದು. ಗರ್ಭಪಾತದ ಅಪಾಯವಿದ್ದಾಗ (ಹಿಂದೆ ಸ್ವಯಂ ಪ್ರೇರಿತ ಗರ್ಭಪಾತಗಳ ಇತಿಹಾಸವಿದ್ದಾಗ) ಲೈಂಗಿಕ ಕ್ರಿಯೆ ನಿಷಿದ್ಧ. ಅವಧಿಗೆ ಮುನ್ನ ಹೆರಿಗೆಯ ಇತಿಹಾಸವಿದ್ದಾಗಲೂ ಲೈಂಗಿಕ ಕ್ರಿಯೆ ಬೇಡ. ಗರ್ಭಧಾರಣೆಯ ಸಂದಭದಲ್ಲಿ ಕೆಲ ಹೆಣ್ಣು ಮಕ್ಕಳಲ್ಲಿ ಕಾಮಾಸಕ್ತಿ ಕಡಿಮೆಯಾಗಬಹುದು. ಈ ಬಗ್ಗೆ ಪತಿಗೆ ಮಾಹಿತಿ ನೀಡಬೇಕು ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಮಹಿಳೆಯ ಒಪ್ಪಿಗೆ ಪಡೆಯುವುದು ಅಗತ್ಯ. ಗರ್ಭಧಾರಣೆಯ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಕೆಲವು ದಂಪತಿಗಳಿಗೆ ಇರಿಸುಮುರಿಸು ಉಂಟಾಗಬಹುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಪತಿಯು ಪತ್ನಿಯ ಸೌಕರ್ಯವನ್ನು ಪರಿಗಣಿಸಬೇಕು.
ಹತ್ತರಲ್ಲಿ ನಾಲ್ಕು ಮಹಿಳೆಯರಿಗೆ ಗರ್ಭಧಾರಣೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಾಗುತ್ತವೆ. ಅವರಲ್ಲಿ ಶೇ. ೧೫ ಮಹಿಳೆಯರಿಗೆ ಪ್ರಾಣಾಪಾಯ ಉಂಟಾಗಬಹುದು ಹಾಗಾಗಿ ಅವರಿಗೆ ತಕ್ಷಣದ ವೈದ್ಯಕೀಯ ನೆರವು ಅಗತ್ಯ. ಇವುಗಳಲ್ಲಿ ಬಹುತೇಕ ಸಮಸ್ಯೆಗಳನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸದಾ ಸನ್ನದ್ಧರಾಗಿರಬೇಕು.
ಎಲ್ಲ ಮಹಿಳೆಯರು ಆಸ್ಪತ್ರೆ ಹೆರಿಗೆ ಮಾಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಹೆರಿಗೆ ಸಮಯದಲ್ಲಿ ಸಮಸ್ಯೆಗಳು ತಲೆದೋರಬಹುದು, ಅವನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಅದು ಮಗು ಅಥವಾ ತಾಯಿಯ ಜೀವಕ್ಕೆ ಕುತ್ತಾಗಬಹುದು. ಆರೋಗ್ಯ ಸೇವಾ ಸಿಬ್ಬಂದಿಯು ಅಗತ್ಯ ಬಿದ್ದರೆ ಉಪಕರಣ, ಔಷಧಿ ಮತ್ತು ಇತರೆ ಸಾಮಾಗ್ರಿಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಅಗತ್ಯವಾದರೆ ತಜ್ಞ ವೈದ್ಯರಿಗೆ ಶಿಫಾರಸು ಮಾಡುವ ವ್ಯವಸ್ಥೆಯೂ ಇದೆ. ಸಹಾಯ ಮಾಡುವ ಜನರನ್ನು ಗುರುತಿಸಬೇಕು: ತುರ್ತು ಸಮಯದಲ್ಲಿ ಮಹಿಳೆಗೆ ಮನೆ ಮಕ್ಕಳನ್ನು ನೋಡಿಕೊಳ್ಳಲು, ಸಾರಿಗೆ ವ್ಯವಸ್ಥೆ ಮಾಡಲು, ಆರೋಗ್ಯ ಸೇವೆ ಸೌಕರ್ಯಗಳ ಬಳಿಗೆ ಕರೆದೊಯ್ಯಲು ಜನರ ನೆರವು ಬೇಕು. ಹತ್ತಿರದ ಸಂಬಂಧಿಗಳ ನೆರವು ಕೇಳಿ ಇಲ್ಲವೇ ಸಮುದಾಯದ – ಆರೋಗ್ಯ ಕಾರ್ಯಕರ್ತರಾದ ಅಂಗನವಾಡಿ ಕಾರ್ಯಕರ್ತರು ಮತ್ತು ಸಾಂಪ್ರದಾಯಿಕ ಹೆರಿಗೆ ಮಾಡಿಸುವವರ ನೆರವು ಪಡೆಯಿರಿ.
ಮಹಿಳೆ ಮತ್ತು ಅವಳ ಕುಟುಂಬಕ್ಕೆ ಹೆರಿಗೆ ಮತ್ತು ಅದಕ್ಕೆ ಸಂಬಂಧಿಸಿ ವಿಷಯಗಳಿಗೆ ಆಗುವ ವೆಚ್ಚದ ಅಂದಾಜು ಪಟ್ಟಿಯನ್ನು ಕೊಡಬೇಕು. ತುರ್ತು ಪರಿಸ್ಥಿತಿ ಉಂಟಾದರೆ ಹೆಚ್ಚು ಹಣ ಹೊಂದಿಸಬೇಕಾದ ಅಗತ್ಯವನ್ನು ತಿಳಿಸಬೇಕು. ಹೆರಿಗೆಗಾಗಿ ಈ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅಡಿಯಲ್ಲಿ ಅವರಿಗೆ ದೊರಕಬಹುದಾದ ಸರ್ಕಾರದ ಸಹಾಯದ ಮಾಹಿತಿಯನ್ನು ನೀಡಬೇಕು.ಹೆರಿಗೆಯ ಲಕ್ಷಣಗಳು: ಮಹಿಳೆಯನ್ನು ಆರೋಗ್ಯ ಸೇವೆ ದೊರೆಯುವಲ್ಲಿಗೆ ಹೋಗಲು ಸಲಹೆ ನೀಡಿ ಅಥವಾ ಉತ್ತಮ ಸಾಂಪ್ರದಾಯಿಕ ಪ್ರಸೂತಿ ಸಹಾಯಕರ ಸಂಪರ್ಕದಲ್ಲಿರಲು ತಿಳಿಸಬೇಕು. ಈ ಕೆಳಕಂಡ ಲಕ್ಷಣಗಳು ಕಾಣಿಸಿದ ತಕ್ಷಣವೇ ತಿಳಿಸಬೇಕು.
ಸಮಸ್ಯೆಗಳನ್ನು ಎದುರಿಸಲು ಸಿದ್ಧತೆ
ಅಪಾಯದ ಮುನ್ಸೂಚನೆಗಳು: ಗರ್ಭಧಾರಣೆಯ ಸಮಯದಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ಮಹಿಳೆ, ಆಕೆಯ ಕುಟುಂಬ ಮತ್ತು ಆಕೆಯ ಶುಶ್ರೂಷೆಯನ್ನು ನೋಡಿಕೊಳ್ಳುವವರಿಗೆ ತಿಳಿಸಬೇಕು. ಕೆಳಗಿನ ಯಾವುದೇ ಲಕ್ಷಣಗಳು ಕಂಡುಬಂದರೆ ಬಸಿರು ಹೆರಿಗೆ ಪೂರ್ವ ಅಥವಾ ನಂತರ/ ಗರ್ಭಪಾತದ ನಂತರ ಅಪಾಯದ ಚಿಹ್ನೆಗಳು ಕಂಡು ಬಂದರೆ ಹಗಲು ರಾತ್ರಿಯನ್ನು ಪರಿಗಣಿಸಬೇಕು. ವೈದ್ಯರು ಆರೋಗ್ಯ ಸಿಬ್ಬಂದಿಗೆ ತಿಳಿಸಬೇಕು.ಈ ಕೆಳಗಂಡ ಸ್ಥಿತಿಯೇನಾದರೂ ಉಂಟಾದರೆ ಎಫ್ಆರ್ಯುಗೆ ಹೋಗಬೇಕು:
ಮಹಿಳೆಯು ಕೆಳ ಕಂಡ ಪರಸ್ಥಿತಿಯಲ್ಲಿ ದಿನದ ೨೪ ಗಂಟೆಯೂ ಕೆಲಸ ಮಾಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು
ಹತ್ತಿರದ ಆರೋಗ್ಯ ಕೇಂದ್ರ ಅಥವಾ ಎಫ್ಆರ್ಯುವನ್ನು ಮೊದಲೇ ನೋಡಿಟ್ಟು ಕೊಂಡಿರಿ ಮಹಿಳೆ ಮತ್ತು ಕುಟುಂಬದವರು ೨೪ ಗಂಟೆಯೂ ಪ್ರಸೂತಿ ಸಮಸ್ಯೆಗಳಿಗೆ ಸ್ಪಂದಿಸಬಲ್ಲ, ರಕ್ತ ಪೂರಣ ಮಾಡಬಲ್ಲ, ಶಸ್ತ್ರಕ್ರಿಯೆ ಸೌಲಭ್ಯವಿರುವ ಆಸ್ಪತ್ರೆಯನ್ನು ಮೊದಲೇ ನೋಡಿಕೊಂಡರಬೇಕು.
ಆರೋಗ್ಯ ಸೇವೆ ಒದಗಿಸುವ ಸ್ಥಳಕ್ಕೆ ಹೋಗಲು ಆಗುವ ವಿಳಂಬವೇ ಬಹುತೇಕ ಪ್ರಕರಣಗಳಲ್ಲಿ ತಾಯಿಯ ಮರಣಕ್ಕೆ ಕಾರಣವಾಗುವುದು. ಆಸ್ಪತ್ರೆಯಲ್ಲಿ ಹೆರಿಗೆಯನ್ನು ನಿರ್ಧರಿಸಿದರೆ ಆ ಅವಧಿಯಲ್ಲಿ ದಿನದ ೨೪ ಗಂಟೆಯೂ ಹೇಳಿದ ತಕ್ಷಣ ವಾಹನ ಬರುವ ವ್ಯವಸ್ಥಯಿರಬೇಕು. ಹೆರಿಗೆಯನ್ನು ಮನೆಯಲ್ಲೇ ಮಾಡಿಸಬೇಕು ಎಂದಿದ್ದರೆ, ಏನಾದರೂ ಸಮಸ್ಯೆ ಎದುರಾದರೆ ತಕ್ಷಣ ಆಸ್ಪತ್ರೆಗೆ ಸಾಗಿಲು ವಾಹನವು ಸಿದ್ಧವಾಗಿರಬೆಕು. ಸಮುದಾಯದಲ್ಲಿರುವ ಸೇವಾಕರ್ತರನ್ನು, ಸಂಸ್ಥೆಗಳು ಗ್ರಾಮಪಂಚಾಯ್ತಿ ಇತ್ಯಾದಿಗಳನ್ನು ಮೊದಲೇ ಸಂಪರ್ಕಿಸಿಕೊಂಡು ಸಿದ್ಧವಾಗಿರಬೇಕು. ತುರ್ತು ಪರಿಸ್ಥಿತಿಯಲ್ಲಿಯೂ ಸಹಾಯ ನೀಡುವ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಮನದಟ್ಟು ಮಾಡಿಕೊಳ್ಳಬೇಕು.
ಪ್ರಸವ ಪೂರ್ವ ಮತ್ತು ಪ್ರಸವಾನಂತರದ ರಕ್ತಸ್ರಾವವು ಮರಣಕ್ಕೆ ಕಾರಣವಾಗಬಹುದು. ಆಗ ರಕ್ತ ಪೂರಣವು ಅತಿ ಅಗತ್ಯ. ಅದೇ ಜೀವ ರಕ್ಷಕವಾಗುವುದು. ಅಗತ್ಯವಾದ ಗುಂಪಿನ ರಕ್ತವು ಬೇಗ ಸಿಗಲಾರದು. ಆದ್ದರಿಂದ ಮೊದಲೇ ರಕ್ತದಾನಿಗಳನ್ನು ಸಿದ್ಧಪಡಸಿ ಇಟ್ಟುಕೊಂಡಿರಬೇಕು. ಅಗತ್ಯ ಬಿದ್ದಾಗ ರಕ್ತ ನೀಡಲು ಸಿದ್ಧವಾಗಿರಬೇಕು. ಪ್ರಸವಾನಂತರದ ಶುಶ್ರೂಷೆ:ಸಂಶೋಧನೆಯೊಂದರ ಪ್ರಕಾರ ಶೇ. ೫೦ಕ್ಕೂ ಹೆಚ್ಚು ತಾಯಿಯರ ಮರಣ ಪ್ರಸವಾ ನಂತರ ಆಗುತ್ತದೆ. ಸಾಂಪ್ರದಾಯಿಕವಾಗಿ ಹೆರಿಗೆಯಾದ ನಂತರದ ೪೨ ದಿನಗಳನ್ನು (ಆರು ವಾರ) ಪ್ರಸವಾನಂತರದ ಅವಧಿ ಎನ್ನುವರು. ಇದರಲ್ಲಿ ಹೆರಿಗೆ ನಂತರದ ೪೮ ಗಂಟೆಗಳು ಮತ್ತು ನಂತರದ ಒಂದು ವಾರವು ಬಹು ಸೂಕ್ಷ್ಮವಾದ ಅವಧಿ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ ಮತ್ತು ಉಳಿವಿಗಾಗಿ ಈ ಅವಧಿಯಲ್ಲಿ ಅತಿ ಎಚ್ಚರ ಮುಖ್ಯ. ಬಹುತೇಕ ಪ್ರಾಣಾಪಾಯ ಮಾಡುವ ಇಲ್ಲವೇ ಆ ಹಂತವನ್ನು ತಲುಪುವ ಸಮಸ್ಯೆಗಳು ಈ ಅವಧಿಯಲ್ಲಿ ಆಗುತ್ತವೆ. ತಾಯಿ ಮತ್ತು ಶಿಶುವಿನ ಪ್ರಸವಾನಂತರದ ಆರೈಕೆಯು ನಿರ್ಲಕ್ಷಿತವಾಗಿದೆ. ಕೇವಲ ಆರು ಜನರಲ್ಲಿ ಒಬ್ಬರಿಗೆ ಈ ಅವಧಿಯಲ್ಲಿ ಸೂಕ್ತ ಆರೈಕೆ ದೊರೆಯುವುದು. ರಾಷ್ಟ್ರೀಯ ಕುಟುಂಬ ಸಮೀಕ್ಷೆಯ (ಎನ್ಎಫ್ಎಚ್ಎಸ್) ದತ್ತಾಂಶಗಳ ಪ್ರಕಾರ ಮನೆಯಲ್ಲಿ ಹೆರಿಗೆಯಾಗುವ ಜನರಲ್ಲಿ ಕೇವಲ ಶೇ. ೧೭ ಜನ ಮಾತ್ರ ವೈದ್ಯರಲ್ಲಿಗೆ ೨ ತಿಂಗಳ ಒಳಗೆ ಹೋಗುತ್ತಾರೆ. ಅವರಲ್ಲಿ ಕೇವಲ ಶೇ. ೨ ಜನ ಹೆರಿಗೆ ಯಾದ ಎರಡು ದಿನದ ಒಳಗೆ, ಶೆ. ೭ ಜನ ೧೫ ದಿನಗಳ ಒಳಗೆ ವೈದ್ಯರಲ್ಲಿಗೆ ಹೋಗುತ್ತಾರೆ. ಅವರಿಗೆ ದೊರಕಬಹುದಾದ ಎಲ್ಲಾ ಸೇವಾ ಸೌಲಭ್ಯವನ್ನು ಕನಿಷ್ಠ ಪ್ರಮಾಣದ ಜನರೂ ಪಡೆಯುವುದಿಲ್ಲ.ಹೆರಿಗೆ ನಂತರ ಮಹಿಳೆಯು ಭಾವನಾತ್ಮಕ ಮತ್ತು ದೈಹಿಕ ಹೊಂದಾಣಿಕೆಯನ್ನು ಮಾಡಿಕೊಳ್ಳ ಬೇಕಾಗುತ್ತದೆ. ಆ ಸಮಯದಲ್ಲಿ ಅವನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡುವವರು ಬೇಕು. ಈ ಸಮಯದಲ್ಲಿ ಕೆಲವು ವೈದ್ಯಕೀಯ ಸಮಸ್ಯೆಗಳು ಬರುವ ಸಾಧ್ಯತೆಯಿದೆ. ಗರ್ಭಾಶಯದಲ್ಲಿ ತೀವ್ರ ನೋವು ಅಥವಾ ಸೋಂಕು, ಮೂತ್ರಾಶಯದಲ್ಲಿ ಸೋಂಕು. ಸರ್ವೆಕ್ಸ್ನ ಪ್ರೊಲಾಪ್ಸ್, ಕೆಲವು ಮಾನಸಿಕ ತೊಂದರೆಗಳೂ ಉಂಟಾಗಬಹುದು. ಈ ಸ್ಥಿತಿಯನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ಮಾಡುವುದು ಅತೀ ಅಗತ್ಯ. ಕೆಲವು ಬಹಳ ಗಂಭೀರ ಮತ್ತು ಪ್ರಾಣಾಪಾಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಹೆರಿಗೆಯ ನಂತರದ ಆರು ವಾರಗಳಲ್ಲಿ , ತಾಯಿಯು ದೈಹಿಕ ಹಾಗೂ ಭಾವನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತಾಳೆ
ಸಂಭವನೀಯ ಸಮಸ್ಯೆಗಳು ಹೆರಿಗೆ ನಂತರದ ಅವಧಿಯಲ್ಲಿ ಮೊದಲ ಎರಡು ದಿನಗಳ ಒಳಗೆ ಅಥವಾ ೪೪ ಗಂಟೆಗಳ ಒಳಗೆ ಮೂರು ಗಂಭೀರ ಸಮಸ್ಯೆಗಳು ಬರಬಹುದು. ಎಕ್ಲಂಪ್ಸಿಯಾ ಸೋಂಕು ಮತ್ತು ತೀವ್ರ ರಕ್ತಸ್ರಾವ. ಹೆಚ್ಚು ಸಮಯ ಮುಂದುವರಿದ ಹೆರಿಗೆ ನೋವಿನಿಂದ ಅಥವಾ ಜಲಚೀಲ ಬೇಗ ಸೀಳುವುದರಿಂದ ಸೋಂಕು ತಗಲ ಬಹುದು. ಹೆರಿಗೆ ಸಮಯದಲ್ಲಿ ಸರಿಯಾದ ಸ್ವಚ್ಛತೆ ಇಲ್ಲದೇ ಇರುವುದು ಕಾರಣವಾಗಹುದು. ಸಹಾಯಕರ ಕೈಯನ್ನು ಮತ್ತು ಉಪಕರಣಗಳನ್ನು ಶುಚಿಯಾಗಿ ಇಡದಿದ್ದರೆ. (ಸಿಸರಿನ್ ಆಪರೇಶನ್ನಲ್ಲಿ ಸೋಂಕು ತಗುಲಬಹುದು) ತೀವ್ರ ಸೋಂಕಿನ ಲಕ್ಷಣ ಎಂದರೆ ಜ್ವರ ತಲೆನೋವು ಕೆಳ ಹೊಟ್ಟೆಯ ನೋವು ದುರ್ವಾಸನೆಯ ಸ್ರಾವ ವಾಂತಿ ಮತ್ತು ಬೇಧಿ. ಈ ಅಪಾಯಕಾರಿ ಚಿಹ್ನೆಗಳು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ತೀವ್ರ ರಕ್ತಸ್ರಾವವು ಹೆರಿಗೆಯಾದ ೧೦ ದಿನದ ನಂತರವೂ ಆಗಬಹುದು. ಹೆರಿಗೆಯಾದ ನಂತರ ಮಾಸವು ಪೂರ್ಣವಾಗಿ ಹೊರಬರದೇ ಇದ್ದರೆ ತೀವ್ರ ರಕ್ತಸ್ರಾವವಾಗುವುದು. ಹೆರಿಗೆ ಆದ ಮೇಲೆ ಇತರೆ ಸಮಸ್ಯೆಗಳು ಬರಬಹುದು, ರಕ್ತಹೀನತೆ ಮತ್ತು ಫಿಸ್ತುಲಾ ಎಂದರೆ ಯೋನಿ , ಮೂತ್ರನಾಳ ಮತ್ತು ಗುದದ್ವಾರದ ನಡುವೆ ತೂತುಗಳಾಗುತ್ತವೆ. ಗಂಭೀರ ಸಮಸ್ಯೆಗಳು ಪ್ರಸವಾನಂತರದ ಅಪಾಯದ ಚಿಹ್ನೆಗಳು ಮಹಿಳೆಯು ಹೆರಿಗೆಯ ನಂತರ ಈ ಕೆಳಗಿನ ಲಕ್ಷಣಗಳೇನಾದರೂ ಇದ್ದರೆ ತಕ್ಷಣವೇ ತಜ್ಞರ ಸಲಹೆಯನ್ನು ಪಡೆಯಬೇಕು:
ಹೆರಿಗೆಯಾದ ೭- ೧೦ ದಿನಗಳಲ್ಲಿ ಬಾಣಂತಿಯು ಆರೋಗ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಇಲ್ಲವೇ ಆರೋಗ್ಯ ಕಾರ್ಯಕರ್ತರು ಆಕೆಯ ಮನೆಗೆ ಭೇಟಿ ಮಾಡಬೇಕು. ಗರ್ಭಿಣಿಯ ಹೆರಿಗೆ ಮನೆಯಲ್ಲೇ ಆದ ಪಕ್ಷದಲ್ಲಿ ಆರೋಗ್ಯ ಕಾರ್ಯಕರ್ತರು ಆಕೆಯ ಮನೆಗೆ ಭೇಟಿ ನೀಡಬೇಕು. ಹೆರಿಗೆಯಿಂದ ಚೇತರಿಸಿಕೊಳ್ಳುತ್ತಿರುವರೆಂಬುದನ್ನು ಖಚಿತ ಪಡಿಸಿಕೊಳ್ಳುವುದು ಮುಖ್ಯ. ಎಲ್ಲವೂ ಸರಿಯಾಗಿದೆ ಎಂದು ಖಚಿತವಾದ ನಂತರ ಮಗು ಹುಟ್ಟಿದ ಆರು ವಾರಗಳ ಬಳಿಕ ವೈದ್ಯರನ್ನು ಭೇಟಿ ಮಾಡಬೇಕು. ತಾಯಿ ಮತ್ತು ನವಜಾತ ಶಿಶುವಿನ ಸಂಪೂರ್ಣ ದೈಹಿಕ ತಪಾಸಣೆ ನಡೆಸಿ, ಮಗುವಿಗೆ ರೋಗ ನಿರೋಧಕ ಲಸಿಕೆ ನೀಡಬೇಕು. ಈ ಹಂತದಲ್ಲಿ ಮಹಿಳೆಗೆ ಎದೆಹಾಲೂಡಿಸುವ ಬಗ್ಗೆ, ಲೈಂಗಿಕ ಸಂಪರ್ಕದ ಬಗ್ಗೆ, ಕುಟುಂಬ ಯೋಜನೆಯ ಬಗ್ಗೆ ಮತ್ತು ರೋಗನಿರೋಧಕತೆಯ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಆಕೆಗೆ ಇರುವ ಅನುಮಾನಗಳನ್ನು ಪರಿಹರಿಸಿ ಸಲಹೆ ನೀಡಲು ಇದು ಸೂಕ್ತ ಕಾಲ.
ಹೆರಿಗೆಯಾದ ನಂತರ ಮಹಿಳೆಯು ಹೆರಿಗೆಯಿಂದ ಚೇತರಿಸಿಕೊಳ್ಳಲು ಮತ್ತು ಶಕ್ತಿ ಸಂಚಯನಕ್ಕಾಗಿ ಉತ್ತಮ ಆಹಾರವನ್ನು ಸೇವಿಸಬೇಕು. ರಕ್ತಹೀನತೆಗೆ ಒಳಗಾಗದಂತಿರಲು ಕಬ್ಬಿಣಾಂಶಗಳನ್ನು ಹೊಂದಿರುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಹೆರಿಗೆಯ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗುವುದರಿಂದ ಇದು ಮುಖ್ಯ. ಸ್ತ್ರೀಯು ಎದೆಹಾಲೂಡಿಸುತ್ತಿದ್ದರೆ ಆಕೆ ಹೆಚ್ಚಿನ ಆಹಾರ ಮತ್ತು ದ್ರವ ಪದಾರ್ಥಗಳನ್ನು ಸೇವಿಸಬೇಕು. ತಾವು ಗರ್ಭಿಣಿಯಾಗಿದ್ದಾಗ ಸೇವಿಸುತ್ತಿದ್ದುದಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸಬೇಕು. ಎದೆಹಾಲು ಉತ್ಪಾದನೆಗೆ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯವಿದೆ. ಕ್ಯಾಲೊರಿ ಯುಕ್ತ ಆಹಾರಗಳಾದ ಪ್ರೊಟಿನ್, ಕಬ್ಬಿಣಾಂಶ, ವಿಟಾಮಿನ್ ಮತ್ತು ಇತರ ಮೈಕ್ರೋ ನ್ಯೂಟ್ರಿಯಂಟ್ಗಳನ್ನು ಸೇವಿಸಬೇಕು. ಉದಾಹರಣೆಗೆ ಧಾನ್ಯಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೊಪ್ಪು ಮತ್ತು ತರಕಾರಿಗಳು, ಹಣ್ಣು ಕುಕ್ಕುಟ ಉತ್ಪನ್ನಗಳು, ಮಾಂಸ, ಮೊಟ್ಟೆ ಮತ್ತು ಮೀನುಗಳನ್ನು ಸೇವಿಸಬೇಕು. ಹೆರಿಗೆಯ ನಂತರ ಮತ್ತು ಹಾಲೂಡಿಸುವ ಸಮಯದಲ್ಲಿ ಪಥ್ಯ ಅನಗತ್ಯ. ಬಾಣಂತಿಯರು ಹೆಚ್ಚಿನ ದ್ರವ ಪದಾರ್ಥಗಳು ಮತ್ತು ನೀರನ್ನು ಸೇವಿಸಬೆಕು. ಹೆರಿಗೆಯ ನಂತರದ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಮಗುವನ್ನು ನೋಡಿಕೊಳ್ಳುವುದು ಮತ್ತು ತನ್ನ ಕೆಲಸಗಳನ್ನು ಮಾಡಿಕೊಳ್ಳುವುದಲ್ಲದೆ, ಇತರೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡಿಸದಿರುವಂತೆ ಆಕೆಯ ಪತಿ ಮತ್ತು ಕುಟುಂಬದವರಿಗೆ ಸಲಹೆ ನೀಡಬೇಕು.
ಯೋನಿಯಲ್ಲಿ ಯಾವುದೆ ವಸ್ತುವನ್ನೂ ಇಟ್ಟುಕೊಳ್ಳದಿರುವಂತೆ ಮಹಿಳೆಗೆ ಸಲಹೆ ನೀಡಬೇಕು. ಮಲವಿಸರ್ಜನೆಯ ನಂತರ ಚೆನ್ನಾಗಿ ತೊಳೆದುಕೊಳ್ಳಬೇಕು. ಸ್ರಾವವು ಹೆಚ್ಚಾಗಿದ್ದರೆ ಪ್ಯಾಡ್ ಅಥವಾ ಬಟ್ಟೆಯನ್ನು ಕಾಲಕಾಲಕ್ಕೆ ಬದಲಿಸಬೇಕು ಅಥವಾ ೪- ೬ ಗಂಟೆಗಳಿಗೊಮ್ಮೆ ಪ್ಯಾಡ್ಅನ್ನು ಬದಲಿಸಬೇಕು. ಬಟ್ಟೆಯನ್ನು ಬಳಸುತ್ತಿದ್ದರೆ ಉತ್ತಮ ಸೋಪು ಮತ್ತು ಸಾಕಷ್ಟು ನೀರಿನಿಂದ ಅವನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ದಿನವೂ ಸ್ನಾನಮಾಡಬೇಕು ಮತ್ತು ಮಗುವನ್ನು ಮುಟ್ಟುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು.
ಅಸೌಕರ್ಯದ ಲಕ್ಷಣಗಳು |
ಬರಬಹುದಾದ ಸಮಸ್ಯೆಯ ಕುರುಹುಗಳು |
|
|
ಮೂಲ :ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/17/2020
ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ. ಆದರೆ ಆರೋಗ್ಯ ದಿನವು ...
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆ...
ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.