ಹಾಲೂಡಿಕೆಯ ಮುಟ್ಟು ತಡೆ ವಿಧಾನ
ಕೆಲವು ಸಂದರ್ಭಗಳಲ್ಲಿ ಹಾಲೂಡಿಕೆಯು, ಅಂಡಾಶಯಗಳು ಸಂಡಾಣುಗಳನ್ನು ಬಿಡುಗಡೆ ಮಾಡುವುದನ್ನು ತಡೆಗಟ್ಟಬಲ್ಲದು. ಈ ವಿಧಾನಕ್ಕೆ ವೆಚ್ವವೇನೂ ಇಲ್ಲ. ಆದರೆ ಹೆರಿಗೆಯಾದ ಮೇಲೆ ಮೊದಲ ಆರು ತಿಂಗಳುಗಳಲ್ಲಿ ಮಾUತ್ರ ಇದು ಅತ್ಯಂತ ಪರಿಣಾಮಕಾರಿ.
ಗರ್ಭಧಾರಣೆಯನ್ನು ತಡೆಗಟ್ಟಲು ಹಾಲೂಡಿಕೆಯನ್ನು ಬಳಸುವುದು ಹೇಗೆ ?
ಮಗುವು ಆರು ತಿಂಗಳಿಗಿಂತ ಚಿಕ್ಕದಾಗಿದ್ದರೆ.
ಹೆರಿಗೆಯ ನಂತರ ಮಹಿಳೆಗೆ ಮಾಸಿಕ ಋತುಸ್ರವ ಆಗಿಲ್ಲದಿದ್ದರೆ.
ಮಹಿಳೆಯು (ನೀರನ್ನೂ ಕುಡಿಸದೆ) ಮಗುವಿಗೆ ಕೇವಲ ಮೊಲೆಹಾಲನ್ನಷ್ಟೇ ಕುಡಿಸುತ್ತಿದ್ದರೆ, ಮಗುವು ಹಸಿದಿರುವಾಗಲೆಲ್ಲ ಹಾಲನ್ನು ಕುಡಿಸುತ್ತಿದ್ದರೆ, ಹಗಲೂ ರಾತ್ರಿ ಆರು ಗಂಟೆಗಳಿಗಿಂತ ಕಡಮೆ ಅಂತರದಲ್ಲಿ ಹಾಲನ್ನು ಕುಡಿಸುತ್ತಿದ್ದರೆ. ಹಾಲನ್ನು ಕುಡಿಸದಿದ್ದರೆ ಮಗುವು ಇಡೀ ರಾತ್ರಿ ನಿದ್ದೆ ಂಆಡುವುದಿಲ್ಲ.
ಕೆಳಕಂಡ ಯಾವುದೇ ಸಂಗತಿಗಳು ಸಂಭವಿಸಿದರೆ ಕೂಡಲೇ ಕುಟುಂಬ ಯೋಜನೆಯ ಬೇರೆ ವಿಧಾನವನ್ನು ಉಪಯೋಗಿಸಬೇಕು.
ಮಗುವಿಗೆ ಆರು ತಿಂಗಳಿಗಿಂತ ಹೆಚ್ಚು ಬಯಸ್ಸಾಗಿದೆ, ಅಥವಾ
ಮಾಸಿಕ ಋತುಸ್ರಾವ ಪ್ರಾರಂಭವಾಗಿದೆ, ಅಥವಾ
ಮಗುವು ಬೇರೆ ಬಗೆಯ ಹಾಲನ್ನು ಸೇವಿಸಲು ಪ್ರಾರಂಭಿಸುತ್ತದೆ ಅಥವಾ ಬೇರೆ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತದೆ ಅಥವಾ ರಾತ್ರಿ ಆರು ಗಂಟೆಗಿಂತ ಹೆಚ್ಚುಕಾಲ ನಿದ್ದೆ ಮಾಡುತ್ತದೆ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 12/12/2019