অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೃಹ ಹಾಗೂ ನಿತ್ಯಜೀವನದಲ್ಲಿ ನೈರ್ಮಲ್ಯ

ಗೃಹ ಹಾಗೂ ನಿತ್ಯಜೀವನದಲ್ಲಿ ನೈರ್ಮಲ್ಯ

ಗೃಹ ನೈರ್ಮಲ್ಯವು, ಮನೆಯಲ್ಲಿ ಹಾಗೂ ನಿತ್ಯಜೀವನದಲ್ಲಿ ಹರಡುವ ರೋಗವನ್ನು ತಡೆಗಟ್ಟುವುದು ಅಥವಾ ಅದರ ಹರಡುವಿಕೆಯನ್ನು ನಿವಾರಿಸುವುದಕ್ಕೆ ಸಂಬಂಧಿಸಿದೆ.
ಉದಾಹರಣೆಗೆ ಸಾಮಾಜಿಕ ಕೂಟಗಳು, ಸಾರ್ವಜನಿಕ ಸಾರಿಗೆ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳು ಮುಂತಾದವು.
ಮನೆ ಹಾಗೂ ನಿತ್ಯಜೀವನದಲ್ಲಿ ನೈರ್ಮಲ್ಯವು, ಸೋಂಕುಕಾರಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಇದರಲ್ಲಿ ಮನೆಯಲ್ಲಿ ಬಳಕೆಯಾಗುವ ಹಲವು ಪ್ರಕ್ರಿಯೆಗಳು ಒಳಗೊಂಡಿವೆ. ಕೈಯನ್ನು ಶುಚಿಯಾಗಿಟ್ಟುಕೊಳ್ಳುವುದು, ಉಸಿರಾಟದಲ್ಲಿ ನೈರ್ಮಲ್ಯ, ಆಹಾರ ಹಾಗೂ ನೀರಿನ ನೈರ್ಮಲ್ಯ, ಸಾಮಾನ್ಯ ಗೃಹ ನೈರ್ಮಲ್ಯ (ಪರಿಸರ ಸ್ಥಳಗಳು ಹಾಗೂ ಮೇಲ್ಮೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು), ಸಾಕುಪ್ರಾಣಿಗಳ ಆರೈಕೆ, ಮನೆಯಲ್ಲೇ ಆರೋಗ್ಯದ ರಕ್ಷಣೆ ಮಾಡಿಕೊಳ್ಳುವುದು (ಸೋಂಕಿಗೆ ಬಹಳ ಬೇಗನೆ ಈಡಾಗುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು).
ಪ್ರಸಕ್ತ ನೈರ್ಮಲ್ಯದ ಈ ಅಂಶಗಳನ್ನು ಪ್ರತ್ಯೇಕ ವಿಷಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ ಇವೆಲ್ಲವೂ ಒಂದೇ ತೆರನಾದ ಸೂಕ್ಷ್ಮಜೀವಿ ವಿಜ್ಞಾನದ ತತ್ತ್ವಗಳಿಂದ ಆಧರಿತವಾಗಿವೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವುದೆಂದರೆ ಸೋಂಕು ರವಾನೆಯ ಸರಪಣಿಯನ್ನು ಮುರಿಯುವುದು.
ಒಂದು ಸರಳ ತತ್ತ್ವವೆಂದರೆ, ಸೋಂಕಿನ ಸರಪಣಿಯನ್ನು ಒಡೆದುಹಾಕಿದರೆ, ಸೋಂಕು ಹರಡಲು ಸಾಧ್ಯವಿಲ್ಲ. ಗೃಹ ಹಾಗೂ ನಿತ್ಯಜೀವನದ ಬಳಕೆಯಲ್ಲಿ ನೈರ್ಮಲ್ಯದ ಪರಿಣಾಮಕಾರಿ ಸಂಕೇತಗಳ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ, ಗೃಹ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಸೈಂಟಿಫಿಕ್ ಫೆÇೀರಮ್ ಅಪಾಯ ಆಧಾರಿತ ಮಾರ್ಗವೊಂದನ್ನು ಅಭಿವೃದ್ಧಿಪಡಿಸಿದೆ (ಇದು ಹಜಾರ್ಡ್ ಅನಾಲಿಸಿಸ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್‍ನ್ನು ಆಧರಿಸಿದೆ).
ಇದು "ಗುರಿಯಾದ ನೈರ್ಮಲ್ಯ"ವೆಂದು ಪರಿಚಿತವಾಗಿದೆ. ಗುರಿಯಾದ ನೈರ್ಮಲ್ಯವು, ಮನೆಗಳಲ್ಲಿ ರೋಗಕಾರಕಗಳ ಹರಡುವಿಕೆಯ ಮಾರ್ಗಗಳನ್ನು ಗುರುತಿಸುವುದರ ಮೇಲೆ ಆಧಾರವಾಗಿದೆ. ಜೊತೆಗೆ ಸೋಂಕಿನ ಸರಪಣಿಯನ್ನು ಒಡೆಯಲು ಸರಿಯಾದ ಸಮಯದಲ್ಲಿ, ನಿರ್ಣಾಯಕ ಹಂತಗಳಲ್ಲಿ ನೈರ್ಮಲ್ಯ ವಿಧಾನಗಳನ್ನು ಬಳಸುವುದು.
ಮನೆಯಲ್ಲಿ ಉಂಟಾಗುವ ಸೋಂಕಿಗೆ ಪ್ರಮುಖ ಕಾರಣವೆಂದರೆ ಜನತೆ (ಇವರು ರೋಗವಾಹಕಗಳಾಗಿರುತ್ತಾರೆ ಅಥವಾ ಸೋಂಕಿತರಾಗಿರುತ್ತಾರೆ), ಆಹಾರ (ವಿಶೇಷವಾಗಿ ಕಚ್ಚಾ ಆಹಾರ) ಹಾಗೂ ನೀರು, ಜೊತೆಗೆ ಸಾಕು ಪ್ರಾಣಿಗಳು. ಇದರ ಜೊತೆಯಲ್ಲಿ, ನಿಂತ ನೀರು ಸಂಗ್ರಹವಾಗುವ ಸ್ಥಳಗಳು-ಉದಾಹರಣೆಗೆ ಸಿಂಕುಗಳು, ಶೌಚಾಲಯಗಳು, ನಿರುಪಯುಕ್ತ ಪೈಪುಗಳು, ಶುಚಿಗೊಳಿಸುವ ಸಾಧನಗಳು, ಮುಖವನ್ನು ಒರೆಸಿಕೊಳ್ಳುವ ಬಟ್ಟೆಗಳು-ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸುಲಭವಾಗಿ ಸಹಕಾರಿಯಾಗಿವೆ. ಜೊತೆಗೆ ಇವುಗಳು ಎರಡನೇ ಸೋಂಕಿನ ಭಂಡಾರಗಳಾಗಿವೆ.

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate