ಸ್ತ್ರೀ ಉತ್ಪಾದಿಸುವ ಅಂಡ ಮತ್ತು ಪುರುಷನು ಉತ್ಪಾದಿಸುವ ವೀರ್ಯದ ಸಂಯೋಗದಿಂದ ಗರ್ಭಧಾರಣೆ ಉಂಟಾಗುತ್ತದೆ. ಅಂಡವು (ವೀರ್ಯದೊಡನೆ ಸಂಯೋಗವಾದ ಮೇಲೆ ಇದು ಮಗುವಾಗಿ ಬೆಳೆಯುತ್ತದೆ) ಸ್ತ್ರೀಯ ಗರ್ಭಾಶಯದೊಳಗೆ ಸೃಷ್ಟಿಯಾಗುತ್ತದೆ. ಸ್ತ್ರೀ ಮತ್ತು ಪುರುಷರ ನಡುವೆ ಲೈಂಗಿಕ ಸಂಯೋಗ ನಡೆದಾಗ, ಸ್ತರೀಯ ಯೋನಿಯಲ್ಲಿ ಬಿಡುಗಡೆಯಾದ ವೀರ್ಯಾಣುಗಳು ಗರ್ಭಾಶಯದಲ್ಲಿರುವ ಅಂಡದ ಕಡೆಗೆ ಈಜುತ್ತವೆ. ಅಂಡ ಮತ್ತು ವೀರ್ಯಾಣುಗಳಲ್ಲಿ ಒಂದು ಸಂಯೋಗಗೊಳ್ಳುವುದರ ಫಲವೇ ಗರ್ಭಧಾರಣೆ, ಗರ್ಭಾಶಯದ ಗೋಡೆಗಳು ಅಂಡಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಅಂಡವು ವೀರ್ಯಾಣುವಿನೊಡನೆ ಸಂಯೋಗಗೊಂಡು ಒಂದು ಮಗುವಾಗಿ ಬೆಳೆಯುತ್ತದೆ.
ಕುಟುಂಬ ಯೋಜನೆಯ ವಿಧಾನಗಳಲ್ಲಿ ಐದು ಮುಖ್ಯವಾದ ಮಾದರಿಗಳಿವೆ :
ತಡೆ ವಿಧಾನಗಳು
ವೀರ್ಯಾಣುವು ಅಂಡವನ್ನು ತಲಪದಿದ್ದಲ್ಲಿ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಉದಾಹರಣೆಗೆ ಒಬ್ಬ ಪುರುಷನು ಒಂದು ಕಾಂಡೋಮ್ ಅನ್ನು ಬಳಸಿದರೆ, ವೀರ್ಯಾಣುವು ಕಾಂಡೋಮಿನಲ್ಲಿಯೇ ಉಳಿದುಬಿಡುತ್ತದೆ. ಆದ್ದರಿಂದ ವೀರ್ಯಾಣುಗಳು ಗರ್ಭಾಶಯದಲ್ಲಿರುವ ಅಂಡವನ್ನು ತಲಪಲು ಅಸಮರ್ಥವಾಗುತ್ತವೆ. ಹೀಗೆ ಗರ್ಭಧಾರಣೆಯನ್ನು ತಡೆಗಟ್ಟಲಾಗುತ್ತದೆ.
ಹಾರ್ಮೋನಿನ ವಿಧಾನಗಳು
ಈ ವಿಧಾನವು ಸ್ತ್ರೀಯ ಅಂಡಾಶಯವು ಅಂಡವನ್ನು ಬಿಡುಗಡೆ ಮಾಡುವುದನ್ನು ತಡೆಯುತ್ತದೆ ಮತ್ತು ವೀರ್ಯಾಣುವು ಅಂಡವನ್ನು ತಲುಪುವುದು ಕಷ್ಟವಾಗುವಂತೆ ಮಾಡುತ್ತದೆ ಹಾಗೂ ಗರ್ಭಾಶಯದ ಗೋಡೆಗಳು ಒಂದು ಗರ್ಭಧಾರಣೆಗೆ ಬೆಂಬಲ ನೀಡದಂತೆ ತಡೆಯುತ್ತದೆ. ಉದಾಹರಣೆಗೆ ಮಾಲ್ ಎನ್ ಮಾತ್ರೆಗಳು
ಐಯುಡಿಗಳು
ಇವು ಗರ್ಭಾಶಯದೊಳಗೆ ಅಳವಡಿಸಲಾಗುವ ಸಾಧನಗಳು. ಅವು ವೀರ್ಯಾಣು ಮತ್ತು ಅಂಡ ಜೊತೆಗೂಡುವುದನ್ನು ತಡೆಯುತ್ತವೆ ಮತ್ತು ಅಂಡಾಣುವು ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ತಡೆಯುತ್ತವೆ.
ಸಹಜ ವಿಧಾನಗಳು
ಇವು ಒಬ್ಬಳು ಮಹಿಳೆಗೆ ತಾನು ಯಾವಾಗ ಫಲವತಿಯಾಗಿದ್ದೇನೆ ಎಂದು ತಿಳಿದುಕೊಳ್ಳಲು ನೆರವಾಗುತ್ತವೆ. ಅಂತಹ ಸಮಯದಲ್ಲಿ ಅವಳು ಲೈಂಗಿಕ ಸಂಪರ್ಕವನ್ನು ತಪ್ಪಿಸಬಹುದು.
ಶಾಶ್ವತ ವಿಧಾನಗಳು
ಇವು ಶಸ್ತ್ರಚಿಕಿತ್ಸೆಗಳು. ಇವು ಪುರುಷನಿಗಾಗಲಿ ಅಥವಾ ಮಹಿಳೆಗಾಗಲಿ ಮುಂದೆಂದೂ ಮಕ್ಕಳನ್ನು ಪಡೆಯದಂತೆ ತಡೆಯುತ್ತವೆ.
ತಡೆ ವಿಧಾನಗಳು
ಅಗತ್ಯವಿರುವ ಮಹಿಳೆಯರಿಗೆ ವಿತರಣೆ ಮಾಡಲು ನಿಮಗೆ ಕಾಂಡೋಮ್‍ಗಳನ್ನು ಒದಗಿಸಲಾಗುತ್ತದೆ. ಮಹಿಳೆಯರು ಅವನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ನಾಚಿಕೊಳ್ಳುತ್ತಾರೆ. ಅನೇಕರಿಗೆ ಅವುಗಳನ್ನು ಹೇಗೆ ಬಳಸಬೇಕು ಮತ್ತು ಎಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿದಿರುವುದಿಲ್ಲ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 6/4/2020