ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳ ಹೆಚ್ಚುತ್ತಿರುವ ಹೊರೆಯಿಂದಾಗಿ ದೇಶವು ಆರೋಗ್ಯದಲ್ಲಿ ಶೀಘ್ರ ಗತಿಯ ಪರಿವರ್ತನೆಯನ್ನು ಅನುಭವಿಸುತ್ತಿದೆ. ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳು ಎಲ್ಲಾ ಸಾವುಗಳ ಪೈಕೆ 42% ಸಾವಿಗೆ ಕಾರಣವಾಗಿರುವುದರಿಂದ ಭಾರತದಲ್ಲಿ ಇವು ಸಾವಿನ ಮುಖ್ಯ ಕಾರಣವಾಗಿ ಹೊರಬರುತ್ತಿವೆ. ಇದರಿಂದ ಜೀವನದ ಸಮರ್ಥವಾಗಿ ಉತ್ಪಾದಕ ವರ್ಷಗಳಲ್ಲಿ ಗಮನಾರ್ಹ (35-64) ನಷ್ಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ (2002) ರ ಪ್ರಕಾರ, ಭಾರತದಲ್ಲಿ 2020 ರ ವರೆಗೆ ಹೃದಯ ರಕ್ತನಾಳದ ಖಾಯಿಲೆಗಳು ಸಾವಿನ ಮತ್ತು ಅಸಾಮರ್ಥ್ಯದ / ಅಂಗವೈಕಲ್ಯದ ಅತಿ ದೊಡ್ಡ ಕಾರಣವಾಗುವುದು. ಮಧುಮೇಹ, ಅಧಿಕ ರಕ್ತದ ಒತ್ತಡ, ರಕ್ತ ಕೊರತೆಯ ಹೃದಯ ರೋಗಗಳು (ಐ.ಹೆಚ್.ಡಿ) ಮತ್ತು ಸ್ಟ್ರೋಕ್ / ಆಘಾತದ ಸಮಗ್ರ ಹರಡಿಕೆಯು ಭಾರತದಲ್ಲಿ ಪ್ರತಿ 1000 ಜನಸಂಖ್ಯೆಗೆ 62.47, 159.46, 37.00 ಹಾಗೂ1.54 ರಂತೆ ಕ್ರಮವಾಗಿ ಇರುವುದು. ಭಾರತದಲ್ಲಿ ಸುಮಾರು 25 ಲಕ್ಷ ಕ್ಯಾಂಸರ್ ಪ್ರಕರಣಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳ ವೆಚ್ಚವು ಸಮಾಜಕ್ಕೆ ಅಘಾದವಾಗಿದೆ ಮತ್ತು ಇದು ಸಾವಿರಾರು ಕೋಟಿಗಳಲ್ಲಿ ವೆಚ್ಚವಾಗುವುದು. ರೋಗವುಳ್ಳ ವ್ಯಕ್ತಿಗಳ ಮತ್ತು ಅವರ ಕುಟುಂಬಗಳಿಗೆ ನೇರ ಖರ್ಚುಗಳು, ಹಾಗೂ ಉತ್ಪಾದನೆಯ ಕಡಿತದಿಂದಾಗುವ ಸಮಾಜಕ್ಕೆ ಪರೋಕ್ಷವಾಗಿ ಆಗುವ ವೆಚ್ಚಗಳು ಇದರಲ್ಲಿ ಒಳಗೊಂಡಿದೆ. ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳ ಮುಖ್ಯ ಅಪಾಯಕಾರಿ ಅಂಶಗಳೆಂದರೆ ಹೆಚ್ಚಿದ ರಕ್ತದ ಒತ್ತಡ, ಕೊಲೆಸ್ಟ್ರಾಲ್, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಸೇವನೆ, ದೈಹಿಕ ನಿಷ್ಕ್ರೀಯತೆ, ಮದ್ಯ ಸೇವನೆ, ಮತ್ತು ಬೊಜ್ಜು ಮೈ. ಇವುಗಳನ್ನು ಬದಲಾವಣೆ ಮಾಡಬಹುದಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆ ಕ್ಯಾಂಸರ್ ಗಳನ್ನು ಮತ್ತು ಹೃದಯ ರಕ್ತನಾಳದ ರೋಗಗಳನ್ನು ತಡೆಗಟ್ಟಬಹುದು ಮತ್ತು ಮುಂಚಿತ ಹಂತಗಳಲ್ಲಿ ರೋಗ ನಿರೂಪಣೆ ಮಾಡಿದ್ದಲ್ಲಿ, ಚಿಕಿತ್ಸೆ ಮಾಡಬಹುದಾಗಿದೆ. ದೀರ್ಘಕಾಲದ ನ್.ಸಿ.ಡಿ ಗಳ ತಡೆಗಟ್ಟುವಿಕೆ ಮತ್ತು ಆರೋಗ್ಯ ವರ್ಧನೆಯನ್ನು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಉದ್ದೇಶಿಸಬೇಕಿದೆ. ಪ್ರಸ್ತುತ, ಪ್ರಾಥಮಿಕ ಹಾಗೂ ದ್ವಿತೀಯ ಆರೋಗ್ಯ ಆರೈಕೆ ವ್ಯವಸ್ಥೆಗಳಲ್ಲಿ ಈ ರೋಗಗಳಿಗೆ ಅಗತ್ಯವಿರುವ ಮಟ್ಟದ ಆರೈಕೆ ನೀಡಲು ಕ್ಲಿನಿಕಲ್ ಸೇವೆಗಳು ಸಹ ಸಮರ್ಪಕವಾಗಿ ಸಜ್ಜುಗೊಂಡಿರುವುದಿಲ್ಲ. ಹಾಗಾಗಿ, ಸೂಕ್ರ ಕಾರ್ಯತಂತ್ರಗಳನ್ನು ರಚಿಸಲಾಗಿ ಎನ್.ಪಿ.ಸಿ.ಡಿ.ಸಿ.ಎಸ್ ಅಡಿಯಲ್ಲಿ ಅನುಷ್ಠಾನ ಮಾಡಲಾಗುವುದು. ಇದರಿಂದ ಎನ್.ಸಿ.ಡಿ ಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುವುದನ್ನು ಖಾತ್ರಿಪಡೆಸಿಕೊಳ್ಳುವುದಾಗಿದೆ. ಮೂಲ: ಪೋರ್ಟಲ್ ತಂಡ |
ಕೊನೆಯ ಮಾರ್ಪಾಟು : 1/28/2020