ಇವು ಅನಪೇಕ್ಷಿತ ಗರ್ಭಧಾರಣೆಯನ್ನು ಮತ್ತು ಎಚ್‍ಐವಿ/ಏಡ್ಸ್ ಸೇರಿದಂತೆ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಯುತ್ತವೆ.
ಪ್ರತಿಬಾರಿ ಲೈಂಗಿಕ ಸಂಪರ್ಕ ಮಾಡುವಾಗಲೂ ಒಂದು ಹೊಸ ಕಾಂಡೋಮ್‍ಅನ್ನು ಬಳಸಬೇಕು.
ಅನಪೇಕ್ಷಿತ ಗರ್ಭಧಾರನೆಯನ್ನು ತಡೆಯಲು ಸರಿಯಾದ ಕಾಂಡೋಮ್‍ಗಳನ್ನು ತಪ್ಪದೇ ಬಳಸುವುದು ಅತ್ಯಗತ್ಯ
ಕಾಂಡೋಮ್‍ಅನ್ನು ಬಳಸುವುದು ಹೇಗೆ ?
ಕಾಂಡೋಮ್‍ಗಳನ್ನು ಬಳಸುವುದು ಹೇಗೆಂದು ನಿಮಗೆ ತೋರಿಸಿಕೊಡಲಾಗುವುದು.
ಸರಿಯಾದ ರೀತಿಯಲ್ಲಿ ಕಾಂಡೋಮ್ ಅನ್ನು ಹೊರಹಾಕುವುದು
ಕಾಂಡೋಮ್‍ಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ ಮತ್ತು ಬೆಳಕಿನಿಂದ ದೂರವಾಗಿ ಇಡಬೇಕು.
ಕಾಂಡೋಮ್‍ಗಳನ್ನು ಸಂಗ್ರಹ ಮಾಡಿಕೊಲ್ಳಿ ಮತ್ತು ಅವನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತೋರಿಸಿ ಹಾಗೂ ಸದಾ ಕಾಂಡೋಮ್‍ಗಳು ಲಭ್ಯವಾಗಿರುವಂತೆ ನೋಡಿಕೊಳ್ಳಿ.
ನೀವು ಮಾಡಬೇಕಾದದ್ದು ಏನು :
ಕಾಂಡೋಮ್‍ಅನ್ನು ಕುಟುಂಬ ಯೋಜನೆಯ ಒಂದು ವಿಧಾನವಾಗಿ ಬಳಸುವಂತೆ ಕುಟುಂಬಗಳಿಗೆ ಸಲಹೆ ನೀಡಿ. ಅಲ್ಲದೆ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ಕಾಂಡೋಮ್‍ಗಳು ತಡೆಯುತ್ತವೆ ಎಂದೂ ವಿವರಿಸಿ.
ಬಳಸಲು ಬಯಸುವ ಎಲ್ಲರಿಗೂ ಕಾಂಡೋಮ್‍ಗಳು ಲಭ್ಯವಾಗಿರುವಂತೆ ನೋಡಿಕೊಳ್ಳಿ.
ಸನ್ನಿವೇಶ ಸೂಕ್ತವಾಗಿದ್ದಲ್ಲಿ ಕಾಂಡೋಮ್ ಅನ್ನು ಹೇಗೆ ಉಪಯೋಗಿಸಬೇಕು ಎಂದು ದಂಪತಿಗೆ ನೀವು ತೋರಿಸಿ ಕೊಡಬಹುದು. ಚಿತ್ರಪಟ ಮತ್ತು ಒಂದು ಕಾಂಡೋಮ್ ಅನ್ನು ಬಳಸಿ ಕೆಲವು ಸಲ ನೀವು ಮಹಿಳೆಗೆ ಅದನ್ನು ತೋರಿಸಿ ಕೊಟ್ಟು ಅವಳು ಅದನ್ನು ತನ್ನ ಗಂಡನಿಗೆ ಹೇಳಿಕೊಡುವಂತೆ ತಿಳಿಸಬಹುದು.
ಕಾಂಡೊಮ್‍ಗಳನ್ನು ಕುರಿತಂತೆ ಕೆಲವು ಮಿಥ್ಯೆಗಳು ಮತ್ತು ಅನುಮಾನಗಳನ್ನು ಕುರಿತು ಉತ್ತರಿಸುವ ಅವಶ್ಯಕತೆಯಿದೆ. ಆ ತಪ್ಪು ಗ್ರಹಿಕೆಗಳು ಎಂದರೆ :
ಕಾಂಡೋಮ್‍ಗಳು ಸಂಭೋಗದ ಸುಖವನ್ನು ಕಡಮೆ ಮಾಡುತ್ತವೆ.
ಕಾಂಡೋಮ್ ಬಳಸುವವನು "ನೀತಿಗೆಟ್ಟ" ವ್ಯಕ್ತಿ
ಸರಿಯಾಗಿ ಬಳಸದಿಇದರೆ, ಉಪಯೋಗಿಸುವ ಸಮಯದಲ್ಲಿ ಕಾಂಡೋಮ್‍ಗಳು ಹರಿದು ಹೋಗಬಹುದು. ಅಂತಹ ಸಮಯದಲ್ಲಿ ತುರ್ತುಗರ್ಭನಿರೋಧಕ ಗುಳಿಗೆಗಳನ್ನು ಬಳಸುವಂತೆ ತಿಳಿಸಿ.
ಮಹಿಳೆಯರ ಕಾಂಡೋಮ್ ಈಗ ನಗರಗಳಲ್ಲಿ ಲಭ್ಯ. ಆದ್ದರಿಮದ ಮಹಿಳೆಯರು ಕೂಡ ಕಾಂಡೋಮ್‍ಅನ್ನು ಬಳಸಬಹುದು. ಪುರುಷರು ಕಾಂಡೋಮ್‍ಗಳನ್ನು ಬಳಸಲು ಬಯಸದಿದ್ದಾಗ ಇದು ಪ್ರಯೋಜನಕಾರಿ ಅಲ್ಲದೆ ಅಪಾಯಕಾರಿ ಲೈಂಗಿಕ ಆಕ್ರಮಣದ ಸಂದರ್ಭಗಳಲ್ಲಿ ಇದು ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 11/22/2019