ಸಮಿತಿಯ ಸಭೆ:
ಸಮಿತಿಯ ಸಭೆ:
3 ತಿಂಗಳಿಗೊಮ್ಮೆ ಮುಂಚಿತವಾಗಿ ತಿಂಗಳ ಎರಡನೇ ಸೋಮವಾರದ ಅಪರಾಹ್ನದಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಮೀಟಿಂಗ್ ಹಾಲ್‍ನಲ್ಲಿ ಸಭೆಯನ್ನು ನಡೆಸತಕ್ಕದ್ದು.
3 ದಿವಸ ಮುಂಚಿತವಾಗಿ ಸಭೆಯಲ್ಲಿ ಚರ್ಚಿಸಬೇಕಿರುವ ವಿಷಯಗಳನ್ನೊಳಗೊಂಡ ಕಾರ್ಯಸೂಚಿಯೊಡನೆ ತಿಳಿವಳಿಕೆ ಪತ್ರದ ಮುಖಾಂತರ ಸದಸ್ಯ ಕಾರ್ಯದರ್ಶಿಗಳು ಅಥವಾ ಅವರಿಂದ ಅನುಮತಿಸಲ್ಪಟ್ಟ ಸಹಾಯಕ ಸದಸ್ಯ ಕಾರ್ಯದರ್ಶಿಯವರು ಸಭೆ ಕರೆಯತಕ್ಕದ್ದು. ವಿಶೇಷ ಸಭೆಯನ್ನು ನೋಟೀಸ್ ನೀಡಿ 24 ಘÀಂಟೆಯೊಳಗಾಗಿ ಕರೆಯಬಹುದಾಗಿದೆ.
ಸಭೆ ನಡೆಸಲು ಸದಸ್ಯರ ಕೋರಂ ಒಟ್ಟು ಸದಸ್ಯರ ಸಂಖ್ಯೆಯ 1/3ರಷ್ಟು ಆಗಿರತಕ್ಕದ್ದು. ಹಾಗೂ ಭಾಗವಹಿಸಿದ ಸದಸ್ಯರಲ್ಲಿ ಕನಿಷ್ಠ ಪಕ್ಷ 1/3ರಷ್ಟು ಮಹಿಳಾ ಸದಸ್ಯರು ಹಾಜರಿರತಕ್ಕದ್ದು.
ಸಭೆ ಪ್ರಾರಂಭಿಸಲು ಕೋರಂ ಇರದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯತಕ್ಕದು. ನಂತರದಲ್ಲೂ ಕೋರಂ ಇಲ್ಲದಿದ್ದರೆ ಸಭೆಯನ್ನು ಆ ತಿಂಗಳಲ್ಲೇ ಮುಂದಿನ ಅನುಕೂಲಕರ ದಿನಾಂಕಕ್ಕೆ ಮುಂದೂಡಿ ಹೊಸ ನೋಟೀಸ್ ನೀಡತಕ್ಕದ್ದು.
ಸಭೆಯ ದಿನದಂದು ಯಾವುದೇ ಕಾರಣಕ್ಕೆ ಅಧ್ಯಕ್ಷರು ಗೈರುಹಾಜರಾಗಿದ್ದರೆ, ಕೋರಂ ಇದ್ದರೆ ಸಭೆಯಲ್ಲಿರುವ ಸರ್ವಸಮ್ಮತವಾದ ಸದಸ್ಯರಲ್ಲೊಬ್ಬರು ಅಧ್ಯಕ್ಷತೆ ವಹಿಸಿ ಸಭೆ ನಡೆಸಬಹುದಾಗಿರುತ್ತದೆ.
ಸಭೆಯ ನಡವಳಿಕೆ ಮತ್ತು ನಿರ್ಣಯಗಳನ್ನು ಅಧಿಕೃತ ಪುಸ್ತಕದಲ್ಲಿ ದಾಖಲಿಸಿ ಸದಸ್ಯರ ಸಹಿ ಪಡೆದು ಪ್ರತಿಗಳನ್ನು ಪಡೆದು ತಾಲ್ಲೂಕು ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ಸಲ್ಲಿಸುವ ಹಾಗೂ ದಾಖಲೆಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಕಾರ್ಯದರ್ಶಿಯದ್ದಾಗಿರುತ್ತದೆ. ಇದಕ್ಕಾಗಿ ಸಹಕಾರ್ಯದರ್ಶಿಯವರು, ಕಾರ್ಯದರ್ಶಿಗೆ ಸಹಕರಿಸತಕ್ಕದ್ದು.
ಖರ್ಚು ವೆಚ್ಚ:
ಸಮಿತಿಯ ಸದಸ್ಯರ ಬಸ್ ಪ್ರಯಾಣದ ಕನಿಷ್ಠ ವೆಚ್ಚ ಮತ್ತು ಸಭೆಯ ದಿನದಂದು ಅವಶ್ಯವಿರುವ ಕನಿಷ್ಠ ಸಾದಿಲ್ವಾರು ವೆಚ್ಚವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗಿರುವ ಮುಕ್ತ ನಿಧಿಯಿಂದ ಭರಿಸತಕ್ಕದ್ದು
ಕೊನೆಯ ಮಾರ್ಪಾಟು : 4/28/2020