ಟ್ಯೂಬೆಕ್ಟಮಿ (ಸ್ತ್ರೀಯರ ಸಮತಾನ ನಿರೋಧ ಶಸ್ತ್ರ ಚಿಕಿತ್ಸೆ)
ಅಂಡಾಣುಗಳನ್ನು ಸಾಗಿಸುವ ನಾಳಗಳನ್ನು (ಅಂಡನಾಳಗಳು) ಗಂಟು ಹಾಕಿ ಕತ್ತರಿಸಸುವುದೇ ಟ್ಯೂಬೆಕ್ಟಮಿ ಈ ವಇಧಾನವನ್ನು ಮಾಡಲು ಅನೇಕ ಮಾರ್ಗಗಳಿಬೆ. ಅನೇಕ ರಾಜ್ಯಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಲ್ಯಾಪರೋ ಸ್ಕೋಪ್ (ಡೋರ್ ಬೀನ್) ಬಳಸಿ ಮಾಡಲಾಗುತ್ತದೆ. ಅದು ಅಂಡಾಣು ಮತ್ತು ವೀರ್ಯಾಣುಗಳ ಮಿಲನವನ್ನು ತಡೆಯುತ್ತದೆ. ಇದು ಭಾರತದಲ್ಲಿ ಜನಪ್ರಿಯವಾದ ಸಂತಾನ ನಿರೋಧ ಶಸ್ತ್ರಚಿಕಿತ್ಸೆಯಾಗಿದೆ.
ಟ್ಯೂಬೆಕ್ಟಮಿಯಲ್ಲಿ ಎರಡು ವಿಧಾನಗಳು
ಮಿನಿ-ಲ್ಯಾಪರೊಟೊಮಿಯು ಒಂದು ಸಾಂದ್ರದಾಯಿಕವಾದ ವಿಧಾನ. ಈ ವಿಧಾನದಲ್ಲಿ ಕಿಬ್ಬೊಟ್ಟೆಯಲ್ಲಿ ಒಂದು ಚಿಕ್ಕ ಛೇದನವನ್ನು ಮಾಡಿ ಕೈಗಳನ್ನು ಬಳಸಿ ಕ್ರಿಯೆಯನ್ನು ನಡೆಸಲಾಗುತ್ತದೆ. ಚುಚ್ಚುಮದ್ದಿನ ಮೂಲಕ ಸ್ಥಳೀಯ ಅರಿವಳಿಕೆಯನ್ನು ಕೊಡಲಾಗುತ್ತದೆ.
ಮಿನಿ-ಲ್ಯಾಪ್ ವಿಧಾನದಲ್ಲಿ ಆಸ್ಪತ್ರೆಯಲ್ಲಿ ಎರಡುದಿನ ಇರಬೇಕಾಗುತ್ತದೆ. ಹೆರಿಗೆಯ ಅನಂತರ ಗರ್ಭಕೋಶವು ಕಿಬೊಟ್ಟೆಯಲ್ಲಿ ಇನ್ನೂ ಎತ್ತರದಲ್ಲಿರುವಾಗ ಈ ವಿಧಾನವು ಟ್ಯೂಬೆಕ್ಟಮಿಯಲ್ಲಿ ಉಪಯುಕ್ತವಾಗಿರುತ್ತದೆ.
ಲ್ಯಾಪರೊಸ್ಕೊಪಿ (ಉದರದರ್ಶಕ ಶಸ್ತ್ರ ಚಿಕಿತ್ಸೆ)
ಈ ವಿಧಾನದಲ್ಲಿ ಒಂದು ಲ್ಯಾಪರೋಸ್ಕೋಪ್ ಅನ್ನು ಕಿಬ್ಬೊಟ್ಟೆಯಲ್ಲಿ ತೂರಿಸಿ ನಾಳಗಳ ಮೇಲೆ ಬಿಗಿಯಾಗಿ ಪ್ಲಾಸ್ಟಿಕ್ ಉಂಗುರಗಳನ್ನು ಕೂಡಿಸಲಾಗುತ್ತದೆ. ಗರ್ಭಕೋಶವು ತನ್ನ ಸಹಜ ಗಾತ್ರ ಮತ್ತು ಸ್ಥಾನಕ್ಕೆ ಹಿಂತಿರುಗಿದ ಮೇಲೆ (ಹೆರಿಗೆಯ ಅನಂತರ ಕನಿಷ್ಠ ಆರು ವಾರಗಳು) ಮಾತ್ರ ಲ್ಯಾಪರೊಸ್ಕೊಪಿಯನ್ನು ಮಾಡಬಹುದು.
ಅನುಭವಸ್ಥರಾದ ಒಬ್ಬ ಶಸ್ತ್ರವೈದ್ಯರು ಮಾಡುವ ಟ್ಯೂಬೆಕ್ಟಮಿಯು ಸಾಮಾನ್ಯವಾಗಿ ಯಶಸ್ವಿಯಾಗುವುದದರೂ, ಲ್ಯಾಪರೊಸ್ಕೊಪಿಕ್ ಸಂತಾನನಿರೋಧ ಶಸ್ತ್ರಚಿಕಿತ್ಸೆಯು ಕೆಲವು ಸಲ ವಿಫಲವಾಗಬಹುದು.
ಟ್ಯೂಬೆಕ್ಟಮಿಯ ಪ್ರಸಂಗದಲ್ಲಿ ಜಟಿಲತೆಗಳು ವಿರಳ, ಕೆಲವು ಸಲ ಆಂತರಿಕ ರಕ್ತಸ್ರವ, ಸೋಂಕುಗಳು ಮತ್ತು ಮುಂದೆ ನಾಳವು ಪುನಃ ತೆರೆದುಕೊಂಡಾಗ ನಳದಲ್ಲಿಯೇ (ಎಕ್ಟೊಪಿಕ್) ಗರ್ಭಧಾರಣೆ ಸಂಭವಿಸಬಹುದು.
ಸಂತಾನ ನಿರೋಧ ಶಸ್ತ್ರಚಿಕಿತ್ಸೆಗೆ ಆರೋಪಿಸಹುದಾದ ದೊಡ್ಡ ಪ್ರಮಾಣದ ಜಟಿಲತೆಗಳು ಉಂಟಾಗಿ, ವೈಫಲ್ಯ ಮತ್ತು ಅಸಂಭವನೀಯವಾದ ಸಾವು ಉಂಟಾದರೆ, ಕುಟುಂಬ ಯೋಜನೆ ವಿಮಾ ಯೋಜನೆಯ ಪ್ರಕಾರ ಲಭ್ಯವಾಗಿರುವ ಪರಿಹಾರವನ್ನು ದೊರಕಿಸಿಕೊಡುವಲ್ಲಿ ನೀವು ಸಹಾಯ ಮಾಡಬೇಕು. ನಿಮ್ಮ ಎಎನ್‍ಎಂ ಅವರಿಂದ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಸಂತಾನ ನಿರೋಧ ಶಸ್ತ್ರಚಿಕಿತ್ಸೆಯನ್ನು ರದ್ದುಗೊಳಿಸಿ ಮೊದಲಿನ ಸ್ಥಿತಿಗೆ ತರುವುದು (ರಿಕ್ಯಾನಲೈಸೇಷನ್)
ಎಲ್ಲ ಪ್ರಾಯೋಗಿಕ ಉದ್ದೇಶಗಳಿಗೆ, ಸಮತಾನ ನಿರೋಧ ಶಸ್ತ್ರಚಿಕಿತ್ಸೆಗಳು ಶಾಶ್ವತವಾದ ಕ್ರಿಯೆಗಳು. ಆದರೆ ಎಲ್ಲ ಮಕ್ಕಳ ಸಾವಿನಂತಹ ಅಸಾಮಾನ್ಯ ಸಂದರ್ಭಗಳಲ್ಲಿ ಕತ್ತರಿಸಿದ ನಾಳಗಳನ್ನು ಪುನಃ ಜೋಡಿಸುವಂತಹ ರಿಕ್ಯಾನಲೈಸೇಷನ್ ಪ್ರಕ್ರಿಯೆಯನ್ನು ದಂಪತಿಯು ಅಳವಡಿಸಿಕೊಳ್ಳಬಹುದು. ಆದರೆ ಪುರುಷರು ಮತ್ತು ಸ್ತ್ರೀಯರು ಇಬ್ಬರಲ್ಲಿಯೂ ಅಂತಹ ನಾಲ್ಕು ಪ್ರಯತ್ನಗಳಲ್ಲಿ ಒಂದರಲ್ಲಿ ಮಾತ್ರ ಯಶಸ್ಸು ಲಭಿಸುತ್ತದೆ. ಈ ಸೌಲಭ್ಯಗಳು ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 7/23/2020