ಗರ್ಭಧಾರಣೆಗಳನ್ನು ತಡೆಗಟ್ಟುವ ಸಹಜವಾದ ವಿಧಾನಗಳೂ ಇವೆ. ಆದರೆ ಈ ವಿಧಾನವನ್ನು ಅಳವಡಿಸಿಕೊಳ್ಳಲು ಮಹಿಳೆಯು ತನ್ನ ಮುಟ್ಟಿನ ಅವಧಿಯಲ್ಲಿ ತನ್ನ ದೇಹದಲ್ಲಾಗುವ ಅನೇಕ ಬದಲಾವಣೆಗಳನ್ನು ಕುರಿತು ಕಲಿಯಬೇಕಾಗುತ್ತದೆ. ಫಲವಂತಿಕೆಯ ಅರಿವು ಎಂದರೆ ಒಬ್ಬಳು ಮಹಿಳೆಯು ತನ್ನ ಮುಟ್ಟಿನ ಅವಧಿಯಲ್ಲಿ ಫಲವಂತಿಕೆಯ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಮುಕ್ತಾಯವಾಗುತ್ತದೆ ಎನ್ನುವುದನ್ನು ಹೇಳುವುದನ್ನು ಕಲಿತುಕೊಳ್ಳುವುದು. ಸಾಮಾನ್ಯವಾಗಿ ಒಬ್ಬಳು ಮಹಿಳೆಯ ಮುಟ್ಟಿನ ಚಕ್ರವು 28 ದಿನಗಳಿರುತ್ತದೆ. ಅವಳು ಫಲವಂತಿಕೆಯ ದಿನಗಳಲ್ಲಿ (ಚಕ್ರದ 8-19) ಸಂಭೋಗ ನಡೆಸಿದರೆ ಗರ್ಭ ಧರಿಸುವ ಸಂಭವವಿರುತ್ತದೆ. ಫಲವಂತಿಕೆಯ ನಿಯಂತ್ರಣದ ಸಹಜ ವಿಧಾನವು ಕೆಳಕಂಡವುಗಳನ್ನು ಒಳಗೊಳ್ಳುತ್ತದೆ.
1. ಸಂಭೋಗವನ್ನು ನಡೆಸದಿರುವುದು.
2. ಹಿಂದಕ್ಕೆ ತೆಗೆದುಕೊಳ್ಳುವುದು
3. ಸುರಕ್ಷಿತ ಅವಧಿಯ ವಿಧಾನ
4. ಗರ್ಭಕೋಶದ ಕಂಠದ ಲೋಳೆಯ ವಿಧಾನ
ಸುರಕ್ಷಿಣ ಅವಧಿ
26 ಮತ್ತು 32 ದಿನಗಳ ಮುಟ್ಟಿನ ಆವರ್ತವನ್ನು ಹೊಂದಿರುವ ಮಹಿಳೆಯರು, ಮುಟ್ಟಿನ ಆವರ್ತದ ಪ್ರಾರಂಭವನ್ನು ಒಂದನೆಯ ದಿನ ಎಂದು ಲೆಕ್ಕ ಹಿಡಿದು, 8 ರಿಂದ 19ನೇ ದಿನಗಳವರೆಗೆ ಅಸುರಕ್ಷಿತ ಸಂಭೋಗವನ್ನು ನಿವಾರಿಸುವ ಮೂಲಕ ಗರ್ಭಧರಣೆಯನ್ನು ತಡೆಗಟ್ಟಬಹುದು. ನೀವು ಮಾನಕ ದಿನಗಳ ವಿಧಾನವನ್ನು ಕುರಿತು ನಿಮ್ಮ ಎಎನ್‍ಎಂ ಅವರಿಂದ ಇನ್ನೂ ಹೆಚ್ಚು ವಿವರಗಳನ್ನು ತಿಳಿಯಬಹುದು.
ಗರ್ಭಕೋಶದ ಕಂಠದ ಲೋಳೆಯ ವಿಧಾನ
ಮಹಿಳೆಯ ಗರ್ಭಕೋಶದ ದ್ವಾರದಲ್ಲಿ, ಗರ್ಭಕೋಶದ ಕಂಠದ ಲೋಳೆ ಎಂಬ ಅಂಟು ದ್ರವ ಇರುತ್ತದೆ. ಅಂಡವಿಸರ್ಜನೆಯ ಎರಡು ದಿನ ಮೊದಲು ಮತ್ತು ಅನಂತರ ಈ ಲೋಳೆಯು ನೀರಾಗಿಯೂ ಅಂಟಂಟಾಗಿಯೂ ಇರುತ್ತದೆ. ಇದು ವೀರ್ಯಾಣುವು ಸುಲಭವಾಗಿ ಸಾಗಲು ಅವಕಾಶ ಮಾಡಿಕೊಡುತ್ತದೆ. ಇದು ಫಲವಂತಿಕೆಯ ಅವಧಿ. ಇತರ ದಿನಗಳಲ್ಲಿ ಲೋಳೆಯು ಗಟ್ಟಿಯಾಗಿದ್ದು, ಒಣಗಿದಂತಿರುತ್ತದೆ ಮತ್ತು ಎಳೆದಾಗ ಗುಂಡಾಗುತ್ತದೆ. ಈ ದಿನಗಳು ಫಲವಂಇಕೆಯ ದಿನಗಳಲ್ಲ.
ಈ ಸಹಜ ವಿಧಾನಗಳಿಗೆ ಅಪಾರವಾದ ಸ್ವಯಂ ನಿಯಂತ್ರಣ ಬೇಕು ಮತ್ತು ಇವುಗಳಲ್ಲಿ ವೈಫಲ್ಯದ ಪ್ರಮಾಣ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಮಹಿಳೆಯು ಗರ್ಭಧಾರಣೆಯನ್ನು ಬಯಸದಿದ್ದರೆ ಕಡಮೆ ವೈಫಲ್ಯದ ಪ್ರಮಾಣವಿರುವ ಇತರ ಗರ್ಭನಿರೋಧಕ ವಿಧಾನಗಳನ್ನು ಅನುಸರಿಸುವುದು ಸೂಕ್ತವೆಂದು ಸಲಹೆ ಮಾಡಲಾಗಿದೆ.
ಹೇಗಾದರೂ, ಬಂಜೆತನದ ಸಮಮ್ಯೆ ಇರುವ ದಂಪತಿಗಳಲ್ಲಿ ಗರ್ಭಧಾರಣೆಯ ಸಾಧ್ಯತೆಗಳನ್ನು ಅನೇಕ ಸಂದರ್ಭಗಳಲ್ಲಿ ಹೆಚ್ಚಿಸಲು, ಮಹಿಳೆಯ ಫಲವಂತಿಕೆಯ ಅರಿವು ಅಪೇಕ್ಷಣೀಯ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 1/28/2020