ಕುಟುಂಬ ಯೋಜನೆ ಎಂದರೇನು ?
ಅನೇಕ ದಂಪತಿಗಳು ತಮ್ಮ ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ಪರಿಮಿತಗೊಳಿಸಿಕೊಳ್ಳಲು ಬಯಸುತ್ತಾರೆ ಇಲ್ಲವೇ ಮಕ್ಕಳನ್ನು ಪಡೆಯುವ ಮೊದಲು ಸ್ವಲ್ಪ ಕಲ ಕಾಯಲು ಬಯಸುತ್ತಾರೆ. ಅದೇ ರೀತಿಯಲ್ಲಿ ನವವಿವಾಹಿತ ದಂಪತಿಗಳು ಮಕ್ಕಳನ್ನು ಪಡೆಯುವಲ್ಲಿ ಎರಡರಿಂದ ಮೂರು ವರ್ಷ ವಿಳಂಬ ಮಾಡಲು ಇಚ್ಛಿಸಬಹುದು.
ದಂಪತಿಗಳು ತಮ್ಮ ಕುಟುಂಬದ ಗಾತ್ರವನ್ನು ಆಯೋಜನೆ ಮಾಡಲು ಅನೇಕ ವಿಧಾನಗಳಿವೆ.
ಕುಟುಂಬ ಯೋಜನೆಯ ಪ್ರಯೋಜನಗಳು
ಗರ್ಭಧಾರಣೆಯನ್ನು ತಡೆಗಟ್ಟಲು ಯಾವುದೇ ಕುಟುಂಬ ಯೋಜನಾ ವಿಧಾನಗಳನ್ನು ಬಳಸುವ ಮೂಲಕ, ಕುಟುಂಬದಲ್ಲಿನ ತಾಯಿ ಮತ್ತು ಮಕ್ಕಳ ಆರೋಗ್ಯಕೆಕ ಸಂಬಂಧಿಸಿದಂತೆ ಕೆಳಕಂಡ ಪ್ರಯೋಜನಗಳು ಲಭ್ಯವಾಗುತ್ತದೆ.
ತಾಯಿ
ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಸ್ತ್ರೀಯರಿಗೆ ಹೆರಿಗೆಯ ಸಂದರ್ಭದಲ್ಲಿ ಮರಣ ಸಂಭವಿಸುವ ದೊಡ್ಡ ಅಪಾಯವಿದೆ.
ಹದಿಹರೆಯದ ತರುಣಿಯರು ಚಿಕ್ಕವಯಸ್ಸಿನಲ್ಲಿಯೇ ವಿವಾಹವಾದರೆ, ಅಂದರೆ 18 ವರ್ಷಕ್ಕೆ ಮೊದಲೇ ಆದರೆ, ಅನತಿಕಾಲದಲ್ಲಿಯೇ ಅವರು ಮಕ್ಕಳನ್ನು ಹಡೆಯಲೂ ಪ್ರಾರಂಭಿಸುತ್ತಾರೆ. ಅಲ್ಲದೆ ಇಂತಹ ತಾಯಂದಿರಿಗೆ ಹುಟ್ಟುವ ಮಕ್ಕಳಿಗೆ ಜನನಕಾಲದ ತೂಕ ಕಡಮೆ ಇರುತ್ತದೆ ಮತ್ತು ಮೊದಲನೆಯ ವರ್ಷದಲ್ಲಿಯೇ ಅವರು ಮೃತರಾಗುವ ಸಂಭವವೂ ಹೆಚ್ಚು.
ಒಬ್ಬಳು ಸ್ತ್ರೀ 36 ತಿಂಗಳುಗಳಿಗಿಂತ ಕಡಿಮೆ ಅಂತರದಲ್ಲಿ ಹತ್ತಿರ ಹತ್ತಿರದಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದರೆ ಅವಳ ಆರೋಗ್ಯ ಮತ್ತು ಅವಳ ಮಕ್ಕಳ ಆರೋಗ್ಯಕ್ಕೆ ಹಾನಿಯಗುತ್ತದೆ.
ಕಡಮೆ ಮಕ್ಕಳಿಂದ ಕೂಡಿದ ಕುಟುಂಬವು ಮಕ್ಕಳ ವಿದ್ಯಾಭ್ಯಾಸದ ಸಾಧನೆಗಳು, ಬೆಳವಣಿಗೆ ಮತ್ತು ಅಭಿವೈದ್ಧಿಯೂ ಸೇರಿದಂತೆ ಅವರ ಪಾಲನೆ ಪೋಷಣೆಯನ್ನು ಉತ್ತಮವಾಗಿ ನೋಡಿಕೊಳಳಬಹುದು.
ಇತರ ಪ್ರಯೋಜನಗಳು
ಕೆಲವು ಗರ್ಭನಿರೋಧಕಗಳು, ಅಂದರೆ ಕಾಂಡೋಮ್‍ಗಳು (ಪುರುಷರು ಮತ್ತು ಮಹಿಳೆಯರು ಇಬ್ಬರೂ ಉಪಯೋಗಿಸುವ ಕಾಂಡೋಮ್‍ಗಳು0 ಎಚ್‍ಐವಿ / ಏಡ್ಸ್‍ಗಳೂ ಸೇರಿದಂತೆ ಜನನಾಂಗದ ದ್ವಾರದ ಸೋಂಕುಗಳ ವಿರುದ್ಧ ರಕ್ಷಣೆಯನ್ನು ಕೊಡುತ್ತವೆ ಮತ್ತು ಅನಪೇಕ್ಷಿತ ಗರ್ಭಧಾರಣೆಗಳನ್ನೂ ತಡೆಯುತ್ತವೆ.
ಕೆಲವು ವಿಧಾನಗಳು ಗರ್ಭಕೋಶದ ಕ್ರಮತಪ್ಪಿದ ರಕ್ತಸ್ರಾವವನ್ನು ಕ್ರಮಗೊಳಿಸಲು ಉತ್ತಮವಾಗಿದೆ.
ಕುಟುಂಬ ಯೋಜನೆಯ ವಿಧಾನಗಳ ಬಳಕೆಯು ಮಹಿಳೆಯರಿಗೆ ತಮ್ಮ ದೇಹದ ಮೇಲೆ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಹೆಚ್ಚು ಮಕ್ಕಳನ್ನು ಪಡೆಯಲು ಅವರಿಗೆ ಇಷ್ಟವಿಲ್ಲದಿದ್ದರೆ, ಅವರು ವಿವೇಚನೆಯೊಡನೆ ಗರ್ಭನಿರೋಧಕಗಳನ್ನು ಬಳಸಬಹುದು.
ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ
ಕೊನೆಯ ಮಾರ್ಪಾಟು : 4/24/2020