ನಿಮ್ಮ ಹಳ್ಳಿಯಲ್ಲಿ ಅನೇಕ ಹದಿಹರೆಯದವರು ಮತ್ತು ಬಾಲಕ ಬಾಲಕಿಯರು ಇದ್ದಾರೆಂದು ನಿಮಗೆ ಚೆನ್ನಾಗಿ ಗೊತ್ತು. ಸಾಮಾನ್ಯವಾಗಿ ನೋಡಿದರೆ ಅವರೆಲ್ಲ ಆರೋಗ್ಯವಂತರಾಗಿ ಕಾಣಬಹುದು. ಆದರೆ ಆರೋಗ್ಯಪೂರ್ಣವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಅವರಿಗೆ ಸಲಹೆ ಮತ್ತು ಸಮಾಲೋಚನೆಯ ಅವಶ್ಯಕತೆಯಿದೆ. ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಅವರಿಗೆ ಆರೋಗ್ಯದ ಆರೈಕೆಯ ಅಗತ್ಯವೂ ಬೇಕಾಗಿರಬಹುದು. ಅಲ್ಲದೆ ನಮ್ಮ ದೇಶದ ಕೆಲಬು ಪ್ರದೇಶಗಳಲ್ಲಿ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಮದುವೆಗಳು ನಡೆಯುತ್ತವೆ. ಇದರಿಂದ ಅವರ ಜೀವನದ ಪ್ರಾರಂಭ ಕಾಲದಲ್ಲಿಯೇ ಗರ್ಭಧರಿಸುವುದು ಮತ್ತು ಪ್ರಸೂರಿ ಕ್ರಿಯೆಗಳು ನಡೆಯುತ್ತವೆ. ಆದ್ದರಿಮದ ಹದಿಹರೆಯದ ತರುಣಿಯರಿಗೆ ಅವರು ಗರ್ಭಿಣಿಯರಾಗಿದ್ದಾಗ ಮತ್ತು ಹೆರಿಗೆಯ ಸಮಯದಲ್ಲಿ ಸೂಕ್ತವಾದ ಆರೈಕೆ ದೊರೆಯಬೇಕಾದ ಅಗತ್ಯವಿದೆ. ಚಿಕ್ಕ ವಯಸ್ಸಿನಲ್ಲಾಗುವ ವಿವಾಹ ಮತ್ತು ಗರ್ಭಧಾರಣೆಯ ದುಷ್ಪರಿಣಾಮಗಳನ್ನು ಕುರಿತು ಹದಿಹರೆಯದವರಿಗೆ ತಿಳಿಸಿಕೊಡಬೇಕಾದ ಅಗತ್ಯವಿದೆ. ಕಾಲಾನಂತರದಲ್ಲಿ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ತರುಣಿಯರ ಮದುವೆಯಾಗದಿರುವಂತೆ ಖಾತರಿಪಡಿಸಿಕೊಳ್ಳುವುದರಲ್ಲಿ ನೀವು ಸಫಲರಾಗುತ್ತೀರಿ. ಹರಿಹರೆಯದವರಿಗೆ ತಮ್ಮ ಆರೋಗ್ಯವನ್ನು ಸಂವರ್ಧಿಸಿಕೊಳ್ಳುವ ಹಾಗೂ ರೋಗಗಳನ್ನು ತಡೆಗಟ್ಟುವ ತಿಳಿವಳಿಕೆ ಮತ್ತು ರೋಗಗಳನ್ನು ತಡೆಗಟ್ಟುವ ತಿಳಿವಳಿಕೆ ಮತ್ತು ಕೌಶಲವಳು ಕೂಡ ಅಗತ್ಯ.
ದಂಪತಿಗಳಿಗೆ ಮತ್ತು ವ್ಯಕ್ತಿಗಳಿಗೆ ಕುಟುಂಬ ಯೋಜನೆಯನ್ನು ಕುರಿತು ಸಲಹೆ ನೀಡಲು ಮತ್ತು ಹೇಗೆ ಮತ್ತು ಯಾವಾಗ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲು ಈ ಲೇಖನ ನಿಮಗೆ ನೆರವಾಗುತ್ತದೆ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 5/1/2020